ಸಿಹಿ ಅಪ್ಪ ಮೇಘಶ್ಯಾಮ್ ಎನ್ನುವಂಥ ಸ್ಕೆಚ್ ಈಗ ಎಲ್ಲರನ್ನೂ ತಲ್ಲಣಗೊಳಿಸಿದೆ. ಸೀತಾ-ರಾಮರಿಂದ ಸಿಹಿ ದೂರವಾಗೋ ದಿನ ಬಂದೇ ಬಿಡ್ತಾ?
ಸಿಹಿ ಅಪ್ಪ ಮೇಘಶ್ಯಾಮನೇ ಎನ್ನುವ ಸ್ಕೆಚ್ ಎಲ್ಲರ ಎದುರೂ ಬಯಲಾಗಿದೆ. ಸೀತಾಳ ಅಣ್ಣ ಸ್ಕೆಚ್ ಹಿಡಿದು ಬಂದಿದ್ದಾನೆ. ಮೇಘಶ್ಯಾಮ್ನ ಕೈಯಲ್ಲಿರೋ ಸಿಹಿಯನ್ನು ನೋಡಿ ಮಗಳನ್ನು ಕರೆದುಕೊಂಡು ಹೋಗಲು ಬಂದ್ಯಾ ಎಂದು ಕೇಳಿದ್ದಾನೆ. ಸಿಹಿಯ ಅಪ್ಪ ಅವನೇ ಎನ್ನುವ ಸ್ಕೆಚ್ ಅದರಲ್ಲಿ ಇದೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಸೀತಾಳಿಗೆ ಆಕಾಶವೇ ತಲೆಕೆಳಗೆ ಆದ ಅನುಭವ. ಯಾವ ಸತ್ಯವನ್ನು ಮುಚ್ಚಿಡಲು ತನ್ನಿಂದ ಏನು ಬೇಕೋ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುವ ಸೀತಾಳಿಗೆ ಈಗ ದಿಕ್ಕೇ ತೋಚದಾಗಿದೆ. ಯಾವ ಅರಿವೇ ಇಲ್ಲದ ರಾಮ್ಗೆ ತಲೆ ತಿರುಗಿದೆ. ಸಿಹಿ ಕಂಡರೆ ತನ್ನ ಮಗಳೇ ಎಂದು ಭಾವಿಸುತ್ತಿದ್ದ ಮೇಘಶ್ಯಾಮ್ಗೂ ಶಾಕ್ ಆಗಿದೆ. ಭಾರ್ಗವಿ ಅಂತೂ ಖುಷಿಯಿಂದ ಕುಣಿದಾಡುತ್ತಿದ್ದಾಳೆ. ಒಟ್ಟಿನಲ್ಲಿ ಭಾರ್ಗವಿ ಬಿಟ್ಟು ಎಲ್ಲರ ಸ್ಥಿತಿಯೂ ಅಯೋಮಯವಾಗಿದೆ. ಹಾಗಿದ್ದರೆ ಮುಂದೇನು? ಸೀತಾ-ರಾಮರಿಂದ ಸಿಹಿ ದೂರವಾಗೋ ದಿನ ಬಂದೇ ಬಿಡ್ತಾ?
ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ, ಅಭಿಮಾನಿಗಳು ದಮ್ಮಯ್ಯ ಅಂತೇವೆ. ಸಿಹಿಯಿಂದ ಸೀತಾಳನ್ನು ದೂರ ಮಾಡಬೇಡಿ ಎಂದು ಗೋಗರೆಯುತ್ತಿದ್ದಾರೆ. ಶಾಲಿನಿ ಒಳ್ಳೆಯ ಅಮ್ಮ ಆಗಲು ಸಾಧ್ಯವೇ ಇಲ್ಲ ಎನ್ನುವುದು ಅವರ ಮಾತು. ಇದಕ್ಕಾಗಿಯೇ ಸೀತಾ ಮತ್ತು ಸಿಹಿಯ ಸಂಬಂಧದ ಬಗ್ಗೆ ಇದೀಗ ಸೀರಿಯಲ್ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೀತಾ ಮತ್ತು ಸಿಹಿಗೂ ಇರುವ ಸಂಬಂಧ ತಾಯಿ-ಮಗಳದ್ದೇ ಆಗಿದ್ದರೂ ಅವರು ಕಾನೂನಿನ ದೃಷ್ಟಿಯಲ್ಲಿ ತಾಯಿ-ಮಗಳು ಅಲ್ಲ. ಸೀತಾ ತನ್ನ ಗರ್ಭದಲ್ಲಿ ಈ ಮಗುವನ್ನು ಇಟ್ಟು ಒಂಬತ್ತು ತಿಂಗಳು ಹೊತ್ತು ಹೆತ್ತಿದ್ದರೂ ಆಕೆ ಬಾಡಿಗೆ ತಾಯಿ ಮಾತ್ರ! ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುವ ಹಾಗೆ ಸಿಹಿ ಮತ್ತು ಡಾ.ಮೇಘಶ್ಯಾಮ್ ನಡುವೆ ಪ್ರೀತಿ ಹೆಚ್ಚಾಗುತ್ತಿದೆ. ಮೇಘಶ್ಯಾಮ್ಗೂ ಸಿಹಿಯನ್ನು ಘಳಿಗೆ ಬಿಟ್ಟಿರಲಾಗದ ಸ್ಥಿತಿ. ಶಾಲಿನಿಗೆ ಸಿಹಿಯನ್ನು ಕಂಡರೆ ಆಗದಿದ್ದರೂ, ಅವಳು ತೋರುವ ಪ್ರೀತಿಗೆ ಒಮ್ಮೊಮ್ಮೆ ಸೋತು ಹೋಗಿದ್ದು ಇದೆ. ಅನಿವಾರ್ಯವಾಗಿ ಅವರಿಬ್ಬರಿಗೂ ಸೀತಾಳ ಮನೆಯಲ್ಲಿ ಉಳಿದುಕೊಳ್ಳುವ ಸ್ಥಿತಿ ಬಂದಿದೆ. ಅಪ್ಪ ಮತ್ತು ಮಗಳ ನಡುವೆ ಬಾಂಡಿಂಗ್ ಹೆಚ್ಚಾಗುತ್ತಿದೆ. ಮೇಘಶ್ಯಾಮ್ ಅಂತೂ ಸಿಹಿಯನ್ನು ತನ್ನ ಮಗಳಂತೆಯೇ ನೋಡುತ್ತಿದ್ದಾನೆ.
