ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಎದುರಾಗಿತ್ತು. ಇದೀಗ ಪ್ರಶಾಂತ್ ಸಂಬರಗಿ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಸೀಸನ್ 9 ಅನೇಕ ವಿಚಾರಗಳಿಗೆ ಗಮನ ಸೆಳೆಯುತ್ತಿದೆ. ಪ್ರಶಾಂತ್ ಸಂಬರಗಿ ಜಗಳ, ಕಿತ್ತಾಟಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕೆಲವೊಮ್ಮೆ ಪ್ರಶಾಂತ್ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುವುದಿಲ್ಲ. ಅಗ್ರೆಸಿವ್ ಆಗಿ ಮಾತನಾಡುವ ವೇಳೆ ಬಾಯಿಗೆ ಬಂದಂತೆ ಮಾತನಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಮತ್ತು ಸೂಪೇಶ್ ರಾಜಣ್ಣ ನಡುವೆ ಸದಾ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಈ ನಡುವೆ ಪ್ರಶಾಂತ್ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು ಕನ್ನಡ ಪರ ಹೋರಾಟಗಾರರನ್ನು ಕೆರಳಿಸಿದೆ. ಕನ್ನಡ ಹೋರಾಟಗಾರರನ್ನು ಕಂಡರೆ ಪ್ರಶಾಂತ್ಗೆ ಆಗಲ್ಲ ಎಂದು ರೂಪೇಶ್ ರಾಜಣ್ಣ ಆರೋಪ ಮಾಡಿದ್ದರು. ಪ್ರಶಾಂತ್ ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನೆಗಳು ಕೂಡ ನಡೆದಿದ್ದವು. ಈಗ ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿ ಅವರು ಕ್ಷಮೆ ಕೇಳಿದ್ದಾರೆ.
ಕನ್ನಡ ಪರ ಹೋರಾಟಗಾರರಾಗಿರುವ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ನಡುವೆ ಸದಾ ಜಗಳ ಆಗುತ್ತಲೇ ಇರುತ್ತದೆ. ಯಾವಾಗಲೂ ರೂಪೇಶ್ ರಾಜಣ್ಣ ವಿರುದ್ಧ ಕೂಗಾಡುವಾಗ ಅವರು ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಎದುರಾಗಿತ್ತು. ಅಲ್ಲದೆ ಪ್ರಶಾಂತ್ ಸಂಬರಗಿಯನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಕ್ಷಮೆ ಕೇಳಿಸಬೇಕು ಎಲ್ಲದಿದ್ದರೆ ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಬಿಗ್ ಬಾಸ್ ಸಿಬ್ಬಂದಿ ಜೊತೆಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ವಾದಕ್ಕೆ ಇಳಿದಿದ್ದರು. ಈಗ ಕನ್ನಡ ಹೋರಾಟಗಾರರ ಬಳಿ ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಕನ್ಫೆಷನ್ ರೂಂಗೆ ಪ್ರಶಾಂತ್ ಅವರನ್ನು ಕರೆಸಿ ತಪ್ಪಿನ ಬಗ್ಗೆ ವಿವರಿಸಿದರು. 'ರೂಪೇಶ್ ಮತ್ತು ನಿಮ್ಮ ನಡುವೆ ನಡೆದ ಮಾತುಕತೆಯಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ನೀವು ಆಡಿದ ಮಾತು ಭಾಷೆಯನ್ನು ಪ್ರೀತಿಸುವ ಅನೇಕರಿಗೆ ನೋವಾಗಿದೆ ಎಂದು ಬಿಗ್ ಬಾಸ್ ವಿವರಿಸಿದರು'. ಬಳಿಕ ಪ್ರಶಾಂತ್ ಸಂಬರಗಿ ತಕ್ಷಣ ಕ್ಷಮೆ ಕೇಳಿದರು. 'ನಾನು ಹಾಗಿ ಹೇಳಿಲ್ಲ. ಆದರೆ ತಪ್ಪಾಗಿದ್ದರೆ ನನ್ನ ಕ್ಷಮೆ. ಮಾತಿನ ರಭಸದಲ್ಲಿ ಹೇಳಿದ್ದೇನೆ. ಕನ್ನಡ ಪ್ರೀತಿ ಮಾಡುವವರು, ಕನ್ನಡ ಹೋರಾಟಗಾರರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಇದು ಒಬ್ಬರ ವಿರುದ್ಧ ಮಾಡಿದ ಆರೋಪ. ನನಗೆ ನೋಯಿಸುವ ಅಥವಾ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ನನ್ನ ಮಾತನ್ನು ಹಿಂಪಡೆಯುತ್ತೇನೆ' ಎಂದು ಹೇಳಿ ಕಣ್ಣೀರು ಹಾಕಿದರು.
BBK9; ಕ್ಯಾಪ್ಟನ್‍ಗೆ ಕಳಪೆ ಪಟ್ಟ, ಅನುಪಮಾ ವಿರುದ್ಧ ಮುಗಿಬಿದ್ದ ಉಳಿದ ಸ್ಪರ್ಧಿಗಳು
ಸಂಬರಗಿ ಕ್ಷಮೆ ಕೇಳಿದ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದೆ. ಈ ವಿಯೋಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ಕೆಲವರು ರೂಪೇಶ್ ಪರ ಮಾತನಾಡಿದ್ರೆ ಇನ್ನು ಕೆಲವರು ಸಂಬರಗಿ ಪರ ಬ್ಯಾಟ್ ಬೀಸಿದ್ದಾರೆ.
ಕನ್ನಡ ಹೋರಾಟಗಾರರನ್ನು ಕ್ಷಮೆ ಕೇಳಿದ ಪ್ರಶಾಂತ್, ದ ಬಿಗ್ಗೆಸ್ಟ್ ಸೀಸನ್ | ಇಂದು ರಾತ್ರಿ 9.30 pic.twitter.com/hKXxhkpKgt
— Colors Kannada (@ColorsKannada)ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು
ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 13 ಮಂದಿ ಇದ್ದಾರೆ. 6ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.