ಕಲರ್ಸ್‌ ಕನ್ನಡದ ಬಣ್ಣ ಹೊಸದಾಗಿದೆ; ಜೂನ್‌ 1ರಿಂದ ತಾಜಾ ಕತೆಗಳು ಶುರು!

Kannadaprabha News   | Asianet News
Published : May 30, 2020, 08:57 AM IST
ಕಲರ್ಸ್‌ ಕನ್ನಡದ ಬಣ್ಣ ಹೊಸದಾಗಿದೆ; ಜೂನ್‌ 1ರಿಂದ ತಾಜಾ ಕತೆಗಳು ಶುರು!

ಸಾರಾಂಶ

ಜೂನ್‌ 1ರಿಂದ ‘ಕಲರ್ಸ್‌ ಕನ್ನಡ’ದಲ್ಲಿ ಧಾರಾವಾಹಿ ಪ್ರಸಾರ ಆರಂಭವಾಗುತ್ತಿದೆ. ಅನೇಕ ವಾರಗಳ ನಂತರ ಮತ್ತೆ ಹೊಸ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದರಿಂದ ಕಲರ್ಸ್‌ ಕನ್ನಡ ವಾಹಿನಿ ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಂಡು ಹೊಸ ಬಣ್ಣದಲ್ಲಿ ಜನರೆದುರು ಬರುತ್ತಿದ್ದಾರೆ.

‘ನಿರಂತರವಾಗಿ ಓಡುತ್ತಲೇ ಇರುವವರು, ಮಳೆ ಸುರಿದಾಗ ವಿಧಿಯಿಲ್ಲದೆ ಮರದಡಿ ನಿಲ್ಲುತ್ತೇವಲ್ಲ, ಹಾಗೆ ಈ ಲಾಕ್ಡೌನಿನ ವಿರಾಮವೂ ಎಲ್ಲರಿಗೂ ತುಸು ನಿಂತು ಯೋಚಿಸಿ ಹೊಸ ಹುರುಪಿನಲ್ಲಿ ಮುಂದೆ ಸಾಗುವ ಅವಕಾಶವೊಂದನ್ನು ನೀಡಿದೆ. ಹಾಗಾಗಿ ಇದು ಬರೀ ಮುಂದುವರಿಕೆಯಲ್ಲ, ಹೊಸ ಪಯಣ’ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರಿನ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌. ಹಾಗಾಗಿ ಜೂನ್‌ ಒಂದರಿಂದ ನೀವು ನೋಡಲಿರುವ ಕಲರ್ಸ್‌ ಕನ್ನಡ ಹೊಸ ಬಣ್ಣ ಹೊಸ ರೂಪದಲ್ಲಿ ಇರಲಿದೆ ಎನ್ನುತ್ತಾರೆ ಅವರು.

ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ; ಮನಸೋಲದವರಿಲ್ಲ ಇವರ ನಿರೂಪಣಾ ಶೈಲಿಗೆ

‘ಬಣ್ಣ ಹೊಸದಾಗಿದೆ; ಬಂಧ ಬಿಗಿಯಾಗಿದೆ!’ ಎನ್ನುವುದು ಕಲರ್ಸ್‌ ಕನ್ನಡ ಚಾನೆಲ್ಲಿನ ಹೊಸ ಘೋಷವಾಕ್ಯ. ಈ ಹೊಸ ಆರಂಭದ ಸಂಭ್ರಮವನ್ನು ವೀಕ್ಷಕರಿಗೆ ತಿಳಿಸಲು ಚಾನೆಲ್‌ ಈಗಾಗಲೇ ಹಲವು ಜಾಹೀರಾತುಗಳನ್ನು ರೂಪಿಸಿದೆ.

ಜೂನ್‌ 1ರಿಂದ ಮತ್ತೆ ಧಾರಾವಾಹಿ ಪ್ರಸಾರ ಶುರು; ಯಾವುದರಲ್ಲಿ ಏನೆಲ್ಲಾ ಬದಲಾವಣೆಗಳು?

ಕೊರೋನಾ ಲೆಕ್ಕ ನೋಡಿ ಕಂಗೆಟ್ಟಿರುವ ನೋಡುಗರು ಮತ್ತೆ ದೈನಿಕ ಧಾರಾವಾಹಿಗಳತ್ತ ಮರಳುವ ಕಾಲ ಬಂದಾಗಿದೆ. ಸಣ್ಣ ಬ್ರೇಕಿನ ನಂತರ ಕಲರ್ಸ್‌ ಕನ್ನಡದ ಬಣ್ಣ ಹೊಸದಾಗಿದೆ. ಆ ಹೊಸ ಬಣ್ಣ ನೋಡಲು ಒಂದೆರಡು ದಿನ ಕಾಯಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