ಪತ್ನಿಯ ಜಾಣ್ಮೆಗೆ ತಾಂಡವ್​ ಮೆಚ್ಚುಗೆ: ಕನ್ನಿಕಾಳಿಗೆ ಬುದ್ಧಿ ಕಲಿಸಲು ಬಂದ ಹೊಸ ಮೇಡಂ ಯಾರು?

Published : Mar 12, 2024, 04:30 PM IST
 ಪತ್ನಿಯ ಜಾಣ್ಮೆಗೆ ತಾಂಡವ್​ ಮೆಚ್ಚುಗೆ: ಕನ್ನಿಕಾಳಿಗೆ ಬುದ್ಧಿ ಕಲಿಸಲು  ಬಂದ ಹೊಸ ಮೇಡಂ ಯಾರು?

ಸಾರಾಂಶ

ಕನ್ನಿಕಾ ಮಿಸ್​ಗೆ ಬುದ್ಧಿ ಕಲಿಸಿ, ಭಾಗ್ಯ ಮತ್ತು ಕುಸುಮಾಗೆ ಕಾಪಾಡಲು ಹೊಸ ಎಂಟ್ರಿ ಆಗಿದೆ. ಯಾರೀಕೆ?   

 ಭಾಗ್ಯ ಮತ್ತು ಕುಸುಮಳನ್ನು ಬೇರೆ ಬೇರೆ ಮಾಡಿ ವೇದಿಕೆ ಮೇಲೆ ಎಲ್ಲರ ಎದುರು ಅವಮಾನ ಮಾಡಲು ನೋಡಿದ ಕನ್ನಿಕಾ ಮೇಡಂ ಮುಖವಾಡ ಕಳಚುವ ಸಮಯ ಬಂದಾಗಿದೆ. ಸದಾ ಅತ್ತೆ-ಸೊಸೆಯ ಮೇಲೆ ಕಿಡಿ ಕಾರುತ್ತಿರುವ ಕನ್ನಿಕಾ, ಮಹಿಳಾ ದಿನಾಚರಣೆಯಂದು ಅವರಿಬ್ಬರನ್ನು ಸನ್ಮಾನ ಮಾಡುವ ಸಮಯದಲ್ಲಿ ಬಹುಮಾನವನ್ನು ಕೆಳಕ್ಕೆ ಕೆಡವಿ ಇನ್​ಸಲ್ಟ್​ ಮಾಡಿದ್ದಳು. ಅಷ್ಟಕ್ಕೂ ಇದಕ್ಕೆ ಕಾರಣವೂ ಇದೆ. ಅದೇನೆಂದರೆ,  ಭಾಗ್ಯಾ ಹಾಗೂ ಕುಸುಮಾಗೆ ಈ ಬಾರಿ ಮಹಿಳಾ ಸಾಧಕಿ ಪ್ರಶಸ್ತಿ ಬಂದಿರುವುದನ್ನು ಕನ್ನಿಕಾ ಸಹಿಸಲಿಲ್ಲ. ತನಗೆ ಬರಬೇಕಾಗಿದ್ದ ಪ್ರಶಸ್ತಿ ಕೈ ತಪ್ಪಿ ಹೋಯ್ತಲ್ಲಾ ಎಂಬ ಕೋಪದಿಂದ ಕನ್ನಿಕಾ, ಇಬ್ಬರಿಗೂ ವೇದಿಕೆ ಮೇಲೆ ಅವಮಾನ ಮಾಡಲು ಪ್ಲ್ಯಾನ್‌ ಮಾಡುತ್ತಾಳೆ. ಅದಕ್ಕಾಗಿ ಪಿಎಗೆ ಹೇಳಿ ಭಾಗ್ಯಾ ವೈಯಕ್ತಿಕ ವಿವರಗಳನ್ನು ತರಿಸಿಕೊಂಡು ಇನ್​ಸಲ್ಟ್​ ಮಾಡುತ್ತಾಳೆ.
 
