ಬಿಗ್‌ಬಾಸ್‌ ಮನೆ ಮೃಗಾಲಯವಾದ್ರೆ, ಯಾರು ಯಾವ ಪ್ರಾಣಿ, ಧನ್‌ರಾಜ್ ಉತ್ತರಕ್ಕೆ ಕಿಚ್ಚ ನಕ್ಕು ನಕ್ಕು ಸುಸ್ತು!

By Gowthami K  |  First Published Oct 7, 2024, 12:10 AM IST

ಬಿಗ್ ಬಾಸ್ ಕನ್ನಡ 11 ರಲ್ಲಿ ಈ ವಾರ ಅನಿರೀಕ್ಷಿತವಾಗಿ ಯಮುನಾ ಶ್ರೀನಿಧಿ ಹೊರ ಹೋಗಿದ್ದಾರೆ. ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಧನ್‌ರಾಜ್ ಅವರ ಜಿಂಕೆ ಹೇಳಿಕೆ ಕುರಿತು ಕಿಚ್ಚ ಸುದೀಪ್ ಪ್ರಸ್ತಾಪಿಸಿದರು. ಸ್ಪರ್ಧಿಗಳು ಒಬ್ಬರನ್ನೊಬ್ಬರು ವಿವಿಧ ಪ್ರಾಣಿಗಳಿಗೆ ಹೋಲಿಸಿ ನಗೆಗಡಲಲ್ಲಿ ತೇಲಿಸಿದರು.


ಬಿಗ್ ಬಾಸ್ ಕನ್ನಡ 11ರ ಮೊದಲನೇ ವಾರ ನಟಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ಈ ವಾರ ಜನರು ಊಹಿಸದೇ ಇರುವ ವ್ಯಕ್ತಿ ಮನೆಯಿಂದ ಹೊರ ಹೋಗಿದ್ದು ಸಪ್ರೈಸ್‌ ಆಗಿದೆ. ಬಹುತೇಕರು ಲಾಯರ್ ಜಗದೀಶ್ ಮನೆಯಿಂದ ಔಟ್‌ ಆಗುತ್ತಾರೆ ಎಂದು ಅಂದುಕೊಂಡಿದ್ದರು.  ಅದೆಲ್ಲ ಸುಳ್ಳಾಗಿದೆ.

ಇನ್ನು ಇಂದು ನಡೆದ ಸೂಪರ್‌ ಸಂಡೇ ವಿಥ್ ಕಾರ್ಯಕ್ರಮದಲ್ಲಿ ಧನ್‌ರಾಜ್ ಆಚಾರ್‌ ಅವರಲ್ಲಿ ಜಿಂಕೆ ವಿಚಾರವಾಗಿ ಮಾತನಾಡಿ ಕನ್ಫೆಷನ್ ರೂಂನಲ್ಲಿ ಬಿಗ್ಬಾಸ್‌ ಗೆ ಮೈಕ್ ಸರಿ ಮಾಡಿಕೊಳ್ಳಿ ಎಂದು ಹೇಳಿದ್ದನ್ನು ಪ್ರಸ್ತಾಪಿಸಿ ಕಿಚ್ಚ ಮಾತನಾಡಿದರು.  ಇದಕ್ಕೆ ಕೇಳಿದ್ರೂ ಕೇಳದಿದ್ದರೂ ಕೇಳೋ ತರ ಮ್ಯಾನೇಜ್ ಮಾಡ್ತೇನೆ ಎಂದು ಸುದೀಪ್ ಹೇಳಿದರು.

