ಜೀ ಕನ್ನಡದಲ್ಲಿ ವೈದೇಹಿ ಪರಿಣಯ, ಇದು ನಮ್ಗೆ ಬೇಡ್ವೇ ಬೇಡ ಅಂತಿರೋದ್ಯಾಕೆ ಪ್ರೇಕ್ಷಕರು?

Published : Jun 13, 2022, 01:29 PM IST
ಜೀ ಕನ್ನಡದಲ್ಲಿ ವೈದೇಹಿ ಪರಿಣಯ, ಇದು ನಮ್ಗೆ ಬೇಡ್ವೇ ಬೇಡ ಅಂತಿರೋದ್ಯಾಕೆ ಪ್ರೇಕ್ಷಕರು?

ಸಾರಾಂಶ

ಜೀ ಕನ್ನಡದಲ್ಲಿ ಹೊಸ ಸೀರಿಯಲ್ 'ವೈದೇಹಿ ಪರಿಣಯ' ಪ್ರಸಾರವಾಗೋದಕ್ಕೆ ರೆಡಿ ಆಗ್ತಿದೆ. ಈ ಸೀರಿಯಲ್ ಪ್ರೊಮೋ ನೋಡಿದ್ದೇ, ಈ ಸೀರಿಯಲ್‌ ನಮ್ಗೆ ಬೇಡ್ವೇ ಬೇಡ ಅಂತ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂಥದ್ದೇನಿದೆ ಇದರಲ್ಲಿ?

ಜೀ ಕನ್ನಡ(Zee Kannada) ದ ಸೀರಿಯಲ್‌ಗಳು ಟಿಆರ್ ಪಿ (TRP)ಯಲ್ಲಿ ಸೋತ ಉದಾಹರಣೆಗಳಿಲ್ಲ. ಜನ ಈ ಸೀರಿಯಲ್‌ಗಳನ್ನು ಮುಕ್ತ ಮನಸ್ಸಿಂದ ಸ್ವೀಕರಿಸಿದ್ದಾರೆ. ಎನ್‌ಜಾಯ್‌(Enjoy) ಮಾಡುತ್ತಲೇ ನೋಡುತ್ತಿದ್ದಾರೆ. ಹೀಗಾಗಿ ಈ ಸೀರಿಯಲ್‌ಗಳು ಟಿಆರ್‌ ಪಿಯಲ್ಲೂ ಸದಾ ಮುಂದು. ಆದರೆ ಇದೀಗ ಜೀ ಕನ್ನಡದಲ್ಲಿ ಹೊಸದೊಂದು ಸೀರಿಯಲ್ ಶುರುವಾಗುತ್ತಿದೆ. ಹೊಸ ಸೀರಿಯಲ್ ಪ್ರೊಮೋ (Promo) ಬರಲಿಕ್ಕೆ ಶುರುವಾಯ್ತು ಅಂದರೆ ಹಳೆಯ ಯಾವುದೋ ಒಂದು ಸೀರಿಯಲ್‌ ನಿಲ್ಲುತ್ತೆ ಅನ್ನೋ ಸೂಚನೆ. ಇದೀಗ 'ವೈದೇಹಿ ಪರಿಣಯ'(Vaidhehi Parinaya) ಬರ್ತಿರುವಾಗ ಯಾವ ಸೀರಿಯಲ್ ನಿಲ್ತಿದೆ ಅನ್ನೋದರ ಬಗ್ಗೆಯೂ ಪ್ರೇಕ್ಷಕರ ಲೆಕ್ಕಾಚಾರ ಶುರುವಾಗಿದೆ. ಹೆಚ್ಚಿನವರು ಹೇಳೋ ಪ್ರಕಾರ, ಸದ್ಯಕ್ಕೆ ನಿಲ್ಲುತ್ತಿರುವ ಸೀರಿಯಲ್ ಕಮಲಿ (Kamali). ಟಿಆರ್‌ ಪಿಯಲ್ಲಿ ಹಿಂದೆ ಬಿದ್ದಿರೋದು ಈ ಸೀರಿಯಲ್ ನಿಲ್ಲೋದಕ್ಕೆ ಕಾರಣವಾ ಅಥವಾ ಕಥೆಯೇ ಮುಕ್ತಾಯದತ್ತ ಸಾಗುತ್ತಿದೆಯಾ ಅನ್ನೋ ಗೊಂದಲ ಜನರಲ್ಲಿದೆ. ಈ ಬಗ್ಗೆ ಹೆಚ್ಚಿನ ಅಬ್ಸೆಶನ್ (Obsession) ಯಾರಿಗೂ ಇಲ್ಲದ ಕಾರಣಕ್ಕೋ ಏನೋ, ಈ ಸೀರಿಯಲ್ ನಿಲ್ತಿದೆ ಅನ್ನೋದರ ಬಗ್ಗೆ ಯಾರಿಗೂ ಹೆಚ್ಚಿನ ತಕರಾರು ಇದ್ದ ಹಾಗಿಲ್ಲ. ಇದೊಂದು ಹಳ್ಳಿ ಹುಡುಗಿ ತನ್ನ ಕನಸಿನ ಬೆನ್ನತ್ತಿ ಹೊಸ ಸಾಧನೆ ಮಾಡುವ ಕಥೆ. ಜೀ ಕನ್ನಡದಲ್ಲಿ ಈ ಸೀರಿಯಲ್ ಸಂಜೆ 7ಕ್ಕೆ ಪ್ರಸಾರವಾಗುತ್ತೆ. ಅಮೂಲ್ಯ ಗೌಡ (Amulya Gowda), ರಚನಾ, ನಿರಂಜನ ಮೊದಲಾದವರು ಇದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಂದುಕೊಂಡ ಲೆವೆಲ್‌ಗೆ ಸಕ್ಸಸ್ (Success) ಸಾಧಿಸೋದು ಈ ಸೀರಿಯಲ್‌ಗೆ ಸಾಧ್ಯವಾಗಿಲ್ಲ. ಇದು ಹಿಂದೆಯೇ ಪ್ರಸಾರ ನಿಲ್ಲಿಸುತ್ತೆ ಅನ್ನು ಮಾತುಗಳೂ ಕೇಳ್ತಾ ಇದ್ದವು. ಆದರೆ ಸೀರಿಯಲ್ ಮುಂದುವರಿಯುತ್ತಲೇ ಇತ್ತು. ಇದೀಗ ಬರ್ತಿರೋ ಹೊಸ ಸೀರಿಯಲ್ ಈ ಸೀರಿಯಲ್ ಟೈಮ್ ನಲ್ಲಿ ಪ್ರಸಾರವಾಗುತ್ತಾ ಅನ್ನೋದು ಪ್ರಶ್ನೆ.

