ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್‌ಗೆ ಸಂಬಂಧಿಸಿದಂತೆ ಕರಿಮಣಿ ತಂಡದ ಜೊತೆ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಮಾತನಾಡಿದ್ದಾರೆ. ಅಭಿಮಾನಿಗಳು ಹೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಅನುಬಂಧ ಅವಾರ್ಡ್ ಸಂಭ್ರಮ. ಈ ಸಂಭ್ರಮವನ್ನು ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರ ಎಂಟ್ರಿಯಿಂದ ಇಮ್ಮಡಿಗೊಳಿಸಲು ವಾಹಿನಿ ನಿರ್ಧರಿಸಿದೆ. ಇದೇ ಕಾರಣದಿಂದ ಅವರು ಎಲ್ಲಾ ಸೀರಿಯಲ್ ಟೀಮ್‌ಗಳ ಜೊತೆಗೆ ಇದೀಗ ಡಿಸ್‌ಕಷನ್ ನಡೆಸುತ್ತಿದ್ದಾರೆ. ಇದಾಗಲೇ ಕೆಲವು ಸೀರಿಯಲ್ ತಂಡದ ಜೊತೆ ನಟಿ ಮಾತನಾಡಿದ್ದಾರೆ. ಈಗ ನಟಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿರುವ ನಟ-ನಟಿಯರ ಜೊತೆ ನಿವೇದಿತಾ ಮಾತನಾಡಿದ್ದಾರೆ.
ನಿವೇದಿತಾ ಗೌಡ ಅವರು ಬಿಗ್‌ಬಾಸ್ ಬಳಿಕ ರೀಲ್ಸ್ ಮಾಡಿಕೊಂಡೇ ಕಾಲ ಕಳೆಯುತ್ತಿದ್ದವರು. ಚಂದನ್ ಶೆಟ್ಟಿ ಜೊತೆಗೆ ಡಿವೋರ್ಸ್ ಬಳಿಕ ನಟಿ ಟ್ರೋಲ್‌ಗೆ ಒಳಗಾಗುತ್ತಲೇ ಇನ್ನಷ್ಟು ಹೆಸರು ಮಾಡಿದ್ದಾರೆ. ಇದೀಗ ನಟಿಯ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಹಲವು ಆಫರ್‌ಗಳು ಬರುತ್ತಿವೆ. ಕೆಲವು ಜಾಹೀರಾತು ಕಂಪೆನಿಗಳೂ ನಟಿಗೆ ಬೇಡಿಕೆ ಇಟ್ಟಿರುವ ನಡುವೆಯೇ ಕಲರ್ಸ್ ವಾಹಿನಿಯಿಂದಲೂ ಬೇಡಿಕೆ ಬಂದಿದೆ. ಇದೇ ಕಾರಣಕ್ಕೆ ಅವರು ಎಲ್ಲಾ ಧಾರಾವಾಹಿ ತಂಡದ ಜೊತೆ ಮಾತನಾಡುತ್ತಿದ್ದಾರೆ.
ನಿನ್ನ ಸೌಂದರ್ಯ ಭಲೆ ಭಲೆ ಎಂದು ಚಂದನ್ ಶೆಟ್ಟಿ ರೀಲ್ಸ್: ಗುಡ್ ನ್ಯೂಸಾ ಕೇಳ್ತಿದ್ದಾರೆ ಫ್ಯಾನ್ಸ್!
ಇದೀಗ ಕರಿಮಣಿ ತಂಡದ ಜೊತೆ ಮಾತನಾಡಿರುವ ಪ್ರೊಮೋ ಬಿಡುಗಡೆಯಾಗಿದೆ. ಆದರೆ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಆಗಿ ಬರುವುದಿಲ್ಲ. ಆದ್ದರಿಂದ ನಿವೇದಿತಾ ಅವರ ವಿಡಿಯೋ, ರೀಲ್ಸ್ ಬಂದಾಗಲೆಲ್ಲಾ ಕಾಲೆಳೆಯುತ್ತಾರೆ. ಈಗಲೂ ಬೇರೆ ಯಾರೂ ನಿಮಗೆ ಸಿಗಲಿಲ್ವಾ ಎಂದು ವಾಹಿನಿಯನ್ನು ಪ್ರಶ್ನಿಸುತ್ತಿದ್ದಾರೆ. ಸುಂದರ ಸಂಸಾರ ಹಾಳು ಮಾಡಿದ ಹೆಣ್ಣಿಗೆ ಇಂಥ ಅವಾರ್ಡ್ ಫಂಕ್ಷನ್‌ಗೆ ಕರಿಯಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಕರಿಮಣಿ ಸೀರಿಯಲ್‌ಗೆ ಬಂದ ಕಾರಣ, ನಿನ್ನ ಕರಿಮಣಿಯ ಮುಂದಿನ ಮಾಲೀಕ ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಈ ಸೀರಿಯಲ್ ಕಥೆ ಚುಟುಕಾಗಿ ಹೇಳುವುದಾದರೆ, ರಿಷಿ - ಸಾಹಿತ್ಯ ಮದುವೆ ನಿಗದಿ ಆಗಿತ್ತು. ಆದರೆ, ಕರ್ಣನಿಂದಾಗಿ ರಿಷಿ - ಸಾಹಿತ್ಯ ಮದುವೆ ಎರಡು ಬಾರಿ ನಿಂತು ಹೋಯ್ತು. ಮೊದಲ ಬಾರಿ ಮಿಸ್ಟೇಕ್ ಮಾಡಿಕೊಂಡು ಸಾಹಿತ್ಯ ಮದುವೆಯನ್ನ ಕರ್ಣ ನಿಲ್ಲಿಸಿಬಿಟ್ಟ. ಆದರೆ, ಎರಡನೇ ಬಾರಿ ರಿಷಿ ಮೋಸಗಾರ ಎಂಬುದನ್ನ ಅರಿತು ಸಾಹಿತ್ಯ ಮದುವೆಯನ್ನ ಕರ್ಣ ನಿಲ್ಲಿಸಿದ. ಅದಾಗಲೇ ಸೌಜನ್ಯ ಎಂಬ ಯುವತಿಯನ್ನ ಗರ್ಭಿಣಿ ಮಾಡಿ, ಸಾಹಿತ್ಯಳನ್ನ ರಿಷಿ ಮದುವೆ ಆಗಲು ಹೊರಟಿದ್ದ. ಸೌಜನ್ಯಗೆ ಅನ್ಯಾಯ ಆಗಬಾರದು ಅಂತ ರಿಷಿಯನ್ನ ಕಿಡ್ನ್ಯಾಪ್ ಮಾಡಿ ಮದುವೆ ನಿಲ್ಲಿಸಿದ್ದ ಕರ್ಣ... ಹೀಗೆ ಸಾಗಿದ ಕಥೆ ಹಲವು ತಿರುವುಗಳನ್ನು ಪಡೆದುಕೊಂಡಿದೆ.
ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ನಿವೇದಿತಾ ಗೌಡ ಎಂಟ್ರಿ! ವಿಡಿಯೋ ನೋಡಿ ಬಿಸಿಬಿಸಿ ಚರ್ಚೆ ಶುರು