ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ಯ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದ್ದು, ಫಾಲ್ಸ್ನಲ್ಲಿ ರೀಲ್ಸ್ ಮಾಡೋಕೆ ಹೋಗಿ ಅವರು ಕೆಳಗೆ ಬಿದ್ದಿದ್ದಾರೆ. ಮುಖದ ಎಡಭಾಗಕ್ಕೆ ಗಾಯವಾಗಿದ್ದು, ಅಭಿಮಾನಿಗಳ ಆತಂಕ ಹೆಚ್ಚಿದೆ.
ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್. ಫಾಲ್ಸ್ಗೆ ಬಂದಿದ್ದ ದೀಪಿಕಾ ಕಾಲು ಸ್ಲಿಪ್ ಆಗಿದೆ. ನೋಡ್ತಾ ನೋಡ್ತಾ ಇದ್ದಂತೆ ದೀಪಿಕಾ ಕೆಳಗೆ ಬಿದ್ದಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೂ ದೀಪಿಕಾ ದಾಸ್ ನೀರಿಗೆ ಬೀಳ್ತಿದ್ದರು. ಅವರು ಕೈ ನೆಲಕ್ಕೆ ಊರಿದ್ದರಿಂದ ತಲೆ ಬಂಡೆಗೆ ಹೊಡೆದಿದೆ. ಇದ್ರಿಂದ ಅವರ ಮುಖಕ್ಕೆ ಗಾಯವಾಗಿದೆ. ಫಾಲ್ಸ್ನಲ್ಲಿ ಜಾರಿ ಬಿದ್ದ ವಿಡಿಯೋವನ್ನು ದೀಪಿಕಾ ದಾಸ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಸುಂದರ ಫಾಲ್ಸ್ (Falls) ನಲ್ಲಿ ಹಿಂದೆ ನೀರು ಬೀಳ್ತಿರೋದನ್ನು ದೀಪಿಕಾ ದಾಸ್ (Deepika Das) ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ನೀವು ನೋಡ್ಬಹುದು. ಒಂದ್ಕಡೆ ನೀರಿದ್ದು, ಇನ್ನೊಂದು ಕಡೆ ಬಂಡೆ ಇದೆ. ಸಣ್ಣ ಕಾಲು ದಾರಿಯಲ್ಲಿ ದೀಪಿಕಾ ನಡೆದು ಬರ್ತಿದ್ದಾರೆ. ಕೈನಲ್ಲಿ ಹೂವನ್ನು ಹಿಡಿದಿದ್ದಾರೆ. ಹಿಂದಿನಿಂದ ಹುಷಾರು ಎನ್ನುವ ಧ್ವನಿ ಬರ್ತಿದೆ. ಆಗ್ಲೇ ದೀಪಿಕಾ ಕೆಳಗೆ ಬಿದ್ದಿದ್ದಾರೆ. ಇದು ಹೊಸ ಟ್ರೆಂಡ್ (Trend) ನಡೆಯುತ್ತಿದೆಯೇ? ಒಂದು ಸೆಕೆಂಡ್ ಎಂದು ದೀಪಿಕಾ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
undefined
ಈಗಿನವರ ಲವ್ ಬ್ರೇಕ್ ಅಪ್ಗೆ ಕಾರಣ ಕೇಳಿದರೆ ಸಿಲ್ಲಿ ಅನ್ಸುತ್ತೆ! ಡಾರ್ಲಿಂಗ್ ಕೃಷ್ಣ ಬೆಸ್ಟ್ ಫ್ರೆಂಡ್ ಯಾರು?
ರೀಲ್ಸ್ ಮಾಡಲು ಹೋಗಿ ದೀಪಿಕಾ ಬಿದ್ದಿದ್ದಾರೆ ಅನ್ನೋದು ಅವರು ಹಾಕಿರೋ ಟ್ಯಾಗ್ಸ್ ನಿಂದ ನೀವು ಪತ್ತೆ ಮಾಡ್ಬಹುದು. ದೀಪಿಕಾ ಈ ವಿಡಿಯೋ ಹಂಚಿಕೊಳ್ತಿದ್ದಂತೆ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಮೇಡಂ ಏನಾಯ್ತು ಅಂತಾ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ದೀಪಿಕಾ ದಾಸ್ ಉತ್ತರ ಕೂಡ ನೀಡಿದ್ದಾರೆ.
ಮುಖದ ಎಡ ಭಾಗಕ್ಕೆ ಗಾಯ : ನಿಮ್ಮ ಮುಖಕ್ಕೆ ಗಾಯವಾಗಿದ್ಯಾ ಎಂದು ಒಬ್ಬರು ಕೇಳಿದ ಪ್ರಶ್ನೆಗೆ ದೀಪಿಕಾ ಯಸ್ ಎಂದಿದ್ದಾರೆ. ಮುಖದ ಎಡ ಭಾಗಕ್ಕೆ ಗಾಯವಾಗಿತ್ತು. ಈಗ ಸುಧಾರಿಸಿಕೊಂಡಿದ್ದೇನೆ. ನಾನು ಫೈನ್ ಅಂತ ದೀಪಿಕಾ ರೀಪ್ಲೆ ಮಾಡಿದ್ದಾರೆ.
