ಊರಲ್ಲಿ ನೀರಿಲ್ಲ ಎಂದು ಕೊಡಲಿಲ್ಲ ಕನ್ಯೆ; ಪ್ರೀತಿ ಎಂಥದ್ದನ್ನೂ ಸಾಧ್ಯವಾಗಿಸಿಬಿಡುತ್ತೆ, ಇದು ಪ್ರೀತಿ ಗೆದ್ದ ನೈಜ ಕಥೆ

Published : Nov 08, 2026, 05:56 PM IST
Paani Movie

ಸಾರಾಂಶ

ಊರಿನಲ್ಲಿ ನೀರಿನ ಸಮಸ್ಯೆಯಿದೆ ಎಂಬ ಕಾರಣಕ್ಕೆ ಮದುವೆ ನಿರಾಕರಿಸಿದಾಗ, ಪ್ರೇಯಸಿಗಾಗಿ ಇಡೀ ಹಳ್ಳಿಯ ಚಿತ್ರಣವನ್ನೇ ಬದಲಿಸಿದ ಹನುಮಂತ್ ಕೆಂದ್ರೆ ಅವರ ನೈಜ ಕಥೆ ಇಲ್ಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮರಾಠಿ ಸಿನಿಮಾ ‘ಪಾನಿ’ ಕಥೆಯ ಸಂಪೂರ್ಣ ರೋಚಕ ವಿವರಣೆ ಇಲ್ಲಿದೆ.

ಪ್ರೀತಿಗಾಗಿ ತಾಜ್‌ಮಹಲ್ ಕಟ್ಟಿದ ಕಥೆ ಹಳೆಯದು. ಆದರೆ ಇಲ್ಲೊಬ್ಬ ಯುವಕನಿಗೆ ಅವರ ಊರಲ್ಲಿ ನೀರು ಇರದ ಕಾರಣ ಕನ್ಯೆ ಕೊಡುವುದಕ್ಕೆ ನಿರಾಕರಿಸುತ್ತಾರೆ. ಆದರೆ, ಈ ಮದುವೆ ಒಪ್ಪಿಸಲು ಇಡೀ ಹಳ್ಳಿಯ ಬರಗಾಲವನ್ನೇ ನೀಗಿಸಿ, ಪ್ರೀತಿ ಎಂಥದ್ದನ್ನೂ ಸಾಧ್ಯವಾಗಿಸಿಬಿಡುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾನೆ. ಮಹಾರಾಷ್ಟ್ರದ ಬರಪೀಡಿತ ಮರಾಠವಾಡ ಭಾಗದ ಹನುಮಂತ್ ಕೆಂದ್ರೆ ಎಂಬ ಯುವಕನ ಜೀವನದಲ್ಲಿ ನಡೆದ ಈ ರೋಚಕ ಪ್ರೇಮ ಕಥೆ ಈಗ 'ಪಾನಿ' ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕನ್ಯೆ ನೀಡಲು ನಿರಾಕರಣೆ!

ಹನುಮಂತ್ ತಾನು ಪ್ರೀತಿಸಿದ ಹುಡುಗಿ ಸುವರ್ಣಾಳನ್ನು ಮದುವೆಯಾಗಲು ಆಕೆಯ ಮನೆಗೆ ಹೋದಾಗ, ನಿಮ್ಮ ಊರಿನಲ್ಲಿ ಕುಡಿಯಲು ನೀರಿಲ್ಲ, ಇಂತಹ ಬರಪೀಡಿತ ಹಳ್ಳಿಗೆ ನಮ್ಮ ಮಗಳನ್ನ ಕೊಟ್ಟು ಕಷ್ಟಕ್ಕೀಡು ಮಾಡುವುದಕ್ಕೆ ನಾವೂ ತಯಾರಿಲ್ಲ ಎಂದು ಹುಡುಗಿ ಪೋಷಕರು ಮದುವೆಗೆ ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಮದುವೆ ನಿರಾಕರಿಸಿದ ಆಘಾತಕ್ಕೆ ಕುಸಿದುಬೀಳದ ಯುವಕ, ಅದನ್ನು ಸವಾಲಾಗಿ ಸ್ವೀಕರಿಸುತ್ತಾನೆ. ನಮ್ಮೂರಿನ ನೀರಿನ ಸಮಸ್ಯೆ ಕೇವಲ ನನ್ನ ಪ್ರೇಯಸಿಗಷ್ಟೇ ಅಲ್ಲ, ಇಡೀ ಹಳ್ಳಿಗೇ ಮುಕ್ತಿ ನೀಡಿ ನಿನ್ನನ್ನು ಮದುವೆಯಾಗುತ್ತೇನೆ ಎಂದು ಪ್ರೇಯಸಿಯ ಮುಂದೆ ಪಣ ತೊಡುತ್ತಾನೆ.

