ಝುಮಕ ಝುಮಕ ಎಂದು ಸ್ಟೆಪ್ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಪ್ರೆಗ್ನೆಂಟ್​ ಹೀಗೆಲ್ಲಾ ಮಾಡ್ಬಾರ್ದು ಎಂದ ಫ್ಯಾನ್ಸ್​

Published : Jan 25, 2024, 09:03 PM ISTUpdated : Jan 25, 2024, 09:04 PM IST
ಝುಮಕ ಝುಮಕ ಎಂದು ಸ್ಟೆಪ್ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಪ್ರೆಗ್ನೆಂಟ್​ ಹೀಗೆಲ್ಲಾ ಮಾಡ್ಬಾರ್ದು ಎಂದ ಫ್ಯಾನ್ಸ್​

ಸಾರಾಂಶ

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅಂದ್ರೆ ಸಂಜನಾ ಅವರು ರೀಲ್ಸ್​ ಮಾಡಿದ್ದು, ಅಭಿಮಾನಿಗಳು ನಟಿಯ ಕಾಲೆಳೆಯುತ್ತಿದ್ದಾರೆ. ಏನಂತಿದ್ದಾರೆ ಫ್ಯಾನ್ಸ್​?  

ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ.  

ಇಂತಿಪ್ಪ ಸ್ನೇಹಾ ಅರ್ಥಾತ್​ ಸಂಜನಾ ಸೋಷಿಯಲ್​  ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​. ಆಗ್ಗಾಗ್ಗೆ ರೀಲ್ಸ್​ಗಳನ್ನು ಶೇರ್​ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಮಿನಿ ಡ್ರೆಸ್​, ಕೆಲವು ಸಲ ಸೀರೆ, ಸ್ಕರ್ಟ್​, ಪ್ಯಾಂಟ್​, ಜೀನ್ಸ್​ ಹೀಗೆ ಎಲ್ಲ ಡ್ರೆಸ್​ಗಳಲ್ಲಿಯೂ ಸೂಪರ್​ ಆಗಿ ಕಾಣುವ ಸಂಜನಾ ಇದೀಗ ಪ್ರಸಿದ್ಧವಾಗಿರುವ ಝುಮಕ ಝಮಕ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ಹೀಗೆ ಸ್ಟೆಪ್​ ಹಾಕಿದ್ರೆ ಸ್ನೇಹಾ ಫ್ಯಾನ್ಸ್​ ಪ್ರೆಗ್ನೆಂಟ್​ ಹೀಗೆಲ್ಲಾ ಕುಣಿದು ಕುಪ್ಪಳಿಸಬಾರದು ಎಂದು ನಟಿಯ ಕಾಲೆಳೆಯುತ್ತಿದ್ದಾರೆ.

ಒಂದೊಂದು ಫೋಟೋ ಒಂದೊಂದು ಕಥೆ... ಫಿನಾಲೆ ಸನೀಹದಲ್ಲಿಯೇ ಕಾರ್ತಿಕ್​ ಫೋಟೋಗಳು ಹೇಳ್ತಿರೋದೇನು?

ಅಷ್ಟಕ್ಕೂ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರಿಯರಿಗೆ ವಿಷಯ ಗೊತ್ತೇ ಇದೆ. ಗಂಡ ಕಂಠಿಯ ಸಹೋದರಿ ವಸು ಪ್ರೆಗ್ನೆಂಟ್​ ಎಂದು ಹೇಳುವ ಬದಲು ಬಂಗಾರಮ್ಮನ ಮುಂದೆ ಶಶಿಕಲಾ  ಯಡವಟ್ಟು ಮಾಡಿ ಸ್ನೇಹಾ ಗರ್ಭಿಣಿ ಎಂದಿದ್ದಾಳೆ.  ವಸು ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಮುಚ್ಚಿಟ್ಟಿದ್ದಳು. ಆದರೆ ಶಶಿಕಲಾಗೆ ಸ್ಕ್ಯಾನಿಂಗ್​ ರಿಪೋರ್ಟ್​ ಸಿಕ್ಕಿತ್ತು. ಆಕೆ ಸ್ನೇಹಾ ಗರ್ಭಿಣಿ ಎಂದು ಬಂಗಾರಮ್ಮನ ಎದುರು ಹೇಳಿದ್ದಳು. ಆದರೆ ವಸು ಮತ್ತು ಬಂಗಾರಮ್ಮನ ಮಗ ಅಂದರೆ ವಸು ಗಂಡ ಇಬ್ಬರೂ ಜೊತೆಯಾಗಿರುವ ವಿಷಯ ಮನೆಯವರಿಗೆ ತಿಳಿಯಬಾರದು ಎನ್ನುವ ಕಾರಣಕ್ಕೆ ವಸು ಗರ್ಭಿಣಿ ಎನ್ನುವ ಸುದ್ದಿಯನ್ನು ಸ್ನೇಹಾ ಆಗಲೀ, ವಸು ಆಗಲೀ ಯಾರಿಗೂ ಹೇಳುವಂತಿಲ್ಲ. ಅದೇ ಇನ್ನೊಂದೆಡೆ ಶಶಿಕಲಾ ಸ್ನೇಹಾಳೇ ಗರ್ಭಿಣಿ ಎಂದಿರುವ ಕಾರಣ, ಎಲ್ಲರೂ ಅವಳೇ ಗರ್ಭಿಣಿ ಎಂದುಕೊಂಡು ಬಿಟ್ಟಿದ್ದಾರೆ. ಈ ಬಗ್ಗೆ ಸ್ನೇಹಾ ಮತ್ತು ವಸುಗೆ ಅಸಲಿಯತ್ತು ಗೊತ್ತು ಬಿಟ್ಟರೆ ಬೇರೆ ಎಲ್ಲರೂ ಸ್ನೇಹಾ ಗರ್ಭಿಣಿ ಎಂದುಕೊಂಡಿದ್ದಾರೆ.

ಖುದ್ದು ಕಂಠಿ ಕೂಡ ಇದೀಗ ತಾನು ಅಪ್ಪ ಆಗುತ್ತಿದ್ದೇನೆ ಎಂದುಕೊಂಡಿದ್ದರೆ, ಪುಟ್ಟಕ್ಕ ತಾನು ಅಜ್ಜಿಯಾಗುವ ಖುಷಿಯಲ್ಲಿದ್ದಾಳೆ. ಆದ್ದರಿಂದಲೇ ಡ್ಯಾನ್ಸ್​ ಮಾಡುತ್ತಿರುವ ಸ್ನೇಹಾಗೆ ಅಭಿಮಾನಿಗಳು ಹೀಗೆಲ್ಲಾ ಗರ್ಭಿಣಿ ಹೆಂಗಸು ಡ್ಯಾನ್ಸ್​ ಮಾಡಬಾರದು ಎನ್ನುತ್ತಿದ್ದಾರೆ. ಇನ್ನು ಹಲವರು ಸಂಜನಾ ಅವರ ನೃತ್ಯಕ್ಕೆ ಮನಸೋತಿದ್ದಾರೆ. 

ನ್ಯೂಯಾರ್ಕ್​ ಟೈಂಸ್ಕ್ವೇರ್​ನಲ್ಲಿ ಅಪ್ಪು ಜೊತೆ ಅನು... ಹುಟ್ಟುಹಬ್ಬಕ್ಕೆ ಮರೆಯಲಾಗದ ಗಿಫ್ಟ್​: ನಟಿ ಹೇಳಿದ್ದೇನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