
ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್ ಕನ್ನಡ 11 ರಿಯಾಲಿಟಿ ಶೋ (Bigg Boss Kannada 11 reality show) ಕೊನೆ ಹಂತಕ್ಕೆ ಬರ್ತಿದೆ. ಗ್ರ್ಯಾಂಡ್ ಫಿನಾಲೆ (Grand Finale)ಗೆ ಎಲ್ಲ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಈ ವಾರ ಎರಡು ಎಲಿಮಿನೇಷನ್ ನಡೆಯಲಿದ್ದು, ಉಳಿದ ಸ್ಪರ್ಧಿಗಳು ಫಿನಾಲೆಯಲ್ಲಿ ಮಿಂಚಲಿದ್ದಾರೆ. ಒಂದ್ಕಡೆ ಈ ವಾರ ಹೋಗೋರು ಯಾರು ಎನ್ನುವ ಪ್ರಶ್ನೆ ಕಾಡ್ತಿದ್ದರೆ ಇನ್ನೊಂದ್ಕಡೆ ಬಿಗ್ ಬಾಸ್ ವಿನ್ನರ್ ಯಾರು ಎನ್ನುವ ಚರ್ಚೆ ಜೋರು ಪಡೆದಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಬರ್ತಿರುವ ಗೆಸ್ಟ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ನಿರೂಪಕಿ ಅನುಪಮಾ ಗೌಡ, ಹಿರಿಯ ನಟಿ ತಾರಾ ನಂತ್ರ ಇಂದು ಬಿಗ್ ಬಾಸ್ ಮನೆಗೆ ಹಳೆ ಸ್ಪರ್ಧಿಗಳು ಬರ್ತಿದ್ದಾರೆ.
ಬಿಗ್ ಬಾಸ್ 11 ಆರಂಭದಿಂದ ಇಲ್ಲಿಯವರೆಗೆ ಮನೆಯಿಂದ ಹೊರಗೆ ಹೋದ ಎಲ್ಲ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸಾ ಕಾಣಿಸಿಕೊಂಡಿದ್ದಾರೆ. ಆದ್ರೆ ಲಾಯರ್ ಜಗದೀಶ್ ಹಾಗೂ ಚೈತ್ರಾ ಕುಂದಾಪುರ, ಐಶ್ವರ್ಯ ಹಾಗೂ ಧರ್ಮ ಕೀರ್ತಿರಾಜ್ ಮಿಸ್ ಆಗಿರೋದನ್ನು ನೀವು ನೋಡ್ಬಹುದು.
ಗೌತಮಿ ಮಾತ್ರ ಹುಡುಗಿ ಅಂತ ಗೌರವಿಸಬೇಕಾ ಯಾಕೆ ನಾನು- ಮೋಕ್ಷಿತಾ ಕಣ್ಣಿಗೆ ಕಾಣಿಸಲ್ವಾ; ಉಗ್ರಂ ಮಂಜುಗೆ ಭವ್ಯಾ ತಿರುಗೇಟು
ಬಂದ ಮಾಜಿ ಸ್ಪರ್ಧಿಗಳ ಜೊತೆ ಹಾಲಿ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ಮಾಜಿ ಸ್ಪರ್ಧಿಗಳಿಂದ ರೆಡ್ ಹಾರ್ಟ್ ಹಾಗೂ ಬ್ಲಾಕ್ ಹಾರ್ಟ್ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಯಾರಿಂದ ನೋವಾಗಿದೆ ಎಂಬುದನ್ನು ಕಾರಣ ಸಮೇತ ವಿವರಿಸಿದ ಸ್ಪರ್ಧಿಗಳು ಕಪ್ಪು ಹಾರ್ಟನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ. ಅತಿ ಹೆಚ್ಚು ಕಪ್ಪು ಹಾರ್ಟ್ ಮಂಜು ಕೈ ಸೇರಿದಂತಿದೆ.
