
ಮನಸ್ಸಿನಿಂದ ಏನನ್ನೂ ಯೋಚನೆ ಮಾಡಬೇಡಿ, ಹೃದಯದಿಂದ ಯೋಚಿಸಿ, ಇವರು ನಿಮ್ಮ ಬಾಸ್ ಎನ್ನೋದನ್ನು ಮನಸ್ಸಿನಿಂದ ತೆಗೆದುಹಾಕಿ ಎಂದು ಸೀತಾಳಿಗೆ ಟಿಪ್ಸ್ ಕೊಟ್ಟಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಹೃದಯದಲ್ಲಿ ಏನಿದೆ ಎಲ್ಲವನ್ನೂ ಹೇಳಿಬಿಡಿ, ಮನಸ್ಸಿಯಲ್ಲಿಯೇ ಇಟ್ಟುಕೊಳ್ಳಬೇಡಿ ಎಂದು ರಾಮ್‌ಗೂ ಕಿವಿಮಾತು ಹೇಳಿದದರು. ಇವರ ಟಿಪ್ಸ್ ಕೊನೆಗೂ ವರ್ಕ್ ಆಯ್ತು. ಸೀತಾಳನ್ನು ಸಿಕ್ಕಾಪಟ್ಟೆ ಲವ್ ಮಾಡುತ್ತಿರೋ ರಾಮ್, ಅದನ್ನು ಆಕೆಗೆ ಹೇಳಲೂ ಆಗದೇ, ಬಿಡಲೂ ಆಗದೇ ಒದ್ದಾಡುವುದರಿಂದ ಹೊರಕ್ಕೆ ಬಂದಿದ್ದಾನೆ. ತನ್ನ ಪ್ರೀತಿಯನ್ನು ಸೀತಾಳಿಗೆ ಹೇಳಿಕೊಂಡಿದ್ದಾನೆ. ರಾಮ್ ಈ ಪರಿ ತನ್ನನ್ನು ಪ್ರೀತಿಸುತ್ತಿರುವ ವಿಷಯ ಸೀತಾಳಿಗೂ ತಿಳಿಯತೊಡಗಿದೆ.
ಅಷ್ಟು ದೊಡ್ಡ ಕಂಪೆನಿಯ ಓನರ್ ಆಗಿದ್ದರೂ ಅದನ್ನು ಮುಚ್ಚಿಟ್ಟು ಮಾಮೂಲಿ ಕೆಲಸಗಾರನಂತೆ ನಡೆದುಕೊಂಡ ರಾಮ್ ಮೇಲೆ ಕೋಪ ಮಾಡಿಕೊಂಡಿದ್ದ ಸೀತಾಳ ಮನಸ್ಸು ಕರಗಿದೆ. ಮಾಲೀಕ ಮತ್ತು ಕೆಲಸಗಾರರು ಹೇಗೆ ಸ್ನೇಹಿತರಾಗಿ ಇರಲು ಸಾಧ್ಯ ಎನ್ನುವುದು ಈಕೆಯ ವಾದವಾಗಿತ್ತು. ಅದರಲ್ಲಿಯೂ ಸತ್ಯ ಮುಚ್ಚಿಟ್ಟ ರಾಮ್ ಮೇಲೆ ಆಕೆಗೆ ಇನ್ನಿಲ್ಲದ ಕೋಪ ಉಂಟಾಗಿತ್ತು. ಈ ಕೋಪವನ್ನು ತಣ್ಣಗೆ ಮಾಡಲು ರಾಮ್ ಪಟ್ಟ ಪ್ರಯತ್ನವೆಲ್ಲವೂ ಟುಸ್ ಆಗಿದ್ದವರು. ಅದೇ ಇನ್ನೊಂದೆಡೆ ಸೀತಾಳ ಮಗಳು ಪುಟಾಣಿ ಸಿಹಿಗೆ ರಾಮ್ ಎಂದರೆ ಪಂಚಪ್ರಾಣ. ಆತನನ್ನು ಬಿಟ್ಟಿರಲು ಆಗಲ್ಲ. ಆದರೆ ಅಮ್ಮನ ಕೋಪದ ಮುಂದೆ ಆಕೆಗೆ ಏನು ಮಾಡುವುದು ತಿಳಿಯುತ್ತಿರಲಿಲ್ಲ. ಈಗ ಸೀತಾ ಮತ್ತು ರಾಮ ಒಂದಾಗುವ ಕಾಲ ಕೂಡಿ ಬಂದಿದೆ. ಸೀತಾಳಿಗೆ ರಾಮನ ಮೇಲಿನ ಕೋಪ ಕರಗಿದೆ.
