‌ʼಹಣದ ವಿಚಾರಕ್ಕೆ ನಾನು, ನನ್ನ ಗರ್ಲ್‌ಫ್ರೆಂಡ್ ಬ್ರೇಕಪ್‌ ಮಾಡಿಕೊಂಡ್ವಿʼ: BBK 11‌ ರನ್ನರ್‌ ಅಪ್ ತ್ರಿವಿಕ್ರಮ್

Published : Feb 11, 2025, 10:32 AM ISTUpdated : Feb 11, 2025, 10:41 AM IST
‌ʼಹಣದ ವಿಚಾರಕ್ಕೆ ನಾನು, ನನ್ನ ಗರ್ಲ್‌ಫ್ರೆಂಡ್ ಬ್ರೇಕಪ್‌ ಮಾಡಿಕೊಂಡ್ವಿʼ: BBK 11‌ ರನ್ನರ್‌ ಅಪ್ ತ್ರಿವಿಕ್ರಮ್

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಖ್ಯಾತಿಯ ತ್ರಿವಿಕ್ರಮ್‌ ಅವರು ಮೊದಲ ಬಾರಿಗೆ ಗರ್ಲ್‌ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.   

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ತ್ರಿವಿಕ್ರಮ್‌ ಅವರ ಲವ್‌ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ತ್ರಿವಿಕ್ರಮ್‌ಗೆ ಈಗಾಗಲೇ ಲವ್ವರ್‌ ಇದ್ದಾರೆ ಎನ್ನುವ ಮಾತು ಬಂತು. ಈಗ ಈ ವಿಚಾರವಾಗಿ ತ್ರಿವಿಕ್ರಮ್‌ ಅವರು Rapid with Rashmi ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಬ್ರೇಕಪ್‌ ಆಯ್ತು! 
“ನನ್ನ‌ ತಂದೆ ತೀರಿಕೊಂಡು ಆರು ತಿಂಗಳಿಗೆ ಬ್ರೇಕಪ್‌ ಆಯ್ತು. ಆ ಹುಡುಗಿ ಮನೆಯವರು ಸೆಟಲ್‌ ಆಗಿದ್ದರು, ನಾನು ಇನ್ನೂ ಸ್ಟ್ರಗಲ್‌ ಮಾಡುತ್ತಿರುವವನು. ಆ ಹುಡುಗಿ ಕೆಲಸ ಮಾಡುತ್ತಿದ್ದಳು, ನಾನು ಸೆಟಲ್‌ ಆಗಬೇಕು ಅಂತ ಅವಳು ಬಯಸುತ್ತಿರಲಿಲ್ಲ. ಆದರೆ ಆ ಹುಡುಗಿ ತಂದೆ ಕಡೆಯಿಂದ ಸ್ವಲ್ಪ ಒತ್ತಡ ಇತ್ತು. ಇಬ್ಬರೂ ಪರಸ್ಪರ ಮಾತನಾಡಿಕೊಂಡು ದೂರ ಆದೆವು. ಆರ್ಥಿಕ ವಿಷಯ ನಮ್ಮಿಬ್ಬರ ಮಧ್ಯೆ ಅಂತರ ಸೃಷ್ಟಿ ಮಾಡತ್ತೆ ಅಂತ ನಮಗೆ ಅನಿಸ್ತು. ನಾನು ಈಗ ಸಿಂಗಲ್‌ ಆಗಿದ್ದೀನಿ. ಈಗ ಆ ಹುಡುಗಿಗೆ ಬೇರೆ ಮದುವೆಯಾಗಿದೆ, ಆ ಹುಡುಗಿ ಇನ್ನೂ ಟಚ್‌ ಅಲ್ಲಿದ್ದಾಳೆ, ಅವಳ ಗಂಡ ಕೂಡ ಟಚ್‌ನಲ್ಲಿದ್ದಾರೆ, ಸಿಗ್ತಾ ಇರ್ತೀವಿ” ಎಂದು ತ್ರಿವಿಕ್ರಮ್‌ ಹೇಳಿದ್ದಾನೆ.

 

ಮತ್ತೊಮ್ಮೆ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಬ್ರೇಕಪ್‌ ಮಾಡ್ಕೊಂಡ 'ಬಿಗ್‌ ಬಾಸ್‌ ಕನ್ನಡ' ಖ್ಯಾತಿಯ Jashwanth Bopanna!

ಮದುವೆ ಯಾವಾಗ?
“ಈಗ ಯಾರೂ ಬೇಡ. ಮೊದಲು ಜೀವನವನ್ನು ಸೆಟಲ್‌ ಮಾಡಿಕೊಳ್ಳೋಣ. ಆಮೇಲೆ ಹುಡುಗಿ ಸಿಗ್ತಾಳೆ ಅಂತ ಅಂದುಕೊಂಡಿದ್ದೇನೆ. ಈ ವರ್ಷಾಂತ್ಯದಲ್ಲಿ ನಾನು ಮದುವೆ ಫಿಕ್ಸ್‌ ಮಾಡಿಕೊಳ್ತೀನಿ. ಮುಂಬರುವ ಅಕ್ಟೋಬರ್‌ ಒಳಗಡೆ ಮದುವೆ ಆಗ್ತೀನಿ. ನಾನು ಮದುವೆಯಾಗುವ ಹುಡುಗಿ ಯಾರು ಅಂತ ಮಾತ್ರ ಇನ್ನೂ ಗೊತ್ತಿಲ್ಲ. ಪಾರ್ಟನರ್‌ ಫ್ರೆಂಡ್‌ ಆಗಿದ್ದರೆ ಅದೇ ಸ್ವರ್ಗ ಇದ್ದಂತೆ, ಇನ್ನು ಏನೂ ಬೇಕಾಗಿಲ್ಲ. ಜೀವನದಲ್ಲಿ ನಾಲ್ಕು ಫ್ರೆಂಡ್ಸ್‌ ಇರಬೇಕು” ಎಂದು ತ್ರಿವಿಕ್ರಮ್‌ ಅವರು ಹೇಳಿದ್ದಾರೆ.

