ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ

By Suchethana D  |  First Published Nov 8, 2024, 12:13 PM IST

ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಕ್ಕೆ ಆಯ್ಕೆ ಆಗುವ ಮುನ್ನ ನಿರ್ದೇಶಕರು ಭಿಕ್ಷೆ ಬೇಡಲು ಕಳುಹಿಸಿದ್ದ ವಿಚಿತ್ರ ಘಟನೆ ನೆನಪಿಸಿಕೊಂಡ ಸಂಜನಾ ಬುರ್ಲಿ
 


ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ ಪಾತ್ರವನ್ನು ಸಾಯಿಸಿದ ಮೇಲೆ, ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಈ ಸೀರಿಯಲ್​ ಪ್ರೊಮೋ ಹಾಕಿದಾಗಲೆಲ್ಲಾ ಸಹನಾ ವಾಪಸ್​ ಬಂದರೆ, ಹೇಗಾದ್ರೂ ಮಾಡಿ ಸ್ನೇಹಾಳನ್ನೂ ವಾಪಸ್​ ಕರೆಸಿ, ಸೀರಿಯಲ್​ನಲ್ಲಿ ಏನು ಬೇಕಾದ್ರೂ ಆಗತ್ತೆ ಎನ್ನುತ್ತಿದ್ದಾರೆ. ಅತ್ತ ಕಂಠಿ ಸ್ನೇಹಾ ಬರೋದನ್ನು ಕಾಯ್ತಿದ್ರೆ ಇತ್ತ ಫ್ಯಾನ್ಸ್​ ಕೂಡ ಮತ್ತೆ ಸ್ನೇಹಾ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಅಷ್ಟಕ್ಕೂ  ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಗಿದೆ. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು.  ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು.

ಇದೀಗ ನಟಿ, ತಾವು ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಹೇಗೆ ಆಯ್ಕೆ ಆದೆ ಎನ್ನುವ ಬಗ್ಗೆ ಕುತೂಹಲದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ.   ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ಸ್ನೇಹಾ ಪಾತ್ರಕ್ಕೆ ಆಯ್ಕೆಯಾಗುವ ಮೊದಲು ನಿರ್ದೇಶಕರು ತಮ್ಮ ಕೈಯಲ್ಲಿ ಏನೇನು ಮಾಡಿಸಿದ್ದರು ಎಂಬ ಬಗ್ಗೆ ತಿಳಿಸಿದ್ದಾರೆ. ಈ ಸೀರಿಯಲ್​ನ ಪ್ರೊಮೋ ಶೂಟ್​ ಆಗುವ ಮುಂಚೆ 10 ದಿನ ಅಷ್ಟೇ ನನಗೆ ನನ್ನ ಪಾತ್ರದ ಬಗ್ಗೆ ಗೊತ್ತಾಗಿತ್ತು. ಸೀರಿಯಲ್​ನಲ್ಲಿ ಹೇಗೆ ಆ್ಯಕ್ಟ್​ ಮಾಡಬೇಕು ಎನ್ನುವ ಬಗ್ಗೆ ಸ್ವಲ್ಪ ದಿನ ನನಗೆ ಮತ್ತು ಕಂಠಿ ಪಾತ್ರಧಾರಿ ಧನುಷ್​ ಅವರಿಗೆ ಟ್ರೀನಿಂಗ್​ ಕೊಡಲು ಕಾಮಿಡಿ ಕಿಲಾಡಿ ಮೆಂಟರ್​ ಅವರನ್ನು ಕರೆಸಿದ್ದರು. ನನ್ನ ದನಿ ತುಂಬಾ ಚಿಕ್ಕದಿತ್ತು. ಜೋರಾಗಿ ಕಿರುಚಿದರೆ ಕಿರ್ ಎನ್ನುತ್ತಿತ್ತು. ಆದರೆ ಸ್ನೇಹಾ ಪಾತ್ರ ನಿಮಗೆಲ್ಲಾ ಗೊತ್ತಿರುವಂತೆ ದೊಡ್ಡದಾಗಿ ಮಾತನಾಡಬೇಕಿತ್ತು. ಇದಕ್ಕಾಗಿ ನನಗೆ ಜೋರಾಗಿ ಕಿರುಚಿಸುತ್ತಿದ್ದರು. ಸಿಕ್ಕಾಪಟ್ಟೆ ಕಿರುಚಿ ಕಿರುಚಿ ಅಂತೂ ದನಿ ಸರಿ ಮಾಡಿಕೊಂಡೆ ಎಂದಿದ್ದಾರೆ ಸ್ನೇಹಾ.

Tap to resize

Latest Videos

undefined

ಬಿಗ್​ಬಾಸ್​ಗೆ ಸಂಜನಾ ಬುರ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡ್ತಾರಾ? ಸೀರಿಯಲ್​ ಬಿಟ್ಟಿದ್ದೇಕೆ? ನಟಿ ಏನಂದ್ರು ಕೇಳಿ..

