ಬಿಗ್​ಬಾಸ್​ ಮನೆಯ ಕುತೂಹಲದ ವಿಷಯ ಬಿಚ್ಚಿಟ್ಟ ಸ್ಪರ್ಧಿಗಳಾದ ನೀತು, ಪವಿ ಪೂವಯ್ಯ, ಅವಿನಾಶ್​

By Suvarna News  |  First Published Feb 2, 2024, 5:32 PM IST

ಬಿಗ್​ಬಾಸ್​ ಮನೆಗೆ ಸ್ಪರ್ಧಿಗಳಾಗಿ ಹೋಗಿದ್ದ ಪವಿ ಪೂವಯ್ಯ, ಅಸ್ತಿಕ್​ ಅವಿನಾಶ್​ ಶೆಟ್ಟಿ ಮತ್ತು ನೀತು ವನಜಾಕ್ಷಿ ಹೇಳಿದ್ದೇನು?
 


ನೀತು ವನಜಾಕ್ಷಿ ಎಂದಾಕ್ಷಣ ಕಿರುತೆರೆ ಪ್ರಿಯರ ಕಣ್ಣ ಮುಂದೆ ಬರುವುದು ಬಿಗ್​ಬಾಸ್​ ಸ್ಪರ್ಧಿ. ಟ್ರ್ಯಾನ್ಸ್‌ಜೆಂಡರ್‌ ಆಗಿರುವ ನೀತು ಅವರು ಬಿಗ್​ಬಾಸ್​ ಮನೆಯಲ್ಲಿ ಕೆಲವೇ ವಾರಗಳಲ್ಲಿ ಇದ್ದು ಹೊರಕ್ಕೆ ಬಂದವರು. ಗದಗ ಮೂಲದ ಮಂಜುನಾಥ್ ಈಗ ನೀತು ವನಜಾಕ್ಷಿ ಆಗಿ ಬದಲಾಗಿದ್ದಾರೆ. ಪ್ರೌಢಾವಸ್ಥೆಯಲ್ಲಿ ಹುಡುಗರ ಟಾಕ್ಸ್ ನನಗೆ ಸೆಟ್ ಆಗುತ್ತಿರಲಿಲ್ಲ. ಹುಡುಗರೆಲ್ಲಾ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು. ನನಗೆ ಆ ಫೀಲ್ ಬರುತ್ತಿರಲಿಲ್ಲ. ನನಗೆ ಹುಡುಗರ ಕಂಡ್ರೆ ಅಟ್ರ್ಯಾಕ್ಷನ್ ಆಗುತ್ತಿತ್ತು. ನನಗೆ ಇದರಿಂದ ಕನ್​ಫ್ಯೂಷನ್​ ಆಗಿತ್ತು.  ಆಗ ನಾನು ಅಕ್ಕನ ಬಟ್ಟೆ ಹಾಕುತ್ತಿದ್ದೆ. ಕಾಜಲ್ ಹಚ್ಚಿಕೊಳ್ಳುತ್ತಿದ್ದೆ. ಆಗಲೇ ನನಗೆ ನನ್ನ ಬಗ್ಗೆ ಅರಿವಾಗಿ ಮಂಜುನಾಥ್​ನಿಂದ ವನಜಾಕ್ಷಿಯಾದೆ ಎಂದು ತಮ್ಮ ಹಿನ್ನೆಲೆಯಲ್ಲಿ ಹೇಳಿಕೊಂಡಿದ್ದರು ನೀತು. ಬಿಗ್​ಬಾಸ್​ ಮನೆಯಲ್ಲಿಯೂ ಚೆನ್ನಾಗಿ ಆಡಿದ್ದ ನೀತು ಅವರು, ಮನೆಯಿಂದ  7ನೇ ವಾರಕ್ಕೆ ಎಲಿಮಿನೇಟ್​ ಆಗಿ ಹೊರಕ್ಕೆ ಬಂದರು.

ಇದೀಗ ಆ ಕ್ಷಣಗಳನ್ನು ಅವರು ಕಲರ್ಸ್​ ಕನ್ನಡ ವಾಹಿನಿ ಜೊತೆ ಶೇರ್​ ಮಾಡಿಕೊಂಡಿದ್ದಾರೆ. ನನಗೆ ಜನರ ಪ್ರೀತಿ ಸಿಕ್ಕಿದೆ. ಟ್ರಾನ್ಸ್​ಜೆಂಡರ್​ ಎಂದರೆ ಸಮಾಜ ಒಂದು ರೀತಿಯಲ್ಲಿ ನೋಡುತ್ತದೆ. ಆದರೆ ನಾನು ಏನು ಎನ್ನುವುದನ್ನು ಬಿಗ್​ಬಾಸ್​ ತೋರಿಸಿಕೊಟ್ಟಿದೆ. ಇದೀಗ ಜನರು ನೋಡುವ ದೃಷ್ಟಿ ಬದಲಾಗಿದೆ. ಜನರ ಪ್ರೀತಿ ಸಿಕ್ಕಿದೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಪ್ರೀತಿಯಿಂದ ನೋಡುತ್ತಾರೆ ಎಂದಿದ್ದಾರೆ. ಇದೇ ವೇಳೆ, ಬಿಗ್​ಬಾಸ್​ ಮನೆಯಲ್ಲಿ ಅಪ್ಪ-ಅಮ್ಮನನ್ನು ಕರೆಸಿದ್ದ ಕ್ಷಣ ಅದಾಗಲೇ ಎಲಿಮಿನೇಟ್​ ಆಗಿದ್ದೆ ಎಂದು ಬೇಸರಿಸಿಕೊಂಡ ನೀತು ಅವರು, ಆ ಕ್ಷಣ ನಾನೂ ಅಲ್ಲಿಯೇ ಇರಬೇಕಿತ್ತು ಅನ್ನಿಸಿತು. ನಾನು ಇಷ್ಟು ಮುಂದೆ ಬರಲು ಕಾರಣ ನನ್ನ ಅಮ್ಮ. ಅವರನ್ನು ಎಲ್ಲರಿಗೂ ಪರಿಚಯ ಮಾಡಿಸುವ ಅವಕಾಶ ನನಗೆ ಸಿಗಲಿಲ್ಲ. ಆ ಒಂದು ನೋವು ಇದೆ ಎಂದಿದ್ದಾರೆ. 

