ಆ ಕೆಟ್ಟ ಮಹಿಳೆ ನಯನತಾರಾ ಕಂಡ್ರೆ ಪಕ್ಕಾ ಒದೆಯುತ್ತೇನೆ; ಕಿಡಿಕಾರಿದ್ದ ಪ್ರಭುದೇವ ಮಾಜಿ ಪತ್ನಿ ರಾಮಲತಾ

Published : Apr 29, 2025, 02:26 PM ISTUpdated : Apr 29, 2025, 02:44 PM IST
ಆ ಕೆಟ್ಟ ಮಹಿಳೆ ನಯನತಾರಾ ಕಂಡ್ರೆ ಪಕ್ಕಾ ಒದೆಯುತ್ತೇನೆ; ಕಿಡಿಕಾರಿದ್ದ ಪ್ರಭುದೇವ ಮಾಜಿ ಪತ್ನಿ ರಾಮಲತಾ

ಸಾರಾಂಶ

ನಯನತಾರಾ ಈಗಿನ ಸುಖಜೀವನಕ್ಕೆ ಮುನ್ನ ಪ್ರಭುದೇವ ಜೊತೆಗಿನ ಸಂಬಂಧ ವಿವಾದ ಸೃಷ್ಟಿಸಿತ್ತು. ಪ್ರಭುದೇವ ಪತ್ನಿ ಲತಾ, ನಯನತಾರಾ ವಿರುದ್ಧ ವಾಗ್ದಾಳಿ ನಡೆಸಿ, ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಹೇಳಿದ್ದರು. ನಂತರ ನಯನತಾರಾ, ಪ್ರಭುದೇವ ಬೇರ್ಪಟ್ಟರು. ಪ್ರಭುದೇವ ಮರುಮದುವೆಯಾಗಿ ಈಗ ಮಗುವಿನ ತಂದೆಯಾಗಿದ್ದಾರೆ.

‘ಲೇಡಿ ಸೂಪರ್‌ಸ್ಟಾರ್’ ನಯನತಾರಾ ಈಗ ಮದುವೆಯಾಗಿ, ಇಬ್ಬರು ಗಂಡು ಮಕ್ಕಳ ಜೊತೆ ಜೀವನ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಅವರು ಕಾಂಟ್ರವರ್ಸಿಯ ಕೇಂದ್ರಬಿಂದು ಆಗಿದ್ದರು. 

ಪಬ್ಲಿಕ್‌ನಲ್ಲಿ ಹೇಳಿದ್ರಾ ಪ್ರಭುದೇವ?
ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ, ನಯನತಾರಾ ರಿಲೇಶನ್‌ಶಿಪ್‌ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಿತ್ತು. ಈ ಸಂಬಂಧವು ಹಲವಾರು ವಿವಾದಗಳನ್ನು ಸೃಷ್ಟಿ ಮಾಡಿತ್ತು. ಲತಾ ಜೊತೆಗೆ ಸಂಸಾರ ಮಾಡುತ್ತಿದ್ದ ಪ್ರಭುದೇವ ಅವರು ನಯನತಾರಾ ಜೊತೆಗೆ ಇದ್ದಿದ್ದೇ ದೊಡ್ಡ ಸಮಸ್ಯೆ ಆಗಿತ್ತು. 2010 ರ ಸೆಪ್ಟೆಂಬರ್‌ನಲ್ಲಿ, ಪ್ರಭುದೇವ ಅವರು ಸಾರ್ವಜನಿಕವಾಗಿ ನಯನತಾರಾ ಅಂದ್ರೆ ಇಷ್ಟ, ಮದುವೆ ಆಗ್ತೀನಿ ಎಂದು ಘೋಷಿಸಿದಾಗ ಎಲ್ಲರಿಗೂ ಆಘಾತವಾಯಿತು. ಗಂಡ ನನಗೆ ಡಿವೋರ್ಸ್‌ ಕೊಡ್ತಾನೆ, ಇನ್ನೊಂದು ಮದುವೆ ಆಗ್ತಾನೆ ಅಂತ ಗೊತ್ತಾದಾಗ ಲತಾಗೆ ನಿಜಕ್ಕೂ ಜಗತ್ತೇ ತಲೆಕೆಳಗಡೆ ಆದ ಹಾಗೆ ಆಗಿತ್ತು.

1000 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ಯಾಕೆ ಸಮಂತಾ?

ಪ್ರಭುದೇವ ಒಳ್ಳೆಯ ಗಂಡ! 
ಇಂಟರ್‌ನ್ಯಾಷನಲ್ ಬಿಜಿನೆಸ್ ಟೈಮ್ಸ್ ಪ್ರಕಾರ, ಲತಾ ಅವರು ಫಿಲ್ಮಿಬೀಟ್‌ಗೆ ನೀಡಿದ ಸ್ಫೋಟಕ ಸಂದರ್ಶನದಲ್ಲಿ ನಯನತಾರಾ ವಿರುದ್ಧ ತೀವ್ರವಾಗಿ ವಾಗ್ದಾಳಿ ಮಾಡಿದ್ದರು. ಆಗ ಅವರು ತಮ್ಮ ಮಾಜಿ ಪತಿಯ ಬಗ್ಗೆ ಯಾವುದೇ ದೂರು ಹೇಳಿರಲಿಲ್ಲ. ನನ್ನ ಮದುವೆ ಜೀವನ ಹಾಳಾಯ್ತು ಎಂದು ನಯನತಾರಾ ಮೇಲೆ ದೂಷಿಸಿದ್ದರು. “ಪ್ರಭುದೇವ ಒಬ್ಬ ಪ್ರಾಮಾಣಿಕ, ದಯಾಳು ಗಂಡ, ಕಳೆದ 15 ವರ್ಷಗಳಿಂದ ನಮ್ಮನ್ನು ತುಂಬ ಪ್ರೀತಿ, ಕಾಳಜಿಯಿಂದ ನೋಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ನಮಗಾಗಿ ಮನೆಯೊಂದನ್ನು ಖರೀದಿಸಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಅವರ ಈಗಿನ ವರ್ತನೆ ನನಗೆ, ದೇವ ಅವರ ಕುಟುಂಬಕ್ಕೂ ದೊಡ್ಡ ಆಘಾತ ತಂದಿದೆ. ಮದುವೆ ಆಗಿರೋ ಪುರುಷನು ಇನ್ನೊಂದು ಮಹಿಳೆಯನ್ನು ಮದುವೆಯಾಗಲು ಕೌಟುಂಬಿಕ ಕಾನೂನು ಅನುಮತಿ ನೀಡೋದಿಲ್ಲ” ಎಂದು ಲತಾ ಹೇಳಿದ್ದರು. 

