
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ (Lakshmi Nivasa serial) ಜಯಂತ್ ಮತ್ತೆ ತನ್ನ ಸೈಕೋ ಬುದ್ಧಿಯನ್ನು ತೋರಿಸಿದ್ದಾನೆ. ಮನೆಯಲ್ಲಿ ಪೂರ್ತಿಯಾಗಿ ಸಿಸಿಟಿವಿ ಇಟ್ಟಿರೋದನ್ನು ನೋಡಿರುವ ಜಾಹ್ನವಿ, ಜಯಂತ್ ಮೊಬೈಲ್ ನಲ್ಲಿ ಇದರ ಗುಟ್ಟು ಇದೆ ಅನ್ನೋದನ್ನು ಅರಿತು, ಜಯಂತ್ ರಾತ್ರಿ ಮಲಗಿರಬೇಕಾದ್ರೆ ಅವನ ಮೊಬೈಲ್ ತೆಗೆದು ವಿಡಿಯೋಗಳನ್ನು ನೋಡಿ, ಜಯಂತ್ ನ ಕರಾಳ ಮುಖದ ಅನಾವರಣ ಅವಳ ಮುಂದಾಗುತ್ತದೆ. ಜಯಂತ್ ಗೆಳೆಯ ಮನೆ ಬಿಟ್ಟು ಹೋಗೋದಕ್ಕೂ ಆತನೇ ಕಾರಣ, ಅಜ್ಜಿ ಹುಷಾರಿಲ್ಲದೇ ಬಿದ್ದಿರೋದಕ್ಕೂ ಜಯಂತ್ ಕಾರಣ ಅನ್ನೋದನ್ನು ತಿಳಿದ ಜಾಹ್ನವಿ, ಭಯದಿಂದಾಗಿ ಬಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಹೊಟ್ಟೆಯಲ್ಲಿದ್ದ ಮಗು ಕೂಡ ಸಾವನ್ನಪ್ಪಿದೆ.
ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ಬಂದ ಖ್ಯಾತ ನಟ
ಇದೀಗ ಮನೆಗೆ ಬಂದು ತನ್ನ ಮೊಬೈಲ್ ಗಾಗಿ ಹುಡುಕಾಡಿದ ಜಯಂತ್ ಗೆ ತನ್ನ ಮೊಬೈಲ್ ಚಿನ್ನುಮರಿ ಬಿದ್ದಿರುವಲ್ಲಿಯೇ ಬಿದ್ದಿರೋದನ್ನು ನೋಡಿ ಶಾಕ್ ಆಗುತ್ತಾನೆ. ಸಿಸಿ ಟಿವಿ ಫೂಟೇಜ್ (CCTV footage) ನೋಡಿದಾಗ, ಜಾಹ್ನವಿಗೆ ತನ್ನ ಕರಾಳ ಮುಖ ಗೊತ್ತಾಗಿದೆ ಅನ್ನೋ ಸತ್ಯ ಜಯಂತ್‌ಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ! ಹಾಗಾಗಿ ಮತ್ತೆ ಸೈಕೋದಂತೆ ಆಡುತ್ತಿದ್ದಾನೆ ಜಯಂತ್. ನಾನು ಇಷ್ಟು ದಿನ ರಹಸ್ಯವಾಗಿ ಇಟ್ಟಿದ್ದ ವಿಷಯ ಬಯಲಾಗಿದೆ, ಅದು ಗೊತ್ತಾಗಿನೇ ಜಾಹ್ನವಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಎಂಥ ಕೆಲಸ ಮಾಡ್ಬಿಟ್ಟೆ ಜಯಂತ, ನಿನ್ನ ಕೈಯಾರೆ ಎಲ್ಲಾ ಹಾಳು ಮಾಡ್ಬಿಟ್ಟೆಯಲ್ವಾ ಎಂದು ತನಗೆ ತಾನೆ ತಲೆ ಚಚ್ಚಿಕೊಳ್ಳುತ್ತಿದ್ದಾನೆ. ಹೇಗೆ ಅವರನ್ನು ಫೇಸ್ ಮಾಡ್ತಿ, ಅವರ ಪ್ರಶ್ನೆಗಳಿಗೆ ಏನಂತಾ ಉತ್ತರ ಕೊಡುತ್ತೀ? ಅವರನ್ನು ಫೇಸ್ ಮಾಡೋಕೆ ನಿನಗೆ ಸಾಧ್ಯ ಇಲ್ಲ. ನೀನು ಇಷ್ಟೊಂದು ಪ್ರೀತಿಸೋ ಚಿನ್ನುಮರಿ ನಿನ್ನ ಜೊತೆ ಇರ್ತಾರ? ಇಲ್ಲ. ಈ ವಿಷ್ಯ ಗೊತ್ತಾದ ಮೇಲೆ ಅವರು ಖಂಡಿತಾ ನಿನ್ನ ಜೊತೆ ಇರೋದಿಲ್ಲ. ಅಂದ್ರೆ ಇಲ್ಲಿಗೆ ನನ್ನ ಅವರ ಸಂಬಂಧ ಮುಗಿಯಿತು. ಎಂದು ತನಗೆ ತಾನೇ ಹೇಳಿಕೊಂಡು ಅಳುತ್ತಿದ್ದಾನೆ.
ಸಿಸಿಟಿವಿ ವರ್ಕ್ ಆಗ್ತಿಲ್ಲ ಅಂತ ಗಾಬರಿ ಆಗಿದ್ದಾನೆ ಜಯಂತ್; ಜಾನು ಬುದ್ಧಿವಂತಿಕೆ ಸಹಾಯ ಮಾಡುತ್ತಾ?
ಜಯಂತ್ (Psycho Jayanth) ನಟನೆ ನೋಡಿ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸ್ವಾರ್ಥದ ಪ್ರೀತಿ ಜಾಸ್ತಿ ದಿನ ಉಳಿಯಲ್ಲ ಬಿಡು ಸೈಕೋ ಎಂದರೆ, ಇನ್ನೂ ಕೆಲವರು ಏನೂ ಮಾಡ್ಬೇಡ, ಸತ್ತು ಹೋಗಿ ಬೀಡು ಇಂತ ಕ್ಯಾರೆಕ್ಟ್ರ್ ಇರೋದು ನೋಡೋಕ್ ಆಗೋಲ್ಲ ಮಾರಾಯ ಅಂದಿದ್ದಾರೆ. ಇನ್ನೂ ಹೆಚ್ಚಿನ ಜನ ಜಯಂತ್ ಗೆ ಬೈದುಕೊಂಡೆ ಅವರ ಅಭಿನಯವನ್ನು ಹೊಗಳಿದ್ದಾರೆ. ನೀವು ಪರ್ಫೆಕ್ಟ್ ಸೈಕೋ ಥರಾನೆ ನಟಿಸುತ್ತಿದ್ದೀರಿ. ನೀವು ಅದ್ಭುತ ಪ್ರತಿಭೆ. ನಿಮ್ಮ ನಟನೆ ಎಕ್ಸಲೆಂಟ್ ಆಗಿದೆ. ನಿಜವಾಗ್ಲೂ ಜಯಂತ್ ನಟನೆ ಬೇರೆ ಲೆವೆಲ್ ಇದೆ ಸೂಪರ್. ನಿಮ್ಮ ನಟನೆ ನೋಡಿದ್ರೆ ನಮಗೆ ಭಯ ಆಗುತ್ತೆ, ಬೆಂಕಿ ನಟನೆ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.