ಬಿಗ್ ಬಾಸ್ ತೆಲುಗು 8ನೇ ಆವೃತ್ತಿ 14 ಸ್ಪರ್ಧಿಗಳೊಂದಿಗೆ ಆರಂಭವಾಗಿದ್ದು, ಈ ಬಾರಿ ಹಲವು ಟ್ವಿಸ್ಟ್‌ಗಳನ್ನು ಇಡಲಾಗಿದೆ. ಮನೆಯಲ್ಲಿ ನಾಯಕ ಇರುವುದಿಲ್ಲ, ಬದಲಾಗಿ ಮೂರು ಮುಖ್ಯಸ್ಥರಿರುತ್ತಾರೆ. ವಿಜೇತರಿಗೆ ಬಹುಮಾನ ಮೊತ್ತ ಶೂನ್ಯ ಎನ್ನಲಾಗಿದೆ.
ಬಿಗ್ ಬಾಸ್ ತೆಲುಗು 8ನೇ ಆವೃತ್ತಿ ಸೆ.1ರಂದು ಆರಂಭವಾಗಿದ್ದು, 14 ಸ್ಪರ್ಧಿಗಳೊಂದಿಗೆ ಈ ಸೀಸನ್ ಗ್ರ್ಯಾಂಡ್ ಆಗಿ ಪ್ರಾರಂಭವಾಗಿದೆ. ನಿರೂಪಕ ನಾಗಾರ್ಜುನ್ ಮೊದಲಿನಿಂದಲೂ ಹೇಳುತ್ತಿರುವಂತೆ ಈ ಬಾರಿ ಟ್ವಿಸ್ಟ್‌ಗಳು, ಟರ್ನ್‌ಗಳು ಹೆಚ್ಚಿದೆ. ಇದನ್ನು ಕಾರ್ಯಕ್ರಮದ ಪ್ರಾರಂಭದಿಂದಲೂ ತೋರಿಸಲಾಗಿದೆ. ಈ ಬಾರಿ ಮನೆಯನ್ನು ಪ್ರಕೃತಿಯನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮನೆಯಲ್ಲಿ ಪ್ರತಿ ದಿನವೂ ಒಂದು ಕಾನ್ಸೆಪ್ಟ್ ಪ್ರಕಾರ ವಿನ್ಯಾಸಗೊಳಿಸಲಾಗಿದೆ.
ಅಷ್ಟೇ ಅಲ್ಲದೆ ಹಲವು ಟ್ವಿಸ್ಟ್‌ಗಳನ್ನು ಸಹ ಇಡಲಾಗಿದೆ. ಅದೇ ಸಂದರ್ಭದಲ್ಲಿ ಮೂರು ಕೆಟ್ಟ ಸುದ್ದಿಗಳನ್ನು ಸಹ ಹೇಳಲಾಗಿದೆ. ಈ ಬಾರಿ ಮನೆಯಲ್ಲಿ ನಾಯಕ ಇರುವುದಿಲ್ಲ ಎಂದು ನಾಗ್ ಹೇಳಿದ್ದಾರೆ. ಅದಕ್ಕೆ ಬದಲಾಗಿ ಮುಖ್ಯಸ್ಥರನ್ನು ಕರೆತರಲಾಗಿದೆ. ಮೂರು ಮುಖ್ಯಸ್ಥರನ್ನು ಮಾಡಲಾಗಿದೆ. ಎರಡು ರೇಷನ್ ಇರುವುದಿಲ್ಲ. ಅಂದರೆ ಅದನ್ನು ಗೆದ್ದು ಪಡೆದುಕೊಳ್ಳಬೇಕು.
ಅನ್‌ಲಿಮಿಟೆಡ್ ಆಗಿ ಗೆಲ್ಲಬೇಕಾಗುತ್ತದೆ. ಮತ್ತೊಂದೆಡೆ ವಿಜೇತರಿಗೆ ಬಹುಮಾನ ಮೊತ್ತ ಶೂನ್ಯ ಎನ್ನಲಾಗಿದೆ. ಅಂದರೆ ಅದನ್ನು ಸಹ ಗೆಲ್ಲಬೇಕು. ಐವತ್ತು ಲಕ್ಷದವರೆಗೆ ಎಷ್ಟು ಬೇಕಾದರೂ ಗೆಲ್ಲಬಹುದು ಎಂಬುದು ಈ ಸೀಸನ್‌ನಲ್ಲಿ ಮಾಡಲಾದ ಬದಲಾವಣೆಗಳಾಗಿವೆ.