ನಿನ್ನೆ ಬಿಗ್ ಬಾಸ್ 11ರ ಕೊನೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದ್ರೆ ಅದ್ರಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎಂಬುದನ್ನು ಬಿಗ್ ಬಾಸ್ ಇನ್ನೂ ರಿವೀಲ್ ಮಾಡಿಲ್ಲ. ಇದು ನಾಮಿನೇಟ್ ಆದ ಸ್ಪರ್ಧಿಗಳ ಪಟ್ಟಿ ವೀಕ್ಷಕರ ಕೈಗೆ ಸಿಗಲಿದೆ. ಜೊತೆಗೆ ಮಾಜಿ ಸ್ಪರ್ಧಿಗಳ ಜೊತೆ ಹಾಲಿ ಸ್ಪರ್ಧಿಗಳ ಖುಷಿಯನ್ನು ವೀಕ್ಷಕರು ನೋಡಲಿದ್ದಾರೆ.
ಜನರ ಮುಂದೆ ಬಿಗ್ ಬಾಸ್ ಗಿಮಿಕ್ ಬಯಲು; ಉಗ್ರಂ ಮಂಜು ಮಾಡಿದ್ದು ಓಕೆ ಆದ್ರೆ ಧನರಾಜ್
ಗುರುವಾರ ಮಿಡ್ ನೈಟ್ ಎಲಿಮಿನೇಷನ್ ನಡೆಯಬೇಕಿತ್ತು. ಆದ್ರೆ ಧನರಾಜ್ ಮಾಡಿದ ಒಂದು ತಪ್ಪಿನಿಂದ ಎಲ್ಲ ಸ್ಪರ್ಧಿಗಳು ಬಚಾವ್ ಆಗಿದ್ದಾರೆ. ಮತ್ತೊಂದಿಷ್ಟು ದಿನ ಮನೆಯಲ್ಲಿ ಕಳೆಯುವ ಅವಕಾಶ ಅವರಿಗೆ ಸಿಕ್ಕಿದೆ. ಧನರಾಜ್ ಆಟದ ಮಧ್ಯೆ ಮೀರರ್ ನೋಡಿದ್ದರು. ಇದನ್ನು ಅವರು ಮಂಜು ಬಳಿ ಹೇಳಿದ್ದರು. ಆದ್ರೆ ಆರಂಭದಲ್ಲಿ ಬಿಗ್ ಬಾಸ್ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತ್ರ ಅದನ್ನು ಗಂಭೀರವಾಗಿ ಪರಿಗಣಿಸಿ ವೋಟಿಂಗ್ ಸ್ಟಾಪ್ ಮಾಡಿದ್ದಲ್ಲದೆ ಮತ್ತೆ ನಾಮಿನೇಷನ್ ಗೆ ಅವಕಾಶ ನೀಡಿದ್ದರು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಗೌತಮಿ, ಮಂಜು, ಭವ್ಯ ಗೌಡ ಹಾಗೂ ರಜತ್ ಹೆಚ್ಚು ಕಡೆ ಕಾಣಿಸಿಕೊಂಡಿದ್ದಾರೆ. ಈ ನಾಲ್ವರಲ್ಲಿ ಒಬ್ಬರು ಹೊರಗೆ ಹೋಗೋದು ಖಚಿತ ಅಂತ ವೀಕ್ಷಕರು ಹೇಳ್ತಿದ್ದಾರೆ. ಆದ್ರೆ ಎರಡು ಎಲಿಮಿನೇಷನ್ ಇರುವ ಕಾರಣ ಯಾರ ತಲೆ ಮೇಲೆ ತೂಗುಗತ್ತಿ ಇದೆ ತಿಳಿಯುತ್ತಿಲ್ಲ.ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಹಾಗೆಯೇ ಪ್ರೋಮೋ ನೋಡಿದ ವೀಕ್ಷಕರು ಜಗದೀಶ್ ಯಾಕೆ ಬಂದಿಲ್ಲ ಅಂತ ಪ್ರಶ್ನೆ ಮಾಡ್ತಿದ್ದಾರೆ. ಜನವರಿ 25 -26 ರಂದು ಬಿಗ್ ಬಾಸ್ 11ಗೆ ತೆರೆ ಬೀಳುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.