ಕಾರ್ತಿಕ್‌ಗೆ ಶಿಕ್ಷೆ, ನಾಚಿಕೆಯಾಗಲ್ವಾ ನಿಂಗೆ ಎನ್ನುತ್ತಾ ಮುದ್ದುಮುದ್ದಾಗಿ ಗೆಳೆಯನ ಒದ್ದೆ ತಲೆ ಒರೆಸಿದ ಸಂಗೀತಾ

Published : Oct 27, 2023, 02:56 PM ISTUpdated : Oct 27, 2023, 03:05 PM IST
ಕಾರ್ತಿಕ್‌ಗೆ ಶಿಕ್ಷೆ, ನಾಚಿಕೆಯಾಗಲ್ವಾ ನಿಂಗೆ ಎನ್ನುತ್ತಾ ಮುದ್ದುಮುದ್ದಾಗಿ ಗೆಳೆಯನ ಒದ್ದೆ ತಲೆ ಒರೆಸಿದ ಸಂಗೀತಾ

ಸಾರಾಂಶ

ಬಿಗ್ ಬಾಸ್ ಆದೇಶದಂತೆ, ವಿನಯ್ ಹಾಗೂ ಕಾರ್ತಿಕ್ ಇಬ್ಬರಿಗೂ ಕುರ್ಚಿಯಲ್ಲಿ ಕುಳ್ಳಿರಿಸಿ ತಣ್ಣೀರನ್ನು ಜೋರಾಗಿಯೇ ಎರಚಿದ್ದಾರೆ ಸಂಗೀತಾ. ಇಬ್ಬರೂ ಶಿಕ್ಷೆಯನ್ನು ಎಂಜಾಯ್ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ವಿಷಯಕ್ಕೆ ಸಂಗೀತಾಗೆ ಕಾರ್ತಿಕ್ ಮೇಲೆ ಬೇಸರವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಇದೀಗ ಮೂರನೆಯ ವಾರದ ಕೊನೆ ತಲುಪಿದೆ. ವೀಕೆಂಡ್ ಶನಿವಾರದ 'ಕಿಚ್ಚನ ಪಂಚಾಯಿತಿ' ಹಾಗೂ ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಗಳು ಇಂದು ಮತ್ತು ನಾಳೆ ಪ್ರಸಾರವಾಗಲಿವೆ. ಇದೀಗ ವೀಕೆಂಡ್‌ಗಿಂತ ಮೊದಲು ದೊಡ್ಮನೆಯಲ್ಲಿರುವ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಶಿಕ್ಷೆ ಅನುಭವಿಸಿದ್ದಾರೆ. ಹಾಗಿದ್ದರೆ ಅವರಿಬ್ಬರಿಗೇ ಶಿಕ್ಷೆ ಆಗಿದ್ದು ಯಾಕೆ? 

ಹೌದು, ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರಿಬ್ಬರಿಗೇ ಶಿಕ್ಷೆಯಾಗಿದೆ. ಕಾರಣ, ಅವರಿಬ್ಬರೂ ಬಿಗ್ ಬಾಸ್ ಮನೆಯ ನಿಯಮ ಮೀರಿ ಇನ್ನೂ ನಿದ್ದೆ ಮಾಡುತ್ತಿದ್ದರು. ಎಲ್ಲರೂ ಅಲ್ಲಿನ ನಿಯಮದ ಪ್ರಕಾರ ಎದ್ದು ರೆಡಿಯಾಗುತ್ತಿದ್ದರೆ ಈ ಇಬ್ಬರು ಮಾತ್ರ ಮಲಗಿ ನಿದ್ರಿಸುತ್ತಲೇ ಇದ್ದರು. ಇದನ್ನು ನೋಡಿ ಕೆಂಡಾಮಂಡಲವಾಗಿರುವ ಬಿಗ್ ಬಾಸ್, ಉಳಿದ ಸ್ಪರ್ಧಿಗಳ ಬಳಿ ಅವರಿಬ್ಬರನ್ನೂ ಎಬ್ಬಿಸಿ ಚೇರ್‌ನ ಮೇಲೆ ಕೂಡ್ರಿಸಿ ತಣ್ಣೀರಿನ ಸ್ನಾನ ಮಾಡಿಸಲು ಹೇಳಿದ್ದಾರೆ. 

ಅಪ್ಪನಿಂದ ದೂರವಿರಲು ಮನೆ ಬಿಟ್ಟು ಮುಂಬೈ ಸೇರಿಕೊಂಡಿದ್ದೆ, ಈಗ ಮಗನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ: ವಿನಯ್ ಗೌಡ

ಬಿಗ್ ಬಾಸ್ ಆದೇಶದಂತೆ, ವಿನಯ್ ಹಾಗೂ ಕಾರ್ತಿಕ್ ಇಬ್ಬರಿಗೂ ಕುರ್ಚಿಯಲ್ಲಿ ಕುಳ್ಳಿರಿಸಿ ತಣ್ಣೀರನ್ನು ಜೋರಾಗಿಯೇ ಎರಚಿದ್ದಾರೆ ಸಂಗೀತಾ. ಇಬ್ಬರೂ ಶಿಕ್ಷೆಯನ್ನು ಎಂಜಾಯ್ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ವಿಷಯಕ್ಕೆ ಸಂಗೀತಾಗೆ ಕಾರ್ತಿಕ್ ಮೇಲೆ ಬೇಸರವಾಗಿದೆ. 'ಕಾರ್ತಿಕ್ , ನಿನಗೆ ನಾಚಿಕೆಯಾಗಲ್ವಾ? ಎಲ್ಲಾನೂ ಸಹವಾಸ ದೋಷ' ಎಂದಿದ್ದಾರೆ ಸಂಗೀತಾ. ಆಕೆ ನೇರವಾಗಿ ಇಬ್ಬರೂ ಮಾಡಿರುವ ತಪ್ಪನ್ನು ವಿನಯ್ ಮೇಲೆ ಹಾಕಿದ್ದಾರೆ, ಅಷ್ಟೇ ಅಲ್ಲ, ವಿನಯ್ ಸಹವಾಸದಿಂದ ಕಾರ್ತಿಕ್ ಕೂಡ ನಿಯಮ ಮೀರಿ ನಿದ್ರಿಸಿದ್ದಾನೆ ಎಂದಿದ್ದಾರೆ. 

ಲಂಗ ದಾವಣೀಲಿ ಶ್ವೇತಾ ಚಂಗಪ್ಪ, ಬೆಸ್ಟ್ ಆ್ಯಂಕರ್ ವೋಟು ಈ ದಸರಾ ಬೊಂಬೆಗೇ ಎಂದ ನೆಟ್ಟಿಗರು!

ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​