ಬಿಗ್ ಬಾಸ್ ತೆಲುಗು 8ರಲ್ಲಿ ಕನ್ನಡ ಕಿರುತೆರೆಯ ನಾಲ್ವರು, ಇವರೆಲ್ಲಾ ನೆನಪಿದ್ದಾರಾ?
ಇದರೊಂದಿಗೆ ಮತ್ತೊಂದು ಬದಲಾವಣೆ ಇದೆ. ಈ ಬಾರಿ ಸ್ಪರ್ಧಿಗಳನ್ನು ಜೋಡಿಯಾಗಿ ಮನೆಗೆ ಕಳಿಸಿಕೊಡಲಾಗಿದೆ. ಆಟ ಮಾತ್ರ ಒಟ್ಟಿಗೆ ಆಡುತ್ತಾರೆ. ನಾಮಿನೇಶನ್ ಮಾತ್ರ ರೆಗ್ಯುಲರ್ ಆಗಿ ನಡೆಯುತ್ತದೆ.
ಆದರೆ ನಾಮಿನೇಶನ್ ಮಾಡಿದವರಲ್ಲಿ ಯಾರನ್ನು ನಾಮಿನೇಶನ್ ಇಡಬೇಕು, ಯಾರನ್ನು ಇಡಬಾರದು ಎಂಬುದನ್ನು ಮೂವರು ಮುಖ್ಯಸ್ಥರು ನಿರ್ಧರಿಸುತ್ತಾರೆ. ಇಷ್ಟು ನಿನ್ನೆಯ ಸಂಚಿಕೆಯವರೆಗೆ ಆಗಿದೆ. ನಾಮಿನೆಶನ್ ಪ್ರಕ್ರಯೆಯ ಮುಂದಿನ ನಿರ್ಧಾರ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.
ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ 14 ಸ್ಪರ್ಧಿಗಳು ಮಾತ್ರ ಬಂದಿದ್ದಾರೆ. ಉಳಿದವರು ವೈಲ್ಡ್ ಕಾರ್ಡ್ ಮೂಲಕ ಮಧ್ಯದಲ್ಲಿ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಬಾರಿ ಏಳು ಜನರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆತರಲು ಸಿದ್ಧತೆ ನಡೆದಿದೆಯಂತೆ.
ಬಿಗ್‌ಬಾಸ್ ಕನ್ನಡ 11ನೇ ಸೀಸನ್ ಬೆಂಕಿ ಬಿರುಗಾಳಿ, ಮೊದಲ ಪ್ರೋಮೋ ರಿಲೀಸ್!
ಇದರಲ್ಲಿ ಮತ್ತೊಂದು ಟ್ವಿಸ್ಟ್ ಏನೆಂದರೆ ಅವರಲ್ಲಿ ಮಾಜಿ ಸ್ಪರ್ಧಿಗಳು ಇರುತ್ತಾರೆ ಎಂದು ತಿಳಿದುಬಂದಿದೆ. ಇಲ್ಲಿವರೆಗೆ ನಡೆದ 7 ಸೀಸನ್‌ಗಳಿಂದ ಒಬ್ಬೊಬ್ಬರನ್ನು ಮತ್ತೆ ಈ ಸೀಸನ್‌ಗೆ ಕರೆತರಬೇಕೆಂಬುದು ಬಿಗ್ ಬಾಸ್ ಆಯೋಜಕರ ಯೋಜನೆ. ಅವರು ಯಾರು ಎಂಬುದು ಇದೀಗ ಸಸ್ಪೆನ್ಸ್ ಆಗಿದೆ.
ಈ ಪಟ್ಟಿಯಲ್ಲಿ ಎರಡು ಹೆಸರುಗಳು ಹೊರಬಿದ್ದಿವೆ. ಕಳೆದ ಸೀಸನ್‌ನಲ್ಲಿ ಬಾರೀ ಸುದ್ದಿ ಮಾಡಿದ್ದ ಕನ್ನಡತಿ ಶೋಭಾ ಶೆಟ್ಟಿಯವರನ್ನು ಮತ್ತೊಮ್ಮೆ ಮನೆಗೆ ಕರೆತರಲಿದ್ದಾರಂತೆ. ಧಾರಾವಾಹಿಗಳ ಮೂಲಕ ಖ್ಯಾತಿಯಾದ ಶೋಭಾ ಶೆಟ್ಟಿ ಕಳೆದ ಸೀಸನ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. ಅವರು ಬಹುತೇಕ ಫೈನಲ್‌ವರೆಗೂ ಇದ್ದರು.
ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಂಡ ಅವರನ್ನು ಸಂಪರ್ಕಿಸಿದೆಯಂತೆ. ಬರುತ್ತಾರಾ ಇಲ್ಲವಾ ಕಾದು ನೋಡಬೇಕು. ಅವರೊಂದಿಗೆ ಆ್ಯಂಕರ್ ರವಿ ಹೆಸರು ಕೂಡ ಕೇಳಿಬರುತ್ತಿದೆ. ನಿರೂಪಕರಾಗಿ ಜನಪ್ರಿಯರಾಗಿರುವ ರವಿ.. ಬಿಗ್ ಬಾಸ್ ತೆಲುಗು 6ರಲ್ಲಿ ಸ್ಪರ್ಧಿಯಾಗಿ ಬಂದು ಗಮನ ಸೆಳೆದಿದ್ದರು. ಆದರೆ ಬಿಗ್ ಬಾಸ್‌ಗೆ ಬಂದ ನಂತರ ರವಿ ಅವರ ವೃತ್ತಿಜೀವನ ಅಷ್ಟೊಂದು ಚೆನ್ನಾಗಿ ಸಾಗಲಿಲ್ಲ. ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಮಾಡಿಕೊಂಡು ಸಾಗಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಬಿ ತಂಡ ಅವರನ್ನು ಮತ್ತೊಮ್ಮೆ ಸಂಪರ್ಕಿಸಿದೆಯಂತೆ. ಆದರೆ ರವಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಸಖತ್ ಸದ್ದು ಮಾಡುತ್ತಿದೆ. ಇವರೊಂದಿಗೆ ವೈಲ್ಡ್ ಕಾರ್ಡ್ ಮೂಲಕ ಬರುವವರಲ್ಲಿ ರೀತು ಚೌಧರಿ ಕೂಡ ಇದ್ದಾರಂತೆ. ಧಾರಾವಾಹಿ ನಟ ಮುಖೇಶ್ (ಕನ್ನಡಿಗ) ಕೂಡ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ನೂ ಯಾರ್ಯಾರು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನಾಲ್ಕೈದು ವಾರಗಳ ನಂತರ ಈ ವೈಲ್ಡ್ ಕಾರ್ಡ್ ಎಂಟ್ರಿ ಇರುತ್ತದೆ., ಇದಕ್ಕಾಗಿ ಪ್ರತ್ಯೇಕವಾಗಿ ಒಂದು ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗುತ್ತದೆ ಎಂಬ ಮಾಹಿತಿ ಇದೆ. ಹಿಂದಿನ ಸೀಸನ್ ನವರು ಗೆಸ್ಟ್ ಆಗಿ ಬರುತ್ತಾರಾ ಅಥವಾ ಸ್ಪರ್ಧಿಗಳಾಗಿ ಬರುತ್ತಾರಾ ಕಾದು ನೋಡಬೇಕಿದೆ.
ಪ್ರಸ್ತುತ ಮನೆಯಲ್ಲಿ ನಾಲ್ವರು ಕನ್ನಡದ ತಾರೆಯರು ಯಶ್ಮಿ ಗೌಡ, ಪ್ರೇರಣಾ, ನಿಖಿಲ್ ಮಲಿಯಕ್ಕಲ್, ಪೃಥ್ವಿರಾಜ್ ಶೆಟ್ಟಿ ಇದ್ದಾರೆ. ಉಳಿದಂತೆ ನೈನಿಕಾ, ಕಿರ್ರಾಕ್ ಸೀತಾ, ಬೆಜವಾಡ ಬೇಬಕ್ಕ, ನಾಗ ಮಣಿಕಂಠ, ಅಭಯ್ ನವೀನ್, ಅಫ್ರಿದಿ, ಶೇಖರ್ ಬಾಷಾ, ಆದಿತ್ಯ ಓಂ ಸ್ಪರ್ಧಿಗಳಾಗಿದ್ದಾರೆ.