ಇನ್‌ಸ್ಟಾಗ್ರಾಂಗೆ ಗುಡ್‌ಬೈ ಹೇಳಿದ ಮಲ್ಲಮ್ಮ; ಕಾರಣ ಕೇಳಿದ್ರೆ ನಿಮಗೂ ಅಯ್ಯೋ ಅನ್ನಿಸುತ್ತೆ!

Published : Feb 11, 2025, 01:46 PM ISTUpdated : Oct 01, 2025, 01:28 PM IST
ಇನ್‌ಸ್ಟಾಗ್ರಾಂಗೆ ಗುಡ್‌ಬೈ ಹೇಳಿದ ಮಲ್ಲಮ್ಮ; ಕಾರಣ ಕೇಳಿದ್ರೆ ನಿಮಗೂ ಅಯ್ಯೋ ಅನ್ನಿಸುತ್ತೆ!

ಸಾರಾಂಶ

Mallamma Talks: ಇನ್‌ಸ್ಟಾಗ್ರಾಂನಲ್ಲಿ ಫೇಮಸ್ ಆಗಿರುವ ಉತ್ತರ ಕರ್ನಾಟಕದ ಮಲ್ಲಮ್ಮ ಇದೀಗ ಇನ್‌ಸ್ಟಾಗ್ರಾಂ ತೊರೆಯುವ ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರದಿಂದ ಹಿಂದೆ ಸರಿಬೇಕು ಎಂದು ಮಲ್ಲಮ್ಮ ಅವರ ಒಂದೂವರೆ ಲಕ್ಷ ಫಾಲೋವರ್ಸ್ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ಸೋಶಿಯಲ್ ಮೀಡಿಯಾ ಅಂದ್ರೆ ನಿಮಗೆ ಅಲ್ಲಿ ಅಪರಿಚಿತರು ಸಹ ಕಡಿಮೆ ಸಮಯದಲ್ಲಿ ಹತ್ತಿರವಾಗುತ್ತಾರೆ. ತಮ್ಮ ಮಾತುಗಳಿಂದಲೇ ಇನ್‌ಸ್ಟಾಗ್ರಾಂನಲ್ಲಿ ಫೇಮಸ್ ಆಗಿರೋದು ಉತ್ತರ ಕರ್ನಾಟಕದ ಸಾಮಾನ್ಯ ಮಹಿಳೆ ಮಲ್ಲಮ್ಮ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸರಳವಾದ ಮಾತುಗಳಿಂದಲೇ 157K ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಹಬ್ಬ, ಜಾತ್ರೆ, ಸಂಪ್ರದಾಯ ಹಾಗೂ ತಮಾಷೆಯ ವಿಡಿಯೋಗಳನ್ನು ಮಲ್ಲಮ್ಮ ಅವರ mallamma_talks ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೋಡಬಹುದು. ಮಲ್ಲಮ್ಮ ಬೆಂಗಳೂರಿನ ಫ್ಯಾಶನ್ ಡಿಸೈನ್ ಮಳಿಗೆಯಲ್ಲಿ ಕೆಲಸ ಮಾಡುತ್ತಾರೆ. ಮಲ್ಲಮ್ಮ ಅವರಲ್ಲಿನ ವಿಶೇಷ ತಿಳುವಳಿಕೆಯನ್ನು ಎಲ್ಲರಿಗೂ ತಲುಪಲಿ ಎಂಬ ಉದ್ದೇಶದಿಂದಲೇ ಮಲ್ಲಮ್ಮ ಟಾಕ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಆರಂಭಿಸಲಾಗಿತ್ತು. ಅಸಲಿಗೆ ಮಲ್ಲಮ್ಮ ಅವರಿಗೂ ಹೇಗೆ ವಿಡಿಯೋ ಮಾಡಬೇಕು ಎಂಬುದರ ಬಗ್ಗೆಯೂ ಗೊತ್ತಿಲ್ಲ. ಮಳಿಗೆ ಮಾಲಕರೇ, ಮಲ್ಲಮ್ಮ ಅವರೊಂದಿಗೆ ಮಾತನಾಡುತ್ತಾ ವಿಡಿಯೋಗಳನ್ನು ಮಾಡುತ್ತಾರೆ. ನಂತರ ಅಪ್ಲೋಡ್ ಮಾಡುತ್ತಿರುತ್ತಾರೆ. 

