ನಮ್ಮನೆಯಲ್ಲೂ ಇಂಥ ಮನೆಹಾಳಿ ದೀಪಿಕಾ ಇದ್ದಾಳೆ: ಸೀರಿಯಲ್​ ನೋಡಿ ನೋವು ತೋಡಿಕೊಳ್ತಿರೋ ನೆಟ್ಟಿಗರು!

By Suchethana D  |  First Published Jun 5, 2024, 5:47 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿನ ಮನೆಹಾಳಿ ದೀಪಿಕಾಳ ಕಥೆ ನೋಡಿ ತಮ್ಮ ಮನೆಯ ಕಥೆ ಹೇಳುತ್ತಿದ್ದಾರೆ ನೆಟ್ಟಿಗರು. ಅವರು ಹೇಳುತ್ತಿರೋದೇನು?
 


ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತಿದೆ. ಆದರೆ ಅದೇ ಹೆಣ್ಣು ಇಡೀ ಸಂಸಾರವನ್ನೇ ನಾಶ ಮಾಡಬಲ್ಲಳು ಎನ್ನುವುದೂ ಸುಳ್ಳಲ್ಲ. ಎಲ್ಲವೂ ಹೆಣ್ಣಿಂದಲೇ ಎನ್ನುವುದು ಸುಮ್ಮನೇ ಹೇಳುವ ಮಾತು ಅಲ್ಲವೇ ಅಲ್ಲ ಅಲ್ವಾ? ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಹೆಣ್ಣು ಇರುತ್ತಾಳೆ ಎನ್ನುವ ಮಾತು ಎಷ್ಟು ನಿಜವೋ,  ಸರ್ವನಾಶವಾಗಿರುವ ಸಂಸಾರದ ಕಥೆಯನ್ನು ಕೇಳುತ್ತಾ ಸಾಗಿದರೆ, ಹಲವಾರು ಘಟನೆಗಳಿಗೆ ಸಾಕ್ಷಿಯಾಗಿರುವುದು ಹೆಣ್ಣೇ ಎನ್ನುವುದೂ ಸುಳ್ಳಲ್ಲ. ಓರ್ವ ಹೆಣ್ಣು ಒಂದು ಕೆಟ್ಟುಹೋದ ಸಂಸಾರವನ್ನು ಒಟ್ಟುಗೂಡಿಸಿ, ಸುಮಧುರ ಬಾಂಧವ್ಯವನ್ನು ಕುಟುಂಬ ಸದಸ್ಯರ ನಡುವೆ ಮೂಡಿಸಲು ಎಷ್ಟು ಸಾಧ್ಯವೋ, ಸುಂದರವಾಗಿರುವ ಕುಟುಂಬವನ್ನು ಛಿದ್ರ ಮಾಡಲೂ ಸಾಧ್ಯ. ಇದೇ ಕಥೆಯನ್ನೇ ಇಂದಿನ ಧಾರಾವಾಹಿಗಳು ಹೇಳುವುದು ಉಂಟು. ಇದೇ  ಕಾರಣಕ್ಕೆ, ಇಂದು ಸೀರಿಯಲ್​ಗಳು ಜನರಿಗೆ ಹತ್ತಿರ ಆಗಿರುವುದು ಎಂದರೆ ತಪ್ಪಲ್ಲ.

ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಪ್ರೊಮೋ ಒಂದು ಬಿಡುಗಡೆಯಾಗಿದ್ದು, ಅದರಲ್ಲಿರುವ ಮನೆಹಾಳು ದೀಪಿಕಾ ಪಾತ್ರವನ್ನು ನೋಡಿದ ನೆಟ್ಟಿಗರು ತಮ್ಮ ಮನೆಯಲ್ಲಿ ಇಂಥವಳೊಬ್ಬಳಿಂದಲೇ ಮನೆಹಾಳಾಗಿರುತ್ತಿರುವ ವಿಷಯವನ್ನು ಖುಲ್ಲಂ ಖುಲ್ಲಾ ಆಗಿ ಬರೆದುಕೊಂಡಿರುವುದೇ ಇದಕ್ಕೆ ಸಾಕ್ಷಿ! ಹೌದು. ಈ ಸೀರಿಯಲ್​ನಲ್ಲಿ ಸುಂದರ ಕುಟುಂಬವನ್ನು ಹಾಳು ಮಾಡುವ ಉದ್ದೇಶಕ್ಕಾಗಿಯೇ ಬಂದವಳು ದೀಪಿಕಾ. ಅವಳಿಗೆ ಇನ್ನೋರ್ವ ಹೆಣ್ಣು ಶಾರ್ವರಿಯೇ ಸಾಥ್​ ನೀಡುತ್ತಿರುವವಳು. ಮನೆಯಲ್ಲಿ ಹುಳಿಹಿಂಡುವಲ್ಲಿ ಇವರಿಬ್ಬರದ್ದು ಬಲುದೊಡ್ಡ ಪಾಲು.

