ಬಿಗ್‌ಬಾಸ್ ಮನೇಲಿ ರಾಗಿ ಮುದ್ದೆ ಮಾಡಿ ವಿವಾದ ಎಳೆದುಕೊಂಡ ಡ್ರೋನ್ ಪ್ರತಾಪ್ ಈಗ ಉಪ್ಸಾರ್ ಸ್ಪೆಷಲಿಸ್ಟ್ ಆಗ್ಬಿಟ್ರಾ?

By Suvarna News  |  First Published Apr 24, 2024, 5:01 PM IST

ಬಿಗ್‌ಬಾಸ್‌ನಲ್ಲಿ ಇದ್ದಬದ್ದ ಹಿಟ್ಟನ್ನೆಲ್ಲ ಸೇರಿಸಿ ರಾಗಿ ಮುದ್ದೆ ಮಾಡಿ ತಗಲಾಕಿಕೊಂಡಿದ್ದ ಡ್ರೋನ್‌ ಪ್ರತಾಪ್ ಇದೀಗ ಉಪ್ಸಾರ್ ಮಾಡೋದಕ್ಕೆ ಬಂದಿದ್ದಾರೆ. ಎಲ್ಲೆಲ್ಲೂ ಅವರು ಉಪ್ಸಾರ್ ಮಾಡೋದು ನೋಡಿ ಡ್ರೋನ್ ಪ್ರತಾಪ್ ಉಪ್ಸಾರ್ ಪ್ರತಾಪ್ ಆಗ್ತಾರ ಅಂತ ಕೇಳ್ತಿದ್ದಾರೆ ಫ್ಯಾನ್ಸ್. 


ಡ್ರೋನ್ ಪ್ರತಾಪ್ ಅವರ ಪ್ರತಿಭೆ ಒಂದಾ ಎರಡಾ? ಡ್ರೋನ್ ಹಾರ್ಸೋದ್ರಿಂದ ಹಿಡಿದು ಮುದ್ದೆ ಮಾಡೋ ತನಕ ಅವರು ಸಕಲ ಕಲಾ ವಲ್ಲಭ ಅನಿಸಿಕೊಂಡಿದ್ದಾರೆ. ಇಂಥಾ ಡ್ರೋನ್ ಪ್ರತಾಪ್ ಸದ್ಯ ಉಪ್ಸಾರ್ ಮಾಡ್ತೀನಿ ಅಂತ ಹೊರಟಿದ್ದಾರೆ. ಆ ಪ್ರೋಮೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದೆ. ಡ್ರೋನ್ ಪ್ರತಾಪ್ ಅಂದಮೇಲೆ ಏನೋ ಎಡವಟ್ಟು ಇಲ್ಲದೆ ಇದ್ದರೆ ಮಜಾ ಇರಲ್ಲ. ಈ ಶೋನಲ್ಲಿ ಡ್ರೋನ್ ಪ್ರತಾಪ್ ಮಾಡಿರೋ ಉಪ್ಸಾರ್ ನೋಡಿ ಅಡುಗೆ ಎಕ್ಸ್‌ಪರ್ಟ್ ಹೆಂಗಸರು ತಲೆ ತಲೆ ಜಜ್ಕೊಂಡ್ರೆ ಡ್ರೋನ್ ಅವರ ವೀರಾಭಿಮಾನಿಗಳು ತಮ್ಮ ಹೀರೋಗೆ ಡ್ರೋನ್ ಪ್ರತಾಪ್ ಅನ್ನೋ ಟೈಟಲ್ ಹೋಗಿ ಉಪ್ಸಾರ್ ಪ್ರತಾಪ್ ಅನ್ನೋ ಟೈಟಲ್ ಎಲ್ಲಿ ಬಂದ್ಬಿಡುತ್ತೋ ಅಂತ ತಲೆ ಕೆಡಿಸಿಕೊಂಡು ಕೂತಿದ್ದಾರೆ.

ಸ್ವಂತ ಮನೆ ಕಟ್ಟಿಸಿ ಇದ್ದ ಸ್ವಲ್ಪ ದಿನಕ್ಕೆ ಮಾರಿಬಿಟ್ಟೆ, ಯಾರೊಂದಿಗೂ ಹೇಳಿಕೊಂಡಿಲ್ಲ: ಪಾಪ ಪಾಂಡು ಚಿದಾನಂದ ಭಾವುಕ