ಎರಡು ಬ್ರೇಕಪ್‌ ಆಯ್ತು! 
“ನನಗೆ ಇಬ್ಬರು ಎಕ್ಸ್‌ಗಳಿದ್ದಾರೆ, ಅವರಿಗೆ ಮದುವೆಯಾಗಿ ಮಕ್ಕಳಿದ್ದಾರೆ” ಎಂದು ಕೂಡ ತ್ರಿವಿಕ್ರಮ್ ಅವರು ಹೇಳಿದ್ದರು. ಇನ್ನು ನಟಿ ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಜೋಡಿಯನ್ನು ಅನೇಕರು ಇಷ್ಟಪಡುತ್ತಾರೆ.‌ ʼಬಿಗ್‌ ಬಾಸ್‌ ಕನ್ನಡ 11ʼ ಮನೆಯೊಳಗಡೆ ಬಂದ ವಿದ್ಯಾಶಂಕರ ಸರಸ್ವತಿ ಸ್ವಾಮೀಜಿಯವರು ಕೂಡ ಮೋಕ್ಷಿತಾಗೆ ಅಕ್ಟೋಬರ್‌ನಲ್ಲಿ ಮದುವೆ ಆಗುತ್ತೆ ಅಂತ ಹೇಳಿದ್ದರಂತೆ. ಹೀಗಾಗಿ ಈ ಜೋಡಿ ಮದುವೆ ಆಗಲೂಬಹುದು ಎಂದು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ. 

BBK 11: ನಾನು ಗೌತಮಿ ಜಾಧವ್‌ನನ್ನು ಟಾರ್ಗೆಟ್‌ ಮಾಡ್ಲಿಲ್ಲ, ಆ ಟೈಮ್‌ನಲ್ಲಿ ಬಕೆಟ್‌ ಹೇಳಿಲ್ಲ: ಮೋಕ್ಷಿತಾ ಪೈ

ಭವ್ಯಾ ಗೌಡ ಬಗ್ಗೆ ಏನಂದ್ರು? 
ಇನ್ನು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ಮಧ್ಯೆ ಸ್ನೇಹ ಇದೆ. ಇವರಿಬ್ಬರು ಲವ್‌ ಮಾಡುತ್ತಿದ್ದಾರೆ ಅಂತ ಕೆಲವರು ಅಂದುಕೊಂಡಿದ್ದರು. ಈ ಬಗ್ಗೆ ಈ ಹಿಂದೆ ನೀಡಿದಂತಹ ಸಂದರ್ಶನಗಳಲ್ಲಿ ತ್ರಿವಿಕ್ರಮ್‌ ಮಾತನಾಡಿದ್ದು, “ಭವ್ಯಾ ನನ್ನ ಜ್ಯೂನಿಯರ್. ನಾನು ಅವಳಿಗೆ ಯಾವಾಗಲೂ ಸೀನಿಯರ್.‌ ಭವ್ಯಾ ಗೌಡ ನನಗಿಂತ ಚಿಕ್ಕವಳು. ನಾನು ಅವಳನ್ನು ಮದುವೆ ಆಗೋಕೆ ಆಗೋದಿಲ್ಲ. ಭವ್ಯಾ ಗೌಡಗೆ ನಾನು ತಮ್ಮ ಅಂತ ಹೇಳಿಕೊಂಡು ಓಡಾಡ್ತಿದ್ದೆ. ಯಾರೂ ಏನೇ ಅಂದುಕೊಂಡರೂ ಕೂಡ ಅವಳು ನನಗೆ ಜ್ಯೂನಿಯರ್‌ ಅಷ್ಟೇ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ನನ್ನ ಯಶಸ್ಸನ್ನು ಸಂಭ್ರಮಿಸಿದವಳು ಅವಳು ಮಾತ್ರ” ಎಂದು ಹೇಳಿದ್ದರು. 

ಅಂದಹಾಗೆ ಹನುಮಂತ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಗೆದ್ದಿದ್ದಾರೆ. ತ್ರಿವಿಕ್ರಮ್‌ ಅವರು ರನ್ನರ್‌ ಅಪ್‌ ಆಗಿದ್ದಾರೆ. ಸದ್ಯ ಸಿಸಿಎಲ್‌ ಪಂದ್ಯ ಆಡುತ್ತಿರುವ ತ್ರಿವಿಕ್ರಮ್‌ ಅವರು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಸೆ ಹೊಂದಿದ್ದಾರಂತೆ. ನೀವು ಶುಭಾಶಯ ತಿಳಿಸಿ.. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!