
ಟಾಮ್ & ಜೆರ್ರಿ ಆಟ.. ಗಿಲ್ಲಿ ರಘು ಗುದ್ದಾಟ; ರಘು ಅನ್‌ಫಾಲೋ.. ಗಿಲ್ಲಿ ನಟ ಹೇಳಿದ್ದೇನು?
ಈ ಸಾರಿ ಬಿಗ್ ಬಾಸ್ ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನ ಸೆಳೆದಿತ್ತು. ಈ ಸಾರಿಯ ಬಿಗ್ ಬಾಸ್ ಮನೆ ಜಗಳಗಳೂ ಕೂಡ ಸಖತ್ ಸದ್ದು ಮಾಡಿದ್ವು. ಅಷ್ಟೇ ಅಲ್ಲ ಬಿಗ್ ಬಾಸ್ ಮುಗಿದು ತಿಂಗಳುಗಳು ಕಳೆದರೂ ಈ ಬಾರಿಯ ದೊಡ್ಮನೆ ಸ್ಪರ್ಧಿಗಳ ಕಿರಿಕ್ ಮಾತ್ರ ಮುಗೀತಾ ಇಲ್ಲ.
ಬಿಗ್ಬಾಸ್ ಮುಗಿದ್ರೂ ಜಗಳ ಮುಗೀತಿಲ್ಲ.. ಗಿಲ್ಲಿ ನಟನಿಗೆ ಊರು ತುಂಬಾ ದುಷ್ಮನ್..!
ಯೆಸ್ ಮಳೆ ನಿಂತರೂ ಹನಿ ನಿಲ್ಲಲಿಲ್ಲ ಅನ್ನೋ ಹಾಗೆ ಈ ಸಾರಿ ಬಿಗ್ ಬಾಸ್ ಮುಗಿದರೂ ಬಿಗ್ ಬಾಸ್ ಸ್ಪರ್ಧಿಗಳ ನಡುವಿನ ಕಿರಿಕ್ ಮಾತ್ರ ನಿಂತಿಲ್ಲ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ಕಿತ್ತಾಡಿಕೊಂಡಿದ್ದು ಗೊತ್ತೇ ಇದೆ.
ದೊಡ್ಮನೆಯಲ್ಲಿ ಇದ್ದಾಗ ಪರಸ್ಪರ ಜಿದ್ದಿಗೆ ಬಿದ್ದು ಪರಚಾಡಿಕೊಂಡಿದ್ದ, ಅಶ್ವಿನಿ ಚೈತ್ರಾ.. ಆ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಪರಸ್ಪರರ ಮೇಲೆ ಕೆಂಡ ಕಾರಿದ್ರು.
ಇವರಿಬ್ಬರ ಕಿತ್ತಾಟ ಮುಕ್ತಾಯ ಆಯ್ತು ಅನ್ನೋವಷ್ಟರಲ್ಲಿ ಈಗ ರಘು ಅಂಡ್ ಗಿಲ್ಲಿ ಕಿರಿಕ್ ಶುರುವಾಗಿದೆ. ಅಸಲಿಗೆ ಬಿಗ್ ಬಾಸ್ ನಲ್ಲಿ ಗಿಲ್ಲಿ ಮತ್ತು ರಘು ಜೋಡಿಯನ್ನ ಜನರು ತುಂಬಾನೇ ಇಷ್ಟಪಟ್ಟಿದ್ರು.
ಅದ್ರಲ್ಲೂ ರಘುನ ಗಿಲ್ಲಿ ಗೋಳು ಹೋಯ್ದುಕೊಳ್ಳೋದನ್ನ ಜನ ಸಖತ್ ಎಂಜಾಯ್ ಮಾಡಿದ್ರು. ಈ ಇಬ್ಬರನ್ನ ಟಾಮ್ ಜೆರ್ರಿ ಜೊತೆ ಹೋಲಿಕೆ ಮಾಡಿದ್ರು. ಸಾಕಷ್ಟು ಮೀಮ್ಸ್, ಟ್ರೋಲ್ ಕೂಡ ಬಂದಿದ್ವು. ಖುದ್ದು ಕಿಚ್ಚ ವೀಕೆಂಡ್ನಲ್ಲಿ ಇವುಗಳನ್ನ ತೋರಿಸಿ ನಗಾಡಿದ್ರು.
ಆದ್ರೆ ರಘು ಹೊರಗಡೆ ನಕ್ರೂ ಒಳಗಡೆ ಅವರಿಗೆ ಗಿಲ್ಲಿ ಮೇಲೆ ಅಸಮಾಧಾನ ಇರೋದು ಬಹಿರಂಗ ಆಗಿದೆ. ಮನೆಯಿಂದ ಹೊರಬಂದ ಮೇಲೆ ಗಿಲ್ಲಿ ಬಗ್ಗೆ ಬೇಸರದ ಮಾತಾಡಿದ್ದ ರಘು, ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲೂ ಗಿಲ್ಲಿನ ಅನ್‌ಫಾಲೋ ಮಾಡಿದ್ರು.
ರಕ್ಷಿತಾ ಜೊತೆ ಸೇರಿ ಫುಡ್ ವ್ಲಾಗ್ ಮಾಡ್ತಾ ಇರೋ ರಘು, ಗಿಲ್ಲಿ ಜೊತೆ ಮಾತ್ರ ಅಂತರ ಕಾಯ್ದುಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ ಗಿಲ್ಲಿ ಮಾತನಾಡಿಸಿದ್ರೂ ರಘು ಅಷ್ಟಕಷ್ಟೇ ಮಾತನಾಡ್ತಾರೆ.
ಒಟ್ನಲ್ಲಿ ಬಿಗ್ ಬಾಸ್ ಗೆದ್ದ ಗಿಲ್ಲಿ ಜನರ ಮನಸು ಗೆದ್ದರೂ , ಬಿಗ್ ಬಾಸ್ ಮನೆ ಸದಸ್ಯರ ಮನಸು ಮಾತ್ರ ಈಗಲೂ ಗೆಲ್ಲೋದಕ್ಕೆ ಆಗಿಲ್ಲ. ಗಿಲ್ಲಿಗೆ ದುಷ್ಮನ್ ಕಹಾ ಹೈ ಅಂದ್ರೆ.. ಊರ್ ತುಂಬಾ ಹೈ ಅನ್ನೋವಂತೆ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.