ವೇದಿಕೆ ಮೇಲೆ ಫ್ಯಾಮಿಲಿ ನೆನೆದು ಕಣ್ಣೀರಿಟ್ಟ 'ಪಾರು' ದಾಮಿನಿ; ಆಗಿದ್ದೇನು?

By Suvarna News  |  First Published Apr 7, 2020, 10:52 AM IST

'ಪಾರು' ಧಾರಾವಾಹಿಯ ವಿಲನ್ ಪಾತ್ರಧಾರಿ ದಾಮಿನಿ ಜೀನ್ಸ್ ರಿಯಾಲಿಟಿ ಶೋ ವೇದಿಕೆಯಲ್ಲಿ ಫ್ಯಾಮಿಲಿ ನೆನೆದು ಕಣ್ಣೀರಿಟ್ಟಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 


ಜೀ ಕನ್ನಡದಲ್ಲಿ ಪ್ರಸಾರವಾಗುವ 'ಪಾರು' ಸೀರಿಯಲ್ ಸಿಕ್ಕಾಪಟ್ಟೆ ಫೇಮಸ್. ಈ ಧಾರಾವಾಹಿ ನೋಡುವವರಿಗೆ ವಿಲನ್ ಆಗಿ ಕಾಣಿಸಿಕೊಂಡಿರುವ ದಾಮಿನಿ ಅಲಿಯಾಸ್ ಸಿತಾರಾ ಪರಿಚಯ ಇದ್ದೇ ಇರುತ್ತೆ. ವಿಲನ್ ಅಂದ್ರೆ ಹೀಗಿರಬೇಕಪ್ಪ ಎನಿಸುವ ಮಟ್ಟಿಗೆ ಅದ್ಭುತವಾಗುವ ನಟಿಸುವ ಕಲಾವಿದೆ. ಇವರು ಕೆಲದಿನಗಳ ಹಿಂದೆ ಜೀ ಕನ್ನಡದ 'ಜೀನ್ಸ್' ರಿಯಾಲಿಟಿ ಶೋಗೆ ಯಾರೇ ನೀ ಮೋಹಿನಿ ಯ ಮಾಯಾ ಜೊತೆ ಆಗಮಿಸಿದ್ದರು.

ವಿಭಿನ್ನ ಶೈಲಿಯಲ್ಲಿ ಪುತ್ರನೊಟ್ಟಿಗೆ ಫೋಟೋ ಶೊಟ್‌ ಮಾಡಿಸಿದ ಕಿರುತೆರೆ ನಟಿ!

Tap to resize

Latest Videos

ಆಗ ಕೂಡು ಕುಟುಂಬದ ಬಗ್ಗೆ ಮಾತನಾಡುತ್ತಾ, ಮಾಯಾ, ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ನಮ್ಮದು ಕೂಡು ಕುಟುಂಬ. ಮನೇಲಿ ಸುಮಾರ್ ಜನ ಇದ್ವಿ. ಈಗೆಲ್ಲಾ ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ. ಇಂದಿನ ಜನರೇಶನ್‌ನ ಬಹುತೇಕರಿಗೆ ಅವಿಭಕ್ತ ಕುಟುಂಬದ ಕಲ್ಪನೆಯೇ ಇಲ್ಲ ಎನ್ನುತ್ತಾರೆ. ಆಗ ದಾಮಿನಿ ಬಳಿ ನಿರೂಪಕಿ ಸುಷ್ಮಾ ನಿಮ್ಮ ಕುಟುಂಬದ ಬಗ್ಗೆ ಹೇಳಿ ಎನ್ನುತ್ತಾರೆ. ದಾಮಿನಿ ಭಾವುಕರಾಗುತ್ತಾರೆ. 'ನನಗೆ ಕುಟುಂಬವೇ ಇಲ್ಲ. ಅಪ್ಪ ಅಮ್ಮ ಯಾರೂ ಅಂತಾನೇ ಗೊತ್ತಿಲ್ಲ. ನಾನು ಅನಾಥಾಶ್ರಮದಲ್ಲಿ ಬೆಳೆದೆ. ಶಾಲೆಗೆ ಹೋಗುವಾದ ಫ್ರೆಂಡ್ಸೆಲ್ಲಾ ಹೇಳುವಾಗ ಅಪ್ಪ, ಅಮ್ಮ ಸಂಬಂಧದ ಬಗ್ಗೆ ಗೊತ್ತಾಗುತ್ತಾ ಹೋಯಿತು. ನನ್ನ ಫ್ರೆಂಡ್ಸ್‌ಗಳ ಮನೆಗಳಲ್ಲೇ ನಾನು ಬೆಳೆದಿದ್ದು' ಎಂದು ಕಣ್ಣೀರಾದರು. 

 

 

click me!