ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

Published : Jan 09, 2025, 04:15 PM ISTUpdated : Jan 09, 2025, 04:17 PM IST
ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

ಸಾರಾಂಶ

ನಿವೇದಿತಾ ಗೌಡ ಪಾರದರ್ಶಕ ಉಡುಪಿನ ವಿಡಿಯೋ ಹಂಚಿಕೊಂಡು ಟ್ರೋಲ್‌ಗೆ ಒಳಗಾಗಿದ್ದಾರೆ. ಸೂರ್ಯನ ಬೆಳಕಿನಲ್ಲಿ ಒಳ ಉಡುಪು ಕಾಣುವಂತೆ ಪೋಸ್ ಕೊಟ್ಟಿದ್ದಕ್ಕೆ ಟೀಕೆ ಎದುರಿಸುತ್ತಿದ್ದಾರೆ. ವಿಚ್ಛೇದನದ ನಂತರ ಹಾಟ್ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಗೆ ನಕಾರಾತ್ಮಕ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಆದರೆ, ಟೀಕೆಗಳನ್ನು ನಿವೇದಿತಾ ತಲೆಕೆಡಿಸಿಕೊಳ್ಳುತ್ತಿಲ್ಲ.

ನಿವೇದಿತಾ ಗೌಡ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಪ್ರತಿದಿನವೂ ಒಂದಿಲ್ಲೊಂದು ಹಾಟ್​ ಡ್ರೆಸ್​ನಲ್ಲಿ ನಟಿ ಮಿಂಚುತ್ತಲೇ ಇದ್ದಾರೆ. ಕನ್ನಡದ ಉರ್ಫಿ ಜಾವೇದ್​ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸನ್ನಿ ಲಿಯೋನ್​, ರಾಖಿ ಸಾವಂತ್​ ಇತ್ಯಾದಿಯಾಗಿಯೂ ಕಮೆಂಟ್​ ಮಾಡುವಷ್ಟರ  ಮಟ್ಟಿಗೆ ನಟಿಯ ಡ್ರೆಸ್​ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ.  ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.  ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.

ಇದ್ಯಾಕೋ ಇದೇ ಸಾಲಿನಲ್ಲಿ ಕಳೆದ ಕೆಲವು ತಿಂಗಳಿನಿಂದ ನಿವೇದಿತಾ ಸೇರಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಬೇಸರ ಕೂಡ ಇದೆ. ಗಾಯಕ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನಕ್ಕೆ ಬ್ರೇಕ್​ ಹಾಕಿದ ಬಳಿಕ ನಿವೇದಿತಾ ಹಿಗೆ ಏಕೆ ಆದ್ರು ಎಂದು ಅನೇಕ ಮಂದಿ ಬೇಸರಪಟ್ಟುಕೊಂಡಿದ್ದರೆ, ಮತ್ತಿಷ್ಟು ಮಂದಿ ಇನ್ನಿಲ್ಲದಂತೆ ಕಮೆಂಟ್​ ಹಾಕುತ್ತಾರೆ.  ಇದೀಗ ನಟಿ ಪಾರದರ್ಶಕ ಬಟ್ಟೆಯನ್ನು ತೊಟ್ಟು ಒಳ ಉಡುಪು ಕಾಣಿಸುವಂಥ ವಿಡಿಯೋ ಶೇರ್​ ಮಾಡಿದ್ದಾರೆ. ಸೂರ್ಯನಿಗೆ ಮುತ್ತಿಕ್ಕುವುದು (Sun Kiss) ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ಶೇರ್​ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಸೂರ್ಯನ ಬೆಳಕಿನಲ್ಲಿ ಪಾರದರ್ಶಕ ಉಡುಪು ತೊಟ್ಟು ಒಳ ಉಡುಪು ಕಾಣಿಸುವಂತೆ ಪೋಸ್​ ಕೊಟ್ಟಿದ್ದಾರೆ ಎಂದೇ ಕಮೆಂಟಿಗರು ಹೇಳುತ್ತಿದ್ದಾರೆ. ಇದಕ್ಕಾಗಿ ಮಾಮೂಲಿನಂತೆ ನಟಿ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ಬೆಂಕಿ ಜೊತೆ ನಿವೇದಿತಾ ಗೌಡ ಸರಸ: ಪಕ್ಕದ ಯುವಕನ ಮೇಲೆ ನೆಟ್ಟಿಗರ ಕಣ್ಣು! ಯಾರೀತ?

ಗೋಣಿಚೀಲದ ಡ್ರೆಸ್​ ಒಳಗೆ ಏನೋ ಕಾಣೈತೆ ಎಂದೇ ಹಲವರು ಕಮೆಂಟ್​  ಮಾಡಿದ್ದಾರೆ. ಮತ್ತೆ ಹಲವರು ಅದು ಕಾಣಲಿ ಎಂದೇ ಹೀಗೆ ವಿಡಿಯೋ ಮಾಡಿದ್ದು, ನಟಿಯ ಜನ್ಮ ಸಾರ್ಥಕವಾಯ್ತು ಎನ್ನುತ್ತಿದ್ದಾರೆ. ಇನ್ನು ಕೆಲವರು ಇಷ್ಟು ಕೆಟ್ಟದ್ದಾಗಿ ಕಮೆಂಟ್​ ಹಾಕಿದ್ರೂ ನಟಿ ನೋಡಲ್ವಾ ಎಂದು ಪ್ರಶ್ನಿಸಿದರೆ, ಅದಕ್ಕೆ ಉತ್ತರವಾಗಿ ಕೆಲವರು ಇವಳು ಕನ್ನಡ ಮಾತಾಡೋದೇ ಹೆಚ್ಚು, ಇನ್ನು ಕನ್ನಡ ಓದಲು ಬರಬೇಕಲ್ಲಾ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ನಟಿಯ ವಿಡಿಯೋ ಅಂತೂ ಸಕತ್​ ವೈರಲ್​ ಆಗ್ತಿದೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ನಿವೇದಿತಾ ಅವರು ಎಷ್ಟೇ ಒಳ್ಳೆಯ ರೀಲ್ಸ್​  ಮಾಡಿದರೂ, ಗೊಂಬೆಯಂತೆ ಕಾಣಿಸುವ ವಿಡಿಯೋ ಶೇರ್​ ಮಾಡಿದರೂ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಇದ್ದಾರೆ.  ಅದರಲ್ಲಿಯೂ ವಿಚ್ಛೇದನದ ಬಳಿಕ  ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್‌ ಮಟ್ಟಿಗೂ ಬಂದು ನಿಂತಿದ್ದು, ಇದೀಗ ಈ ರೀತಿ ಡ್ರೆಸ್​ ಹಾಕಿಕೊಂಡಿದ್ದಾರೆ.  

 ಆದರೆ ಯಾರು ಏನೇ ಹೇಳಿದ್ರೂ  ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್​ನಲ್ಲಿ ನಿವೇದಿತಾ ಅವರು ಡೀಸೆಂಟ್​ ಆಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್​ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್​ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್​​ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್​ ವಿಡಿಯೋ ಶೇರ್​ ಮಾಡುತ್ತಿದ್ದಾರೆ. 

ಆ ವ್ಯಕ್ತಿಯನ್ನು ಓತಿಕ್ಯಾತಕ್ಕೆ ಹೋಲಿಸಿದ ನಿವೇದಿತಾ ಗೌಡ! ಅವ್ರಿಗಿಂತ ಮೈಮೇಲೆ ಬಿಟ್ಕೊಂಡ ಇದೇ ಲೇಸೆಂದು ಹೇಳೋದಾ ನಟಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