ಮಧ್ಯ ರಾತ್ರಿ ಕತ್ತು ಹಿಡಿದು ಪಬ್ನಿಂದ ಹೊರಕ್ಕೆ ತಳ್ಳಿದ್ರು, ಅಲ್ಲೇ ಲೈಫ್ ಟರ್ನ್ ಆಯ್ತು ಎಂದು ಅಂದು ನಡೆದ ಘಟನೆ ವಿವರಿಸಿದ್ದಾರೆ ಚಂದನ್ ಶೆಟ್ಟಿ. ಅಷ್ಟಕ್ಕೂ ಆಗಿದ್ದೇನು?
ಕನ್ನಡದಲ್ಲಿ ರ್ಯಾಪರ್ ಈಗ ಹಲವು ಜನರಿದ್ದಾರೆ. ಇವರಲ್ಲಿ ವಿಶೇಷವಾಗಿ ನಿಲ್ಲುವವರ ಪೈಕಿ ಚಂದನ್ ಶೆಟ್ಟಿ ಕೂಡ ಒಬ್ಬರು. 'ಹಾಳಾಗೋದೆ', 'ಲಕ ಲಕ ಲ್ಯಾಂಬೋರ್ಗಿನಿ', 'ಟಕಿಲಾ', 'ಪಾರ್ಟಿ ಫ್ರೀಕ್', '3 ಪೆಗ್', 'ಚಾಕ್ಲೆಟ್ ಗರ್ಲ್', ಹೀಗೆ ರ್‍ಯಾಪ್ ಸಾಂಗ್ ಮಾಡಿ ಫೇಮಸ್ ಆದವರು ಚಂದನ್ ಶೆಟ್ಟಿ. ಇಂದು ರ್‍ಯಾಪ್ ಸಂಗೀತದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಇದರ ನಡುವೆಯೇ, 'ಬಿಗ್ ಬಾಸ್' ವಿನ್ನರ್ ಕೂಡ ಆದವರು. ಸಂಗೀತ ನಿರ್ದೇಶಕರಾಗಿಯೂ ಮಿಂಚಿರೋ ಚಂದನ್ ಶೆಟ್ಟಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾದ ಮೂಲಕ ನಟ ಕೂಡ ಆಗಿದ್ದಾರೆ. ಇದೀಗ ಇನ್ನೂ ಕೆಲವು ಸಿನಿಮಾಗಳು ಇವರ ಕೈಯಲ್ಲಿ ಇವೆ. ಅದೇನೇ ಇದ್ದರು ರ್‍ಯಾಪರ್ ಚಂದನ್ ಶೆಟ್ಟಿ ಎಂದೇ ಇವರು ಫೇಮಸ್.
ಆದರೆ, ಕನ್ನಡದಲ್ಲಿ ರ್‍ಯಾಪರ್ ಆಗೋಕೆ ಕಾರಣವಾಗಿರುವ ಕುತೂಹಲದ ವಿಷಯವೊಂದನ್ನು ಅವರು ಹಂಚಿಕೊಂಡಿದ್ದಾರೆ. ಹೌದು! ಅಂದು ಪಬ್ನಿಂದ ಮಧ್ಯರಾತ್ರಿ 12 ಗಂಟೆಗೆ ಇವರನ್ನು ಪಬ್ ಓನರ್ ಮತ್ತು ಬೌನ್ಸರ್ ಕತ್ತುಹಿಡಿದು ತಳ್ಳಿದ್ರಂತೆ. ಈ ಕುರಿತು ಚಂದನ್ ಶೆಟ್ಟಿ ಅವರು, ರೇಡಿಯೋ ಸಿಟಿ ಚಾನೆಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ಅಂದು ಪಬ್ಗೆ ಹೋಗಿದ್ದೆ. ಅಲ್ಲಿ ಇಂಗ್ಲಿಷ್ ಹಾಡು ಹಾಕಿದ್ರು. ಕನ್ನಡದಲ್ಲಿ ರ್‍ಯಾಪ್ ಹಾಡು ಹಾಡಿ ಎಂದು ಕೇಳಿದೆ. ಅಲ್ಲಿದ್ದವರಿಗೆ ಅದೇನು ಸಿಟ್ಟು ಬಂತೋ ಗೊತ್ತಿಲ್ಲ. ಕನ್ನಡ ಹಾಡು ಹಾಕಿದ್ರೆ ಡಾನ್ಸ್ ಮಾಡುತ್ತಿದ್ದೆ ಎಂದು ಹೇಳಿದ್ದೇ ತಪ್ಪಾಗೋಯ್ತು. ಬೌನ್ಸರ್ ಬಂದರು, ಪಬ್ ಮಾಲೀಕನೂ ಬಂದ. ಮಧ್ಯರಾತ್ರಿ 12 ಗಂಟೆ ಆಗಿತ್ತು. ಪಬ್ನಿಂದ ಕುತ್ತಿಗೆ ಹಿಡಿದು ತಳ್ಳಿಯೇ ಬಿಟ್ಟರು. ಕನ್ನಡ ಹಾಡು ಕೇಳಿದ್ದೇ ತಪ್ಪಾಗೋಗಿತ್ತು. ಇದೊಳ್ಳೆ ಕಥೆ ಆಯ್ತಲ್ಲಪ್ಪ ಎಂದು ದುಃಖ ಪಟ್ಟುಕೊಂಡೆ ಎಂದು ಅಂದು ನಡೆದ ಘಟನೆಯನ್ನು ಚಂದನ್ ಶೆಟ್ಟಿ ವಿವರಿಸಿದ್ದಾರೆ.
ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?
ಸುಮಾರು ಎರಡು ಗಂಟೆ ಹೊರಗೇ ನಿಂತಿದ್ದೆ. ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅಲ್ಲಿದ್ದ ನನ್ನ ಫ್ರೆಂಡ್ಸೂ ಸಹಾಯಕ್ಕೆ ಬರಲಿಲ್ಲ. ಅಂದೇ ಡಿಸೈಡ್ ಮಾಡಿಬಿಟ್ಟೆ. ಅದೇ ನನ್ನ ಲೈಫ್ ಟರ್ನಿಂಗ್ ಪಾಯಿಂಟ್ ಆಯಿತು. ಲೈಫ್ನಲ್ಲಿ ಟ್ರಿಗರ್ ಪಾಯಿಂಟ್ ಇರಬೇಕು ಎಂದು ಹೇಳುವುದು ಇದಕ್ಕೇನೇ. ಅಲ್ಲಿಂದಲೇ ನಾನು ಕನ್ನಡದಲ್ಲಿ ರ್‍ಯಾಪ್ ಮಾಡಲು ಶುರು ಮಾಡಿದೆ. ಈಗ ಫಾರಿನ್ನಲ್ಲಿಯೂ ನನ್ನ ರ್‍ಯಾಪ್ ಸಂಗೀತವನ್ನು ಹಾಕುತ್ತಾರೆ. ಅಂದು ನಡೆದ ಘಟನೆಯಿಂದ ನಾನು ಇಲ್ಲಿಯವರೆಗೆ ಬಂದು ನಿಂತೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಅಂದಹಾಗೆ ಚಂದನ್ ಶೆಟ್ಟಿ ಅವರು ಕೆಲ ಕಾಲ ರ್‍ಯಾಪ್ ಸಾಂಗ್ ನಿಲ್ಲಿಸಿದ್ದರು. ಅದಕ್ಕೆ ವಿವರಣೆ ನೀಡಿದ್ದ ಅವರು, ಒಂದೂವರೆ ವರ್ಷದಿಂದ ಬೇಕೆಂದೇ ಇದನ್ನು ನಿಲ್ಲಿಸಿದ್ದೇನೆ. ನನ್ನ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗುತ್ತಿದ್ದುದರಿಂದ ನಾನು ಒಂದು ಸ್ಟ್ರಾಟೆಜಿ ಮಾಡಿಕೊಂಡಿದ್ದೆ, ರ್‍ಯಾಪ್ ನಿಲ್ಲಿಸಿದ್ದೆ. ಚಂದನ್ ಶೆಟ್ಟಿ ಎಲ್ಲೋದಾ? ಚಂದನ್ ಶೆಟ್ಟಿ ಕಣ್ಮರೆ ಆಗಿದ್ದಾನೆ ಅನ್ನೋದು ಆಡಿಯೆನ್ಸ್ ಮನಸ್ಸಲ್ಲಿ ಬರಬೇಕು. ಆಗ ಒಂದು ಸರ್ಪ್ರೈಸ್ ಕೊಡಬೇಕು. ಚಂದನ್ ಶೆಟ್ಟಿ ಸಿನಿಮಾ ಮೂಲಕ ಬರ್ತಿದ್ದಾನೆ ಎನ್ನುವ ಥರ ಅಗಬೇಕು ಅನ್ನೋದು ಪ್ಲ್ಯಾನ್ ಆಗಿತ್ತು. ಅದಕ್ಕಾಗಿ ರ್‍ಯಾಪ್ ನಿಂದ ಗ್ಯಾಪ್ ತೆಗೆದುಕೊಂಡಿದ್ದೆ ಅಂದಿದ್ದ ಚಂದನ್ ಅವರು, ಈಗ ನಟನಾಗಿ ಮಿಂಚುತ್ತಿದ್ದಾರೆ.
ಚಂದನ್ ಶೆಟ್ಟಿ ವಿರುದ್ಧ ಅಂದು ಹಾಗೆ ಮಾತಾಡಿದ್ದೇ ನನಗೆ ದೊಡ್ಡ ಬ್ರೇಕ್ ಕೊಟ್ಟಿತು! Rapper ರಾಹುಲ್ ಓಪನ್ ಮಾತು