ಈಕೆಯ ಪ್ಲ್ಯಾನ್​ ಅನ್ನು ಅತ್ತೆ- ಸೊಸೆ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಎಲ್ಲರ ಎದುರು ಅವಮಾನ ಮಾಡುವ ಉದ್ದೇಶದಿಂದ ಕನ್ನಿಕಾ, ಇಬ್ಬರನ್ನೂ ಹೊಗಳುತ್ತಾಳೆ. ನಿಮ್ಮಂಥ ಅತ್ತೆ-ಸೊಸೆ ಇಲ್ಲ ಎನ್ನುತ್ತಾಳೆ.  ಈ ವಯಸ್ಸಿನಲ್ಲೂ ಓದಬೇಕೆನ್ನುವ ಭಾಗ್ಯಾ ಛಲ, ಆಕೆಗೆ ಪ್ರೋತ್ಸಾಹ ನೀಡುತ್ತಿರುವ ಕುಸುಮಾ ಇಬ್ಬರನ್ನೂ ವೇದಿಕೆ ಮೇಲೆ ಬರಮಾಡಿಕೊಳ್ಳೋಣ ಎಂದು ಇಬ್ಬರನ್ನೂ ವೇದಿಕೆ ಮೇಲೆ ಆಹ್ವಾನಿಸುತ್ತಾಳೆ. ಮೊದಲಿಗೆ ಕುಸುಮಾಗೆ ಇದು ಅನುಮಾನ ತರಿಸಿದರೂ  ಇಬ್ಬರೂ ವೇದಿಕೆ ಮೇಲೆ ಹೋಗುತ್ತಾರೆ.  ಇಬ್ಬರಿಗೂ ಪ್ರಶಸ್ತಿ ನೀಡಲೆಂದು ಹೋಗುವ ಕನ್ನಿಕಾ ಅದನ್ನು ಭಾಗ್ಯಾ ಕೈಗೆ ಕೊಡದೆ ನೆಲದ ಮೇಲೆ ಬೀಳಿಸುತ್ತಾಳೆ. ಪ್ರಶಸ್ತಿಗೆ ಒಂದು ಗೌರವ ಇದೆ ಅದನ್ನು ಏಕೆ ಈ ರೀತಿ ನೆಲದ ಮೇಲೆ ಬೀಳಿಸುತ್ತೀರ ಎಂದು ಭಾಗ್ಯಾ ಕೇಳುತ್ತಾಳೆ. ಹೌದು ಪ್ರಶಸ್ತಿಗೆ ಗೌರವ ಇದೆ ನಿಮಗೆ ಇಲ್ಲವಲ್ಲಾ ಎನ್ನುತ್ತಾಳೆ.

ಮೇಕಪ್​ ಮಾಡಿ ನೋಡಬೇಕು ಒಬ್ಬಳೇ ಬಾ ಅಂತ ಕರೆದ್ರು... ಆಮೇಲೆ... ಕರಾಳ ಘಟನೆ ಬಿಚ್ಚಿಟ್ಟ ನಟಿ ಅಮಾನಿ

