
ಕನ್ನಡ ಕಿರುತೆರೆ ಸೆಲೆಬ್ರಿಟಿ ಜೋಡಿ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಫೆವ್ರಬರಿ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಎರಡೇ ದಿನಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದಾರೆ.
'ಮದುವೆ ಮಾತಕತೆ ಬರುವ ತನಕ ನಾವು ಪ್ರೀತಿ ವಿಚಾರ ಮಾತನಾಡಿರಲಿಲ್ಲ. ಅಟ್ರ್ಯಾಕ್ಷನ್‌ಗೂ ಮೀರಿದ ಪ್ರೀತಿ ಇತ್ತು ಪದಗಳಲ್ಲಿ ಅದನ್ನು ವರ್ಣಿಸಲು ಆಗುತ್ತಿರಲಿಲ್ಲ. ಮನೆಯವರಿಗೆ ಗೊತ್ತಾಗಿ ಮುಂದುವರೆದಿದ್ದು ನನಗೆ ನಾಚಿಕೆ ಇತ್ತು ಹೇಳಿಕೊಳ್ಳಲು. ತಂದೆ ತಾಯಿ ಬಳಿ ನಮಗೆ ನಾಚಿಕೆ ಇರಲಿಲ್ಲ ನಮ್ಮಿಬ್ಬರ ನಡುವೆ ನಾಚಿಕೆ ಇತ್ತು. ಮೊದಲು ಸಿದ್ಧು ಮನೆಯಲ್ಲಿ ವಿಚಾರ ತಿಳಿಸಿದ್ದು ಆನಂತರ ನಾನು ಮನೆಯಲ್ಲಿ ಮಾತನಾಡಿದೆ ಆದರೆ ನಾವಿಬ್ಬರೂ ಮಾತನಾಡಿಕೊಂಡಿರಲಿಲ್ಲ' ಎಂದು ಹೇಳುವ ಮೂಲಕ ಪ್ರೀತಿ ವಿಚಾರವನ್ನು 'ಸುವರ್ಣ ಪ್ರೇಮೋತ್ಸವ'ದಲ್ಲಿ ಸಿದ್ಧು ಮತ್ತು ಪ್ರಿಯಾ ಹಂಚಿಕೊಂಡಿದ್ದಾರೆ.
ಮದುವೆ ಸಂಭ್ರಮ; ನಟಿ ಪ್ರಿಯಾ ಆಚಾರ್ ಡಿಸೈನರ್ ಮೆಹೇಂದಿ ಹೇಗಿದೆ ನೋಡಿ
'ನನಗೆ ಕವಿಗೆ ಬರೆಯುವ ಹುಚ್ಚು ಹೆಚ್ಚಿಗೆ ಪ್ರಿಯಾಗೋಸ್ಕರ ಬರೆದು ಕಳುಹಿಸುತ್ತಿದ್ದೆ. ಹೇಗ್ ಹೇಗೋ ಓದಬಾರದು ಎಂದು ನಾನೇ ರೆಕಾರ್ಡ್ ಮಾಡಿ ಮ್ಯೂಸಿಕ್ ಹಾಕಿ ಕಳುಹಿಸುತ್ತಿದ್ದೆ. ತಂದೆ ತಾಯಿ ಮತ್ತು ತಂಗಿ ಜೊತೆ ಪ್ರಿಯಾ ಪ್ರಯಾಣ ಮಾಡುವಾಗ ಹಾಡು ಕೇಳಿಸಿಕೊಳ್ಳಬೇಕು ಎಂದು ಮೊಬೈಲ್‌ನ ಕಾರಿನ ಕನೆಕ್ಟ್ ಮಾಡಿದ್ದರು. ಆಗ ನಾನು ಕಳುಹಿಸಿದ ಕವಿತೆ ಬಂದಿದೆ. ನನ್ನ ಭಾವನೆಗಳನ್ನು ಅ ಕವಿತೆಯಲ್ಲಿ ಹೇಳಿದೆ..ಇದನ್ನು ಅವರ ತಂದೆ ಕೇಳಿಸಿಕೊಂಡಿದ್ದಾರೆ. ಎರಡು ಗಂಟೆ ಪ್ರಯಾಣ ಮುಗಿದ ಮೇಲೆ ಈ ಘಟನೆ ಬಗ್ಗೆ ತಂದೆ ಚರ್ಚೆ ಮಾಡಿದ್ದು. ನಮ್ಮ ತಂದೆ ಅವರ ತಂದೆ ಭೇಟಿ ಮಾಡಿದ ಮೇಲೆ ಮದುವೆ ಚರ್ಚೆ ಶುರು ಮಾಡಿದ್ದು' ಎಂದು ಸಿದ್ದು ಹೇಳಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ನಡೆದ ಹೊಸ ವರ್ಷ ಸಂಭ್ರಮ ಕಾರ್ಯಕ್ರಮದಲ್ಲಿಯೂ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದರು. ಜೊತೆಗೆ ನೂರಾರು ಜನರ ಎದುರು ಪ್ರಪೋಸ್ ಕೂಡ ಮಾಡಿದ್ದಾರೆ. 'ಪ್ರೀತಿ ಮತ್ತು ಮದುವೆ ವಿಚಾರ ಮಾತನಾಡಿದರೆ ಮಾತ್ರ ನನಗೆ ತುಂಬಾ ಸಂಕೋಚ ನಾಚಿಕೆ ಆಗುತ್ತದೆ. ನನಗೆ ಸೇಜ್ ಭಯ ಇಲ್ವೇ ಇಲ್ಲ ಆದರೆ ಆ ವಿಷಯ ಯಾರಾದ್ದರೂ ಕೇಳಿದ್ದರೆ ನಾಚಿಕೆ ಆಗುತ್ತೆ. ನಾವು ಡಿಕೆಡಿ ರಿಯಾಲಿಟಿ ಶೋ ಮೂಲಕ ಸ್ನೇಹಿತರಾಗಿದ್ವೀ ಪ್ರೀತಿ ಶುರುವಾಗಿದ್ದು ನಮ್ಮ ಧಮಾಕ ಶೂಟ್‌ನಲ್ಲಿ' ಎಂದು ಪ್ರಿಯಾ ಮಾತನಾಡಿದ್ದಾರೆ.
