
ಬಿಗ್ ಬಾಸ್ ಸೀಸನ್ 10ರಲ್ಲಿ ಮಿಂಚಿದ ಬೆಂಕಿ ಉರ್ಫ್ ತನಿಷಾ ಕುಪ್ಪಂಡಾ ಮಾತಿನಲ್ಲಿ ಸೀದಾ ಸಾದಾ. ಯಾರಿಗೂ ತಲೆ ಕೆಡಿಸಿಕೊಳ್ಳದೆ ಪಟ ಪಟ ಮಾತನಾಡುವ ತನಿಷಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದರು. ಹೀಗಾಗೆ ಏನೇ ಪೋಸ್ಟ್ ಮಾಡಿದ್ದರೂ ಪಾಸಿಟಿವ್ ಕಾಮೆಂಟ್ ಜೊತೆ ನೆಗೆಟಿವ್ ಕಾಮೆಂಟ್ ಕೂಡ ಬರುತ್ತಿತ್ತು. ಅಯ್ಯೋ ನೆಗೆಟಿವ್ ಕಾಮೆಂಟ್ ಎಂದು ತನಿಷಾ ಭಯ ಪಟ್ಟು ತಲೆ ಕೆಡಿಸಿಕೊಂಡಿಲ್ಲ ಬದಲಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಆರ್‌ಜೆ ರಾಜೇಶ್ ನಡೆಸುವ ಯೂಟ್ಯೂಬ್ ಸಂದರ್ಶನದಲ್ಲಿ ತನಿಷಾ ಮೊದಲ ಸಲ ಟ್ರೋಲ್, ನೆಗೆಟಿವ್ ಕಾಮೆಂಟ್ ಮತ್ತು ಕಿಡಿಗೇಡಿಗಳಿಗೆ ಉತ್ತರ ಕೊಟ್ಟಿದ್ದಾರೆ.
ಹೊಟ್ಟೆ ಉರ್ಕೊಂಡು ಕಾಮೆಂಟ್ ಮಾಡ್ತಾರೆ, ನಾನು ಉತ್ತರ ಕೊಡೋ ಟೈಂ ಬಂದೇ ಬರುತ್ತೆ: ವರುಣ್ ಆರಾಧ್ಯ
'ನೀವು ನಮ್ಮನ್ನು ಸಾಕಿಲ್ಲ ಸಾಕೋದು ಇಲ್ಲ ಅಂದ್ಮೇಲೆ ಯಾಕೆ ಗುರು ಹೀಗೆಲ್ಲಾ ಮಾತನಾಡುತ್ತೀರಾ? ಏನ್ ಏನೋ ಕಾಮೆಂಟ್ ಮಾಡ್ಬೇಡಿ. ಏನು ಹೇಳಬೇಕು ಅದನ್ನು ಸರಿಯಾಗಿ ಹೇಳಿ. ಅದು ಬಿಟ್ಟು ಹೋಗೆ ಬಾರೆ ಅಂದ್ರೆ ನಿಮ್ಮ ಮೇಲಿನ ಮರ್ಯದೆ ಹೋಗುತ್ತೆ ನಿಮ್ಮ ಮನೆ ಮರ್ಯಾದೆ ಹೋಗುತ್ತೆ. ಎಷ್ಟೋ ಜನರಿಗೆ ನಾನು ರಿಪ್ಲೈ ಮಾಡ್ತೀನಿ. ಯಾಕಂದ್ರೆ ಕೆಲವರು ನಿಮ್ಮ ಹೊಕ್ಕಳು ಫೋಟೋ ಕಳುಹಿಸಿ ಅಂತ ಕೇಳ್ತಾರೆ. ನಿಮ್ಮ ಅಮ್ಮನನ್ನು ಹೋಗಿ ಕೇಳಿ ಅಂತ ಹೇಳ್ತೀನಿ ಅಲ್ವಾ? ಹೋಗು ಗುರು ನಿಮ್ಮ ಅಮ್ಮನನ್ನು ಕೇಳು ಅವರು ಮನೆಯಲ್ಲೇ ಇರ್ತಾರೆ. ನಿಮ್ಮ ಜೊತೆ ಇರ್ತಾರೆ ಕೇಳು ಫೋಟೋ ಕಳಿಸ್ತಾರೆ ಇಲ್ಲ ಅಂದ್ರೆ ನೇರವಾಗಿ ನೋಡು ಯಾಕೆ ಬೇರೆ ಹೆಣ್ಣು ಮಕ್ಕಳ ಮೇಲೆ ಕಣ್ಣ' ಎಂದು ತನಿಷಾ ಮಾತನಾಡಿದ್ದಾರೆ.