ಇದೀಗ ಮಲ್ಲಮ್ಮ ತಮ್ಮ ಒಂದೂವರೆ ಲಕ್ಷ ಫಾಲೋವರ್ಸ್‌ಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಇನ್‌ಸ್ಟಾಗ್ರಾಂ ತೊರೆಯಲು ಮುಂದಾಗಿರುವ ನಿರ್ಧಾರ ಕೇಳಿ ಮಲ್ಲಮ್ಮ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.  ಈ ವಿಷಯ ತಿಳಿಯುತ್ತಲೇ, ದಯವಿಟ್ಟು ಇನ್‌ಸ್ಟಾಗ್ರಾಂ ಖಾತೆ ಕ್ಲೋಸ್ ಮಾಡಬೇಡಿ. ಮಾತನಾಡೋರು ನೂರು ಮಾತನಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಸಿಕೊಳ್ಳಬಾರದು. ನಿಮ್ಮಿಂದ ಎಷ್ಟೋ ವಿಷಯಗಳನ್ನು ತಿಳಿದುಕೊಂಡಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ. 

ಮಲ್ಲಮ್ಮ ಅವರು ತಮ್ಮ ವಿಡಿಯೋದಲ್ಲಿ ಉತ್ತರ ಕರ್ನಾಟಕ ಶೈಲಿಯ ಅಡುಗೆ, ತಮ್ಮೂರಿನ ಜಾತ್ರೆ, ಆಚರಣೆ ಸೇರಿದಂತೆ ಹಲವು ವಿಷಯಗಳನ್ನು ನೋಡುಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ತಮ್ಮ ದಿನನಿತ್ಯದ ವಿಡಿಯೋಯಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲದರ ಜೊತೆ ವೈರಲ್ ಆಗುವ ರೀಲ್ಸ್, ಫೋಟೋಗಳ ಕುರಿತು ಮಲ್ಲಮ್ಮ ಮಾತನಾಡುತ್ತಿರುತ್ತಾರೆ. ವಿಕ್ಕಿ ಕೌಶಲ್ ಅವರ ತೌಬಾ ತೌಬಾ ಡ್ಯಾನ್ಸ್, ಉರ್ಫಿ ಜಾವೇದ್ ಡ್ರೆಸ್ ಬಗ್ಗೆಯೂ ಮಲ್ಲಮ್ಮ ತಮ್ಮದೇ ಶೈಲಿಯಲ್ಲಿ ಮಾತನಾಡುತ್ತಾರೆ. ಎಲ್ಲಾ ರೀತಿಯ ವಿಡಿಯೋಗಳಿಂದಾಗಿ ಮಲ್ಲಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದ್ರೆ ಇನ್‌ಸ್ಟಾಗ್ರಾಂನಿಂದ ದೂರ ಉಳಿಯಲು ಮಲ್ಲಮ್ಮ ನಿರ್ಧಾರ ಮಾಡಿದ್ದೇಕೆ ಎಂಬುದನ್ನು ನೋಡೋಣ ಬನ್ನಿ. 

ಮಲ್ಲಮ್ಮ ನಿರ್ಧಾರದ ಹಿಂದಿನ ಕಾರಣ ಏನು? 
ಇತ್ತೀಚೆಗೆ ಮಲ್ಲಮ್ಮ ಅವರು ಬಾಲಯ್ಯ ಮತ್ತು ಊರ್ವಶಿ ನಟನೆಯ ದಬಿಡಿ, ದಬಿಡಿ ಹಾಡು, ಓಯೋ ರೂಮ್ ಮತ್ತು ರಾಣಿಯೊಬ್ಬರ ಬಗ್ಗೆ ಮಾತನಾಡಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಎಂದಿನಂತೆ ಮಲ್ಲಮ್ಮ ಫಿಲ್ಟರ್ ಇಲ್ಲದೇ ಮಾತಾಡಿದ್ದರು. ಆದ್ರೆ ಈ ವಿಡಿಯೋಗಳು ಹೆಚ್ಚು ನೆಗೆಟಿವ್ ಕಮೆಂಟ್‌ಗಳು ಬಂದಿದ್ದವು. ರೀಲ್ಸ್ ಮೂಲಕ ಮುಗ್ಧ ಮಲ್ಲಮ್ಮ ಅವರನ್ನು ಹಾಳು ಮಾಡುತ್ತಿದ್ದೀರಿ ಎಂದು ಕಮೆಂಟ್‌ ವಿಡಿಯೋ ಮೇಕರ್ಸ್‌ಗೆ ನೋವುಂಟು ಮಾಡಿದೆ. ಇದರಿಂದ ಅಕೌಂಟ್ ಕ್ಲೋಸ್ ಮಾಡೋಣ ಎಂಬ ವಿಷಯವನ್ನು ಮಲ್ಲಮ್ಮ ಮುಂದೆ ಇರಿಸಿದ್ದಾರೆ. ನಾನೇನು ಸಣ್ಣ ಹುಡುಗಿಯೇ, ನನಗೆ ಎಲ್ಲಾ ಗೊತ್ತಾಗುತ್ತದೆ. ನನಗೆ ಯಾರು ಸಹ ಕೆಟ್ಟದಾಗಿ ಮಾತನಾಡಿಲ್ಲ. ನೀವು ಬೇಡ ಅಂದ್ರೆ ಬೇಡ ಸರ್ ಎಂದು ಮಲ್ಲಮ್ಮಾ ಮುಗ್ದತೆಯಿಂದ ಹೇಳಿದ್ದಾರೆ. 

