ಬಿಗ್ಬಾಸ್ನಲ್ಲಿ ಟ್ರೋಫಿ ಗೆಲ್ಲದ ತುಕಾಲಿ ಸಂತೋಷ್ ಅವರಿಗೆ ವೇದಿಕೆಯ ಮೇಲೆಯೇ ಹೊಡೆದಿದ್ದಾರೆ ಮಾನಸ. ಇದರ ವಿಡಿಯೋ ನೋಡಿ ಫ್ಯಾನ್ಸ್ ಸುಸ್ತಾಗಿದ್ದಾರೆ.
ಬಿಗ್‌ಬಾಸ್ ಸೀಸನ್ 10 ಮುಗಿದ ಮೇಲೂ ಹಲವರು ಇನ್ನೂ ಅದರ ಗುಂಗಿನಿಂದ ಹೊರ ಬಂದಿಲ್ಲ. ಬಿಗ್‌ಬಾಸ್ ಮನೆಯಿಂದ ಮೊದಲಿನಿಂದಲೂ ಕೊನೆಯವರೆಗೆ ಎಲ್ಲರನ್ನೂ ನಕ್ಕು ನಗಿಸುತ್ತಿದ್ದವರು ತುಕಾಲಿ ಸಂತೋಷ್. ಅವರ ಪತ್ನಿ ಮಾನಸ ಕೂಡ ಕಾಮಿಡಿಯನ್ನೇ. ಇದೀಗ ಬಿಗ್ಬಾಸ್ನ ಕೆಲವು ಸ್ಪರ್ಧಿಗಳು ಕಲರ್ಸ್ ಕನ್ನಡ ವಾಹಿನಿಯಲ್ಲಿ ನಾಳೆ ಫೆಬ್ರುವರಿ 3ರಿಂದ ಪ್ರಸಾರ ಆಗ್ತಿರೋ ಗಿಚ್ಚಿ ಗಿಲಿಗಿಲಿಯ ಸೀಸನ್-3 ರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತುಕಾಲಿ ಸಂತೋಷ್ ಅವರು ಬಿಗ್‌ಬಾಸ್ ಟ್ರೋಫಿ ಗೆಲ್ಲಲಿಲ್ಲವೆಂದು ಅವರ ಪತ್ನಿ ಚಚ್ಚಿ ಚಚ್ಚಿ ಹಾಕಿರುವ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಅಷ್ಟಕ್ಕೂ ಮಾನಸ ಅವರು ಗಿಚ್ಚಿಗಿಲಿಗಿಲಿ ವೇದಿಕೆಯಲ್ಲಿ ತಮಾಷೆಗಾಗಿ ಪತಿಯನ್ನು ಚಚ್ಚಿ ಹಾಕಿದ್ದಾರೆ. ಮೊದಲೇ ಹೇಳದಂತೆ ಪತಿ-ಪತ್ನಿ ಇಬ್ಬರೂ ಕಾಮಿಡಿಯನ್. ಮಾನಸ ಅವರು ಕೂಡ ಎಲ್ಲರನ್ನೂ ನಗಿಸುವಲ್ಲಿ ನಿಸ್ಸೀಮರು. ಮುಂದಿನ ಬಿಗ್ಬಾಸ್ಗೆ ಇವರನ್ನೇ ಆಯ್ಕೆ ಮಾಡಬೇಕು ಎಂದೂಹಲವರು ಹೇಳುತ್ತಿದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ತಮ್ಮ ಪತಿ 6ನೇ ಸ್ಥಾನದಲ್ಲಿ ಇದ್ದುದಕ್ಕೆ ಮಾನಸಾ ತಮಾಷೆಯಾಗಿ ಬೇಸರಿಸಿದ್ದಾರೆ. ಎಲ್ಲರೂ ಓಡೋಡಿ ಬಂದರೆ ಇವ್ರು ಮಾತ್ರ ತೆವಳುತ್ತಾ ಬಂದರು ಎಂದು ವೇದಿಕೆಯ ಮೇಲೆ ಹೊಡೆದಿದ್ದಾರೆ!