ಒದೆಯುತ್ತೇನೆ! 
ಲತಾ ಅವರು ಮಾತನಾಡಿ, ನಯನತಾರಾ ಸಿಕ್ಕರೆ ಒದೆಯುತ್ತೇನೆ, ಅವಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬೇರೆಯವರ ಗಂಡನನ್ನು ಕಾನೂನುಬಾಹಿರವಾಗಿ ಕದಿಯುವ ಮಹಿಳೆಯನ್ನು ಶಿಕ್ಷಿಸಬೇಕು. ನನ್ನ ಗಂಡನನ್ನು ಕದಿಯಲು ಉದ್ದೇಶಿಸಿದ್ದಕ್ಕಾಗಿ ನಯನತಾರಾರನ್ನು ಪೊಲೀಸರು, ನ್ಯಾಯಾಲಯವು ಬಂಧಿಸಬೇಕು ಅಂತ ಮನವಿ ಮಾಡ್ತೀನಿ. ಆ ನಟಿಯನ್ನು ಎಲ್ಲಿಯಾದರೂ ಕಂಡರೆ, ನಾನು ಖಂಡಿತವಾಗಿಯೂ ಅವಳಿಗೆ ಒದೆಯುತ್ತೇನೆ. ಕೆಟ್ಟ ಮಹಿಳೆ ಯಾರು ಎನ್ನೋದಿಕ್ಕೆ ಅವಳು ಉತ್ತಮ ಉದಾಹರಣೆ” ಎಂದು ಹೇಳಿದ್ದರು. ಪ್ರಭುದೇವ, ಲತಾಗೆ ಮೂವರು ಮಕ್ಕಳಿದ್ದು, ಕ್ಯಾನ್ಸರ್‌ನಿಂದ ಅವರು ಓರ್ವ ಮಗನನ್ನು ಕಳೆದುಕೊಂಡಿದ್ದಾರೆ. ಇನ್ನೋರ್ವ ಮಗ ರಿಷಿ ರಾಘವೇಂದ್ರ ದೇವ ಅವರು ತಂದೆಯ ಜೊತೆಗೆ ಡ್ಯಾನ್ಸ್‌ ಮಾಡಿದ್ದರು. ಈ ವಿಡಿಯೋವನ್ನು ಪ್ರಭುದೇವ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, “ನನ್ನ ಮಗನನ್ನು ಪರಿಚಯ ಮಾಡಿಕೊಡ್ತಿದ್ದೀನಿ” ಎಂದು ಹೇಳಿದ್ದರು. 

69 ವರ್ಷದ ನಟನೊಂದಿಗೆ ನಟಿಸಲು ನಯನತಾರಾ ಕೇಳಿದ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್

ಎರಡನೇ ಮದುವೆ ಆಗಿರೋ ಪ್ರಭುದೇವ! 
ಲತಾ, ಪ್ರಭುದೇವಗೆ 2010 ರ ಜುಲೈನಲ್ಲಿ ವಿಚ್ಛೇದನ ಸಿಕ್ಕಿತ್ತು. ಆದರೆ ನಯನತಾರಾ, ಪ್ರಭದೇವ ಮದುವೆಗೆ ಸಾಕಷ್ಟು ಅಡೆ ಇದ್ದು, ಇವರಿಬ್ಬರು ದೂರ ಆದರು. ಅನೇಕ ಮಹಿಳಾ ಸಂಘಟನೆಗಳು ನಯನತಾರಾ ವಿರುದ್ಧ ತಿರುಗಿ ಬಿದ್ದಿದ್ದವು. ಇನ್ನು ಪ್ರಭುದೇವ ಅವರು ನಯನತಾರಾ ಜೊತೆ ಮದುವೆ ಆದರೆ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಲತಾ ಬೆದರಿಕೆ ಹಾಕಿದ್ದರು. 2012ರಲ್ಲಿ ನಯನತಾರಾ ಅವರು ಪ್ರಭುದೇವ ಜೊತೆಗೆ ಇದ್ದ ಸಂಬಂಧ ಅಂತ್ಯ ಆಗಿದೆ ಎಂದು ಅಧಿಕೃತವಾಗಿ ಹೇಳಿದ್ದರು. 2020ರಲ್ಲಿ ಪ್ರಭುದೇವ ಅವರು ಮುಂಬೈ ಮೂಲದ ಫಿಸಿಯೋಥೆರಪಿಸ್ಟ್‌ ಹಿಮಾನಿ ಎನ್ನುವವರನ್ನು ಮದುವೆಯಾಗಿದ್ದಾರೆ. ಆಗ ಅವರಿಗೆ 47 ವರ್ಷ ವಯಸ್ಸಾಗಿತ್ತು. ಅಂದಹಾಗೆ 2023ರಲ್ಲಿ ಈ ಜೋಡಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!