Tap to resize

Latest Videos

ಅಭಿಮಾನಿಗಳೇ ಈಗಾದ್ರೂ ಖುಷಿನಾ..? ನಿಮ್ಮಾಸೆ ಕೊನೆಗೂ ನೆರವೇರಿತು ಅಂತಿದೆ ಶ್ರೀರಸ್ತು- ಶುಭಮಸ್ತು

ಇದೀಗ ಅವಿ ಮತ್ತು ಅಭಿಯ ನಡುವೆ ಹುಳಿ ಹಿಂಡಾಗಿದೆ. ಇಬ್ಬರನ್ನೂ ಬೇರೆ ಬೇರೆ ಮಾಡುವಲ್ಲಿ ದೀಪಿಕಾ ಮತ್ತು ಶಾರ್ವರಿ ಬಹುತೇಕ ಯಶಸ್ವಿಯಾಗಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಅಭಿ ಈಗ ಅಣ್ಣನ ಎದುರೇ ಆಸ್ತಿಯ ಪಾಲು ಕೇಳಿದ್ದಾನೆ. ನನ್ನ ಆಸ್ತಿಯ ಭಾಗವನ್ನು ನನಗೆ ಕೊಡು ಎಂದು ಎಲ್ಲರ ಎದುರಿಗೇ ಹೇಳಿದ್ದಾನೆ. ಇದನ್ನು ಕೇಳಿ ಎಲ್ಲರೂ ಶಾಕ್​ ಆದರೂ ದೀಪಿಕಾ ಮತ್ತು ಶಾರ್ವರಿ ತಮ್ಮ ಸಂಚು ಫಲಿಸುತ್ತಿದೆ ಎಂದು ಖುಷಿ ಪಡುತ್ತಿದ್ದಾರೆ.  ಅಭಿಯಲ್ಲಾಗಿರುವ ಈ ಬದಲಾವಣೆ ಗಮನಿಸಿದ ಅವಿ, ನಿನಗೆ ಆಸ್ತಿ ಬೇಕು ತಾನೆ ಅಷ್ಟೇ ಅಲ್ವಾ ಎಂದು ಖಾಲಿ ಹಾಳೆಯಲ್ಲಿ  ಸಹಿ ಮಾಡಿಕೊಂಡು, ನನ್ನ ಪಾಲು ಏನು ಬೇಕೋ ಎಲ್ಲವನ್ನೂ ತೆಗೆದುಕೊಂಡು ಬಿಡು, ನಿನಗೆ ಅನ್ನಿಸಿದ್ದನ್ನೆಲ್ಲಾ ಬರೆದುಕೋ ಎಂದಿದ್ದಾರೆ. ಇದನ್ನು ಕೇಳಿ ದೀಪಿಕಾ ಮತ್ತು ಶಾರ್ವರಿಗೆ ಖುಷಿಯೋ ಖುಷಿ.

ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡುತ್ತಿದ್ದಂತೆಯೇ ನಮ್ಮ ಮನೆಯಲ್ಲಿಯೂ ಇಂಥದ್ದೊಬ್ಬಳು ಹೆಣ್ಣು ಇದ್ದಾಳೆ. ತಮ್ಮನ ಪತ್ನಿ ಸಂಸಾರವನ್ನು ಹಾಳು ಮಾಡುತ್ತಿದ್ದಾಳೆ ಎಂದು ಓರ್ವ ಕಮೆಂಟಿಗ ಬರೆದಿದ್ದು, ಅದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಮ್ಮ ಮನೆ ಕಥೆಯಲ್ಲ, ಪ್ರತಿ ಮನೆಯ ಕಥೆಯೂ ಹೌದು ಎಂದಿದ್ದಾರೆ. ಸೋಷಿಯಲ್​  ಮೀಡಿಯಾಗಳಲ್ಲಿ ಹೀಗೆ ಓಪನ್​  ಆಗಿ ಬರೆದಿರುವಾಗ ಅಂಥವರಿಗೆ ಒಂದು ಹೆಣ್ಣಿನಿಂದ ಅದೆಷ್ಟು ನೋವಾಗಿರಲು ಸಾಧ್ಯ ಎಂದು ಮತ್ತಷ್ಟು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೆತ್ತ ಮನೆಗೂ, ಕೊಟ್ಟ ಮನೆಗೂ ಗೌರವ ತರಬೇಕಮ್ಮಾ ಎನ್ನುವ ಮಾತಿನ ನಡುವೆಯೇ ಕೊಟ್ಟ ಮನೆಯ ಇಡೀ ಚಿತ್ರಣವನ್ನೇ ಬದಲಿಸಿ, ಮನೆಹಾಳು ಮಾಡುವ ಕೆಲಸ ಮಾಡುತ್ತಿರುವುದು ಶೋಚನೀಯ ಎಂದು ಹಲವಾರು ಮಂದಿ ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ. 

ಅಕುಲ್​- ಅನುಶ್ರೀ ರೊಮಾನ್ಸ್​​: ವಿಡಿಯೋ ನೋಡಿ ಒನ್ಸ್​ ಮೋರ್​ ಒನ್ಸ್​ ಮೋರ್​ ಅಂತಿರೋ ಅಭಿಮಾನಿಗಳು

click me!