
ಭೂಮಿಕಾ ಮಲ್ಲಿಗೆಂದು ಮಾಡಿರುವ ಸೂಪ್ನಲ್ಲಿ ವಿಷ ಬೆರೆಸಿ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಜೈದೇವ. ಆದರೆ ಅದರ ಅರಿವಿಲ್ಲದೇ ತಾಯಿ ಶಕುಂತಲಾ ದೇವಿ ಅದನ್ನು ಸೇವಿಸಿಬಿಟ್ಟಿದ್ದಾಳೆ. ಅಮ್ಮ ವಿಷವನ್ನು ತಿನ್ನುವುದನ್ನು ನೋಡಲಾಗದ ಜೈದೇವ ಚಡಪಡಿಸುತ್ತಿದ್ದಾನೆ. ಅದನ್ನು ತಿನ್ನದಂತೆ ಪರಿಪರಿಯಾಗಿ ಹೇಳಿಕೊಳ್ಳುತ್ತಿದ್ದರೂ, ಯಾರಿಗೂ ವಿಷದ ಅರಿವಿಲ್ಲದ ಕಾರಣ, ಅವನಿಗೆ ತಡೆವೊಡ್ಡಿದ್ದಾರೆ. ವಿಷ ಬೆರೆಸಿದ ಆಹಾರವನ್ನು ಶಕುಂತಲಾ ದೇವಿ ಸೇವಿಸಿಯಾಗಿದೆ. ಜೈದೇವನ ಚಡಪಡಿಕೆ ನೋಡಿ ಭೂಮಿಕಾಗೆ ಇನ್ನಷ್ಟು ಸಂದೇಹ ಬಂದಿದೆ. ವಿಷದ ಆಹಾರ ಸೇವಿಸಿದ ಶಕುಂತಲಾದೇವಿಗೆ ಏನಾಗುತ್ತದೆ? ಸಿಕ್ಕಿಬೀಳ್ತಾನಾ ಜೈದೇವ ಅಥವಾ ಇನ್ನಾವುದೋ ಕಾರಣಕ್ಕೆ ಸುಲಭದಲ್ಲಿ ತಪ್ಪಿಸಿಕೊಂಡು ಬಿಡ್ತಾನಾ ಎನ್ನುವುದು ಈಗಿರುವ ಪ್ರಶ್ನೆ.
ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ ಕಥೆ. ಪತ್ನಿ ಮಲ್ಲಿಯನ್ನು ಹೇಗಾದ್ರೂ ಸಾಯಿಸಬೇಕು ಎಂದು ಪಣ ತೊಟ್ಟಿದ್ದಾನೆ ಜೈದೇವ. ಭೂಮಿಕಾ ತವರಿಗೆ ಹೋದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯನ್ನು ಸಾಯಿಸಲು ನೋಡಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಅಡುಗೆಯಲ್ಲಿ ವಿಷ ಹಾಕಿದ್ದಾನೆ. ಇನ್ನು ಮಲ್ಲಿ ಸತ್ತೇ ಸಾಯುತ್ತಾಳೆ ಎಂದಿದ್ದಾನೆ. ಇದನ್ನು ಮಲ್ಲಿ ನೋಡಿ ಭೂಮಿಕಾಗೆ ತಿಳಿಸಿದ್ದಾಳೆ. ಯಾವ ರೀತಿಯ ಗಲಾಟೆ ಮಾಡದ ಭೂಮಿಕಾ ಉಪಾಯ ಮಾಡಿದ್ದಾಳೆ. ಮಲ್ಲಿಯದ್ದೇ ತಪ್ಪು ಎಂಬ ಅರ್ಥದಲ್ಲಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಇವಳ ತಿನಿಸಿನಲ್ಲಿ ಯಾರಾದ್ರೂ ವಿಷ ಹಾಕಿ ಕೊಟ್ಟರೆ ಎನ್ನುವ ಭ್ರಮೆ ಈಕೆಯದ್ದು ಎಂದು ಬೈದ ರೀತಿ ಮಾಡಿದ್ದಾಳೆ. ಅದಕ್ಕೆ ಅತ್ತೆ ಶಕುಂತಲಾ ದೇವಿ ಹಾಗಿದ್ದರೆ ಅಂಥ ಕೆಟ್ಟ ಬುದ್ಧಿ ಯಾರಲ್ಲೂ ಇಲ್ಲ. ಇನ್ನೇನು ಇವಳಿಗೆ ಕೊಡುವ ಆಹಾರವನ್ನು ನಾವೇ ತಿಂದು ಕೊಡಬೇಕಾ ಎಂದು ಕೇಳಿದ್ದಾಳೆ.
ಪದೇ ಪದೇ ಇನ್ಸಲ್ಟ್ ಮಾಡುವವರನ್ನು ನಗುನಗುತ್ತಲೇ ಸೋಲಿಸೋದು ಎಂದ್ರೆ ಇದೇನಾ?