Tap to resize

Latest Videos

undefined

ಬಚ್ಚನ್ ಕುಟುಂಬಕ್ಕೆ ಐಶ್ವರ್ಯಾ ರೈ ದುರಾದೃಷ್ಟವಂತರೇ? ಸೊಸೆಯ ಜಾತಕದ ಬಗ್ಗೆ ಅಮಿತಾಬ್ ಪ್ರತಿಕ್ರಿಯೆ

ನೀವು ಒಂದು ಜಿಂಕೆ, ಕಾಡಿನಲ್ಲಿದ್ದೀರಿ ಅಂದುಕೊಂಡು ಯಾರಿಗೆ ಯಾವ ಪ್ರಾಣಿಯ ಹೆಸರು ಕೊಡುತ್ತೀರಿ ಎಂದು ಸುದೀಪ್ ಹೇಳಿದ್ದಕ್ಕೆ, ಧನ್‌ರಾಜ್‌ ಉತ್ತರ ನೋಡಿ ಕಿಚ್ಚ ಸುದೀಪ್ ಬಿದ್ದು ಬಿದ್ದು ನಕ್ಕರು.

ಮಂಜು: ಡೈನೋಸಾರ್ , ಯಾವಾಗ ಯಾರನ್ನು ತಿನ್ನುತ್ತೆ ಗೊತ್ತಾಗಲ್ಲ. 
ಗೌತಮಿ: ಕೃಷ್ಣಾ ಮೃಗ, ಅವರು ಯಾವಾಗಲೂ ಕ್ಯಾಮಾರಕ್ಕೆ ಫೇವರ್ ಆಗಿರ್ತಾರೆ.
ಐಶ್ವರ್ಯಾ: ಅವರು ಆನೆ, ದಪ್ಪ ಅಂತಲ್ಲ, ಆನೆಯ ಗತ್ತು, ಕ್ಯೂಟ್‌ ಇರ್ತಾರೆ.
ಅನುಷಾ: ನವಿಲು ಸರ್, ಅವರು ಹಾಕುವ ಬಟ್ಟೆ ಗರಿಬಿಚ್ಚಿದ ಹಾಗೆ, ಕಲರ್‌ಪುಲ್ ಆಗಿರುತ್ತಾರೆ
ರಂಜಿಂತ್: ಘೇಂಡಾಮೃಗ ಸರ್, ಅದು ಆಗಾಗ ಮಲಗುತ್ತೆ
ಸುರೇಶ್: ಕೋತಿ, ಅವರ ಟಾಸ್ಕ್‌ ನಲ್ಲಿ ಆಡುವ ರೀತಿ , ಪಾಸಿಟಿವ್ ರೀತಿಯಲ್ಲಿ ಕೋತಿ
ಮೋಕ್ಷಿತಾ ಪೈ: ಚಿಂಕೆ ಸರ್‌.
ಚೈತ್ರಾ: ಚೈತ್ರಾ ಅವರದ್ದು ಹೇಗೆ ಹೇಳುದು ಅಂತಾನೆ ಭಯ ಸರ್, ಅವರು  ಕಾಡಿನ ಟಗರು ಸರ್, ಒಂದು ಸರ ಗುಮ್ಮಿದ್ರೆ ಎಗರಿ ಹೋಗುವ ಹಾಗೆ.
ಮಾನಸ:  ಗಿಳಿ ಸರ್, ಕೊಂಬೆ ಮೇಲೆ ಕೂತ್ರೆ ಕೊಂಬೆ ಮುರಿಯುತ್ತೆ ಸರ್‌.
ಭವ್ಯ: ಅವರು ಜಿಂಕೆ , ನಾನು ಜಿಂಕೆ ಅಣ್ಣ-ತಂಗಿ ಜಿಂಕೆ ಸರ್‌. ಮೀಟಿಂಗ್ 
ತ್ರಿವಿಕ್ರಮ್: ವಯಸ್ಸಾದ ಹುಲಿ ಸರ್‌ , ಅವರು ವಯಸ್ಸಿಗೆ ಮೀರಿ ಮಾತಾಡ್ತಾರೆ.
ಯಮುನಾ: ಹಾವು, ಬೆಳಗ್ಗೆ ಎದ್ದ ಕೂಡಲೇ ಬುಸ್‌ ಅನ್ನುತ್ತಾರೆ. ಅದರ ಪಾಡಿಗೆ ಬುಸುಗುಟ್ಟುತ್ತಾ ಇರುತ್ತೆ. ಬೌಲ್‌ನಲ್ಲಿ ಹಾಲು ಕೊಟ್ರೆ ತಣ್ಣಗೆ ಕುಡಿತಾ ಇರ್ತದೆ
ಧರ್ಮಕೀರ್ತಿ: ಅವರು ಒಂಥರಾ ಕಾಡು ಪಾಪ ಸರ್‌, ಅದು ಮುದ್ದು ಪ್ರಾಣಿ ಸರ್, ಅವರು ಇನ್ನೋಸೆಂಟ್‌ ಸರ್. 
ಜಗದೀಶ್: ಊಸರವಳ್ಳಿ, ಯಾವುದೇ ಪಾಯಿಂಟ್‌ ಇದ್ರೂ ಅದು ಅವರಿಗೆ ಬೇಕಾದ ಹಾಗೆ ಮಾತಾಡ್ತಾರೆ. ಒಂದು ಸಲ  ಶೋ ಪರ್ಚೇಸ್ ಮಾಡ್ತೇನೆ ಅಂತಾರೆ. ಮತ್ತೊಮ್ಮೆ ಬಿಗ್‌ಬಾಸ್ ಗೆ ಅವಾಜ್ ಹಾಕ್ತಾರೆ. ಒಮ್ಮೆ ಪ್ರಪಂಚವನ್ನೇ ಖರೀದಿಸುತ್ತೇನೆ ಅಂತಾರೆ. ಅದೆಂತ ಶಾಪ್‌ ನಲ್ಲಿ ಸಿಗುವ ಕಾಚವಾ! ಊಸರವಳ್ಳಿಗೆ ಎರಡು ನಾಲಿಗೆ ಸರ್, ಸ್ವರ್ಗಕ್ಕೂ ಒಳ್ಳೆ ನಾಲಿಗೆ, ನರಕಕ್ಕೂ ಒಳ್ಳೆ ನಾಲಿಗೆ.