'ನಮ್ಮ ಮನದ ಮೂರು ಮುಖ್ಯ ಪದಗಳನ್ನು ಹೇಳುವ ಸಮಯ ಅದನ್ನ ನಾನೇ ಹೇಳುವೆ. ಬಿಡು ನೀ ಭಯವ ನನಗೆ ಅರ್ಥ ಆಗುತ್ತೆ ಇದು ಹೃದಯ ವಿಷಯ ಪ್ರೀತಿ ಅಂತ ಹೆಸರಿಡಲು ನನ್ನ ಹುಡುಗಿ ಎಂದು ಕರೆಯಲು ಇಲ್ಲಸಲ್ಲದ ಮಾತಾಡಲು ನಾನಲ್ಲ ಮಾಮೂಲು ಪ್ರೇಮಿ. ಅಳುವಿಗೆ ನಗು ತರಿಸಿ ಮುಗುಳು ನಗೆಯ ಹೂ ಮುಗಿಸಿ ಚಂದನೇಯ ಅರಸಿ ನೀನು ನಾನು ನಿನ್ನ ಜನುಮ ಜನುಮದ ಸಾಮಿ. ಐ ಲವ್ ಯು. ನನ್ನನ್ನು ಮದುವೆ ಆಗುವೆಯಾ?' ಎಂದು ಸಿದ್ದು ಪ್ರಪೋಸ್ ಮಾಡುತ್ತಾರೆ.
ಗೋವಾದಲ್ಲಿ ರೊಮ್ಯಾಂಟಿಕ್ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ ಕಿರುತೆರೆ ಜೋಡಿ ಪ್ರಿಯಾ- ಸಿದ್ದು
'ಜೀ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದು ಯಾಕೆ ಪ್ರಿಯಾ ನಾಚಿಕೊಳ್ಳುತ್ತಿದ್ದಾಳೆ ಏನೂ ಹೇಳಲು ಆಗುತ್ತಿಲ್ಲ ಅಂದ್ರೆ ಈ ಸಂಬಂಧಕ್ಕೆ ನಾವು ಹೆಸರಿಟ್ಟಿಲ್ಲ. ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಲ್ಲ ಪ್ರೀತಿ ಅನ್ನೋ ವಿಚಾರ ಹೇಳಿಕೊಂಡಿಲ್ಲ ಮನಸ್ಸಿನಲ್ಲಿ ಮಾತ್ರ ಮದ್ವೆ ಅನ್ನೋ ವಿಚಾರವಿತ್ತು. ನಮ್ಮ ಭಾವನೆಗಳು ಮನೆಯಲ್ಲಿ ಸುಲಭವಾಗಿ ಗೊತ್ತಾಯಿತ್ತು ಆಗ ಮದುವೆ ಮಾತುಕತೆ ಶುರುವಾಗಿತ್ತಿ. ಆಗ ಬರೆದ ಕವಿತೆ ಕೊನೆ ಸಾಲುಗಳನ್ನು ಈಗ ಹೇಳುವೆ...ಚಂದನೆಯ ಅರಸಿ ನೀನು ನಾನು ನಿನ್ನ ಜನುಮ ಜನುಮದ ಸಾಮಿ ನಿನ್ನನ್ನು ಪ್ರೀತಿಸುವೆ..ಮದುವೆ ಆಗುವೆಯಾ?' ಎಂದು ಮಂಡಿಯೂರಿ ಸಿದ್ದು ಪ್ರಪೋಸ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.