undefined
ಪುನೀತ್ ರಾಜ್ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ ನೋವಿನ ನುಡಿ... ಕೈ ಮೇಲೆ ಅಪ್ಪು ಹಚ್ಚೆ...
ಅಷ್ಟಕ್ಕೂ ಸಿಹಿ ಸೀತಾಳ ಮಗಳು ಅಲ್ಲ ಎನ್ನುವುದು ಇದಾಗಲೇ ತಿಳಿದಿದ್ದರೂ, ಆಕೆ ಬಾಡಿಗೆ ತಾಯಿ, ಜನ್ಮ ಕೊಟ್ಟ ತಾಯಿ. ಆದರೆ ಕಾನೂನಿನ ಪ್ರಕಾರ ತಾಯಿಯಲ್ಲ. ಅದೇ ಇನ್ನೊಂದೆಡೆ, ಡಾ.ಮೇಘಶ್ಯಾಮಗೆ ತಮ್ಮ ಮಗಳು ಬದುಕಿರುವ ಸತ್ಯ ತಿಳಿದಿದೆ. ಸಿಹಿಯ ಮೇಲೆ ಆತನಿಗೆ ಇನ್ನಿಲ್ಲದ ಪ್ರೀತಿ. ಆದರೆ ಅವಳೇ ತನ್ನ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸೀತಾಳಿಗೆ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾಳೆ. ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ ಮುಂದೆ ಹೇಳಿದ್ದಾಳೆ. ಅವಳು ಸೀತಾಳ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿ, ಸಿಹಿಯೇ ಅವರ ಮಗು ಎನ್ನುವ ಅನುಮಾನ ಶುರುವಾಗಿದೆ. ಇದೀಗ ಸ್ಕೆಚ್ ನೋಡಿದ ಮೇಲೆ ಅವಳಿಗೆ ಇನ್ನಿಲ್ಲದ ಖುಷಿ. ಸೀತಾ-ಸಿಹಿಯನ್ನು ದೂರ ಮಾಡುವ ತವಕದಲ್ಲಿ ಇದ್ದಾಳೆ.
ಒಂದು ವೇಳೆ ಸಿಹಿ ತನ್ನ ಮಗಳು ಎಂದು ಘನಶ್ಯಾಮ್ಗೆ ಗೊತ್ತಾದರೆ ಆತ ಸಿಹಿಯನ್ನು ಕರೆದುಕೊಂಡು ಹೋಗುತ್ತಾನೋ, ಇಲ್ಲವೋ ಎಂಬ ಚರ್ಚೆ ಕೂಡ ಇದೇ ವೇಳೆ ಶುರುವಾಗಿದೆ. ಏಕೆಂದರೆ, ಶಾಲಿನಿಗೆ ಈ ಮಗು ಇಷ್ಟವಿಲ್ಲ ಎನ್ನುವುದು ಅವನಿಗೆ ಗೊತ್ತು. ಬಾಡಿಗೆ ತಾಯಿ ಸುಳ್ಳು ಹೇಳಿದ್ದಲ್ಲ, ಬದಲಿಗೆ ಶಾಲಿನಿನೇ ಮಗು ಸತ್ತಿರುವುದಾಗಿ ಸುಳ್ಳು ಹೇಳಿದ್ದಾಳೆ ಎನ್ನುವ ಸತ್ಯ ಅವನಿಗೆ ತಿಳಿದಿದೆ. ಅಷ್ಟೇ ಅಲ್ಲದೇ, ಸಿಹಿಯ ಮೇಲೆ ಸೀತಾ ಮತ್ತು ರಾಮ್ ಅದೆಷ್ಟರಮಟ್ಟಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ ಎನ್ನುವ ವಿಷಯವೂ ಅವನಿಗೆ ಗೊತ್ತು. ಹಾಗಿದ್ದರೆ ಮುಂದೇನು? ಸಿಹಿ ದೂರವಾಗ್ತಾಳಾ? ಶಾಲಿನಿ ಮಗುವನ್ನು ಒಪ್ಪಿಕೊಳ್ತಾಳಾ? ಸೀತಾಳ ಮುಂದಿನ ನಡೆ ಏನು?
ಮಹಿಳಾ ಆಯೋಗದ ನೋಟಿಸ್ಗೆ ಬೆಚ್ಚಿಬಿದ್ದ ಬಿಗ್ ಬಾಸ್: ಸ್ವರ್ಗ ನರಕ ಆಟಕ್ಕೆ ಬಿಗ್ ಬ್ರೇಕ್...