Tap to resize

Latest Videos

ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ ಬಿಗ್​ಬಾಸ್​ ಸಂಗೀತಾ ಶೃಂಗೇರಿ
 
ಇನ್ನೋರ್ವ ಸ್ಪರ್ಧಿ ಪವಿ ಪೂವಪ್ಪ. ಮಾಡಲ್ ಹಾಗೂ ಫ್ಯಾಷನ್ ಇನ್‌ಫ್ಲೂಯನ್ಸರ್ ಆಗಿರುವ ಪವಿ ಪೂವಪ್ಪ ಸಖತ್ ಬೋಲ್ಡ್ ಆಗಿರುವ ಡ್ರೆಸ್​ ಹಾಕಿಕೊಳ್ಳುವಲ್ಲಿ ಫೇಮಸ್​ ಇವರು ವೈಲ್ಡ್​ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದರು.  ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​​ ಎಂಟ್ರಿಕೊಟ್ಟಾಗಿನಿಂದಲೂ ಮೊದಲ ವಾರ ಬಿಟ್ಟು, ಮತ್ತೆ ಉಳಿದ ವಾರವೆಲ್ಲಾ ನಾಮಿನೇಟ್​ ಆಗಿದ್ದರು ಪವಿ. ನಂತರ ಕೆಲವೇ ವಾರಗಳಲ್ಲಿ ಎಲಿಮಿನೇಟ್​ ಆದರು. ನಾನೀಗ ಸೆಲೆಬ್ರಿಟಿ ಆಗಿದ್ದೇನೆ. ನನ್ನನ್ನುಜನರು ಗುರುತಿಸುತ್ತಾರೆ. ಅವರ ಪ್ರೀತಿ ಸಿಕ್ಕಿದೆ. ಸೆಲೆಬ್ರಿಟಿಗಳನ್ನು ನೋಡಿ ಜನರು ಫಾಲೋ ಮಾಡುತ್ತಾರೆ. ಆದ್ದರಿಂದ ನನ್ನ ಡ್ರೆಸ್​ ಸೆನ್ಸ್​ ಹೇಗಿರಬೇಕು ಎಂಬ ಅರಿವಾಗಿದೆ. ಅದರಂತೆಯೇ ನಡೆದುಕೊಳ್ಳುವೆ ಎಂದಿದ್ದಾರೆ.  ಮೊದಲಿಗೆ ಮನೆಯಿಂದ ಆಚೆ ಕಾಲಿಡುತ್ತಿರಲಿಲ್ಲ. ಈಗ ನನಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಆಚೆಗೆ ಹೋದರೂ ಜನ ಗುರುತಿಸುತ್ತಾರೆ ಎಂದಿದ್ದಾರೆ.

ಇನ್ನೋರ್ವ ವೈಲ್ಡ್​ ಕಾರ್ಡ್​ ಎಂಟ್ರಿ ಆದವರು ಅಸ್ತಿಕ್​ ಅವಿನಾಶ್​ ಶೆಟ್ಟಿ. ಇವರು ಬಹುಬೇಗ ಬಿಗ್​ಬಾಸ್​ಮನೆಯಿಂದ ಹೊರಕ್ಕೆ ಬಂದರು. ಅದಕ್ಕೆ ಕಾರಣ ನೀಡಿದ ಅವರು ನಾವು ವೈಲ್ಡ್​ಕಾರ್ಡ್​ ಆಗಿ ಹೋಗುವಾಗಲೇ ಅರ್ಧ ಜರ್ನಿ ಮುಗಿದಿತ್ತು. ಅಲ್ಲಿ ಮೊದಲೇ ಇದ್ದವರು ಫಿನಾಲೆಯತ್ತ ಹೆಜ್ಜೆ ಹಾಕಿದ್ದರು. ವೈಲ್ಡ್​ಕಾರ್ಡ್​ ಆಗಿ ಹೋದವರಿಗೆ ಅದು ತುಂಬಾ ಕಷ್ಟ. ಆದರೂ ಒಂದಷ್ಟು ದಿನ ಇರೋಣ ಎಂದುಕೊಂಡಿದ್ದೆ. ಆದರೆ ಜನರ ಪ್ರೀತಿ ಸಿಕ್ಕಿದೆ, ಅದೇ ಖುಷಿ ಎಂದಿದ್ದಾರೆ.

ಬಿಗ್​ಬಾಸ್​ ಖ್ಯಾತಿ ಬೆನ್ನಲ್ಲೇ ಗಿಚ್ಚಿ-ಗಿಲಿಗಿಲಿಗೆ ಡ್ರೋನ್​ ಭರ್ಜರಿ ಎಂಟ್ರಿ: ಡ್ಯಾನ್ಸ್​ನಿಂದ ಮೋಡಿ ಮಾಡಿದ ಪ್ರತಾಪ್​
 

click me!