ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಹೊಸ ರೀಲ್ಸ್‌ ಮಾಡಿದ್ರೆ, ಅಭಿಮಾನಿಗಳು ಹೀಗೆಲ್ಲಾ ಹೇಳೋದಾ? 

Published : Feb 11, 2024, 05:50 PM ISTUpdated : Feb 11, 2024, 06:53 PM IST
ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಹೊಸ ರೀಲ್ಸ್‌ ಮಾಡಿದ್ರೆ, ಅಭಿಮಾನಿಗಳು ಹೀಗೆಲ್ಲಾ ಹೇಳೋದಾ? 

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಹೊಸ ರೀಲ್ಸ್‌ ಮಾಡಿದ್ರೆ, ಅಭಿಮಾನಿಗಳು ಹೀಗೆಲ್ಲಾ ಹೇಳೋದಾ?   

ಇತ್ತೀಚಿಗೆ ಹೆಚ್ಚಿನ  ಹುಡುಗಿಯರು ಫ್ಯಾಷನ್​ ಹೆಸರಿನಲ್ಲಿ ಹೆಚ್ಚಾಗಿ ಷಾರ್ಟ್ಸ್​, ಮಿನಿ ಸ್ಕರ್ಟ್​ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಸೈಡ್‌ ಸ್ಲಿಟ್‌ ಡ್ರೆಸ್‌ ಹಾಕಿಕೊಂಡು ತೊಡೆ ತೋರಿಸುವುದು ಇಂದು ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಸಿನಿಮಾ ತಾರೆಯರನ್ನು ನೋಡಿ ಧಾರಾಳ ದೇಹ ಪ್ರದರ್ಶನ ಮಾಡುವುದು ಎಂದರೂ ಹಲವರಿಗೆ ಇನ್ನಿಲ್ಲದ ಖುಷಿ. ಈ ರೀತಿಯ ಬಟ್ಟೆ ಧರಿಸಿದರೆ ತಾವೂ ಸೆಲೆಬ್ರಿಟಿ ಎನಿಸುತ್ತದೆಯೋ ಏನೋ, ಒಟ್ಟಿನಲ್ಲಿ ಬಟ್ಟೆಯ ವಿಷಯದಲ್ಲಿ ಹಲವು ಹುಡುಗಿಯರು ಎಲ್ಲಾ ಮಿತಿಗಳನ್ನೂ ಮೀರುತ್ತಿದ್ದಾರೆ. ಇದು ಸಾಮಾನ್ಯ ಜನರ ಮಾತಾದರೆ ಇನ್ನು ನಟಿಯರ ವಿಷಯ ಹೇಳುವುದೇ ಬೇಡ ಬಿಡಿ. ಕೆಲವರಿಗೆ ಇಂಥ ಬಟ್ಟೆಗಳು ಯಾವುದೇ ರೀತಿಯಲ್ಲಿ ಅಸಹ್ಯ ಎನಿಸದಿದ್ದರೂ, ಕೆಲವರು ಇಂಥ ಬಟ್ಟೆ ಧರಿಸಿದಾಗ ವಾಕರಿಕೆ ಬರುವುದೂ ಉಂಟು. ಆದರೆ ಬಿಗ್​ಬಾಸ್ ಖ್ಯಾತಿಯ ನಟಿ ನಿವೇದಿತಾ ಯಾವುದೇ ರೀತಿಯ ತುಂಡುಡುಗೆ ಹಾಕಿದರೂ ಆಕೆಗೆ ಒಪ್ಪುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಇತ್ತೀಚೆಗೆ ನಿವೇದಿತಾ ಗೌಡ ಹೆಚ್ಚಾಗಿ ಷಾರ್ಟ್ಸ್​ ಧರಿಸಿ ರೀಲ್ಸ್​ ಮಾಡುತ್ತಾರೆ.

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ನೆಲದ ಮೇಲೆಯೇ ಅನ್ನಪ್ರಸಾದ ಸ್ವೀಕರಿಸಿದ ಡ್ರೋನ್​ ಪ್ರತಾಪ್​: ಆಹಾ! ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್​

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.   ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 


Don't Go Insane ಎನ್ನುವ ಇಂಗ್ಲಿಷ್‌ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಕೆಂಪು ಸೈಡ್‌ ಸ್ಲಿಟ್‌ನಲ್ಲಿ ನಟಿ ಎಂದಿನಂತೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಸೊಂಟ ಬಳಕಿಸುತ್ತಾ ರೀಲ್ಸ್‌ ಮಾಡುತ್ತಿದ್ದಾರೆ. ಪ್ರತಿ ಸಲ ಇಂಗ್ಲಿಷ್‌ ಹಾಡಿಗೆ ಬೇಸರ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳು ಈ ಬಾರಿ ಸ್ವಲ್ಪ ಗರಂ ಆದಂತೆ ಕಾಣುತ್ತಿದೆ. ಅಭಿಮಾನಿಯೊಬ್ಬ ಗರಂ ಆಗಿ ಕೂಡ ಕಮೆಂಟ್‌ ಮಾಡಿದ್ದಾರೆ. ನಟಿಯರು ಧರಿಸುವ ಇಂಥ ಬಟ್ಟೆಗಳ ಬಗ್ಗೆ ಆಗಾಗ್ಗೆ ಅಪಸ್ವರಗಳು ಕೇಳಿ ಬರುವುದು ಉಂಟು. ಇದೀಗ ನಿವೇದಿತಾ ವಿರುದ್ಧ ಈ ರೀತಿ ಕಮೆಂಟ್‌ ಮಾಡಲಾಗಿದೆ. ಇನ್ನು ಹಲವರು ಹಾಟ್‌ ಬ್ಯೂಟಿ ಎಂದು ಹೊಗಳಿದ್ದರೆ, ನಟಿಯ ತೊಡೆಯ ಬಗ್ಗೆಯೂ ಒಂದಿಷ್ಟು ಮಂದಿ ಕಮೆಂಟ್‌ನಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಟ್ರೋಲ್‌ ಮೂಲಕವೇ ನಟಿ ಇನ್ನಷ್ಟು ಖ್ಯಾತಿ ಪಡೆಯುತ್ತಿದ್ದಾರೆ. 

ದಿನವೂ ಸಪ್ತಸಾಗರ ದಾಟಿ ಭಾವಿ ಪತ್ನಿಯನ್ನು ಮೀಟ್‌ ಆಗಲು ಹೋಗ್ತಿದ್ರಂತೆ ‘ತಾಂಡವ್‌‘! ಅವರ ಬಾಯಿಂದ್ಲೇ ವಿಷ್ಯ ಕೇಳಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಮತ್ತೆ‌ ಭೂಮಿಕಾ ಪ್ರಗ್ನೆಂಟ್; ಮಗಳಿಂದಲೇ ಗೌತಮ್‌ ದಿವಾನ್‌ಗೆ ಅಪಾಯ; ಸುಳಿವು ಸಿಕ್ತು
ಮೊಬೈಲ್​ನಲ್ಲಿ ಬಂದ ​ಸೌಂಡ್​ ಕೇಳಿ ​ ಬ್ಲಾಸ್ಟ್ ಆಯ್ತಂತ ಜೀವನೇ ಹಾರೋಯ್ತು - Bigg Boss ಮಲ್ಲಮ್ಮ ಏನ್​ ಹೇಳಿದ್ರು ಕೇಳಿ