ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಮತ್ತು ಭಾವನಾಳ ವಿವಾಹದ ನಂತರ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಭಾವನಾ ಸಿದ್ದೇಗೌಡ್ರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅವರ ಮುಂದಿನ ಬದುಕಿನ ಹಾದಿ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದೆ.
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಒಂದು ನಿರೀಕ್ಷಿತ ತಿರುವು. ಇದು ಹೀಗೆಯೇ ಆಗಬಹುದು ಅಂತ ಬಹಳ ಮಂದಿ ಮೊದಲೇ ಊಹಿಸಿದ್ರು. ಸೋ ಹಂಗೇ ಆಗಿದೆ. ಆದರೆ ತಮ್ಮ ಗೆಸ್ ನಿಜವಾದ್ದಕ್ಕೆ ಈ ಸೀರಿಯಲ್ ವೀಕ್ಷಕರು ಖುಷಿ ಆಗೋ ಬದಲು ಬೇಜಾರಾಗಿದೆ. ನಮ್ಮ ಲೈಫಲ್ಲೂ ಹಿಂಗೇ ಆಗುತ್ತಲ್ವಾ.. ಹೀಗಾಗದಿರಲಿ ಅಂತ ಮನಸ್ಸಲ್ಲೇ ಅಂದುಕೊಂಡರೂ ಇದು ಹೀಗೆ ಆಗುವ ಸಾಧ್ಯತೆ ಇದೆ ಅನ್ನೋದು ಮೊದಲೇ ಗೊತ್ತಾಗುತ್ತೆ. ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರದ್ದೂ ಇದೇ ಕಥೆ. ಸಿದ್ದೇಗೌಡ್ರು ಜಗತ್ತಿನ ವಿರೋಧವನ್ನೂ ಲೆಕ್ಕಿಸದೇ ಭಾವನಾಳನ್ನ ತನ್ನವಳನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ತನಗಿಷ್ಟವಾದದ್ದನ್ನು ಮಾಡುವ ಭರದಲ್ಲಿ ಆಕೆಯ ಬಳಿ ತಾನು ಆಕೆಗೆ ಇಷ್ಟವಾ ಅಂತ ಒಂದು ಮಾತನ್ನೂ ಕೇಳಿಲ್ಲ. ಇದು ಸದ್ಯ ಸಿದ್ದೇಗೌಡ್ರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅತ್ತ ಭಾವನಾ ಸಿದ್ದೇಗೌಡರ ಎದುರು ತನ್ನ ಮನಸ್ಸಿನ ಸಂಕಟ, ಸಿಟ್ಟು, ಆಕ್ರೋಶ ಎಲ್ಲವನ್ನೂ ಹೊರಹಾಕಿ ಬಿಟ್ಟಿದ್ದಾಳೆ. ಆಕೆಯ ಮಾತು ಕಾದ ಕೆಂಡದ ಹಾಗೆ ಫೀಲ್ ಕೊಟ್ಟಿದೆ ಸಿದ್ದೇಗೌಡ್ರಿಗೆ. ಅಲ್ಲಿಗೆ ಅಬ್ಬಾ! ಎಲ್ಲ ಸರಿಹೋಯ್ತಲ್ಲ ಸದ್ಯ ಅಂತ ನಿಟ್ಟುಸಿರು ಬಿಟ್ಟವರೂ, ಅಯ್ಯೋ, ಮುಂದೆ ಸಿದ್ದೇಗೌಡ್ರ ಕಥೆ ಏನಾಗಬಹುದು, ಭಾವನಾ ಮನಸ್ಸಿಗಾದ ಗಾಯ ಅಷ್ಟು ಬೇಗ ವಾಸಿ ಆಗೋಹಾಗೆ ಕಾಣುತ್ತಿಲ್ಲ.
undefined
ಸಿಹಿ ಅಪ್ಪನ ಸ್ಕೆಚ್ ಬಯಲಾಯ್ತು! ಸೀತಾ-ರಾಮರಿಂದ ಸಿಹಿ ದೂರವಾಗೋ ದಿನ ಬಂದೇ ಬಿಡ್ತಾ?
ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಭಾವನಾಗೆ ತಾಳಿ ಕಟ್ಟಿರುವ ವಿಚಾರ ಎಲ್ಲರಿಗೂ ಗೊತ್ತಾಗಿ ಸ್ವಲ್ಪ ದಿನ ಆಯ್ತು. ಇದು ಎಲ್ಲರಿಗೂ ಆಘಾತ ತಂದಿತ್ತು. ಲಕ್ಷ್ಮೀ ಅಂತೂ ಕೊನೇ ಕ್ಷಣದವರೆಗೂ ಸಿದ್ದೇಗೌಡರನ್ನು ಒಪ್ಪಿಲ್ಲ. ಆದರೆ ಭಾವನಾ ತಂದೆ ಶ್ರೀನಿವಾಸ್ ಅವರೇ ಲಕ್ಷ್ಮೀ ಅವರನ್ನು ಒಪ್ಪಿಸಿದ್ದಾರೆ. ಫೈನಲೀ, ಈಗ ಸಿದ್ದೇಗೌಡ್ರು ಭಾವನಾಳನ್ನು ತನ್ನ ಮನೆಗೆ ಕರೆದುಕೊಂಡು ಬಂದರು. ಅಲ್ಲೊಂದು ಯುದ್ಧ ಗೆದ್ದಾದ ಮೇಲೆ ಇನ್ನೊಂದು ಯುದ್ಧ. ಭಾವನಾಳನ್ನು ನನ್ನ ಮನೆ ಸೊಸೆ ಅಂತ ಜವರೇಗೌಡ್ರು ಒಪ್ಪಲು ರೆಡಿ ಇಲ್ಲ.
ನಾನು ಇಲ್ಲವೇ ಭಾವನಾ ಮಧ್ಯೆ ಯಾರು ಬೇಕು ಅಂತ ಜವರೇಗೌಡ್ರು ಮಗನ ಬಳಿ ಕೇಳಿದ್ದರು. ಆಗ ಸಿದ್ದೇಗೌಡ್ರು ನನಗೆ ನೀವು ಬೇಕು, ಭಾವನಾ ಬೇಕು ಎಂದು ಉತ್ತರ ನೀಡಿದ್ದಾರೆ. ಹೀಗೆ ಭಾವನಾ ಸಿದ್ದು ಮನೆ ಸೇರಿದ್ದಾಳೆ. ಭಾವನಾಗೆ ಆ ಮನೆಗೆ ಬರಲು ಸ್ವಲ್ಪೂ ಇಷ್ಟ ಇದ್ದ ಹಾಗಿಲ್ಲ. ಸಿದ್ದೇಗೌಡ್ರು ಹಾಗೂ ಪೂರ್ವಿ ನಿಶ್ಚಿತಾರ್ಥ ಆಗಿತ್ತು. ಹೀಗಾಗಿ ಸಿದ್ದು ಇನ್ಮುಂದೆ ನನ್ನ ಹಿಂದೆ ಬರಲ್ಲ ಅಂತ ಭಾವನಾ ಅಂದುಕೊಂಡಿದ್ದಳು. ಆದರೆ ದೇವಸ್ಥಾನದಲ್ಲಿ ಭಾವನಾ ಮಲಗಿದ್ದಾಗ ಅವನೇ ಅವಳ ಕುತ್ತಿಗೆಗೆ ತಾಳಿ ಕಟ್ಟಿದ್ದನು, ತನಗೆ ತಾಳಿ ಕಟ್ಟಿದೋರು ಯಾರು ಅಂತ ಭಾವನಾಗೆ ಗೊತ್ತಾಗಲಿಲ್ಲ. ಈ ವಿಷಯ ಆಮೇಲೆ ಅವಳ ತಾಯಿ ಸೇರಿ ಎಲ್ಲರಿಗೂ ಗೊತ್ತಾಯ್ತು. ತಾಳಿ ಕಟ್ಟಿದವನು ಯಾರು ಅಂತ ಭಾವನಾ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ಆದರೆ ಅದೇ ಸಮಯಕ್ಕೆ ಸರಿಯಾಗಿ ಸಿದ್ದು ಎಲ್ಲರ ಮುಂದೆ ನಾನು ಭಾವನಾಳ ಗಂಡ ಅಂತ ಹೇಳಿದ್ದ.
