ಬಿಗ್ ಬಾಸ್‌ನಿಂದ ಹಣವನ್ನು ಏನ್ ಮಾಡ್ತಾರೆ ರೂಪೇಶ್ ಶೆಟ್ಟಿ? ನಟನ ಮಾತುಗಳನ್ನು ಕೇಳಿ ಜನರು ಶಾಕ್...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಸಿ ಶೋ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ 60 ಲಕ್ಷ ರೂಪಾಯಿ ಮತ್ತು ಟ್ರೋಫಿ ಗಿಟ್ಟಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಿನ್ನರ್‌ಗಳು ಗೆದ್ದಿರುವ ಹಣದಿಂದ ಸಮಾಜ ಸೇವೆ ಮಾಡುವುದಾಗಿ, ಸ್ವಂತ ಮನೆ ಕಟ್ಟಿಸುವುದಾಗಿ ನೂರಾರು ಕನಸುಗಳನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಳ್ಳುತ್ತಾರೆ. ರೂಪೇಶ್ ಗೆದ್ದ ಹಣದಿಂದ ಏನು ಮಾಡುತ್ತಾರೆಂದು ಎಲ್ಲಿಯೂ ಹಂಚಿಕೊಳ್ಳದ ಕಾರಣ ವೀಕ್ಷಕರು ಈ ಪ್ರಶ್ನೆಗೆ ಉತ್ತರವನ್ನು ನಿರೀಕ್ಷೆ ಮಾಡುತ್ತಿದ್ದರು. ರೂಪೇಶ್ ಉತ್ತರ ಕೊಟ್ಟಿದ್ದಾರೆ.
'ಎಲ್ಲರೂ ವಿನ್ನರ್ ಮೊತ್ತ 60 ಲಕ್ಷ ಎಂದು ಹೇಳುತ್ತಿದ್ದಾರೆ ಅದರೆ ಸರ್ಕಾರ ಕಟ್ ಮಾಡಿ ಕೊಡುವುದು ಕೇವಲ 40 ಲಕ್ಷ. ಟ್ಯಾಕ್ಸ್ ಹಣ ತುಂಬಾ ಕಟ್ ಆಗುತ್ತದೆ. ನನ್ನ ಪರ್ಸನಲ್ ಲೈಫ್‌ನ ನಾನು ಮೊದಲು ನೋಡಿಕೊಳ್ಳಬೇಕು ಅರ್ಧ ಮೊತ್ತವನ್ನು ನನಗೆ ಇಟ್ಟಿಕೊಳ್ಳುವೆ. ದೇವರ ಹರಿಕೆಗೆಂದು ಬಹುಷ ನಾನು 5 ಲಕ್ಷ ಹಣ ನೀಡಬೇಕು ಕೊರಗಜ್ಜ ಕೋಲ ಎಲ್ಲಾ ಇದೆ. ಆ ವೇದಿಕೆಯಲ್ಲಿ ಇರುವುದೇ ಒಂದು ಖುಷಿ ಹೀಗಾಗಿ ಫಿನಾಲೆಗೆ ಬಂದ್ರೆ ಅಂತ ಹರಿಕೆ ಹೊತ್ತುಕೊಂಡಿದ್ದೆ'ಎಂದು ರೂಪೇಶ್ ಶೆಟ್ಟಿ ಖಾಸಗಿ ವಾಹಿನಿಯ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನ್ನ ನಂಬಿಕೊಂಡು ಒಂದು ಸರ್ಕಲ್ ಇದೆ ನಾನು 5 ತಿಂಗಳು ಇರದ ಕಾರಣ ಅವರಿಗೆ ತುಂಬಾ ಕಷ್ಟ ಆಗಿರುತ್ತದೆ ಅವರು ಹೇಳಿಕೊಳ್ಳುತ್ತಿಲ್ಲ. ನನ್ನನ್ನು ನಂಬಿ ಸುಮಾರು 2 ವರ್ಷಗಳಿಂದ ನನ್ನ ಜೊತೆ ಹುಡುಗರು ಇದ್ದಾರೆ ಅವರ ಜೀವನ ಚೆನ್ನಾಗಿರಬೇಕು ಅವರಿಗೆ ಏನಾದರೂ ಮಾಡಬೇಕು ಪಾಪ. ನನಗೆ ತುಂಬಾ ಸಾಲಗಳಿದೆ, ಕಲಾವಿದನಿಗೆ ಸಾಲವಿದ್ದರೆ ಜೀವನ ನಡೆಸಲು ಕಷ್ಟವಾಗುತ್ತದೆ. ಸಾಲ ಇದ್ದಾಗ ಒತ್ತಾಯಕ್ಕೆ ಕೆಲಸ ಮಾಡಬೇಕಾಗುತ್ತದೆ. ಅಯ್ಯೋ ಈ ತಿಂಗಳು ಇದನ್ನು ಕಟ್ಟಬೇಕು ಎಂದು ಯಾವುದೋ ಒಂದು ಕೆಲಸ ಮಾಡೋಣ ಅನಿಸುತ್ತದೆ.'ಎಂದು ರಪೇಶ್ ಹೇಳಿದ್ದಾರೆ.
