ನಿರ್ಬಂಧಿತ ಪ್ರದೇಶದಲ್ಲಿ ಅದಿತಿ ಪ್ರಭುದೇವ ಫೋಟೋಶೂಟ್! ನಟಿಯ ಕಾಲೆಳೆಯುತ್ತಿರೋ ನೆಟ್ಟಿಗರು

By Suchethana D  |  First Published Jun 23, 2024, 3:36 PM IST

ನಿರ್ಬಂಧಿತ ಪ್ರದೇಶದಲ್ಲಿ  ಅದಿತಿ ಪ್ರಭುದೇವ ಫೋಟೋಶೂಟ್!  ನಟಿಯ ಕಾಲೆಳೆಯುತ್ತಿರೋ ನೆಟ್ಟಿಗರು
 


ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಈಗ ಎರಡೂವರೆ ತಿಂಗಳ ಮಗುವಿನ ಅಮ್ಮ. ಇದೇ ಏಪ್ರಿಲ್​ 4ರಂದು ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿ. ಡೆಲಿವರಿಯ ಅಂತಿಮ ದಿನಗಳವರೆಗೂ ಸಕತ್​ ಆ್ಯಕ್ಟೀವ್​ ಆಗಿರೋ ನಟಿ, ಸದ್ಯ ಮಗು ಹುಟ್ಟಿದ ಎರಡೇ ತಿಂಗಳಿನಲ್ಲಿ ಮತ್ತೆ ಫೀಲ್ಡ್​ಗೆ ಇಳಿದಿದ್ದಾರೆ. ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್​, ಅಡುಗೆ ಕುರಿತು ವಿಡಿಯೋ ಶೇರ್​ ಮಾಡುತ್ತಿದ್ದರು.  ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು. ಗರ್ಭಿಣಿಯರಿಗೆ  ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು.  ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ. 

ಇದೀಗ ನಟಿಯ ಭರ್ಜರಿ ಫೋಟೋಶೂಟ್​ ನಡೆದಿದೆ. ಮಗುವಾದ ಮೇಲೆ ಸಹಜವಾಗಿ ಮಹಿಳೆಯರು ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಯೋಗ, ಧ್ಯಾನದ ಮೂಲಕ ತಮ್ಮ ಆರೋಗ್ಯ ಮತ್ತು ದೇಹವನ್ನು ಸರಿಯಾಗಿ ಸಮದೂಗಿಸಿಕೊಂಡು ಹೋಗಿರುವ ನಟಿ ಅದಿತಿ ಇನ್ನೂ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಈ ಫೋಟೋಶೂಟ್​ನಲ್ಲಿ ಮುದ್ದಾಗಿ ಕಾಣ್ತಿರೋ ನಟಿಯ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಆದರೆ ನಟಿ ಎಂಟ್ರಿ ರಿಸ್ಟ್ರಿಕ್ಟೆಡ್​ (ಪ್ರವೇಶ ನಿರ್ಬಂಧಿಸಲಾಗಿದೆ ) ಬೋರ್ಡ್​ ಇದೆ. ಇದನ್ನು ನೋಡಿ ಹಲವರು ನಟಿಯ ಕಾಲೆಳೆಯುತ್ತಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ನೀವೇನು ಮಾಡಲು ಹೋಗಿರುವಿರಿ ಎಂದು ಕೆಲವರು ಪ್ರಶ್ನಿಸಿದರೆ, ಇಂಥ ಪ್ರದೇಶದಲ್ಲಿ ಫೋಟೋಶೂಟ್​ಗೆ ಅವಕಾಶ ಕೊಟ್ಟವರು ಯಾರು ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಚಿಕ್ಕ ಪಾಪುವನ್ನು ಮನೆಯಲ್ಲಿ ಬಿಟ್ಟು ಈ ರೀತಿ ಫೋಟೋಶೂಟ್​ ಎಂದೆಲ್ಲಾ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. 

Tap to resize

Latest Videos

ಗಂಡನ ಜೊತೆ ಮದ್ವೆಯಾಗಲು ರೆಡಿಯಾದ ಶ್ರೇಷ್ಠಾಳಿಗಾಗಿ ಹೂವಿನ ಹಾಸಿಗೆ ಸಿದ್ಧಪಡಿಸ್ತಿರೋ ಭಾಗ್ಯ!

ಅಷ್ಟಕ್ಕೂ, ನಟಿಯ ಬಗ್ಗೆ ಇದಾಗಲೇ ಹಲವರಿಗೆ ಅಸಮಾಧಾನವಿದೆ. ಇದಕ್ಕೆ ಕಾರಣ, ಎರಡು ತಿಂಗಳ ಮಗುವನ್ನು ಬಿಟ್ಟು ಅದಿತಿಯವರು ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದು.  ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್​ನಲ್ಲಿ  ಸೃಜನ್​ ಲೋಕೇಶ್​ ಮತ್ತು ತಾರಾ ಅನುರಾಧ ಅವರ ಜೊತೆ ಅದಿತಿ  ತೀರ್ಪುಗಾರರಾಗಿದ್ದಾರೆ.  ಇದಕ್ಕಾಗಿ  ಅಭಿಮಾನಿಗಳು ಇಷ್ಟು ಚಿಕ್ಕ ವಯಸ್ಸಿನ ಪಾಪುವನ್ನು ಬಿಟ್ಟು ಬಂದಿರುವುದಕ್ಕೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.  

ಕೊನೆಗೆ ನಟಿ,  ಉತ್ತರದ ಮೂಲಕ ಸಮಾಧಾನ ಹೇಳಿದ್ದರು. ಮದುವೆಯಾದ ಮೇಲೆ ಜೀವನದ ಬದಲಾವಣೆ ಆಗಿದ್ದು ನಿಜ. ಆದ್ರೆ ಅಮ್ಮನಾದ ಮೇಲಂತೂ ಅದೊಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಖುಷಿ. ಎಲ್ಲರೂ ಹೇಳುತ್ತಿದ್ದಾಗ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಇದೀಗ ತುಂಬಾ ಖುಷಿಯಾಗುತ್ತಿದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ತನ್ನ ಮಗುವಿಗೆ ಈಗ ಎರಡು ತಿಂಗಳು. ಅಮ್ಮ ಮತ್ತು ಗಂಡನ ಸಹಾಯ ಇಲ್ಲದಿದ್ದರೆ ತಾವು ಹೀಗೆ ಇಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಅಮ್ಮ ಮಗುವನ್ನು ನೋಡಿಕೊಳ್ಳುತ್ತಿರುವ ಕಾರಣ ನಾನು ಷೋಗೆ ಬರಲು ಸಾಧ್ಯವಾಯಿತು ಎಂದಿದ್ದರು. ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್​ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. 

ಮದುಮಗಳಂತೆ ಕಂಗೊಳಿಸಿದ ಅಮೃತಧಾರೆ ಭೂಮಿಕಾ: ಡುಮ್ಮಾ ಸರ್​ ಬಿದ್ದೋಗೋದು ಗ್ಯಾರೆಂಟಿ ಎಂದ ಫ್ಯಾನ್ಸ್

click me!