Tap to resize

Latest Videos

ಈ ಹಿಂದೆ ;ಬಿಗ್ ಬಾಸ್‌’ ಮನೆಯಲ್ಲಿ ರಾಗಿ ಮುದ್ದೆ ಮಾಡಿದ್ದ ಪ್ರತಾಪ್ ಆ ಬಳಿಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಅಡುಗೆಗೂ ಪ್ರತಾಪ್‌ಗೂ ಯಾಕೋ ಆಗ್ಬರಲ್ವೇನೋ ಅಂತ ಜನ ಮಾತಾಡ್ಕೊಳ್ಳೋ ಹೊತ್ತಿಗೆ ಬಿಗ್‌ಬಾಸ್ ರನ್ನರ್‌ಅಪ್ ಆಗಿ ಪ್ರತಾಪ್ ಹೊರಹೊಮ್ಮಿದರು. ಸಾಕಷ್ಟು ಶೋಗಳಲ್ಲೂ ಮಿಂಚಿದರು. ಇದೀಗ ಡ್ರೋನ್ ಪ್ರತಾಪ್ ಬೆಳ್ಳುಳ್ಳಿ ಕಬಾಬ್ ಚಂದ್ರು ಹಾಗೂ ಜಾಹ್ನವಿ ನಡೆಸಿಕೊಡುತ್ತಿರುವ ‘ಸವಿರುಚಿ’ ಕಾರ್ಯಕ್ರಮದಲ್ಲಿ ಅಪ್ಪಟ ಮಂಡ್ಯ ಶೈಲಿಯಲ್ಲಿ ಮುದ್ದೆ ಉಪ್ಸಾರು ಮಾಡಿದ್ದಾರೆ.ಈ ಹಿಂದೆ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಹಾಗೂ ತಾಯಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಮುದ್ದೆ ಮಾಡಿ ತಾಯಿಗೆ ತಿನ್ನಿಸಿದ್ದರು ಡ್ರೋನ್ ಪ್ರತಾಪ್.

ಬಿಗ್ ಬಾಸ್’ ಮನೆಯಿಂದ ಹೊರಗೆ ಬರುತ್ತಿದ್ದ ಹಾಗೆ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಸ್ಪರ್ಧಿಸಿದರು. ಆರಂಭದ ಕೆಲ ಸಂಚಿಕೆಗಳಲ್ಲಿ ಮಾತ್ರ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದರು. ಅದಾದ ಬಳಿಕ ‘ಗಿಚ್ಚಿ ಗಿಲಿಗಿಲಿ’ ವೇದಿಕೆಯಿಂದ ಡ್ರೋನ್ ಪ್ರತಾಪ್ ನಾಪತ್ತೆಯಾಗಿದ್ದರು. ಕಳೆದ ವಾರ ‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಗಿಚ್ಚಿ ಗಿಲಿಗಿಲಿ’ ಮಹಾಮಿಲನದ ಮಹಾಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದರು.

'ಬಿಗ್ ಬಾಸ್’ ಮನೆಯೊಳಗೆ ಕಾಲಿಡುವ ಮುನ್ನ ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ (Social Media Troll) ಆಗುತ್ತಿದ್ದರು. ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಮೇಲೆ ಡ್ರೋನ್ ಪ್ರತಾಪ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಡ್ರೋನ್ ಪ್ರತಾಪ್‌ಗೆ ಪಾಸಿಟಿವ್ ಇಮೇಜ್ ಬಿಲ್ಡ್ ಆಯ್ತು. ಡ್ರೋನ್ ಪ್ರತಾಪ್‌ಗೆ ತಂದೆ, ತಾಯಿ, ಫ್ಯಾಮಿಲಿ ಹತ್ತಿರವಾದರು. ಜನರ ವೋಟ್‌ಗಳಿಂದಲೇ ‘ಬಿಗ್ ಬಾಸ್ ಕನ್ನಡ 10’ ರನ್ನರ್ ಅಪ್ ಆದರು ಡ್ರೋನ್ ಪ್ರತಾಪ್.

ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು... ಅಂತ ಸುಮ್ನೆ ಹೇಳೋದಾ ಹಿರಿಯರು?

ಇದೀಗ ಉಪ್ಸಾರ್ ಮಾಡ್ತೀನಿ ಅಂತ 'ಸವಿರುಚಿ' ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ನೀನ್ ಮಾಡ್ತಿರೋದು ಉಪ್ಸಾರ್ ಅಲ್ವೇ ಅಲ್ಲ ಕಣಪ್ಪಾ. ಹೀಗೆಲ್ಲ ಏನೇನೋ ಮಾಡಿ ಉಪ್ಸಾರ್ ಮರ್ಯಾದೆ ತೆಗೀಬೇಡ' ಅಂತ ಒಂದಿಷ್ಟು ಹೆಂಗಸರು ಪ್ರತಾಪನ ಕಿವಿ ಹಿಂಡಿದ್ದಾರೆ. ಇನ್ನೂ ಕೆಲವರು, 'ವಿಜ್ಞಾನಿಯನ್ನು ಕರ್ಕೊಂಡು ಬಂದು ಅಡುಗೆ ಮಾಡಕ್ಕೆ ಕೂರ್ಸಿದ್ದೀರಾ?' ಅಂತ ಕೇಳಿದ್ದಾರೆ. 'ಉಪ್ಸಾರಿಗೆ ಉಪ್ಪೇ ಹಾಕಿಲ್ವಲ್ಲೊ ಪ್ರತಾಪ?' ಅಂತ ಒಂದಿಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಸೋಮವಾರದಿಂದ ಶನಿವಾರ ಮಧ್ಯಾಹ್ನ ೧೨ಕ್ಕೆ ಈ ಕಾರ್ಯಕ್ರಮ ಪ್ರಸಾರ ಆಗುತ್ತೆ. ಡ್ರೋನ್ ಪ್ರತಾಪ್ ಮಾಡೋ ಉಪ್ಸಾರ್ ಅನ್ನು ಜನ ಕುತೂಹಲಭರಿತ ಕಣ್ಣಲ್ಲಿ ನೋಡಲು ಕಾತರರಾಗಿದ್ದಾರೆ.

click me!