ಇದು ನಿಜವಾಗ್ಲೂ ಮಾಡಿದ ವಿಡಿಯೋನಾ ಅಥವಾ ಬೀಳೋಕೆ ಮಾಡಿದ ವಿಡಿಯೋನಾ ಅಂತ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ದೀಪಿಕಾ, ವಿಡಿಯೋ ಮಾಡ್ತಿರುವಾಗ ಬಿದ್ದೆ. ನಿಜವಾಗ್ಲೂ ಬಿದ್ದಿದ್ದು. ಹಾಗಾಗಿ ಮುಂದೆ ವಿಡಿಯೋ ಮಾಡೋಕೆ ಆಗ್ಲಿಲ್ಲ ಎಂದಿದ್ದಾರೆ.
ದೀಪಿಕಾ ದಾಸ್ ಒಂದು ಸೆಕೆಂಡಿನ ವಿಡಿಯೋ ಅಭಿಮಾನಿಗಳಿಗೆ ಸರಿಯಾದ ಸ್ಪಷ್ಟತೆ ನೀಡ್ತಿಲ್ಲ. ಹಾಗಾಗಿ ಅನೇಕ ಬಳಕೆದಾರರು ಫುಲ್ ವಿಡಿಯೋ ಹಾಕಿ ಮೇಡಂ ಎನ್ನುತ್ತಿದ್ದಾರೆ. ಬಿದ್ ಮೇಲೆ ವಿಡಿಯೋ ಮಾಡಿಲ್ಲ ಅಂತ ದೀಪಿಕಾ ದಾಸ್ ಉತ್ತರ ನೀಡಿದ್ದಾರೆ.
ದೀಪಿಕಾ ದಾಸ್ ಅಭಿಮಾನಿಗಳು ಈ ವಿಡಿಯೋ ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. ಏನಾಯ್ತು ಎನ್ನುವ ಪ್ರಶ್ನೆಯ ಸುರಿಮಳೆಯಾಗಿದೆ. ಅನೇಕರು ಇಂಥ ಜಾಗದಲ್ಲಿ ಎಚ್ಚರಿಕೆಯಿಂದ ಇರಬೇಕು ಅಂತಾ ಸಲಹೆ ನೀಡಿದ್ದಾರೆ.
ದೀಪಿಕಾ ದಾಸ್ ಮದುವೆ ಆದ್ಮೇಲೆ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ನಾಗಿಣಿ ನಂತ್ರ ಬಿಗ್ ಬಾಸ್ ನ ಎರಡು ಸರಣಿಯಲ್ಲಿ ಸ್ಪರ್ಧಿಯಾಗಿ ಮಿಂಚಿದ್ದ ದೀಪಿಕಾ, ಪ್ರವಾಸವನ್ನು ಹೆಚ್ಚು ಇಷ್ಟಪಡ್ತಾರೆ. ಆಗಾಗ ದುಬೈಗೆ ಹೋಗಿ ಬರ್ತಿದ್ದ ದೀಪಿಕಾ, ದುಬೈ ಹುಡುಗನನ್ನೇ ಮದುವೆ ಆಗಿದ್ದಾರೆ. ಅವರು ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅಲ್ಲಿ ತಮ್ಮ ಪ್ರವಾಸದ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ.
ಮನೀಷ್ ಮಲ್ಹೋತ್ರಾಗೆ ಲೋಕಲ್ ಡಿಸೈನರ್ ಎಂದ ಹಾಲಿವುಡ್ ನಟಿ ಖೋಲೆ
ದುಬೈನಲ್ಲಿ ಎಂಜಾಯ್ ಮಾಡ್ತಿರುವ ದೀಪಿಕಾ, ಕೆಲ ದಿನಗಳ ಹಿಂದೆ ವಿಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಜೊತೆ ಫೋಟೋ ಪೋಸ್ಟ್ ಮಾಡಿದ್ದರು. ಇದು ಗೇಲ್ ಕ್ಷಣ ಅಂತ ಶೀರ್ಷಿಕೆ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದೀಪಿಕಾ ಥೈಲ್ಯಾಂಡ್ ವಿಡಿಯೋ ಕೂಡ ಹಂಚಿಕೊಂಡಿದ್ದರು. ಆದ್ರೆ ಎಲ್ಲ ವಿಡಿಯೋ, ಫೋಟೋದಲ್ಲಿ ಅವರು ಒಬ್ಬರೇ ಕಾಣಿಸಿಕೊಳ್ತಿದ್ದು, ಅನೇಕರು ಗಂಡ ಎಲ್ಲಿ ಅಂತ ಪ್ರಶ್ನೆ ಮಾಡ್ತಿದ್ದಾರೆ.