
ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ದಿನೇ ದಿನೇ ಹೊಸತನದೊಂದಿಗೆ ಪ್ರಸಾರವಾಗುತ್ತಿದೆ. ಅದರಲ್ಲೂ ಶೆಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಯೇ ಈ ರಿಯಾಲಿಟಿ ಶೋನಲ್ಲಿ ಪ್ರಮುಖ ಹೈಲೈಟ್. ಟಾಸ್ಕ್ ಮಾಡಲಿ, ಮಾಡದಿರಲಿ ಶಮಿತಾ ಸದಾ ಸುದ್ದಿಯಲ್ಲಿರುತ್ತಾರೆ. ಸದಾ ಸಹೋದರಿ ಶಿಲ್ಪಾಗೆ ಹೋಲಿಸಿ ನನ್ನ ವ್ಯಕ್ತಿತ್ವವೇನು ಎಂಬುವುದು ಗುರುತಿಲ್ಲ, ಬಿಬಿ ಮೂಲಕ ಜನರಿಗೆ ನಾನು ಪರಿಚಯವಾಗಬೇಕು ಎಂಬುದು ಶಮಿತಾ ಗುರಿ.
ಬಿಗ್ ಬಾಸ್ ಜೋಡಿ ಟಾಸ್ಕ್ ಆರಂಭದಿಂದ ರಾಕೇಶ್ ಮತ್ತು ಶಮಿತಾ ಸಂಬಂಧ ಗಟ್ಟಿಯಾಗಿದೆ. ಇಬ್ಬರ ನಡುವೆ ಯಾವುದೇ ವೈ ಮನಸ್ಸು ಇಲ್ಲದೇ ಒಟ್ಟಿಗೆ ಸ್ಪರ್ಧಿಸುತ್ತಾರೆ. ಗೆಲ್ಲದಿದ್ದರೂ ಟಫ್ ಫೈಟ್ ನೀಡುತ್ತಾರೆ. ಎಲ್ಲರೊಂದಿಗೆ ಚೆನ್ನಾಗಿರಬೇಕು, ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಿದ್ದ, ರಾಕೇಶ್ ಈಗ ಎಲ್ಲರಿಂದ ದೂರ ಆಗಿ ಶಮಿತಾ ಜೊತೆ ಮಾತ್ರ ಆತ್ಮೀಯತೆಯಿಂದ ಇರುತ್ತಾರೆ.
ಕೆಲವು ದಿನಗಳ ಹಿಂದ ರಾಕೇಶ್ ಹಾಗೂ ಶಮಿತಾ ಒಂದೇ ಹಾಸಿಗೆ ಹಂಚಿ ಕೊಂಡಿದ್ದಾರೆ. ಇಬ್ಬರೂ ರಾತ್ರಿ ಇಡೀ ಕಾಮಿಡಿ ಮಾಡಿಕೊಂಡು ಗಾಸಿಪ್ ಮಾಡಿಕೊಂಡು ಟೈಂ ಪಾಸ್ ಮಾಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ರಾಕೇಶ್ ಶಮಿತಾ ಕೈಗೆ ಮುತ್ತಿಟ್ಟಿದ್ದಾರೆ. ಇದನ್ನು ಬಿಗ್ ಬಾಸ್ ಕ್ಯಾಮೆರಾದಲ್ಲಿ ಝೂಮ್ ಮಾಡಿ ತೋರಿಸಲಾಗಿದೆ. ಅಲ್ಲದೇ ಇಬ್ಬರೂ ದಿನ ಆರಂಭಿಸುವುದು ಒಬ್ಬರನ್ನೊಬ್ಬರು ತಬ್ಬಿಕೊಂಡ ನಂತರವೇ. ಬೇಬಿ, ಕ್ಯೂಟಿ ಎಂದು ಹೆಸರಿಟ್ಟುಕೊಂಡು ಕರೆಯುತ್ತಾರೆ. ಇವರ ಹಾವ-ಭಾವ ಗಮನಿಸಿದ ನೆಟ್ಟಿಗರು ಇವರು ಮದುವೆ ಆಗುವ ಸೂಚನೆ ನೀಡುತ್ತಿದ್ದಾರೆ, ಸೈಲೆಂಟ್ ಆಗಿ ಲವ್ ಮಾಡುತ್ತಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.