ಇದನ್ನೂ ಓದಿ:  ತವರಿನಿಂದ ದೂರವಾದ ಪ್ರತಿಯೊಬ್ಬ ಮಹಿಳೆಯೂ ನೋಡಬೇಕಾದ ಕಿರುಚಿತ್ರ

ವಿಡಿಯೋ ಮೇಕರ್ಸ್ ಹೇಳಿದ್ದೇನು?
ಆ ಮೂರು ವಿಡಿಯೋಗಳಲ್ಲಿ ಅಂತಹವುದೇ ಯಾವುದೇ ಕೆಟ್ಟದ್ದು ಇರಲಿಲ್ಲ ಅನ್ನೋದು ಅಭಿಪ್ರಾಯ. ಆದ್ರೂ ಜನರು ಅಷ್ಟು ಹೇಳಿದ್ಮೇಲೆ ವಿಡಿಯೋ ಡಿಲೀಟ್ ಮಾಡಿದ್ದೇನೆ. ಈ ಮೂರು ವಿಡಿಯೋಗಳಿಗೆ ಹೆಚ್ಚು ವ್ಯೂವ್ ಬಂದಿದೆ. ಜನರು ಯಾಕೆ ಒಳ್ಳೆಯ ವಿಡಿಯೋಗಳನ್ನು ನೋಡಲ್ಲ. ಒಳ್ಳೊಳ್ಳೆ ವಿಡಿಯೋಗಳು ತುಂಬಾ ಹಾಕಿದ್ದೇವೆ. ಆದರೆ ಅವುಗಳಿಗೆ ವ್ಯೂವ್ ಬಂದಿಲ್ಲ. ನಾನು ಮಲ್ಲಮ್ಮ ಅವರನ್ನು ಫ್ರೆಂಡ್ ಆಗಿ ನೋಡುತ್ತೇನೆ. ಎಷ್ಟೋ ಜನರು ಅಮ್ಮಂದಿರು, ಸೋದರಿ ಜೊತೆ ರೀಲ್ಸ್ ಮಾಡುತ್ತಾರೆ. ಹಾಗೆಯೇ ನಾವು ಸಹ ವಿಡಿಯೋ ಮಾಡುತ್ತವೆ ಎಂದು ಹೇಳಿದ್ದಾರೆ. 

ಆ ಹಳ್ಳಿ ಮುಗ್ಧೆ ಇಡೀ ಜೀವನ ಹಾಗೆಯೇ ಇರಬೇಕಾ? ಜೀವನದಲ್ಲಿ ಬೇರೆ ಏನು ನೋಡಬಾರದಾ? ಹಣ ಸಂಪಾದನೆ ಏನೋ ಒಂದು ಮಾರ್ಗ ಹುಡುಕಿಕೊಂಡಿದ್ದಾರೆ. ವಿಡಿಯೋದಲ್ಲಿ ನಗುವ ಮಲ್ಲಮ್ಮ ಅವರ ಜೀವನದಲ್ಲಿ ಸಮಸ್ಯೆಗಳೇ ಇಲ್ಲ ಅಂತ ಅಂದುಕೊಳ್ಳುವುದು ತಪ್ಪು. ಈ ರೀತಿ ನೆಗೆಟಿವ್ ಕಮೆಂಟ್‌ಗಳಿಂದ ನಮಗೆ ಡಿಸ್ಟರ್ಬ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:   ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪಾಕ್​ ಬ್ರೇಕಿಂಗ್​ ನ್ಯೂಸ್​: ಧುರಂಧರ್ ಸಿನಿಮಾದ ಇಂಚಿಂಚೂ ಡೈಲಾಗ್​ ​ ಬರೆದದ್ದೇ ನರೇಂದ್ರ ಮೋದಿ!
ಕಿರುತೆರೆಯಲ್ಲಿ ಕಿರಿಕ್ ಮಾಡಿಕೊಂಡು ಬ್ಯಾನ್ ಆದ ಕನ್ನಡ ನಟ -ನಟಿಯರು