ಅಯ್ಯೋ ಕಂಠಿ ಸ್ಥಿತಿನೆ? ಒಬ್ಬಳು ಸತ್ತೋದ್ಲು, ಇನ್ನೊಬ್ಳು ಬಿಟ್ಟೋದ್ಲು, ಈಗ್​ ನೋಡಿದ್ರೆ ಮಾಂಗಲ್ಯನೇ ಗಾಯಬ್​!

Published : May 12, 2025, 05:33 PM ISTUpdated : May 12, 2025, 05:39 PM IST
ಅಯ್ಯೋ ಕಂಠಿ ಸ್ಥಿತಿನೆ? ಒಬ್ಬಳು ಸತ್ತೋದ್ಲು, ಇನ್ನೊಬ್ಳು ಬಿಟ್ಟೋದ್ಲು, ಈಗ್​ ನೋಡಿದ್ರೆ  ಮಾಂಗಲ್ಯನೇ ಗಾಯಬ್​!

ಸಾರಾಂಶ

"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ಕಂಠಿ-ಸ್ನೇಹಾ ಮದುವೆಯಲ್ಲಿ ಹಲವು ತಿರುವುಗಳು. ರಾಧಾಳ ಕುತಂತ್ರ ಬಯಲಾಗಿ ಬಂಧನವಾದರೂ, ಮಾಂಗಲ್ಯ ಕಾಣೆಯಾಗಿದೆ. ನೆಟ್ಟಿಗರು ಈ ತಿರುವುಗಳನ್ನು ಟ್ರೋಲ್ ಮಾಡುತ್ತಿದ್ದಾರೆ. ಮೊದಲ ಸ್ನೇಹಾಳ ಸಾವು, ನಟಿಯರ ಬದಲಾವಣೆ, ಈಗ ಮಾಂಗಲ್ಯ ನಾಪತ್ತೆ- ಧಾರಾವಾಹಿ ಏರಿಳಿತಗಳಿಂದ ವೀಕ್ಷಕರು ಗೊಂದಲಕ್ಕೊಳಗಾಗಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಕಂಠಿ ಮತ್ತು ಸ್ನೇಹಾ ಮದ್ವೆ ಇನ್ನೇನು ಆಗಿಯೇ ಬಿಡುತ್ತದೆ ಎಂದುಕೊಂಡಾಗಲೇ ಇನ್ನೊಂದು ಟ್ವಿಸ್ಟ್​ ಕೊಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ಟ್ರೋಲ್​  ಮಾಡುತ್ತಿದ್ದಾರೆ. 
 ಕಂಠಿ ಮತ್ತು ರಾಧಾಳ ಮದುವೆಗೆ ಸಕಲ ಸಿದ್ಧತೆ ನಡೆದ ನಡುವೆಯೇ,  ಬಂಗಾರಮ್ಮ ಬಂದು ಅದನ್ನು ತಪ್ಪಿಸಿದ್ದಾಳೆ.   ಪುಟ್ಟಕ್ಕ ಮತ್ತು ಬಂಗಾರಮ್ಮನ ಅಮ್ಮ ಎಷ್ಟು ಹೇಳಿದರೂ ಬಂಗಾರಮ್ಮನಿಗೆ ರಾಧಾ ಕೆಟ್ಟವಳು ಎನ್ನುವುದು ಕೇಳುವ ಸ್ಥಿತಿಯಲ್ಲಿ   ಇರಲಿಲ್ಲ. ಕೊನೆಗೆ ಆಕೆಗೆ ಎಲ್ಲಾ ವಿಷಯ ಗೊತ್ತಾಗಿದೆ. ತನ್ನ ಸೊಸೆ ಸ್ನೇಹಾಳ ಹೃದಯವನ್ನು ಈ ಸ್ನೇಹಾಗೆ ಅಳವಡಿಸಿರುವ ವಿಷಯವೂ ತಿಳಿದಿದೆ. ಅದೇ ಕಾರಣಕ್ಕೆ ಮದುವೆ ನಿಲ್ಲಿಸಿದ್ದಾಳೆ. ಕೊನೆ ಕ್ಷಣದ ವರೆಗೂ  ತಾನು ನಿರಪರಾಧಿ ಎಂದು ಪ್ರೂವ್ ಮಾಡಿಕೊಳ್ಳುತ್ತಲೇ ಇದ್ದಳು.  ಆದ್ರೆ  ಪೊಲೀಸರನ್ನು ಕರೆಸಿ ರಾಧಾಳನ್ನು ಅರೆಸ್ಟ್​ ಮಾಡಿಸಿದ್ದಾಳೆ ಬಂಗಾರಮ್ಮ.  ಕೂಡಲೇ ರಾಧಾ ಪೊಲೀಸರಿಂದ ಪಿಸ್ತೂಲ್​ ಕಸಿದುಕೊಂಡು ಅದನ್ನು ಸ್ನೇಹಾಳಿಗೆ ಟಾರ್ಗೆಟ್​  ಮಾಡಿದ್ದಳು. ಕಂಠಿ ಅಲ್ಲಿಯೇ ಇರುವ ತೆಂಗಿನ ಕಾಯಿಯನ್ನು ಕೈಗೆತ್ತಿಕೊಂಡು ರಾಧಾಳ ಕೈಗೆ ಹೊಡೆದಾಗ ಪಿಸ್ತೂಲ್​ ಬಿದ್ದು, ರಾಧಾ ಅರೆಸ್ಟ್​ ಆದಳು.