'50% ಹಣವನ್ನು ಸಮಾಜ ಸೇವೆಗೆ ಬಳಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿರುವೆ. ಪ್ರಾಮಾಣಿಕವಾಗಿ ಯಾರಿಗೆ ಹಣ ಯಾರಿಗ ಅಗತ್ಯವಿಗೆ ಅವರಿಗೆ ಸಹಾಯ ಮಾಡುತ್ತೀನಿ ಏಕೆಂದರೆ ಅಷ್ಟು ಹಣ ನನ್ನ ಬಳಿ ಇಲ್ಲ 40 ಲಕ್ಷದಲ್ಲಿ ಅರ್ಧ ಹಣ ಅಂದ್ರೆ ತುಂಬಾ ಕಡಿಮೆನೇ. ಪಾಪದ ಫ್ಯಾಮಿಲಿಗಳಿಗೆ ವಾಸ ಮಾಡಲು ಮನೆ ಮಾಡಿಕೊಡಬೇಕು. ನಮ್ಮ ಕಡೆ ಕಲಾವಿದರು ತುಂಬಾ ಕಷ್ಟದಲ್ಲಿದ್ದಾರೆ ಅವರಿಗೆ ಸಹಾಯ ಮಾಡಬೇಕು. ರಸ್ತೆ ಬದಿಯಲ್ಲಿ ತಾತ ಅಥವಾ ವಯಸ್ಸಾದವರು ಹಣ್ಣು ಅದು ಇದು ಅಂತ ಕೆಲಸ ಮಾಡುತ್ತಿರುತ್ತಾರೆ ಅವರಿಗೆ ಸಹಾಯ ಮಾಡಬೇಕು. ಈ ವಯಸ್ಸಿನಲೂ ಅವರು ಕೆಲಸ ಮಾಡುತ್ತಿರುವುದು ಗಟ್ಟಿಯಾಗಿರುವುದು ಖುಷಿನೇ ಆದರೆ ಅವರಿಗೆ ಸಹಾಯ ಮಾಡಬೇಕು ಎಂದು ಮನಸ್ಸು ಹೇಳುತ್ತದೆ' ಎಂದಿದ್ದಾರೆ.
