ಮೂರು ತಪಾಸಣೆಗಳ ನಂತರ ನಟ ಕಿರಣ್‌ ಕುಮಾರ್‌ಗೆ ಕೊರೋನಾ ನೆಗೆಟಿವ್‌; ಆದರೂ ಕ್ವಾರಂಟೈನ್?

By Suvarna NewsFirst Published May 29, 2020, 2:37 PM IST
Highlights

ಕೋವಿಡ್‌19 ಪಾಸಿಟಿವ್‌ ವರದಿ ಪಡೆದ ನಂತರ ಕ್ವಾರಂಟೈನ್‌ನಲ್ಲಿದ್ದ ಖ್ಯಾತ ನಟನಿಗೆ ನಾಲ್ಕನೇ ತಪಾಸಣೆಯಲ್ಲಿ ನೆಗೆಟಿವ್ ವರದಿ ಬಂದಿದೆ. 
 

ಬಾಲಿವುಡ್‌ ಚಿತ್ರರಂಗದ ಹೆಸರಾಂತ ಕಲಾವಿದ ಕಿರಣ್‌ ಕುಮಾರ್‌ ಕೋವಿಡ್‌19 ವರದಿ ನೆಗೆಟಿವ್‌ ಬಂದಿರುವುದು ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೂ ಕಿರಣ್‌ ಕ್ವಾರಂಟೈನ್‌ನಲ್ಲಿ 
ಇರಲೇಬೇಕು....

ಹೆಲ್ತ್‌ ಕೇರ್:

ಎಂದಿನಂತೆ ಎರಡು-ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕಿರಣ್‌ ದೆಹಲಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಲ್ಲಿನ ನಿಯಮದ ಪ್ರಕಾರ ಎಲ್ಲಾ ಔಟ್‌ ಪೇಶೆಂಟ್ ಗಳು  ನಿಯಮದ ಪ್ರಕಾರ ಕೋವಿಡ್‌ ಚೆಕ್‌ ಮಾಡಿಸಿಕೊಳ್ಳಬೇಕು. ಈ ವರದಿಯಲ್ಲಿ ಕಿರಣ್ ಕುಮಾರ್‌ಗೆ ಕೊರೋನಾ ಪಾಸಿಟಿವ್‌ ಎಂದು ಮೇ 14ರಂದು ತಿಳಿದು ಬಂದಿತ್ತು.

ಕಿರುತೆರೆ ನಟಿ ಆತ್ಮಹತ್ಯೆ; ಡೆತ್ ನೋಟ್ ಓದಿ ಫೋಷಕರು ಶಾಕ್!

'ನನಗೆ ಕೊರೋನಾದ ಯಾವ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ ಆದರೆ ಮೇ 14 ಹೆಲ್ತ್‌ ಚೆಕ್‌ ಮಾಡಿಸಿಕೊಳ್ಳಲು ಹೋಗಿ ವರದಿ ಪಾಸಿಟಿವ್ ಬಂದಿತ್ತು.  ಯಾವ ಕೆಮ್ಮು ಅಥವಾ ನೆಗಡಿ ನನಗೆ ಕಾಣಿಸಿಕೊಂಡಿಲ್ಲ. ನಾನು ಆರಾಮಾಗಿದ್ದು ಮನೆಯಲ್ಲಿಯೇ ಸೆಲ್ಫ್‌ ಕ್ವಾರಂಟೈನ್‌ ಅಗಿರುವೆ' ಎಂದು ಮಾತನಾಡಿದ್ದರು.

ನೆಗೆಟಿವ್‌ ರಿಪೋರ್ಟ್‌:

ಕಿರಣ್‌ ಆರೋಗ್ಯದ ಮೇಲೆ ನಿಗಾ ವಹಿಸಿದ ವೈದ್ಯರು ಚೆಕ್ ಮಾಡುತ್ತಲೇ ಇದ್ದರು ಮೂರು ಸಲವೂ ಪಾಸಿಟಿವ್‌ ಬಂದಿದ್ದು ನಾಲ್ಕನೇ ಬಾರಿ ನೆಗೆಟಿವ್ ಬಂದಿದೆ. 

ಹೃದಯಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಬಿಜಯ್ ಚೇತರಿಕೆ!

'ವೈದ್ಯರು ಹಾಗೂ ಸ್ಟಾಫ್‌ಗಳ ಶ್ರಮದಿಂದಲೇ ನನಗೆ  ನೆಗೆಟಿವ್ ಬರಲು ಸಾಧ್ಯವಾಗಿದ್ದು. ನನ್ನ ಕುಟುಂಬಸ್ಥರು ಕೂಡ ಕ್ವಾರಂಟೈನ್‌ ರೂಲ್‌ ಫಾಲೋ ಮಾಡುತ್ತಿದ್ದಾರೆ. ನನಗೆ ಯಾವ ತೊಂದರೆಯೂ ಅಗಿಲ್ಲ ಆರೋಗ್ಯವಾಗಿರುವೆ ಆದರೂ ಪಾಸಿಟಿವ್ ಬಂದ ಕಾರಣ ನಿಗಾ ವಹಿಸಬೇಕಾಗಿತ್ತು. ಒಬ್ಬಂಟಿಯಾಗಿ  ದಿನ ಕಳೆಯುವುದು ಬೋರ್‌ ಆದರೂ  ಪುಸ್ತಕಗಳು,ಟಿವಿ ಹಾಗೂ ಮೊಬೈಲ್‌ಯಿಂದ ಬಚಾವ್ ಆದೆ' ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 

74 ವರ್ಷದ ಕಿರಣ್ ವೈದ್ಯರು ಹಾಗೂ ಅವರ ಸಿಬ್ಬಂದಿಗೆ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅದರಲ್ಲೂ ನರ್ಸ್‌ಗಳು ಎರಡು ವಾರಗಳಿಂದ ಹೆಚ್ಚಿನ ಕಾಳಜಿ ವಹಿಸಿದ್ದಾರೆ. 'ನಾನು ಇನ್ನು ಕೆಲ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವೆ. ನನ್ನ ಕುಟುಂಬದವರೂ ಇದ್ದಾರೆ. ಯಾವ ಹೊರಗಿನವರ ಜೊತೆ ಸಂಪರ್ಕ ಹೊಂದಿಲ್ಲ' ಎಂದು ಸ್ಪಷ್ಟನೇ ನೀಡಿದ್ದಾರೆ.

click me!