ಹೀಗೆ ಮಾತಿಗೆ ಮಾತು ಬೆಳೆಯುತ್ತದೆ.  ಕುಸುಮಾ ಭಾಗ್ಯಾಳನ್ನು ಓದಿಸುತ್ತಿರುವುದು ಆಕೆ ಮುಂದೆ ಓದಿ ಆಫೀಸರ್‌ ಆಗಬೇಕು ಎಂದಲ್ಲ. ಕುಸುಮಾ ಅವರಂಥ ಹೆಂಗಸಿಗೆ ಸೊಸೆ ಹೊರಗೆ ಹೋಗಿ ದುಡಿಯುವುದು ಇಷ್ಟವಿಲ್ಲ, ಸೊಸೆಯನ್ನು ಓದಿಸುತ್ತಿರುವುದು ಅವಳ ಜೀವನ ಸರಿ ಹೋಗಲಿ ಎಂದು ಮಾತ್ರ. ಈ ವಿಚಾರವಾಗಿ ಆಕೆ ಮಾತನಾಡಿದ್ದನ್ನು ಆಕೆಯ ಮಾತಿಂದಲೇ ಕೇಳಿಸುತ್ತೇಳೆ ಎಂದು ಕಾರ್ಯಕ್ರಮ ಆರಂಭಕ್ಕೂ ಮುನ್ನ ಕುಸುಮಾ ಜೊತೆ ಮಾತನಾಡಿದ್ದನ್ನು ಆಕೆಗೆ ಗೊತ್ತಿಲ್ಲದಂತೆ ರೆಕಾರ್ಡ್‌ ಮಾಡಿ ವೇದಿಕೆ ಮೇಲೆ ಎಲ್ಲರಿಗೂ ತೋರಿಸುತ್ತಾಳೆ. ಇದನ್ನು ನೋಡಿ ನೆರೆದವರು ಕುಸುಮಾ ಮೇಲೆ ಅನುಮಾನ ಪಟ್ಟುಕೊಳ್ಳುತ್ತಾರೆ. 

ಆದರೆ ಭಾಗ್ಯ ಬಿಡಬೇಕಲ್ಲ. ಅವಳಿಗೆ ತನ್ನ ಅತ್ತೆ ಏನು ಎನ್ನುವುದು ತಿಳಿದಿದೆ. ಇದೇಕಾರಣಕ್ಕೆ ಇದರ ಪೂರ್ತಿ ವಿಡಿಯೋ ತೋರಿಸಿ. ಇದರಲ್ಲಿ ಅತ್ತೆ ಮಾತ್ರ ಮಾತನಾಡಿರುವುದು ಇದೆ ಎನ್ನುತ್ತಾಳೆ. ಇದರ ವಿಡಿಯೋ ನನ್ನ ಬಳಿ ಇಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಾಳೆ ಕನ್ನಿಕಾ. ಎಲ್ಲರ ಎದುರು ವಿಡಿಯೋ ತೋರಿಸಲೇಬೇಕು ಎಂದಾಗ ಪತ್ನಿಯ ಜಾಣ್ಮೆಯ ಬಗ್ಗೆ ತಾಂಡವ್​ಗೆ ಖುಷಿಯಾಗುತ್ತದೆ. ನನಗೆ ಈ ಯೋಚನೆ ಬಂದೇ ಇರಲಿಲ್ವಲ್ಲಾ ಎನ್ನುತ್ತಾನೆ. ಕನ್ನಿಕಾಗೆ ಭಯ ಶುರುವಾಗುತ್ತದೆ. ಈ ವಿಡಿಯೋ ತನ್ನ ಬಳಿ ಹೇಗೆ ಬಂತೋ ಗೊತ್ತಿಲ್ಲ ಎನ್ನುತ್ತಾಳೆ. ಆದರೆ ಭಾಗ್ಯ ವಿಡಿಯೋ ತೋರಿಸಲೇಬೇಕು ಎನ್ನುತ್ತಲೇ, ಭಾಗ್ಯ ಮತ್ತು ಕುಸುಮಳ ರಕ್ಷಣೆಗೆ ಹೊಸ ಎಂಟ್ರಿ ಆಗಿದೆ. ವಿಡಿಯೋ ಸಂಪೂರ್ಣ ನನ್ನ ಬಳಿ ಇದೆ ಎನ್ನುತ್ತಲೇ ವೇದಿಕೆ ಮೇಲೆ ಬರುತ್ತಾರೊಬ್ಬರು ಮಹಿಳೆ. ಯಾರೀಕೆ? 

ಮಗ ಹಾಕಿದ ವಿಷದ ಆಹಾರ ತಿಂದೇ ಬಿಟ್ಲು ಶಕುಂತಲಾ ದೇವಿ: ಸಿಕ್ಕಿ ಬೀಳ್ತಾನಾ ಜೈದೇವ್​?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