ಹಳ್ಳಿಯ ಭಗೀರಥ ಪ್ರಯತ್ನ!

ಹನಿ ನೀರಿಗೂ ಪರದಾಡುತ್ತಿದ್ದ ತನ್ನ ಹಳ್ಳಿಯಲ್ಲಿ ಹನುಮಂತ್ ಜಲ ಸಂರಕ್ಷಣೆ ಮತ್ತು ಜಲಾನಯನ ಕೆಲಸಗಳನ್ನು ಪ್ರಾರಂಭಿಸುತ್ತಾನೆ. ಇಡೀ ಹಳ್ಳಿಯ ಜನರನ್ನು ಒಟ್ಟುಗೂಡಿಸಿ, ಶ್ರಮದಾನದ ಮೂಲಕ ಕೆರೆ, ಕಂದಕಗಳನ್ನು ನಿರ್ಮಿಸಿ ಮಳೆ ನೀರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಾನೆ. ಯುವಕನ ನಿರಂತರ ಭಗೀರಥ ಪ್ರಯತ್ನದ ಫಲವಾಗಿ, ಕೆಲವು ವರ್ಷಗಳಲ್ಲಿ ಆ ಬರಡಾದ ಹಳ್ಳಿ ಸಂಪೂರ್ಣ ಜಲಸಮೃದ್ಧವಾಗುತ್ತದೆ. ಬತ್ತಿ ಹೋಗಿದ್ದ ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಚಿಮ್ಮುತ್ತದೆ.

ಪ್ರೀತಿಯ ಮಹಾ ವಿಜಯ!

ಊರಿನ ನೀರಿನ ಸಮಸ್ಯೆ ಬಗೆಹರಿದ ನಂತರ, ಹುಡುಗಿಯ ಮನೆಯವರು ಯುವಕನ ಸಾಧನೆ ಮತ್ತು ಪ್ರೀತಿಯನ್ನು ಮೆಚ್ಚಿ, ತಾವೇ ಖುದ್ದಾಗಿ ಮುಂದೆ ಬಂದು ಮಗಳ ಕೈಯನ್ನು ಆತನಿಗೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಸುತ್ತಾರೆ. ಕೇವಲ ಪ್ರೀತಿಗಾಗಿ ಇಡೀ ಹಳ್ಳಿಯ ಚಿತ್ರಣವನ್ನೇ ಬದಲಿಸಿದ ಹನುಮಂತ್ ಕೆಂದ್ರೆ ಅವರ ಈ ಯಶೋಗಾಥೆ ಮತ್ತು ಪ್ರೇಮ ಕಥೆಯನ್ನು ನಟ-ನಿರ್ದೇಶಕ ಆದಿನಾಥ್ ಕೊಠಾರೆ ಅವರು 'ಪಾನಿ' ಸಿನಿಮಾದ ಮೂಲಕ ತೆರೆಗೆ ತಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ನಿರ್ಮಿಸಿರುವ ಈ ಚಿತ್ರವು ಪ್ರೀತಿಯ ಶಕ್ತಿ ಮತ್ತು ಪರಿಸರ ಕಾಳಜಿ ಸಂದೇಶವನ್ನು ಸಾರುವ ಮೂಲಕ ಪ್ರೇಕ್ಷಕರ ಹಾಗೂ ವಿಮರ್ಶಕರ ಮುಕ್ತಕಂಠದ ಶ್ಲಾಘನೆಗೆ ಪಾತ್ರವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದು ಕೊಟ್ಟ ಸೋಪ್​ನಿಂದ ಶುರುವಾದ ಲವ್​, ಇಂದು ಮದ್ವೆವರೆಗೆ; ಶಿಶಿರ್​-ಐಶ್ವರ್ಯಾ ರೋಚಕ ಪ್ರೇಮ ಕಥೆ
ಡಾಕ್ಟರ್​ ನಿಧಿಗೆ ಲಾಯರ್​ ಮಾಡಿ ಪೇಚಿಗೆ ಸಿಲುಕಿದ Karna Serial: ವಕೀಲರಿಂದ ನೋಟಿಸ್​- BCCC ವಾರ್ನಿಂಗ್​