ರಸ್ತೆ ಅಪಘಾತದಲ್ಲಿ ಹಾಸ್ಯ ನಟ ಅಭಿಜಿತ್- ರಶ್ಮಿಗೆ ತೀವ್ರ ಗಾಯ; ವಿಡಿಯೋ ವೈರಲ್

By Vaishnavi Chandrashekar  |  First Published Jan 9, 2025, 2:53 PM IST

ದ್ವಿಚಕ್ರದ ಟಯರ್ ಪಂಚರ್. ಕಂಟ್ರೋಲ್ ಸಿಗದೇ ಬಿದ್ದು ಮೈಕೈ ಪೆಟ್ಟು ಮಾಡಿಕೊಂಡ ಹಾಸ್ಯ ಜೋಡಿ ಅಭಿ-ರಶ್ಮಿ.


ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೂಲಕ ಕನ್ನಡಿಗರನ್ನು ಮನೋರಂಜಿಸುತ್ತಿದ್ದ ಅಭಿಜಿತ್ ಮತ್ತು ರಶ್ಮಿ ದಂಪತಿಗೆ ರಸ್ತೆ ಅಪಘಾತವಾಗಿದೆ. ಘಟನೆ ನಡೆದು ಮೂರ್ನಾಲ್ಕು ದಿನಗಳಾಗಿದೆ. ಅಪಘಾತ ಆಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ದಂಪತಿಗಳು ಇಬ್ಬರೂ ವಿಡಿಯೋ ಮೂಲಕ ಏನಾಯ್ತು? ಹೇಗಾಯ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕೆಎಂ ದೊಡ್ಡಿಯಿಂದ 3 ಕಿಮೀ. ದೂರದಲ್ಲಿ ಇರುವ ಬ್ಯಾಂಕ್‌ಗೆ ಅಭಿಜಿತ್ ಮತ್ತು ರಶ್ಮಿ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ಇದ್ದ ಕಾರಣ ಹತ್ತಿರವೆಂದು ದ್ವಚಕ್ರ ವಾಹನ ಬಳಸಿದ್ದಾರಂತೆ. ಮಾರ್ಗ ಮಧ್ಯೆ ಹಲುಬಿದ್ದನಹಳ್ಳಿನಲ್ಲಿ ಗಾಡಿಯ ಹಿಂದಿನ ಪಂಚರ್ ಆಗಿದೆ. ಸುಮಾರು 100 ಮೀಟರ್ ಗಾಡಿ ಕಂಟ್ರೋಲ್ ಮಾಡಿದ್ದಾರೆ ಆದರೂ ಕಂಟ್ರೋಲ್ ಸಿಗದ ಕಾರಣ ಗುದ್ದಿದ್ದಾರೆ. ಅಭಿಜಿತ್ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ ಹಾಗೂ ರಶ್ಮಿ ಅವರಿಗೆ ಹಣೆ ಮತ್ತು ಕಣ್ಣು ಸುತ್ತಲು ಗಾಯವಾಗಿದೆ. ಸುಮಾರು ಮಧ್ಯಾಹ್ನ 12.30 ಸಮಯದಲ್ಲಿ ನಡೆದ ಘಟನೆ ಇದಾಗಿದ್ದು, ಕಾಲಿನ ಮೇಲೆ ಗಾಡಿ ಬಿದ್ದಾಗ ಸಹಾಯ ಮಾಡಿ ಎಂದು ಕೂಗಿದರೂ ಅಲ್ಲಿ ಯಾರೂ ಇರಲಿಲ್ಲವಂತೆ. 

Tap to resize

Latest Videos

ಮನೆಯಲ್ಲಿ ತುಂಬಾ ಹಿಂಸೆ ಕೊಟ್ಟು ನನಗೆ ಹುಚ್ಚಿ ಪಟ್ಟ ಕೊಟ್ಟಿದ್ದಾರೆ: ಕಣ್ಣೀರಿಟ್ಟ ರೀಲ್ಸ್‌ ಕ್ವೀನ್ ಕಿಪಿ ಕೀರ್ತಿ

ಅಭಿಜಿತ್ ಧ್ವನಿ ಕೇಳಿ ಅಲ್ಲೇ ಹೋಗುತ್ತಿದ್ದವರು ಸಹಾಯಕ್ಕೆ ಬಂದಿದ್ದಾರೆ. ತಕ್ಷಣವೇ ಆಪ್ತರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಶ್ಮಿ ಕನ್ನಡಕ ಹಾಕಿದ್ದ ಕಾರಣ ಗಾಚು ಹಣೆಗೆ ನಾಟಿ ಹೊಲಿಗೆಗಳು ಹಾಕಿದ್ದಾರೆ. ಇಬ್ಬರು ನೋವಿನಲ್ಲಿ ಇದ್ದರೂ 'ಅಯ್ಯೋ ವಿಡಿಯೋ ಮಾಡಲು ಒಳ್ಳೆ ಕಂಟೆಂಟ್ ಸಿಕ್ಕಿದೆ' ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. 'ದಯವಿಟ್ಟು ಹೆಲ್ಮೆಂಟ್ ಧರಿಸಿ ಪ್ರಯಾಣ ಮಾಡಿ, ಈ ಜೋಡಿಗೆ ಯಾರ ಕಣ್ಣು ಬಿದ್ದಿದೆ ಗೊತ್ತಿಲ್ಲ, ಆದಷ್ಟು ಬೇಗ ಚೇತಿಸಿಕೊಂಡು ಮತ್ತೆ ವಿಡಿಯೋ ಮಾಡಲು ಶುರು ಮಾಡಿ, ಮಕ್ಕಳು ಸುರಕ್ಷಿತವಾಗಿರುವುದನ್ನು ನೋಡಲು ಖುಷಿ ಆಯ್ತು' ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ. 

ಏನ್ ಫ್ರೀ ಅಗಿ ಕೆಲಸ ಮಾಡ್ತಿದ್ದೀನಾ ಹಣ ಎಲ್ಲಿಂದ ಬರುತ್ತೆ ಅಂತ ಕೇಳೋಕೆ? ರಚಿತಾ ರಾಮ್ ಫುಲ್ ಗರಂ

 

click me!