
'ಬಿಗ್ ಬಾಸ್ ಕನ್ನಡ 12' ಶೋ ಜಾಲಿವುಡ್ ಶೋ ಮೇಲೆ ಇದೀಗ ದೂರು ದಾಖಲಾಗಿದೆ. ಹೈಕೋರ್ಟ್ ವಕೀಲರಾದ ಪ್ರಶಾಂತ್ ಮೆಥಲ್ ಅವರು ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ದ ದೂರು ನೀಡಿದ್ದಾರೆ. 'ಅಶ್ವಿನಿ ಗೌಡ ಅವರು ಮತ್ತೊಬ್ಬರು ಸ್ಪರ್ಧಿ ರಕ್ಷಿತಾ ಅವರು 'ಎಸ್' ಕೆಟಗರಿ ಎಂದಿದ್ದಾರೆ. ಎಸ್ ಎಂದರೆ ಏನು? ಅದು ಸ್ಲಂ ಅಂತಾನಾ ಅಥವಾ ಎಸ್‌ಎಎಸ್‌ಟಿ ಅಂತಾನಾ? ಆ ಬಗ್ಗೆ ಕಂಟೆಸ್ಟಂಟ್ ಅಶ್ವಿನಿ ಗೌಡ ಅವರು ಕ್ಲಾರಿಫಿಕೇಶನ್ ಕೊಡಬೇಕು.
ಅಷ್ಟೇ ಅಲ್ಲ, ಕಲರ್ಸ್ ಚಾನೆಲ್‌ನ ಬಿಗ್ ಬಾಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಅಥವಾ ಶೋ ಡೈರೆಕ್ಟರ್ ಪ್ರಕಾಶ್ ಅವರಾಗಲೀ ಅವರು ಅದನ್ನ ಡಿಲೀಟ್ ಮಾಡಬೇಕಿತ್ತು ಎಂದಿದ್ದಾರೆ. ಅಥವಾ ಅದನ್ನು ಮ್ಯೂಟ್ ಮಾಡಬೇಕಿತ್ತು. ಅದರೆ, ಅವರು ಯಾರೂ ಕೂಡ ಈ ಕೆಲಸ ಮಾಡಿಲ್ಲ. ಹೀಗಾಗಿ ನಾನು ಬಿಡದಿ ಪೊಲೀಸ್ ಸ್ಟೇಷನ್‌ನಲ್ಲಿ ಈ ನಾಲ್ಕು ಜನರ ಮೇಲೆ ಕಂಪ್ಲೇಂಟ್ ಲಾಡ್ಜ್ ಮಾಡದೀನಿ. ಈ ಮೂಲಕ ನಾನು ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ, ಹಾಗೂ ಈ ಶೋ ಆಡಳಿತ ವರ್ಗ ಸೇರಿ ಈ ನಾಲ್ಕು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದೇನೆ' ಎಂದಿದ್ದಾರೆ.
ದೂರುದಾರ ವಕೀಲ ಪ್ರಶಾಂತ್ ಮಿತ್ತಲ್ ಅವರ ಪ್ರಕಾರ, ಅಶ್ವಿನಿ ಗೌಡ ಅವರು ರಕ್ಷಿತಾ ಅವರಿಗೆ ಬಳಸಿದ 'She is S' ಎಂಬ ಪದವು ವೈಯಕ್ತಿಕ ನಿಂದನೆಯಾಗಿದ್ದು, ಜೊತೆಗೆ ಜಾತಿ ನಿಂದನೆಯ ಉದ್ದೇಶವನ್ನೂ ಹೊಂದಿದೆ ಎಂದು ಆರೋಪಿಸಲಾಗಿದೆ. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಪದಗಳನ್ನು ಬಳಸುವುದು ಕಾನೂನು ಅಪರಾಧ ಮತ್ತು ಸಾಮಾಜಿಕವಾಗಿ ಆಕ್ಷೇಪಾರ್ಹ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ವಕೀಲರು, ಕಾರ್ಯಕ್ರಮದ ಸಂಚಾಲಕರು ಮತ್ತು ಮುಖ್ಯಸ್ಥರ ಮೇಲೆಯೂ ಕಾನೂನು ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ. ವಕೀಲ ಪ್ರಶಾಂತ್ ಮಿತ್ತಲ್ ಅವರ ದೂರಿನ ಅನ್ವಯ ಬಿಡದಿ ಪೊಲೀಸರು ಸದ್ಯಕ್ಕೆ ಎನ್.ಸಿ.ಆರ್ (Non-Cognizable Report) ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಹಿಂದೆಯೂ ಬಿಗ್ ಬಾಸ್ ಕನ್ನಡ ಸೀಸನ್ 12, ಅದರ ಸ್ಟುಡಿಯೋ ಸ್ಥಳವಾದ ಜಾಲಿವುಡ್ ಸ್ಟುಡಿಯೋ ಸೀಲ್ ಡೌನ್ ಆಗಿ ಸುದ್ದಿಯಾಗಿತ್ತು. ಈ ಕಾನೂನು ತೊಡಕು ನಿವಾರಣೆಯಾದ ಬೆನ್ನಲ್ಲೇ, ಇದೀಗ ಕಾರ್ಯಕ್ರಮದೊಳಗಿನ ಸ್ಪರ್ಧಿಯೊಬ್ಬರ ಪದಬಳಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ರಿಯಾಲಿಟಿ ಶೋಗಳು ಜನರಿಗೆ ಮನರಂಜನೆ ನೀಡಬೇಕಾಗಿದ್ದರೂ, ಸ್ಪರ್ಧಿಗಳ ಇಂತಹ ವೈಯಕ್ತಿಕ ಘರ್ಷಣೆಗಳು, ನಿಂದನಾತ್ಮಕ ಪದಬಳಕೆಗಳು ಸಾಮಾಜಿಕ ಮತ್ತು ಕಾನೂನು ಸಂಘರ್ಷಗಳಿಗೆ ಕಾರಣವಾಗುತ್ತಿವೆ. 'She is S' ಪದದ ಬಳಕೆಯ ಹಿಂದೆ ಇರುವ ಉದ್ದೇಶ ಮತ್ತು ಹಿನ್ನೆಲೆ ಏನು ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ಸ್ಪಷ್ಟತೆ ದೊರೆಯಬೇಕಿದೆ. ಬಿಡದಿ ಪೊಲೀಸರು ಈ ವಿಚಾರವಾಗಿ ಕಾರ್ಯಕ್ರಮದ ಸಂಚಾಲಕರಿಂದ ವಿವರಣೆ ಕೇಳುವ ಸಾಧ್ಯತೆ ಇದೆ. ಸೀಸನ್ 12ಕ್ಕೆ ಈ ಘಟನೆ ಮತ್ತೊಮ್ಮೆ ವಿಘ್ನ ತಂದಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.