
ನಟಿ ನಿವೇದಿತಾ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ ಒಂದೇ ದಿನದಲ್ಲಿ ಡಿವೋರ್ಸ್ ಪಡೆದು ಎಲ್ಲರಿಗೂ ಶಾಕ್ ಹುಟ್ಟಿಸಿದವರು. ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಷಯ ಎಲ್ಲೆಡೆ ವೈರಲ್ ಆಗುತ್ತಲೇ ಅವರು ಡಿವೋರ್ಸ್ ಪಡೆದು ಆಗಿಹೋಗಿತ್ತು. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅಡಿಯಂತೆ ಯಾವುದೇ ಗಲಾಟೆ ಇಲ್ಲದೇ, ಪರಸ್ಪರ ಹೊಂದಾಣಿಕೆ ಮೇರೆಗೆ ಯಾವುದೇ ರೀತಿಯ ಕಚ್ಚಾಟಗಳು ಇಲ್ಲದಂತೆ ವಿಚ್ಛೇದನ ಪಡೆದು ಒಂದು ಕಡೆ ಎಲ್ಲರಿಗೂ ಮಾದರಿಯಾದರೂ, ಇವರಿಬ್ಬರ ಡಿವೋರ್ಸ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಂತೂ ನಿಜ. ಇದೀಗ ಕಿರಿಕ್ ಕೀರ್ತಿಯವರ ಯೂಟ್ಯೂಬ್ ಚಾನೆಲ್ಗೆ ಕೊಟ್ಟಿರುವ ಸಂದರ್ಶನದಲ್ಲಿ ಚಂದನ್ ಶೆಟ್ಟಿಯವರು ಡಿವೋರ್ಸ್ ಕೊಟ್ಟಿರುವುದು ಯಾರಿಗೂ ಗೊತ್ತಾಗಬಾರದು ಎಂದು ಮಾಡಿದರೂ ಆ ದಿನ ಆಗಿದ್ದೇ ಬೇರೆ ಎಂಬ ವಿಷಯವನ್ನು ವಿಸ್ತಾರವಾಗಿ ಹೇಳಿದ್ದಾರೆ.
ಅಷ್ಟಕ್ಕೂ ಈ ಜೋಡಿ ಮೈಸೂರು ದಸರಾ ವೇದಿಕೆಯಲ್ಲಿ ಎಲ್ಲರ ಎದುರು ಪ್ರಪೋಸ್ ಮಾಡುವ ಮೂಲಕ ವಿವಾದ ಸೃಷ್ಟಿಸಿ ಮದುವೆಯಾಗಿತ್ತು. ಆದರೆ ವಿಚ್ಛೇದನವನ್ನು ಮಾತ್ರ ಸೈಲೆಂಟಾಗಿ ಮಾಡುವ ಪ್ಲ್ಯಾನ್ ಮಾಡಿತ್ತು. ಬಹುಶಃ ಯಾರಿಗೂ ತಿಳಿಯದಂತೆ ಡಿವೋರ್ಸ್ ಆಗುವ ಸಾಧ್ಯತೆಯೂ ಇತ್ತು. ಏಕೆಂದರೆ ಅದು ಕೆಲವೇ ಗಂಟೆಗಳಲ್ಲಿ ನಡೆದಿದ್ದ ಘಟನೆ. ಆದರೆ ಇವರಿಬ್ಬರ ಡಿವೋರ್ಸ್ ವಿಷಯ ಕ್ಷಣ ಮಾತ್ರದಲ್ಲಿ ಇಡೀ ಕರ್ನಾಟಕಕ್ಕೆ ಹರಡಿ, ಇತರ ರಾಜ್ಯಗಳಲ್ಲಿ ಇರುವ ಅಭಿಮಾನಿಗಳಿಗೂ ಶಾಕ್ ಕೊಟ್ಟುಬಿಟ್ಟಿತು. ಇದು ಆಗಿದ್ದು ಹೇಗೆ ಎಂಬ ಬಗ್ಗೆ ಚಂದನ್ ಶೆಟ್ಟಿಯವರು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಚಂದನ್ ಶೆಟ್ಟಿ ಮತ್ತೊಂದು ಮದ್ವೆಯಾಗ್ತಿದ್ದಾರಾ? ಕಾರಿನ ವಿಷಯ ಹೇಳುತ್ತಲೇ ಮನದಾಳದ ಮಾತು ಬಿಚ್ಚಿಟ್ಟ ಗಾಯಕ