ಇದೇ ವೇಳೆ, ಸ್ನೇಹಾ ಬುಲೆಟ್​, ಆಟೊ, ಜೀಪ್​ ಬೈಕ್​, ಸ್ಕೂಟಿ ಎಲ್ಲಾ ಓಡಿಸೋ ಕ್ಯಾರೆಕ್ಟರ್​. ಇದು ಓಡಿಸಲು ನನಗೆ ಬರುತ್ತಿರಲಿಲ್ಲ.  ಮದ್ದೂರಿನಲ್ಲಿ ಹಳ್ಳಿ ರೋಡ್​ಗಳಲ್ಲಿ ಪ್ರ್ಯಾಕ್ಟೀಸ್​ ಮಾಡಿದೆ. ಅವೆಲ್ಲಾ ಕಲಿತ ಮೇಲೆ ಆನ್​ ಶೂಟ್​ಗೆ ಹೋಗಿದ್ದೆ ಎಂದಿದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಕುತೂಹಲದ ವಿಷಯವೊಂದನ್ನು ಅವರು ರಿವೀಲ್​ ಮಾಡಿದ್ದಾರೆ. ಅದೇನೆಂದರೆ ಸ್ನೇಹಾ ಪಾತ್ರ ಫೈನಲ್​  ಆಗುವ ಮುಂಚೆ ನಿರ್ದೇಶಕರು ತಮಗೆ ಹಾಗೂ ಕಂಠಿ ಪಾತ್ರಧಾರಿ ಧನುಷ್​ ಅವರಿಗೆ ಭಿಕ್ಷೆ ಬೇಡಲು ಕಳಿಸಿದ್ದು! ಈ ಬಗ್ಗೆ ಮಾತನಾಡಿರುವ ಸಂಜನಾ ಬುರ್ಲಿ, ಇದೊಂದು ವಿಚಿತ್ರ ಸನ್ನಿವೇಶ. ನಮ್ಮಬ್ಬಿರನ್ನೂ ಕರೆದು ಭಿಕ್ಷೆ ಬೇಡುವಂತೆ ಹೇಳಿದ್ರು. ಕೇವಲ 20 ನಿಮಿಷ ಟೈಂ ಕೊಟ್ಟರು. ಒಂದೊಂದು ರೂಪಾಯಿಗಳ ಕಾಯಿನ್​ ಮಾತ್ರ ಬೇಕು, ಕನಿಷ್ಠ 20 ರೂಪಾಯಿ ಆಗಬೇಕು ಎಂದರು.

ಇಬ್ಬರೂ ಬೇರೆ ಬೇರೆ ಕಡೆ ಹೋದ್ವಿ. ಆರಂಭದಲ್ಲಿ ತುಂಬಾ ಮುಜುಗರ ಆಯ್ತು. ಆದರೆ ಇದನ್ನು ಮಾಡಲೇಬೇಕಿತ್ತು. ಅವರ ಇವರ ಬಳಿ ದುಡ್ಡು ಬೇಕು, ಒಂದು ರೂಪಾಯಿ ಬೇಕು ಎಂದೆಲ್ಲಾ ಕೇಳಿ ಹೇಗೋ ಭಿಕ್ಷೆ ಬೇಡಿದೆ. ಯಾಕೆ ಅಂತೆಲ್ಲಾ ಕೇಳ್ತಿದ್ರು. ಅದೆಲ್ಲಾ ಆಮೇಲೆ ಹೇಳ್ತೇನೆ, ಟೈಂ ಸ್ವಲ್ಪನೇ ಇದೆ ಎಂದು ಹೇಳಿದೆ. ಆರಂಭದಲ್ಲಿ ತುಂಬಾ ಮುಜುಗರ ಆಯ್ತು. ಆಮೇಲೆ ನಾಚಿಕೆ ಎಲ್ಲಾ ಬಿಟ್ಟು ಭಿಕ್ಷೆ ಬೇಡಿ, 20 ರೂಪಾಯಿ ತಂದುಕೊಟ್ಟೆ. ಅಷ್ಟಕ್ಕೂ ಹೀಗೆ ಮಾಡಿಸಲು ಕಾರಣವೂ ಇದೆ. ಅದೇನೆಂದರೆ, ಶೂಟಿಂಗ್​ ಟೈಮ್​ನಲ್ಲಿ ತುಂಬಾ ಜನ ಇರ್ತಾರೆ, ದೊಡ್ಡ ದೊಡ್ಡ ದಿಗ್ಗರು ಇರ್ತಾರೆ. ಭಾವನೆಗಳು ಸಹಜವಾಗಿ ಬರಬೇಕು, ಯಾವುದೇ ಮುಜುಗರ ಇಲ್ಲದೆ ಪಾತ್ರವನ್ನು ನಿಸ್ಸಂಕೋಚವಾಗಿ ಮಾಡಬೇಕು. ಭಿಕ್ಷೆ ಬೇಡಿ ಸಕ್ಸಸ್​ ಆದ್ರೆ ಇವೆಲ್ಲಾ ಓಕೆ ಎಂದು ಮಾಡಿಸಲಾಗಿತ್ತು. ಅದರಲ್ಲಿ ನಾನು ಯಶಸ್ವಿಯಾಗಿ ಪಾತ್ರ ಗಿಟ್ಟಿಸಿಕೊಂಡೆ ಎಂದಿದ್ದಾರೆ. 

ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್​ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ

click me!