ಬಿಗ್ ಬಾಸ್ ಕನ್ನಡ ಸಪ್ರೈಸ್‌ ಎಲಿಮಿನೇಷನ್, ಮೊದಲನೇವಾರ ಯಮುನಾ ಶ್ರೀನಿಧಿ ಔಟ್!

ಇದನ್ನು ಕೇಳಿ ಇಡೀ ಮನೆ ನಕ್ಕು ನಕ್ಕು ಸುಸ್ತಾಯ್ತು. ಇನ್ನು ಬಿಗ್‌ಬಾಸ್‌ ಮನೆಯಲ್ಲಿ ಜಗದೀಶ್ ಅವರ ಸೈಡಿಗ್ ಹೋಗು, ಸೈಡಿಗ್ ಹೋಗು ಜಗ್ಗಾ ಬರ್ತಾವ್ನೆ ಮೂವಿಯನ್ನು ತೋರಿಸಲಾಯ್ತು. ಜಗದೀಶ್ ಒಂದು ವಾರ ಮನೆಯಲ್ಲಿ ಹೇಗೆ ಇದ್ದರು ಎಂಬುದನ್ನು ಇದು ಒಳಗೊಂಡಿತ್ತು. ಇದರಲ್ಲಿ ಜಗದೀಶ್ ಹೀರೋ ಆಗಿ, ಫೈಟರ್‌ ಆಗಿ, ಡಾನ್ಸರ್ ಆಗಿ, ಹಾಡುಗಾರನಾಗಿ, ರಾಬಿನ್‌ ಹುಡ್‌ ಆಗಿ,  ಫ್ರೆಂಡ್ ಆಗಿ, ಚಾಲೆಂಜರ್ ಆಗಿ, ರಕ್ಷಕನಾಗಿ ಅಂತ ವಿವಿಧ ಅವತಾರಗಳನ್ನು ತೋರಿಸಲಾಯ್ತು. ಈ ಸಿನೆಮಾ ನಡೆದರೆ ಹಂಸ ನಾಯಕಿ ಎಂದು ಜಗದೀಶ್ ಹೇಳಿದರು.
 

click me!