ನ್ಯೂಯಾರ್ಕ್​ ಟೈಂಸ್ಕ್ವೇರ್​ನಲ್ಲಿ ಅಪ್ಪು ಜೊತೆ ಅನು... ಹುಟ್ಟುಹಬ್ಬಕ್ಕೆ ಮರೆಯಲಾಗದ ಗಿಫ್ಟ್​: ನಟಿ ಹೇಳಿದ್ದೇನು?

By Suvarna News  |  First Published Jan 25, 2024, 8:25 PM IST

ಆ್ಯಂಕರ್​ ಅನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನ್ಯೂಯಾರ್ಕ್​ ಟೈಂಸ್ಕ್ವೇರ್​ನಲ್ಲಿ ಅಪ್ಪು ಜೊತೆಗಿರುವ ಅನುಶ್ರೀ ಅವರ ಫೋಟೋ ಹಾಕಿದ್ದು, ನಟಿ ಹೇಳಿದ್ದೇನು?
 


ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಹೀಗೆ ಜನಮನ ಗೆದ್ದಿರುವ ನಟಿ, ಆ್ಯಂಕರ್​ ಅನುಶ್ರೀ ಅವರಿಗೆ ಇಂದು ಅಂದರೆ ಜನವರಿ 25 ಹುಟ್ಟುಹಬ್ಬದ ಸಂಭ್ರಮ. ಗೂಗಲ್​ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಇದೀಗ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರತಿವರ್ಷಕ್ಕಿಂತಲೂ ನಟಿಗೆ ಈ ಬಾರಿಯ ಹುಟ್ಟುಹಬ್ಬ ಡಬಲ್​ ಸಂತೋಷ ತಂದಿದೆ. ಹಲವು ಕ್ಷೇತ್ರಗಳಲ್ಲಿ ಫೇಮಸ್​ ಆಗಿರುವ ನಟಿಗೆ ಅಭಿಮಾನಿಗಳೂ ಲಕ್ಷಾಂತರ ಮಂದಿ. ಇದಾಗಲೇ ಇವರೆಲ್ಲರೂ ಅನುಶ್ರೀ ಅವರಿಗೆ ಶುಭಾಶಯಗಳ ಸುರಿಮಳೆಯನ್ನೇಗೈದಿದ್ದರೂ, ಎಲ್ಲಕ್ಕಿಂತಲೂ ಮಿಗಿಲಾಗಿ ಈ ವರ್ಷ ಇನ್ನೊಂದು ಖುಷಿ ವಿಷಯ ಅನುಶ್ರೀ ಅವರಿಗೆ ಬಂದಿದ್ದು, ಅದರ ಕುರಿತು ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

Tap to resize

Latest Videos

ಆ್ಯಂಕರ್​ ಅಕುಲ್ ಬಾಲಾಜಿ ಕಂಡು ಅನುಶ್ರೀಗೆ ಏನೋ ಆಯ್ತಂತೆ! ಪಸಂದಾಗೈತೆ ಹಾಡಿಗೆ ಮೋಡಿ ಮಾಡಿದ ಜೋಡಿ

ಅಷ್ಟಕ್ಕೂ ಅನುಶ್ರೀ ಅವರ ಅಭಿಮಾನಿಗಳಿಗೆ ತಿಳಿದಿರುವಂತೆ ಪುನೀತ್​ ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿ ಅನುಶ್ರೀ. ಅನು ಮತ್ತು ಅಪ್ಪು ಅವರ ಬಾಂಧವ್ಯ ವರ್ಣಿಸಲು ಅಸಾಧ್ಯ. ಪುನೀತ್​ ಅವರು ಇಹಲೋಕ ಬಿಟ್ಟು ತ್ಯಜಿಸಿದ ಸಂದರ್ಭದಲ್ಲಿ ಅವರ ಅಸಂಖ್ಯ ಅಭಿಮಾನಿಗಳಂತೆಯೇ ಅನುಶ್ರೀ ಅವರು ಪಟ್ಟ ಸಂಕಟ ಅಷ್ಟಿಷ್ಟಲ್ಲ. ಸದಾ ಪುನೀತ್​ ಅವರ ಸ್ಮರಣೆಯನ್ನು ಅವರು ಮಾಡುತ್ತಿರುತ್ತಾರೆ. ಇಂತಿಪ್ಪ ಅನುಶ್ರೀ ಅವರಿಗೆ ಈ ವರ್ಷ ದೊಡ್ಡ ಸರ್​ಪ್ರೈಸ್​ ಸಿಕ್ಕಿದೆ. ಅಮೆರಿಕದ ನ್ಯೂಯಾರ್ಕ್​ಸ್ವೇರ್​ನಲ್ಲಿ ಅನುಶ್ರೀ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗಿದ್ದು, ಅವರ ಜೊತೆ ಅಪ್ಪು ಅವರ ಫೋಟೋ ಹಾಕಲಾಗಿದೆ.

ಇದನ್ನು ನೋಡಿ ಅನುಶ್ರೀ ಅವರಿಗಾಗಿರುವ ಹರ್ಷ ಎಷ್ಟು ಎಂದು ಬೇರೆ ಹೇಳಬೇಕಾಗಿಲ್ಲ. ಈ ಕುರಿತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ನಟಿ, Proud moment for me…. Newyork Timesquare… ನನ್ನ ಪರಮಾತ್ಮನ ಜೊತೆ !!! Thankuuuu so much ಎಂದು ಬರೆದುಕೊಂಡಿದ್ದಾರೆ. ಇವರ ಈ ಪಟಕ್ಕೆ ಲಕ್ಷಾಂತರ ಮಂದಿ ಲೈಕ್ಸ್​ ಮಾಡಿದ್ದು, ಶುಭಾಶಯಗಳ ಜೊತೆ ಇಂಥ ಅಪೂರ್ವ ಚಿತ್ರಕ್ಕಾಗಿ ಅಭಿನಂದನೆಗಳನ್ನೂ ಸಲ್ಲಿಸುತ್ತಿದ್ದಾರೆ. 

ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್​ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...

click me!