'ನಿಜಕ್ಕೂ ಸೈಲೆಂಟ್ ಆಗಿ ಯಾರಿಗೂ ತಿಳಿಯದಂತೆ ಡಿವೋರ್ಸ್ ಮಾಡಿಕೊಳ್ಳೋಣ ಎಂದುಕೊಂಡಿದ್ವಿ. ಆದರೆ ಕೋರ್ಟ್ನಲ್ಲಿ ಬೇರೆ ಕೇಸ್ ವಿಚಾರಣೆ ನೋಡಲು ಬಂದಿದ್ದ ಪತ್ರಕರ್ತರು ಇದ್ದರು. ನಾವಿಬ್ಬರೂ ಜೊತೆಯಾಗಿ ಫ್ಯಾಮಿಲಿ ಕೋರ್ಟ್ಗೆ ಬಂದದ್ದನ್ನು ಅವರು ನೋಡಿ ಡೌಟ್ ಬಂದಿತು. ನಂತರ ಓಪನ್ ಕೋರ್ಟ್ನಲ್ಲಿಯೇ ಇದರ ವಿಚಾರಣೆ ನಡೆಯುವ ಕಾರಣ, ಅದು ಅವರಿಗೆ ಗೊತ್ತಾಗಿ ಹೋಯಿತು. ಬಹುಶಃ ಆ ದಿನ ಅಲ್ಲಿ ಪತ್ರಕರ್ತರು ಇಲ್ಲದೇ ಹೋಗಿದ್ದರೆ ಸೈಲೆಂಟ್ ಆಗಿಯೇ ಡಿವೋರ್ಸ್ ಆಗಿರುತ್ತಿತ್ತು' ಎಂದಿದ್ದಾರೆ. ಆದರೆ ವಿಚ್ಛೇದನದ ವಿಷಯ ತಿಳಿಯುತ್ತಿದ್ದಂತೆಯೇ ಹಲವರು ತಮ್ಮನ್ನು ವಿಚಾರಿಸಿದ್ದು, ಕೆಲವರು ತಮ್ಮ ಬೆಂಬಲಕ್ಕೆ ನಿಂತಿದ್ದು ಎಲ್ಲವನ್ನೂ ಸ್ಮರಿಸಿಕೊಂಡಿದ್ದಾರೆ ಚಂದನ್.
ಇದೇ ಷೋನಲ್ಲಿ ತಮಗೆ ಮತ್ತೊಂದು ಮದ್ವೆಯಾಗುವ ಪ್ಲ್ಯಾನ್ ಕುರಿತು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೂ ಮುನ್ನ ರ್ಯಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿಯೂ ಚಂದನ್ ಶೆಟ್ಟಿ ಹಲವು ವಿಷಯ ಮಾತನಾಡಿದ್ದರು. ಕೋವಿಡ್ ಸಮಯದಲ್ಲಿ ದುಡ್ಡನ್ನು ಹೇಗೆ ಮ್ಯಾನೇಜ್ ಮಾಡುವುದು ಎನ್ನುವುದನ್ನು ಕಲಿತೆ. ನಾನು ಮಾಡಿದ ಪ್ರಾಜೆಕ್ಟ್‌ಗಳಿಂದ ತುಂಬಾ ಸಕ್ಸಸ್ ಸಿಗುತ್ತದೆ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಕೋವಿಡ್ ಬಂದು ಬರಸಿಡಿಲು ಬಡಿಯಿತು. ಆಗಷ್ಟೇ ನನ್ನ ಮದುವೆಯಾಯಿತು. ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಮಾಡಿಬಿಟ್ಟೆ ಎನ್ನುತ್ತಲೇ ಜೀವನದಲ್ಲಿ ಮದುವೆ ಮತ್ತು ಹಣದ ಹೊಂದಾಣಿಕೆ ಕುರಿತು ಮಾತನಾಡಿದ್ದರು.
ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್... ಚಂದನ್ ಶೆಟ್ಟಿ ಮನದಾಳದ ಮಾತು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.