ಹೊಸ ವರ್ಷ ಅತ್ಯದ್ಭುತವಾಗಿ ಶುರುವಾಗಿದೆ; ರೂಪೇಶ್ ಶೆಟ್ಟಿ ಗೆಲುವನ್ನ ಸಂಭ್ರಮಿಸಿದ ಸಾನ್ಯಾ ಅಯ್ಯರ್
ಸಾನ್ಯಾ-ರೂಪಿ ಘಟನೆಗೆ ಕ್ಲಾರಿಟಿ:
ಆ ಘಟನೆ ನಡೆದಿದ್ದು ಮೂರನೇ ವಾರಕ್ಕೆ. ಒಳಗಡೆ ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ. ಓಟಿಟಿಗೆ ಕಾಲಿಟ್ಟಾಗ ಮೊದಲು ಎರಡು ವಾರ ಕ್ಯಾಮೆರಾ ಇದೆ ಅಂತ conciouss ಆಗಿರುತ್ತೀವಿ ಹೊರಗಡೆ ಜನ ನೋಡುತ್ತಿರುತ್ತಾರೆ ಹಾಗೆ ಹೀಗೆ ಅನ್ನೋದೆಲ್ಲಾ ತಲೆಯಲ್ಲಿ ಇರುತ್ತದೆ. ದಿನ ಸಾಂಗ್ ಶುರುವಾದಾಗ ದಿನ ಆರಂಭವಾಗುತ್ತದೆ ದಿನಚರಿ ಅದಕ್ಕೆ ಹೊಂದಿಕೊಂಡ ನಂತರ ಹೊರಗಡೆ ಒಂದು ಪ್ರಪಂಚ ಇದೆ ಅನ್ನೋದು ಮರೆತು ಬಿಡುತ್ತೀವಿ. ಹೊರಗಡೆಯಿಂದ ಜನರ ನೋಡಲು ಆರಂಭಿಸಿದ್ದಾರೆ ಅನ್ನೋದು ಮರೆತು ಬಿಡುತ್ತೀವಿ, ನನ್ನವರು ಜೊತೆ ಇದ್ದಾಗ ಎಲ್ಲವೂ ಮರೆತು ಬಿಡುತ್ತೀವಿ.ಸುದೀಪ್ ಸರ್ ಆ ಘಟನೆ ಬಗ್ಗೆ ಹೇಳಿದಾಗ ಶಾಕ್ ಆಗಿತ್ತು. ಬಿಗ್ ಬಾಸ್ ಆರಂಭದಲ್ಲಿ ಹೇಳುತ್ತಾರೆ ಟಾಸ್ಕ್ ಸಮಯದಲ್ಲಿ ಬ್ಲೈಂಡ್ಸ್ ಕ್ಲೋಸ್ ಆದಾಗ ಮಾತ್ರ ನಾವು ಕ್ಯಾಪ್ಟನ್ ರೂಮಿನಲ್ಲಿರುವ ಬಾತ್‌ರೂಮ್ ಬಳಸಬಹುದು ಎಂದು. ಅಲ್ಲಿ ನಾವು ಬೆಡ್ ಬಳಸಿದ್ದು ತಪ್ಪು. ಸುದೀಪ್ ಸರ್ ಯಾಕೆ ಖಾರವಾಗಿ ಹೇಳಿದ್ದರು ಅಂದ್ರೆ ನನ್ನ ಫೋಕಸ್ ಆ ಕಡೆ ಇರಬೇಕು ಎಂದು ಅದಾದ ಮುಂದಿನ ವಾರವೂ ನನಗೆ ಫೋಕಸ್ ಎಂದು ಹೇಳಿದ್ದರು. ತುಂಬಾ ಎಮೋಷನಲ್ ವ್ಯಕ್ತಿ ಆಗಿರುವ ಕಾರಣ ನಾನು ಏನ್ ಏನೋ ಯೋಚನೆ ಮಾಡುತ್ತೀನಿ. ನಾನು ಬಂದಿರುವುದು ತುಳು ಬೆಲ್ಟ್‌ನಿಂದ ಅಲ್ಲಿನ ಜನರು ಸಂಪ್ರದಾಯ ಆಚಾರಣೆಗೆ ಎಷ್ಟು ಬೆಲೆ ಕೊಡುತ್ತಾರೆಂದು ನಿಮಗೆ ಗೊತ್ತಿದೆ. ಅಲ್ಲದೆ ನಾವು ಹುಡುಗಿಯರನ್ನು ತುಂಬಾ ಗೌರವದಿಂದ ನೋಡುವ ಜನರು ಅಕೆ ನನ್ನ ಕ್ಲೋಸ್ ಫ್ರೆಂಡ್ ಆಗಿರುವ ಕಾರಣ ನಾನು ಫ್ರೆಂಡ್ಲಿ ಆಗಿ ವರ್ತಿಸುತ್ತಿದ್ದೆವು ಸರ್ ಹೇಳಿದಾಗ ಶಾಕ್ ಆಯ್ತು. ಅಲ್ಲಿ ಗುರೂಜಿ ಜೊತೆ ಮಾತನಾಡುತ್ತಿದ್ದೆವು ಅಷ್ಟೆ.' ಎಂದು ರೂಪೇಶ್ ಹೇಳಿದ್ದಾರೆ.