ಮಗಳು ಕಿರುಚಾಡಿದರೂ ನಾನು ಹೊಡೆಯಲ್ಲ, ಬೈಯಲ್ಲ; ಪೇರೆಂಟಿಂಗ್ ಪಾಠ ಮಾಡಿದ ಶ್ರುತಿ ಹರಿಹರನ್
'ನಾನು ಈ ರೀತಿ ಖಡಕ್ ಆಗಿಯೇ ರಿಪ್ಲೈ ಮಾಡುತ್ತೀನಿ ಏಕೆಂದರೆ ನೀವು ಮತ್ತೊಬ್ಬರ ಮಗಳನ್ನು ಈ ರೀತಿ ಕೇಳುತ್ತೀರಾ? ನಿಮ್ಮ ಮಗಳನ್ನು ನಾಳೆ ಇದೇ ರೀತಿ ಕೆಲವರು ಕೇಳ್ತಾರೆ ಆಗ? ಅಷ್ಟೆಲ್ಲಾ ಯಾಕೆ ಇವತ್ತು ನೀವು ನನ್ನನ್ನು ಕೇಳುತ್ತೀರಾ ಅಲ್ವಾ ನಾಳೆ ನನ್ನ ಮಗ ನಿಮ್ಮ ಮಗಳನ್ನು ಕೇಳಿದಾಗ ಏನು ಮಾಡುತ್ತೀರಾ? ಒಂದು ಕಾರು ತೆಗೆದುಕೊಳ್ಳಲು ಸುಮಾರು 11 ವರ್ಷ ಕಷ್ಟ ಪಟ್ಟು ಕೆಲಸ ಮಾಡಿದ್ದೀನಿ. ಆದರೆ ಜನರು ಏನ್ ಏನೋ ಮಾತನಾಡುತ್ತಾರೆ ಅವರಿಗೆ ಏನು ಉತ್ತರ ಕೊಡಬೇಕು ಹೇಳಿ?' ಎಂದು ತನಿಷಾ ಹೇಳಿದ್ದಾರೆ.
'ನಾನು ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ. ಯಾರಾದರೂ ಏನಾದರೂ ಕೇಳಿದರೆ ಟೀಕೆ ಮಾಡಿದರೆ ನನ್ನ ರೀತಿ ಬೋಲ್ಡ್ ಆಗಿ ರಿಪ್ಲೈ ಮಾಡಿ. ನೀವು ದುಡಿದಿರುವ ದುಡ್ಡು ಆಗಿದ್ದರೆ ಯಾವ ಅಪ್ಪನ ಮಗನಿಗೂ ಕೇರ್ ಮಾಡಬೇಕಾಗಿಲ್ಲ. ತುಂಬಾ ಇಷ್ಟ ಪಟ್ಟು ಮೊದಲ ಕಾರು ತೆಗೆದುಕೊಂಡಿರುವೆ ಆದರೆ ಸ್ನೇಹಿತರಿಂದಲೇ ಸಮಸ್ಯೆ ಆಯ್ತು. ಅದು ದೊಡ್ಡ ಕಥೆ ಹೇಳಲು ಕಷ್ಟ ಬಿಡಿ' ಎಂದಿದ್ದಾರೆ ತನಿಷಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.