Gattimela serial: ವೇದಾಂತ್ ಮೀಸೆಗೆ ಕತ್ತರಿ ಹಾಕೋಕೆ ಹೊರಟ ಅಮೂಲ್ಯ, ವೇದಾಂತ್ ಅವಸ್ಥೆ ಬೇಡ!

ಇನ್ನು ಹೊಸ ಸೀರಿಯಲ್ 'ವೈದೇಹಿ ಪರಿಣಯ' ಬಗ್ಗೆ ಹೇಳೋದಾದ್ರೆ ಇದರಲ್ಲಿ ಆಕ್ಟಿಂಗ್ ಮಾಡ್ಬೇಕು ಅನ್ನುವ ಕನಸಿನ ಹಿಂದೆ ಬಿದ್ದ ಹುಡುಗಿ ವೈದೇಹಿ, ಅದನ್ನು ಸಾಧಿಸುವ ಮನಸ್ಥಿತಿಯಲ್ಲಿರುವಾಗ ಆಕೆಯನ್ನು ಒಬ್ಬ ಹುಡುಗನ ಜೊತೆಗೆ ಬಲವಂತವಾಗಿ ಮದುವೆ (Marriage) ಮಾಡಲಾಗುತ್ತೆ. ಒಲ್ಲದ ಮನಸ್ಸಿಂದ ಮದುವೆಯಾಗುವ ವೈದೇಹಿಯಲ್ಲಿ ಆರಂಭದಲ್ಲಿ ಮದುವೆಯಾದ ಹುಡುಗನ ಬಗ್ಗೆ ಯಾವ ಭಾವನೆಯೂ ಇರಲ್ಲ. ತನ್ನ ಗುರಿ ಮುಟ್ಟಲಾಗದ ಬೇಸರವಷ್ಟೇ ಇರುತ್ತೆ. ಆದರೆ ಇವಳು ಮದುವೆಯಾಗಿರುವ ಹುಡುಗ ಈಕೆಯ ಅಕ್ಕ ಪ್ರೀತಿಸಿ ಮದುವೆ ಆಗಬೇಕು ಅಂದುಕೊಂಡಿರುವವನಾಗಿರುತ್ತಾನೆ. ಶುರು ಶುರುವಲ್ಲಿ ವೈದೇಹಿ ಮತ್ತು ಆಕೆಯ ಗಂಡನ ನಡುವೆ ಸಾಮರಸ್ಯವಾಗಲಿ ಪ್ರೀತಿಯಾಗಲೀ ಇರೋದಿಲ್ಲ. ಆದರೆ ಯಾವಾಗ ಅವರಿಬ್ಬರಲ್ಲಿ ಮಧುರ ಭಾವನೆ ಮೂಡಲು ಶುರುವಾಗುತ್ತೋ ಆಗ ವೈದೇಹಿ ಅಕ್ಕ ವಾಪಾಸ್ ಬರುತ್ತಾಳೆ. ಆಗ ಏನಾಗುತ್ತೆ ಅನ್ನೋದು ಈ ಸೀರಿಯಲ್‌ನ ಒನ್‌ಲೈನ್ (Oneline). ಈ ಸೀರಿಯಲ್‌ನ ವೈದೇಹಿ ಪಾತ್ರದಲ್ಲಿ ಅಂಜನಾ, ಆಕೆಯ ಗಂಡನ ಪಾತ್ರದಲ್ಲಿ ಪವನ್ ರವೀಂದ್ರ ನಟಿಸಿದ್ದಾರೆ.

