ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ರಾಜಿ ಪಾತ್ರದಿಂದ ಫೇಮಸ್ ಆಗಿದ್ದ ನಟಿ, ಬಿಗ್ಬಾಸ್ ಖ್ಯಾತಿಯ ಹಂಸಾ ಪ್ರತಾಪ್ ಹೊಸ ವರ್ಷದ ರೆಸಲ್ಯೂಷನ್ ಏನೆಂದು ಕೇಳಿ.
ಬಿಗ್ ಬಾಸ್ ಮನೆಯಲ್ಲಿ 4 ವಾರಗಳ ಕಾಲ ಇದ್ದು ಎಲಿಮಿನೇಟ್ ಆಗಿ ಹೊರಬಂದವರು ಹಂಸಾ. ಬಿಗ್ಬಾಸ್ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್ ಮಾಡಿದ್ದರು. ಇವರು ಸಕತ್ ಸದ್ದು ಮಾಡಿದ್ದು, ಲಾಯರ್ ಜಗದೀಶ್ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು. ಇದು ಬಿಗ್ಬಾಸ್ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿ ಮಾಯವಾಗಿಬಿಟ್ಟಳು. ದಿಢೀರ್ ಎಂದು ಪುಟ್ಟಕ್ಕನ ಮಕ್ಕಳು ರಾಜಿ ಕಾಣೆಯಾಗಿಬಿಟ್ಟಿದ್ದಳು. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್ ಆಗಿದ್ದಂತೂ ದಿಟ. ಇದೀಗ ರಾಜಿ ಪಾತ್ರಕ್ಕೆ ಹೊಸ ಪಾತ್ರಧಾರಿ ಎಂಟ್ರಿ ಕೊಟ್ಟಿದ್ದರೂ ಹಂಸಾ ಅವರನ್ನು ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ತಿದ್ದಾರೆ. ಯಾವುದೇ ಪಾತ್ರಕ್ಕೆ ಯಾವುದೇ ಒಬ್ಬ ಪಾತ್ರಧಾರಿಯನ್ನು ಬಹಳ ಸಮಯದವರೆಗೆ ನೋಡಿದರೆ, ಆ ಜಾಗಕ್ಕೆ ಬೇರೆಯವರನ್ನು ಕಲ್ಪನೆ ಮಾಡಿಕೊಳ್ಳುವುದು ಫ್ಯಾನ್ಸ್ಗೆ ಕಷ್ಟವೇ. ಅದೇ ರೀತಿ ಪುಟ್ಟಕ್ಕನ ಮಕ್ಕಳು ರಾಜಿ ಕಥೆ ಕೂಡ ಆಗಿದೆ.
ಆದರೆ ಹಂಸಾ ಪ್ರತಾಪ್ ಸುದ್ದಿ ಮಾಡಿದ್ದು, ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಗೂ ಹೇಳದೇ, ಯಾರಿಗೂ ಒಂದು ಮಾತನ್ನೂ ಹೇಳದೇ ಹೋಗಿದ್ದರು ಎನ್ನುವ ಕಾರಣಕ್ಕೆ, ಈ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಹಂಸಾ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಕೆಲ ದಿನ ಅವರು ಶೂಟಿಂಗ್ಗೆ ಬರದ ಕಾರಣ ಕರೆ ಮಾಡಿದಾಗ, ನನಗೆ 40 ದಿನ ರಜೆ ಬೇಕು. ಸಿನಿಮಾ ಶೂಟಿಂಗ್ಗೆ ವಿದೇಶಕ್ಕೆ ಹೋಗುತ್ತಿರುವುದಾಗಿ ಹೇಳಿದ್ದರು. ಒಳ್ಳೆ ಅವಕಾಶ ಸಿಕ್ಕಿದೆ ಎಂದು ಖುಷಿಯಾಯ್ತು. ಮಧ್ಯೆ ಬಂದು ಶೂಟಿಂಗ್ ಮಾಡ್ತಾರೆ ಅಂದುಕೊಂಡಿದ್ವಿ. ಆದ್ರೆ ಬರಲೇ ಇಲ್ಲ. ಆಮೇಲೆ ನೋಡಿದ್ರೆ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡರು ಎಂದಿದ್ದ ಆರೂರು ಜಗದೀಶ್ ಅವರು ಕೊನೆಗೆ ಎಥಿಕ್ಸ್ ಬಗ್ಗೆಯೂ ಮಾತನಾಡಿದ್ದರು. ಇದಕ್ಕೆ ಹಂಸಾ ಪ್ರತಾಪ್ ತಿರುಗೇಟು ಕೂಡ ಕೊಟ್ಟಾಗಿದೆ.
