ಹೊಸದೊಂದು ವಿಡಿಯೋದಲ್ಲಿ ನಾನು ಸ್ಟುಪ್ಪಿಡ್‌ ಎಂದು ಒಪ್ಪಿಕೊಂಡ ನಿವೇದಿತಾ ಗೌಡ!

Published : Jul 16, 2024, 06:41 PM ISTUpdated : Jul 16, 2024, 06:43 PM IST
ಹೊಸದೊಂದು ವಿಡಿಯೋದಲ್ಲಿ ನಾನು ಸ್ಟುಪ್ಪಿಡ್‌ ಎಂದು ಒಪ್ಪಿಕೊಂಡ ನಿವೇದಿತಾ ಗೌಡ!

ಸಾರಾಂಶ

ಕಿರುತೆರೆ ಸ್ಟಾರ್ ನಿವೇದಿತಾ ಗೌಡ ಹೊಸದೊಂದು ವಿಡಿಯೋ ಹಾಕಿದ್ದು ಇದರಲ್ಲಿ ಸಂಪೂರ್ಣ ಇಂಗ್ಲಿಷ್‌ ನಲ್ಲಿ ಮಾತನಾಡಿದ್ದಾರೆ.

ಚಂದನ್ ಶೆಟ್ಟಿಯಿಂದ ವಿಚ್ಚೇದನ ಪಡೆದು ದೂರವಾಗಿರುವ ನಿವೇದಿತಾ ಗೌಡ ಈಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಗೆಯ ನವನವೀನ ವಿಡಿಯೋವನ್ನು ಹಾಕಿಕೊಳ್ಳುತ್ತಿರುತ್ತಾರೆ. ಇದೀಗ ತನ್ನ ತಮ್ಮ ರಾಹುಲ್ ಜೊತೆಗಿರುವ ವಿಡಿಯೋವೊಂದನ್ನು ಹಾಕಿದ್ದು. ಸಹೋದರರೆಲ್ಲರೂ ಇದೇ ರೀತಿ ಕಿರಿಕಿರಿನಾ!? ಎಂದು ಅಡಿಬರಹ ಬರೆದಿದ್ದಾರೆ. ಸಂಪೂರ್ಣ ಇಂಗ್ಲಿಷ್‌ ನಲ್ಲಿ ಮಾತುಕತೆ ನಡೆದಿತ್ತು ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.

ಲವ್‌ ಬೇರೆ, ಮದುವೆ ಬೇರೆ, ಒಂದೇ ರೂಂನಲ್ಲಿ ಸಂಸಾರ ಆರಂಭಿಸಿದಾಗಲೇ ಎಲ್ಲವೂ ಗೊತ್ತಾಗೋದು: ಚಂದನ್ ಶೆಟ್ಟಿ

ಇಂಗ್ಲಿಷ್ ಹಾಡೊಂದನ್ನು ಹಾಡಲು ನಿವೇದಿತಾ ಟ್ರೈ ಮಾಡುತ್ತಿದ್ದು, ಸಹೋದರ ಬಂದು ತರ್ಲೆ ಮಾಡುತ್ತಿದ್ದಾನೆ. ಇದಕ್ಕೆ ನಿವೇದಿತಾ ಇಲ್ಲಿಂದ ಹೋಗು ಪ್ಲೀಸ್‌ ಎನ್ನುತ್ತಿದ್ದಾರೆ. ನಾನು ಬಾತುರೂಮ್ ಸಿಂಗರ್‌ ಅಲ್ಲ ಆಯ್ತಾ ಎಂದು ನಿವೇದಿತಾ ಹೇಳಿದ್ದಕ್ಕೆ ತಮ್ಮ ನೀನು ಸಿಂಗರೇ ಅಲ್ಲ ಎಂದು ಕಾಲೆಳೆದಿದ್ದಾನೆ.

 ಬಂಗಲೆಯಲ್ಲಿ ಅಗ್ನಿದುರಂತ, ಉಡುಪಿ ಉದ್ಯಮಿ ಸಹಿತ ಸನಾತನ ಸಂಸ್ಕಾರ ರೀಲ್ಸ್ ಮಾಡುತ್ತಿದ್ದ ಬಿಜೆಪಿ ನಾಯಕಿ ಸಾವು!

ತಮ್ಮ ಇದು ಸ್ಟುಪ್ಪಿಡ್‌ ಎಂದಿದ್ದಕ್ಕೆ ಹೌದು ನಾನು ಸ್ಟುಪಿಡ್‌ ಆಯ್ತಾ, ನಾನು ಸರಿ ಆಗುವವರೆಗೆ ಹಾಡುತ್ತಲೇ ಇರುತ್ತೇನೆ ಎಂದಿದ್ದಾರೆ ನಿವೇದಿತಾ. ನನಗೆ ಹಸಿವೆ ಆಗುತ್ತಿದೆ ಏನಾದರೂ ಅಡುಗೆ ಮಾಡು ಎಂದು ತಮ್ಮ ಹೇಳಿದ್ದಕ್ಕೆ ನೀನು ಊಟಕ್ಕೆ ಇನ್ನೊಬ್ಬರನ್ನು ಡಿಪೆಂಡ್ ಆಗಿರುವುದ್ಯಾಕೆ ಎಂದು ಹೇಳಿದ್ದಾರೆ ನಿವೇದಿತಾ.

ನಾನ್ಯಾಕೆ ನೀನು ಹಾಡುವಾಗ ನಿನ್ನ ವಿಡಿಯೋ ಫ್ರೆಮ್‌ ನಲ್ಲಿ ಕಾಣಿಸುತ್ತಿದ್ದೇನೆ ಎಂದು ತಮ್ಮ ರಾಹುಲ್ ತಮಾಷೆ ಮಾಡುತ್ತಿದ್ದು,   ಹೀಗೆ ಅಕ್ಕ-ತಮ್ಮನ ತರಲೆ ತುಂಟಾಟ ಇದರಲ್ಲಿದೆ. ಆದರೆ ಈ ವಿಡಿಯೋ ಬಂದ ಕಮೆಂಟ್‌ ನಲ್ಲಿ 'ಕನ್ನಡ ಕೋಲ್ಲುತ್ತಿರುವವರಿಗೆ ನನ್ನದೊಂದು ನಮಸ್ಕಾರ', ಡವ್ ರಾಣಿ, ಇದಕ್ಕೆ ಗಂಡನ್ ಬಿಟ್ಟಿರೋದು ಅಂತೆಲ್ಲ ಕಮೆಂಟ್‌ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