ಸೀತಾ ರಾಮಂಗೆ ಮುತ್ತು ಕೊಡೋಕೆ ಬಂದ್ಲು, ಅಷ್ಟರಲ್ಲಿ ಹಿಂಗಾಗ್ಬಿಡೋದಾ!
ಸದ್ಯ ಜಗತ್ತೆಲ್ಲ ಸಿದ್ದು ಭಾವನಾ ಸಂಬಂಧವನ್ನು ಏನನ್ನುತ್ತದೆಯೋ ಗೊತ್ತಿಲ್ಲ, ಆದರೆ ಭಾವನಾ ಅಂತೂ ಸಿದ್ದೇ ಗೌಡ್ರನ್ನು ಸಂಪೂರ್ಣ ತಿರಸ್ಕರಿಸಿದ್ದಾಳೆ. 'ಕಂಡೋವ್ರ ಮನೆ ಹೆಣ್ಮಕ್ಕಳನ್ನು ಬಾವಿಗೆ ತಳ್ಳಿ ಸಂತೋಷ ಪಡೋ ನಿಮ್ಮಂಥವರಿಗೆ ಖುಷಿ ಆಗದೇ ಇರುತ್ತಾ? ಮರ್ಯಾದೆ ಇರೋರು ಇಂಥಾ ಕೆಲಸ ಮಾಡ್ತಿದ್ರಾ? ನಿಮ್ಮ ಖುಷಿಗೋಸ್ಕರ ನನ್ನ ಜೀವನವನ್ನೇ ಹಾಳು ಮಾಡಿಬಿಟ್ರಲ್ಲಾ.. ರಾಜಕೀಯದಲ್ಲಿ ಜನರಿಗೆ ಮೋಸ ಮಾಡೋದು ನಿಮಗೆ ಗೊತ್ತಾ?ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸೋ ನೀವು ನನ್ನ ಬದುಕಿಗೆ ಮಸಿ ಬಳಿದುಬಿಟ್ರಲ್ಲಾ.. ನಿಮ್ಮನ್ನು ಎಷ್ಟು ನಂಬಿದ್ದೆ. ಅದೆಲ್ಲ ಸರ್ವನಾಶ ಆಯ್ತು. ಯಾಕೆ ನನ್ನ ಬದುಕಿನ ಜೊತೆ ಚೆಲ್ಲಾಟ ಆಡಿದ್ರಿ? ನಾನೇನು ಮಾಡಿದ್ದೀನಿ ಅಂತ ನಂಗೆ ಹೀಗೆ ಮಾಡಿದ್ರಿ ಒಂದಿನಾದ್ರೂ ನಿಮ್ಮ ಮೇಲೆ ಪ್ರೀತಿ ಇರೋ ಹಾಗೆ ಮಾತಾಡಿದ್ನಾ? ನಡ್ಕೊಂಡ್ನಾ? ನನಗೂ ಒಂದು ಮನಸ್ಸಿದೆ, ಮನಃಸಾಕ್ಷಿ ಇದೆ ಅಂತ ಯಾಕರ್ಥ ಮಾಡಿಕೊಳ್ಳಲಿಲ್ಲ.. ' ಅಂತೆಲ್ಲ ಭಾವನಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಸಿದ್ದೇಗೌಡರ ಮಾತಿಗೇ ಅವಕಾಶ ನೀಡಿಲ್ಲ.
ಹಾಗಾದರೆ ಭಾವನಾ-ಸಿದ್ದು ಬದುಕು ಏನಾಗಲಿದೆ ಅನ್ನೋದೇ ರೋಚಕತೆ.