ಇನ್ನೇನು ಎಲ್ಲಾ ಮುಗೀತು. ಕಂಠಿ ಮತ್ತು ಸ್ನೇಹಾ ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಇನ್ನೊಂದು ಅನಾಹುತ ನಡೆದು ಹೋಗಿದೆ. ಕಂಠಿ ಮತ್ತು ಸ್ನೇಹಾ ಹಸೆಮಣೆ ಏರಿದ್ದಾರೆ. ಇನ್ನೇನು ಮಾಂಗಲ್ಯ ಕಟ್ಟಬೇಕು ಎನ್ನುವಷ್ಟರಲ್ಲಿ ಕಳಶದ ಮೇಲಿಟ್ಟ ಮಾಂಗಲ್ಯ ಗಾಯಬ್​ ಆಗಿದೆ. ಜೋಯಿಸಲು ಮಾಂಗಲ್ಯನೇ ಕಾಣಿಸ್ತಿಲ್ಲ ಎಂದಾಗ ಎಲ್ಲರೂ ಗಾಬರಿಯಾಗಿದ್ದಾರೆ.  ಇನ್ನೇನು ಮದುವೆ ನಡೆದು ಇಬ್ಬರೂ ಒಟ್ಟಿಗೆ ಆಗಿ, ಸೀರಿಯಲ್​ ಮುಗಿಸ್ತಾರೆ ಎನ್ನೋಷ್ಟರಲ್ಲಿ ಇನ್ನೊಂದು ಟ್ವಿಸ್ಟ್​ ಕೊಡಲಾಗಿದೆ.

ಗಂಡ ಮತ್ತೊಂದು ಮದ್ವೆಗೆ ಸಿದ್ಧನಾಗಿದ್ರೆ ಇಲ್ಲಿ ರೀಲ್ಸ್​ ಮಾಡ್ತಿದ್ದೀರಾ? ನಟಿ ಸಂಜನಾ ಕಾಲೆಳೀತಿರೋ ನೆಟ್ಟಿಗರು

ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ನೆಟ್ಟಿಗರು ಕಂಠಿಯ ಸ್ಥಿತಿ ಕಂಡು ಟ್ರೋಲ್ ಮಾಡುತ್ತಿದ್ದಾರೆ. ಮೊದಲ ಸ್ನೇಹಾ ಸತ್ತು ಹೋದಳು. ಅಷ್ಟಕ್ಕೂ ಅಸಲಿ ಸ್ನೇಹಾಳನ್ನು ಸಾಯಿಸಿದಾಗಲೇ ಪುಟ್ಟಕ್ಕನ ಮಕ್ಕಳು ಟಿಆರ್​ಪಿ ಕಡಿಮೆಯಾಗುತ್ತಾ ಬಂದಿತ್ತು.  ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಯಿತು. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬಂದಿತ್ತು. ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.

ಕೊನೆಯ ಬಂದ ಸ್ನೇಹಾ ಅದೇನಾಯ್ತೋ ಗೊತ್ತಿಲ್ಲ. ಹೊಸಬಳನ್ನು ತೆಗೆದುಕೊಂಡಿದ್ದರು.  ಆದರೆ ಅದ್ಯಾಕೋ  ಆ ನಟಿಯನ್ನೂ ತೆಗೆದು ಆಕೆಯ ಜಾಗಕ್ಕೆ ಮತ್ತೊಬ್ಬ ನಟಿಯನ್ನು ತರಲಾಯಿತು. ಹೀಗೆ ಏನೇನೋ ಆಗಿ ಪುಟ್ಟಕ್ಕನ ಮಕ್ಕಳು ಮೂಲ ಕಥೆ ಹಳ್ಳ ಹಿಡಿಯಿತು ಎಂದೆಲ್ಲಾ ಜನರು ನೊಂದುಕೊಂಡಿದ್ದರು. ಇದರ  ನಡುವೆಯೇ ಟಿಆರ್​ಪಿ ಏರಿಸುವುದಕ್ಕಾಗಿ ರವಿಚಂದ್ರನ್​ ಎಂಟ್ರಿಕೊಡಿಸಲಾಯಿತು. ಒಟ್ಟಿನಲ್ಲಿ ಈಗ ಸೀರಿಯಲ್​ ಮುಗಿಯುವ ಲಕ್ಷಣಗಳು ಕಾಣಿಸ್ತಿವೆ. ಕೊನೆಗೆ ಈಗ ಮೂರನೆಯ ಸ್ನೇಹಾ ಬಂದಿದ್ದಾಳೆ. ಈಗ ನೋಡಿದ್ರೆ ಮಾಂಗಲ್ಯನೇ ಕಾಣೆಯಾಗಿದೆ. ಏನಪ್ಪಾ ನಿಮ್​ ಗೋಳು ಎನ್ನುತ್ತಿದ್ದಾರೆ ವೀಕ್ಷಕರು!

ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