undefined
A post shared by Colors Kannada Official (@colorskannadaofficial)
ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರೋ ಗಿಚ್ಚಿ ಗಿಲಿಗಿಲಿ ಕಾಮಿಡಿ ಷೋಕುರಿತು ಹೇಳುವುದಾದರೆ, ಈಗಾಗಲೇ ಎರಡು ಸೀಸನ್‌ಗಳನ್ನು ಮುಗಿಸಿದ್ದು ಮೂರನೆಯ ಸೀಸನ್ ಶುರುವಾಗುತ್ತಿದೆ. ಇದಾಗಲೇ ಹಲವಾರು ಕಾಮಿಡಿ ಸ್ಟಾರ್‌ಗಳನ್ನು ಚಲನಚಿತ್ರ ರಂಗಕ್ಕೆ ಈ ಷೋ ನೀಡಿದೆ. ಸಾಮಾನ್ಯವಾಗಿ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಒಳ್ಳೆಯ ಅವಕಾಶವೇ ಸಿಗುತ್ತದೆ. ಅದೇ ರೀತಿಯ ಕಾರ್ಯಕ್ರಮದಲ್ಲಿ ಒಂದು ಗಿಚ್ಚಿ ಗಿಲಿಗಿಲಿ. ಈ ರಿಯಾಲಿಟಿ ಷೋನ ಸೀಸನ್ ಒಂದರಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ವಿಜೇತರಾಗಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ರನ್ನರ್ ಆಪ್ ಆಗಿದ್ದರು. ಸೀಸನ್-2ರ ವಿಜೇತರಾಗಿ ಚಂದ್ರಪ್ರಭಾ ಗೆದ್ದಿದ್ದರು. ಇದೀಗ ಗಿಚ್ಚಿ ಗಿಲಿ ಗಿಲಿ ಸೀಸನ್-3 ಶುರುವಿಗೆ ಕ್ಷಣ ಗಣನೆ ಆರಂಭವಾಗಿದೆ. ನಾಳೆ ಅಂದರೆ ಫೆಬ್ರವರಿ 3 ರಂದು ಇದು ಪ್ರಸಾರವಾಗಲಿದೆ.
ಇನ್ನು ತುಕಾಲಿ ದಂಪತಿ ಕುರಿತು ಹೇಳುವುದಾದರೆ, ತುಕಾಲಿ ಹಾಗೂ ಮಾನಸ ದಂಪತಿ ಮನೆಯಲ್ಲಿ ತಮ್ಮ ಕಾಮಿಡಿ ಲೈಫ್ ಹಾಗೂ ಕಷ್ಟ ಪಟ್ಟು ಕಿರುತೆರೆ ವೇದಿಕೆಗೆ ಬಂದಿರುವ ಬಗ್ಗೆ ಹಂಚಿಕೊಂಡಿದ್ದರು. ಇವರ ದಾಂಪತ್ಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಇವರೀರ್ವರ ಅನ್ಯೂನ್ಯತೆ ಮನಗಂಡ ವೀಕ್ಷಕರು ಒಳಿತನ್ನು ಬಯಸಿದ್ದಾರೆ. ಜೊತೆಗೆ, ಮಾನಸ ಅವರ ಕಾಮಿಡಿ ಪಂಚ್ ಡೈಲಾಗ್ ಕಂಡು ಮುಂದಿನ 'ಬಿಗ್ ಬಾಸ್ ಸೀಸನ್ 11'ಕ್ಕೆ ಮಾನಸ ಬರಲೇಬೇಕು ಎಂದು ಹೇಳಿದ್ದಾರೆ. ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ್ದ ಮಾನಸ, ತುಕಾಲಿ ಅವರ ಮಾತಿಗೆ ಸಖತ್ ಪಂಚ್ ಕೊಡುತ್ತಿದ್ದರು. ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಅವರಿಗೂ ಮಾನಸ ಅವರ ಮಾತುಗಳು ಇಷ್ಟವಾಗಿತ್ತು. ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ತುಕಾಲಿ ಸಂತೋಷ್ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದರೆ, ಸರಳವಾದ ಮಾತಿನಲ್ಲಿ ಸಖತ್ ಪಂಚ್ ಕೊಡುತ್ತಿದ್ದರು. ಹೀಗಾಗಿ, ಬಿಗ್‌ಬಾಸ್ ಮನೆಗೆ ಆಯ್ಕೆ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.