ಅದೇ ಇನ್ನೊಂದೆಡೆ, ಬ್ಯಾಂಕ್ ಸಾಲ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ, ಸೀತಾಳ ಮನೆ ಹರಾಜಾಗಿದೆ. ಆದರೆ ರಾಮನ ದಯೆಯಿಂದ ಅದೇ ಮನೆಯಲ್ಲಿ ಬಾಡಿಗೆಗೆ ಉಳಿದುಕೊಳ್ಳುವ ಅವಕಾಶ ಸೀತಾಳಿಗೆ ಸಿಕ್ಕಿದೆ. ಅದಕ್ಕಾಗಿ ಆಕೆ ಭಗವಂತ ಶ್ರೀರಾಮನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾಳೆ. ಅಸಲಿಗೆ ಇದಕ್ಕೂ ಕಾರಣ ಈ ರಾಮನೇ ಎನ್ನುವುದು ಆಕೆಗೆ ತಿಳಿದಿಲ್ಲ. ಆದರೂ ತನ್ನ ಮನೆಯಲ್ಲಿಯೇ ಉಳಿದುಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಎಲ್ಲರೂ ತುಂಬಾ ಖುಷಿಯಲ್ಲಿ ಇದ್ದಾರೆ. ಸೀತಾಳ ಬ್ಯಾಂಕ್ ಸಾಲವನ್ನು ತೀರಿಸುವುದು ರಾಮ್ಗೆ ಚಿಟಿಕೆ ಹೊಡೆಯುವಷ್ಟು ಸುಲಭ. ಆದರೆ ಸ್ವಾಭಿಮಾನಿ ಸೀತಾ ಇದನ್ನೆಲ್ಲಾ ಸಹಿಸುವವಳಲ್ಲ. ಅದಕ್ಕೆ ತನ್ನದೇ ಆದ ರೀತಿಯಲ್ಲಿ ನೆರವು ನೀಡಿದ್ದಾನೆ ರಾಮ್.
ಆದರೆ ಇದೀಗ ಸೀತಾರಾಮ ಸೀರಿಯಲ್ಗೆ ಮಹಾ ಟ್ವಿಸ್ಟ್ ಬಂದಿದೆ. ಸೀತೆ ಮತ್ತು ಸಿಹಿ ಹೋಗುತ್ತಿರುವ ಹೊತ್ತಿಗೆ ಓರ್ವ ಆಗಂತುಕ ಬೈಕ್ನಲ್ಲಿ ಬಂದು ಗಾಬರಿ ಹುಟ್ಟಿಸಿದ್ದಾನೆ. ಅಸಲಿಗೆ ಯಾರೀತ? ಸೀತಾಳಿಗೂ ಈತನಿಗೂ ಏನು ಸಂಬಂಧ? ಅಷ್ಟಕ್ಕೂ ಸೀತಾಳ ಹಿನ್ನೆಲೆ ಏನು ಎನ್ನುವುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆ ಇತಿಹಾಸಕ್ಕೂ ಈ ಆಗಂತುಕನಿಗೂ ಏನಾದರೂ ಸಂಬಂಧದ ಇದೆಯಾ? ಅಥ್ವಾ ರಾಮ್ ಚಿಕ್ಕಮ್ಮನ ಕುತಂತ್ರವೋ ಕಾದು ನೋಡಬೇಕಿದೆ.
ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ ಬಿಗ್ಬಾಸ್ ಸಂಗೀತಾ ಶೃಂಗೇರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.