ಅದಕ್ಕೆ ಥಟ್ಟನೆ ಭೂಮಿಕಾ, ಇದೇ ಸರಿಯಾದ ಐಡಿಯಾ ಎಂದಿದ್ದಾಳೆ. ಸರಿ ಎಂದು ಶಕುಂತಲಾ ಆಹಾರವನ್ನು ತಿನ್ನಲು ಶುರು ಮಾಡಿದಾಗ ಜೈದೇವ ಬೇಡ ತಿನ್ನಬೇಡಮ್ಮ ಎಂದಿದ್ದಾನೆ. ಆದರೆ ಎಲ್ಲರೂ ಅವನಿಗೆ ಬೈದಿದ್ದಾರೆ. ಗರ್ಭಿಣಿಯರಿಗೆ ಕೊಡುವ ಆಹಾರವನ್ನು ಭೂಮಿಕಾ ಸರಿಯಾಗಿ ಮಾಡಿದ್ದಾಳೋ ಇಲ್ಲವೊ ಎಂದು ಟೇಸ್ಟ್ ಮಾಡುತ್ತಿದ್ದಾಳೆ ಅಷ್ಟೇ ಎಂದಿದ್ದಾರೆ. ವಿಷ ಇರುವ ಆಹಾರ ಸೇವಿಸಿದ ಶಕುಂತಲಾಗೆ ಏನಾಗುತ್ತದೆ ಎನ್ನುವುದು ಈಗಿರುವ ಪ್ರಶ್ನೆ. ಇಲ್ಲಿಯವರೆಗಿನ ಕಥೆಯಲ್ಲಿ, ಜೈದೇವ ಪತ್ನಿ ಮಲ್ಲಿಯ ಮೇಲೆ ಕೈಮಾಡಿದ್ದಾಗಿ ಭೂಮಿಕಾ ಜೈದೇವನ ವಿರುದ್ಧ ತಿರುಗಿ ಬಿದ್ದಿದ್ದಳು. ಭೂಮಿಕಾ ಹೆಸರನ್ನು ಕೆಡಿಸಲು ಆಕೆಯ ಹೆಸರು ಹೇಳಿ ಖುದ್ದು ಜೈದೇವನೇ ತನ್ನ ಮೇಲೆ ಕೇಸು ದಾಖಲು ಮಾಡಿಕೊಂಡು ಭೂಮಿಕಾ ವಿರುದ್ಧ ಎಲ್ಲರ ದೃಷ್ಟಿಯಲ್ಲಿ ಆರೋಪಿ ಮಾಡಿದ್ದ. ಇದು ಕೊನೆಗೆ ಭೂಮಿಕಾಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಜೈದೇವನಿಗೆ ಚಾಲೆಂಜ್ ಹಾಕಿದ್ದಾಳೆ. ತನ್ನ ಮದುವೆ ಸಿಂಧುವೇ ಅಲ್ಲ ಎಂದಿದ್ದ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. ಕಂಪೆನಿಯ ಕಾರ್ಯಕ್ರಮದಲ್ಲಿಯೂ ಮಲ್ಲಿಯನ್ನು ಕರೆತಂದಿದ್ದು, ಜೈದೇವನನ್ನು ಮತ್ತಷ್ಟು ಉರಿಸಿದ್ದಾಳೆ.
ಇದರ ನಡುವೆಯೇ ಭೂಮಿಕಾ ಮಲ್ಲಿಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದಳು. ಇದೇ ಟೈಂಗೆ ಕಾಯುತ್ತಿದ್ದ ಜೈದೇವ. ಮಲ್ಲಿಯನ್ನು ಭೂಮಿಕಾಳಿಂದ ಎಸ್ಕೇಪ್ ಮಾಡಿಸುವೆ ಎಂಬ ಡೈಲಾಗ್ ಬೇರೆ ಹೊಡೆದಿದ್ದ. ಮಲ್ಲಿಯನ್ನು ಸಾಯಿಸಲು ಪ್ಲ್ಯಾನ್ ಮಾಡಿದ್ದ. ಆದರೆ ಭೂಮಿಕಾ ಬಚಾವ್ ಮಾಡಿದ್ದಳು. ಆದರೆ ಈಗ ಊಟದಲ್ಲಿ ವಿಷ ಹಾಕಿದ್ದಾನೆ. ಅದನ್ನು ತಿನ್ನುವವರು ಯಾರು? ಒಂದು ವೇಳೆ ಮಲ್ಲಿ ತಿಂದರೆ ಆಕೆ ಮತ್ತು ಹೊಟ್ಟೆಯಲ್ಲಿ ಇರುವ ಮಗುವಿನ ಕಥೆ ಏನಾಗುತ್ತದೆ ಎನ್ನುವ ಆತಂಕ ಅಭಿಮಾನಿಗಳದ್ದು. ಅತ್ತೆ ಶಕುಂತಲಾದೇವಿ ಸತ್ತರೂ ಪರವಾಗಿಲ್ಲ, ಮಲ್ಲಿಗೆ ಏನೂ ಮಾಡಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಅದೇ ಇನ್ನೊಂದೆಡೆ, ಬುದ್ಧಿವಂತಿಕೆಯಿಂದ ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ ಭೂಮಿಕಾ ಈ ರೀತಿಯ ಪ್ಲ್ಯಾನ್ ಮಾಡಿರುವುದಕ್ಕೂ ಅಭಿಮಾನಿಗಳು ಭಲೇ ಭಲೇ ಎನ್ನುತ್ತಿದ್ದಾರೆ.
ಹುಟ್ಟುಹಬ್ಬಕ್ಕೆ ಮಂಚದ ಮೇಲೆ ಪೂನಂ ಪಾಂಡೆ ಹಾಟ್ ವಿಡಿಯೋ: ಇದ್ಯಾವ ಅವೇರ್ನೆಸ್ ಕೇಳಿದ ನೆಟ್ಟಿಗರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.