ಅಯ್ಯಯ್ಯೋ, ರತ್ನಮಾಲಾಗೇನಾಯ್ತು? ಹವಿ ಮದುವೆಗೂ ಇರಲ್ವಾ ಅಮ್ಮಮ್ಮ?

ಈ ಸೀರಿಯಲ್ ಪ್ರೊಮೋ ಪ್ರಸಾರ ಶುರುವಾಗುತ್ತಿರುವ ಹಾಗೆ ಸೋಷಿಯಲ್ ಮೀಡಿಯಾ (Social Media)ದಲ್ಲಿ ಈ ಸೀರಿಯಲ್ ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಈ ಸೀರಿಯಲ್ ಡಬ್ಬಿಂಗ್ ಸೀರಿಯಲ್ ಅನ್ನೋದು. ತೆಲುಗಿನ 'ವೈದೇಹಿ ಪರಿಣಯಂ' (Vaidhehi Parinayam) ಎಂಬ ಸೀರಿಯಲ್‌ಅನ್ನು ಕನ್ನಡಕ್ಕೆ ಡಬ್ (Dubbing) ಮಾಡ್ತಿದ್ದಾರೆ. ಹಾಗೆ ನೋಡಿದರೆ ಈ ಸೀರಿಯಲ್‌ ಒರಿಜಿನಲೀ ತೆಲುಗಿನದ್ದೂ ಅಲ್ಲ, ಇದು ಜೀ ವಾಹಿನಿಯಲ್ಲಿ 2006 ರಿಂದ 2009 ರ ವರೆಗೆ ಪ್ರಸಾರವಾಗುತ್ತಿದ್ದ 'ಕಸಂ ಸೇ' (Kasamh Se) ಸೀರಿಯಲ್ ಕಥೆ ಆಧರಿಸಿದ್ದು. ಇದೀಗ ಈ ಸೀರಿಯಲ್ ಕನ್ನಡದಲ್ಲಿ ರಿಮೇಕ್ ಕೂಡ ಆಗ್ತಿಲ್ಲ. ಬದಲಾಗಿ ಡಬ್ಬಿಂಗ್ ಆಗಿ ಬರ್ತಿದೆ.

 

ಆದರೆ ನಮ್ಮ ಕನ್ನಡದಲ್ಲಿ ಕನ್ನಡದ್ದೇ ಸೀರಿಯಲ್ ಮಾಡಿ, ದಯಮಾಡಿ ಡಬ್ಬಿಂಗ್ ಸೀರಿಯಲ್ ತಂದು ತುರುಕಬೇಡಿ. ಈ ಸೀರಿಯಲ್‌ಅನ್ನು ನಾವು ತೆಲುಗಿನಲ್ಲೇ ನೋಡ್ತೀವಿ ಅಂತ ಒಂದಿಷ್ಟು ಜನ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್‌ ಮಾಡಿದ್ದಾರೆ. ಕೋವಿಡ್‌ ಟೈಮ್‌ನಲ್ಲಿ ಡಬ್ಬಿಂಗ್ ಸೀರಿಯಲ್ ಅನಿವಾರ್ಯವಾಗಿತ್ತು, ಆದರ ಈಗ ನಮ್ಮ ಭಾಷೆಯಲ್ಲೇ ಹೊಸ ಕಥೆ ಇಟ್ಟುಕೊಂಡು ಸೀರಿಯಲ್ ಮಾಡಬಹುದಲ್ವಾ ಅನ್ನೋದು ವೀಕ್ಷಕರ ಅಭಿಪ್ರಾಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!