ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಆಗಿ ನಟಿಸ್ತಿದ್ದ ಸಂಜನಾ ಬುರ್ಲಿ, ಸೀರಿಯಲ್ ತಂಗಿ ಸುಮಾ ಜೊತೆ ರೀಲ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ನಾಯಕಿ ಎಂದೇ ಬಿಂಬಿತವಾಗಿದ್ದ ಸ್ನೇಹಾ ಪಾತ್ರವನ್ನು ಸಾಯಿಸಿ ತಿಂಗಳುಗಳೇ ಕಳೆದಿವೆ. ಆಕೆಯ ಹೃದಯವನ್ನು ಇಟ್ಟುಕೊಂಡಿರುವ ಮತ್ತೋರ್ವ ಸ್ನೇಹಾ ಎಂಟ್ರಿಯಾಗಿದ್ದು, ಆಕೆಯೀಗ ಎಲ್ಲರ ಮನಸ್ಸಿನಲ್ಲಿ ಜಾಗ ಪಡೆದುಕೊಳ್ಳುತ್ತಿದ್ದಾಳೆ. ಕಂಠಿಗೆ ಮಾತ್ರ ಆಕೆಯನ್ನು ಕಂಡರೆ ಕಿಡಿಕಿಡಿಯಾಗುತ್ತಿದ್ದಾನೆ ಬಿಟ್ಟರೆ ಉಳಿದವರೆಲ್ಲರಿಗೂ ಈಕೆ ಮೊದಲ ಸ್ನೇಹಾಳ ಜಾಗ ತುಂಬಲು ಬಂದಿರುವ ಮನೆಮಗಳಾಗಿದ್ದಾಳೆ. ಅಷ್ಟಕ್ಕೂ ಮೊದಲ ಸ್ನೇಹಾ ಅಂದರೆ ನಟಿ ಸಂಜನಾ ಬುರ್ಲಿ ಅವರು ಸೀರಿಯಲ್ ಬಿಡಬೇಕಾಗಿದ್ದ ಹಿನ್ನೆಲೆಯಲ್ಲಿ ಕಥೆಯನ್ನು ಬದಲಿಸಿ ಆ ಪಾತ್ರಕ್ಕೆ ಬೇರೊಬ್ಬರನ್ನು ತರದೇ ಪಾತ್ರವನ್ನೇ ಸಾಯಿಸಲಾಗಿದೆ. ಆದರೆ ಕೆಲವು ವರ್ಷ ಒಂದು ಪಾತ್ರವನ್ನು ನೋಡಿದ ಅಭಿಮಾನಿಗಳಿಗೆ ಆ ಪಾತ್ರ ಇನ್ನಿಲ್ಲ ಎಂದು ಗೊತ್ತಾದಾಗ ನೋವಾಗುವುದು ಸಹಜ. ಅದೇ ರೀತಿ ಸಂಜನಾ ಬುರ್ಲಿ ಅವರು ಸೀರಿಯಲ್ ಬಿಟ್ಟು ಹೋಗಿರುವುದಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಆಗಿನಿಂದಲೂ ಈಗಿನವರೆಗೂ ಆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ನಟಿ ಸೀರಿಯಲ್ ಬಿಟ್ಟ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮೊದಲಿನಿಂದಲೂ ಸಂಜನಾ ಅವರು ರೀಲ್ಸ್, ವಿಡಿಯೋ, ಡಾನ್ಸ್ ಎಲ್ಲಾ ಮಾಡುತ್ತಲೇ ಇದ್ದರು. ಈಗ ಸೀರಿಯಲ್ ಬಿಟ್ಟ ಮೇಲೆ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮತ್ತೆ ಅವರು ರೀಲ್ಸ್ ಮಾಡಿದ್ದಾರೆ. ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸುಮಾ ಅರ್ಥಾತ್ ಶಿಲ್ಪಾ ಸವಸೆರೆ ಜೊತೆ, ಸಂಜನಾ ರೀಲ್ಸ್ ಮಾಡಿದ್ದಾರೆ. ಆದರೆ ಸಂಜನಾ ಅವರನ್ನು ಫ್ಯಾನ್ಸ್ ಸಕತ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕಮೆಂಟ್ ಹಾಕುತ್ತಿದ್ದಾರೆ. ನೀವು ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಟ್ಟ ಮೇಲೆ ಆ ಸೀರಿಯಲ್ ನೋಡೋದನ್ನೇ ಬಿಟ್ಟಿದ್ದೇವೆ ಎಂದು ಕೆಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ. ಮತ್ತೆ ಸೀರಿಯಲ್‌ಗೆ ವಾಪಸ್ ಬನ್ನಿ ಎಂದು ಕೆಲವರು ಹೇಳುತ್ತಿದ್ದರೆ, ಬೇರೆ ಸೀರಿಯಲ್‌ನಲ್ಲಾದರೂ ಕಾಣಿಸಿಕೊಳ್ಳಿ ಎಂದು ಮತ್ತೆ ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ, ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರವನ್ನು ಸಾಯಿಸಿದ ಮೇಲೆ, ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಈ ಸೀರಿಯಲ್ ಪ್ರೊಮೋ ಹಾಕಿದಾಗಲೆಲ್ಲಾ ಸಹನಾ ವಾಪಸ್ ಬಂದರೆ, ಹೇಗಾದ್ರೂ ಮಾಡಿ ಸ್ನೇಹಾಳನ್ನೂ ವಾಪಸ್ ಕರೆಸಿ, ಸೀರಿಯಲ್ನಲ್ಲಿ ಏನು ಬೇಕಾದ್ರೂ ಆಗತ್ತೆ ಎನ್ನುತ್ತಿದ್ದಾರೆ.
ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ
ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್‌ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು. ಅನಿವಾರ್ಯವಾಗಿ ನಾನು ಸೀರಿಯಲ್ ಸೆಟ್ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.
ಸಂಜನಾ ಬುರ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ಇದಾಗಲೇ ನಟಿ ಹೇಳಿದ್ದಾರೆ. ಇನ್ನು ಶಿಲ್ಪಾ ಸವಸೆರೆ ಕುರಿತು ಹೇಳುವುದಾದರೆ, ಇವರು ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇನ್ನು ಶಿಲ್ಪ ಬಣ್ಣದ ಲೋಕದಲ್ಲಿ ಕಾಲಿಡಲು ಆಕೆಗೆ ತನ್ನ ಮನೆಯಲ್ಲಿ ಬಹಳ ಪ್ರೋತ್ಸಾಹ ಕೂಡ ಸಿಕ್ಕಿದೆ. ಮೊದಲು ಇವರು ಗೀತಾ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಈ ಧಾರಾವಾಹಿಯಲ್ಲಿ ವಿಜಯ್ ತಂಗಿ ಶ್ರುತಿ ಪಾತ್ರದಲ್ಲಿ ಮಿಂಚಿದ್ದರು. ಆ ಬಳಿಕ ಇವರಿಗೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಾನ್ಸ್ ಸಿಕ್ಕಿದ್ದು, ಇಲ್ಲಿ ಸುಮಾ ಆಗಿ ನಟಿಸುತ್ತಿದ್ದಾರೆ. ಹೈಸ್ಕೂಲ್ ಬಳಿಕ ಡಿಪ್ಲೋಮೋ ಇನ್ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡಿದ್ದಾರೆ ಶಿಲ್ಪಾ.
ಮದುಮಗಳಂತೆ ಕಂಗೊಳಿಸಿದ ಪುಟ್ಟಕ್ಕನ ಮಗಳು ಸ್ನೇಹಾ: ಸಮ್ಥಿಂಗ್ ಸ್ಪೆಷಲ್ಲಾ ಕೇಳ್ತಿದ್ದಾರೆ ಫ್ಯಾನ್ಸ್