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್ಬಾಸ್ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?
ಇದರ ನಡುವೆಯೇ, ಈಗ ಹೊಸ ವರ್ಷ ಬಂದಿದ್ದು, ಹಂಸಾ ಪ್ರತಾಪ್ ಅವರು, ಹೊಸ ವರ್ಷದ ರೆಸಲ್ಯೂಷನ್ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿಕೊಂಡಿರುವ ಅವರು, ಮೊದಲಿಗೆ ಆರೋಗ್ಯವಂತೆಯಾಗಿರಬೇಕು, ಅದಕ್ಕಾಗಿ ಹೆಲ್ತಿ ಫುಡ್ಸ್ ತಿನ್ನಬೇಕು ಎನ್ನುವುದು ನನ್ನ ಮೊದಲ ರೆಸಲ್ಯೂಷನ್. ಎರಡನೆಯದ್ದು 2024ರಲ್ಲಿ ಸಿಕ್ಕಾಪಟ್ಟೆ ಖರ್ಚು ಮಾಡಿದ್ದೇನೆ. ಷಾಪಿಂಗ್ ಅದೂ ಇದೂ ಅಂತ. ಆದ್ದರಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು, ಷಾಪಿಂಗ್ ಕಡಿಮೆ ಮಾಡುವುದು ಅಂದುಕೊಂಡಿದ್ದೇನೆ. ದೇವರ ದಯೆಯಿಂದ ಇದು ನೆರವೇರಿದರೆ ಸಾಕು, ಇದು ನನ್ನ ಎರಡನೆಯ ರೆಸಲ್ಯೂಷನ್ ಎಂದಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮೂರನೆಯದ್ದು ಒಳ್ಳೊಳ್ಳೆ ಪ್ರಾಜೆಕ್ಟ್ಸ್ ತೆಗೆದುಕೊಳ್ಳಬೇಕು, ಒಳ್ಳೆಯ ನಿರ್ಧಾರ ಮಾಡಬೇಕು. ಆದಷ್ಟು ಪೇಷನ್ಸ್ನಲ್ಲಿ ಇರಬೇಕು. ಕೋಪ ಕಡಿಮೆ ಮಾಡಿಕೊಳ್ಳಬೇಕು ಇದು ಮೂರನೆಯ ರೆಸಲ್ಯೂಷನ್ ಎಂದಿದ್ದಾರೆ. ಇವರ ರೆಸಲ್ಯೂಷನ್ ವಿಡಿಯೋ ಅನ್ನು ಮಾಧ್ಯಮ ಅನೇಕ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಇದಕ್ಕೆ ನೆಟ್ಟಿಗರು ಕಮೆಂಟ್ಮಾಡುತ್ತಿದ್ದು, ಮೂರನೆಯ ರೆಸಲ್ಯೂಷನ್ 2024ರಲ್ಲಿಯೇ ಮಾಡಿಕೊಂಡಿದ್ದರೆ ನೀವು ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ರಾಜಿ ಆಗಿ ಮುಂದುವರೆಯಬಹುದಿತ್ತು. ಆದರೆ ನಿಮ್ಮ ಕೋಪ ನಿಮ್ಮನ್ನು ಅದರಿಂದ ದೂರ ಸರಿಯುವ ಹಾಗೆ ಮಾಡಿತು. ಏನೇ ಆದರೂ ನೀವು ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ರಾಜಿ ಪಾತ್ರದಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತಿದೆ, ನೀವೇ ಇದ್ದರೆ ಆ ಪಾತ್ರಕ್ಕೆ ಒಂದು ಕಳೆ ಇರುತ್ತಿತ್ತು ಎನ್ನುತ್ತಿದ್ದಾರೆ.
ನನ್ನಿಂದ್ಲೇ ನೀವ್ ಕಾಸ್ ಮಾಡ್ಕೊಂಡಿರೋದು, ಸಂಬಳನೂ ಸರಿ ಕೊಡ್ದೇ ಎಥಿಕ್ಸ್ ಇಲ್ಲ ಅಂತೀರಾ? ಹಂಸಾ ಗರಂ