ಗಿಡ ನೆಟ್ಟು ಫೋಟೋ ಟ್ಯಾಗ್​ ಮಾಡಿ: ಜೀ ಕನ್ನಡದಿಂದ ಪರಿಸರ ಪ್ರೇಮಿಗಳಿಗೆ ಬಿಗ್​ ಆಫರ್​!

By Suchethana D  |  First Published Jun 5, 2024, 4:55 PM IST

ಪರಿಸರ ದಿನದ ಅಂಗವಾಗಿ ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಬಿಗ್​ ಆಫರ್​ ನೀಡಿದೆ. ಗಿಡ ನೆಟ್ಟು ಅದರ ಫೋಟೋ ತೆಗೆದು ಟ್ಯಾಗ್​ ಮಾಡಬೇಕು.
 


ಇಂದು ಅಂದರೆ ಜೂನ್​ 5 ವಿಶ್ವ ಪರಿಸರ ದಿನ. ವಿಶ್ವಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಪರಿಸರ ಕಾರಣವಾಗಿದೆ. ಇದೇ ಕಾರಣಕ್ಕೆ ಪರಿಸರದ ಮೇಲೆ ಕಾಳಜಿ ತೋರುವುದು ಇಂದಿನ ಅಗತ್ಯವಾಗಿದೆ. ಆಧುನೀಕರಣದ ಭರಾಟೆಯಲ್ಲಿ ಇಂದು ಪರಿಸರ ನಾಶವಾಗುತ್ತಿರುವ ಕಾರಣ ಆಗುತ್ತಿರುವ ಅನಾಹುತಗಳು ನಮ್ಮ ಕಣ್ಣಮುಂದೆಯೇ ಇವೆ. ಕಾಲ ಕಾಲಕ್ಕೆ ಸರಿಯಾಗಿ ಮಳೆ-ಬೆಳೆಯಾಗುತ್ತಿಲ್ಲ. ಬೇಸಿಗೆಯಲ್ಲಿ ಪ್ರವಾಹ, ಮಳೆಗಾಲದಲ್ಲಿ ಬರಗಾಲ, ಚಳಿಗಾಲದಲ್ಲಿ ಬಿಸಿಲು.. ಹೀಗೆ ಏನೇನೋ ಹವಾಮಾನ ವೈಪರೀತ್ಯಗಳು ನಮ್ಮ ಕಣ್ಣಮುಂದೆಯೇ ಸಂಭವಿಸುತ್ತಿವೆ. ಇದನ್ನೇ ಉದ್ದೇಶವಾಗಿಟ್ಟುಕೊಂಡು ಜನರಲ್ಲಿ ಸ್ವಲ್ಪ ಮಟ್ಟಿಗಾದರೂ ಪರಿಸರದ ಅರಿವು ಮೂಡಲಿ ಎನ್ನುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತದೆ.
 
ಪ್ರತಿ ವರ್ಷ ಬೇರೆ ಬೇರೆ ಘೋಷ ವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ.  ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ. ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಈ ದಿನದಲ್ಲಿ ಭಾಗಿಯಾಗುತ್ತವೆ.  ಪ್ರಮುಖ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯಗಳು, ಸರ್ಕಾರಗಳು ವಿಶ್ವಾದ್ಯಂತ ಪರಿಸರ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ. ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ದಿನದ ಅಂಗವಾಗಿ ಗಿಡ ನೆಡುವಂತೆ ದೇಶದ ನಿವಾಸಿಗಳಿಗೆ ಕರೆ ಕೊಟ್ಟಿದ್ದಾರೆ. ಭವಿಷ್ಯದ ಪೀಳಿಗೆಗೆ ಇದರ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಗಿಡ ನೆಡುವಂತೆ ಅವರು ತಿಳಿಸಿದ್ದಾರೆ. ಅವರ ಕರೆಗೆ ಓಗೊಟ್ಟು ಇದಾಗಲೇ ಲಕ್ಷಾಂತರ ಮಂದಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿದ್ದಾರೆ. 

ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ನಟ ಅನುಪಮ್​ ಖೇರ್​ ನಿಗೂಢ ಪೋಸ್ಟ್​!

Tap to resize

Latest Videos

ಈ ಹಿನ್ನೆಲೆಯಲ್ಲಿ ಜೀ ಕನ್ನಡ ವಾಹಿನಿ ಪರಿಸರ ಪ್ರೇಮಿಗಳಿಗೆ ವಿಶೇಷ ಆಫರ್​ ನೀಡಿದೆ. ಗಿಡವನ್ನು ನೆಟ್ಟು ಅದನ್ನು ತಮ್ಮ ವಾಹನಿಯ ಸೋಷಿಯಲ್​ ಮೀಡಿಯಾಗೆ ಟ್ಯಾಗ್​ ಮಾಡುವಂತೆ ಆಫರ್​ ನೀಡಿದೆ. ಅಮೃತಧಾರೆ ಸೀರಿಯಲ್​ ಪಾತ್ರಧಾರಿಗಳಾಗಿರುವ ಅಪೇಕ್ಷಾ ಮತ್ತು ಪಾರ್ಥ ಅವರು ಗಿಡ ನೆಟ್ಟು ಅದಕ್ಕೆ ನೀರುಣಿಸುತ್ತಿದ್ದಾರೆ. ಅದರಂತೆಯೇ ನೀವೂ ಮಾಡಿ ಫೋಟೋ ತೆಗೆದು ಟ್ಯಾಗ್ ಮಾಡುವಂತೆ ವಾಹಿನಿ ಹೇಳಿದೆ. ನೀವು ಫೋಟೋ ಟ್ಯಾಗ್​ ಮಾಡಿದರೆ ಅದು ಸಾರ್ವಜನಿವಾಗಿ ಕಾಣಿಸುತ್ತದೆ. ಇನ್ನೇಕ ತಡ, ನಿಮ್ಮ ಪರಿಸರ ಪ್ರೀತಿಯನ್ನು ಹೀಗಾದರೂ ತೋರಿಸಿ. 

ಇನ್ನು ಪರಿಸರ ದಿನದ ಆರಂಭದ ಕುರಿತು ಹೇಳುವುದಾದರೆ, ವಿಶ್ವ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972 ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5 ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತದೆ.
 

ಭರ್ಜರಿ ಗೆಲುವಿನ ನಗೆ ಚೆಲ್ಲಿದ ತೇಜಸ್ವಿ ಸೂರ್ಯ ಮದ್ವೆಗೆ ಮುಹೂರ್ತ ಫಿಕ್ಸ್? ವಿಡಿಯೋ ವೈರಲ್

click me!