
ಬಿಗ್‌ಬಾಸ್ ಸೀಸನ್ 8ರ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡು, ಗೋಲ್ಡನ್ ಪಾಸ್ ಪಡೆದಿದ್ದ ಕ್ರಿಕೆಟರ್ ಕಮ್ ನಟ ರಾಜೀವ್ 8ನೇ ವಾರ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಫಿನಾಲೆ ತಲುಪುವ ಸ್ಪರ್ಧಿ ಎಂಬ ಪ್ರಶಂಸೆ ಪಡೆದಿದ್ದ ರಾಜೀವ್ ಎಡವಿದ್ದು ಎಲ್ಲಿ? ನಡೆದದ್ದು ಏನು? ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಅಯ್ಯಯ್ಯೋ, ಲ್ಯಾಗ್ ಮಂಜನ ಹಲ್ಲನ್ನೇ ಕಿತ್ತು ಬಿಟ್ರಾ ಕ್ರಿಕೆಟರ್ ರಾಜೀವ್!
ಪ್ರತಿ ವಾರವೂ ಟಫ್ ಫೈಟ್ ಕೊಡುತ್ತಿದ್ದ ಸ್ಪರ್ಧಿ ರಾಜೀವ್, ಕಳೆದು ಎರಡು-ಮೂರು ವಾರಗಳಿಂದ ನಾಮಿನೇಟ್ ಆಗುತ್ತಲೇ ಇದ್ದರು. ಸ್ಟ್ರಾಂಗ್ ಸ್ಪರ್ಧಿ, ಡಾಮಿನೇಟಿಂಗ್ ಕ್ಯಾರೆಕ್ಟರ್ ಎಂಬ ಕಾರಣಗಳನ್ನು ನೀಡಿ ನಾಮಿನೇಟ್ ಮಾಡಲಾಗುತಿತ್ತು. ಎಲ್ಲ ವಾರವೂ ಸೇಫ್ ಆಗುತ್ತಿದ್ದ ಕಾರಣ ರಾಜೀವ್ ಕಳೆದ ವಾರ ಪಡೆದುಕೊಂಡಿದ್ದ ಗೋಲ್ಡನ್ ಪಾಸ್‌ನನ್ನು ಬಳಸದೇ ಮುಂಬರುವ ದಿನಗಳಲ್ಲಿ ಬಳಸಬಹುದು, ಎಂದು ಜೋಪಾನ ಮಾಡಿಕೊಂಡರು. ಈ ವಾರ ನಾಮಿನೇಟ್ ಆದಾಗಲೂ ಬಿಗ್ ಬಾಸ್‌ಪಾಸ್ ಬಳಸುತ್ತೀರಾ ಎಂದು ಪ್ರಶ್ನಿಸಿದಾಗ, ರಾಜೀವ್ ಇಲ್ಲ ಬಳಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಅಷ್ಟು ವಿಶ್ವಾಸ ತುಂಬಿ ತುಳುಕುತ್ತಿದ್ದ ರಾಜೀವ್ ಎಡವಿದ್ದು ಎಲ್ಲಿ?
ನೆಟ್ಟಿಗರು ಮಾತು:
ಸಾಮಾನ್ಯಾಗಿ ಬಿಗ್ ಬಾಸ್ ಸ್ಪರ್ಧಿಗಳು ಎಷ್ಟೇ ಸ್ಟ್ರಾಂಗ್ ಇದ್ದರೂ ಮನೆಯಲ್ಲಿ ಉಳಿದುಕೊಳ್ಳುವುದು ವೋಟ್‌ಗಳಿಂದ ಮಾತ್ರ. ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿ, ಕೆಪಿಎಲ್‌ನಲ್ಲಿ ಸ್ಪರ್ಧಿಸಿ, ಕ್ರಿಕೆಟರ್ ಆಗಿ ಗುರುತಿಸಿಕೊಂಡಿರುವ ರಾಜೀವ್ ಅತಿ ಕಡಿಮೆ ವೋಟ್‌ನಿಂದ ಹೊರ ಬಂದಿದ್ದಾರೆ. ಎಷ್ಟೇ ಆ್ಯಕ್ಟಿವ್ ಆಗಿದ್ದರೂ ಜನರ ನಡುವೆ ಗುರುತಿಸಿಕೊಂಡಿರಲಿಲ್ಲ, ಸೋಷಿಯಲ್ ಮೀಡಿಯಾ ಸಪೋರ್ಟ್ ಇಲ್ಲ. ಮೌನವಾಗಿರುತ್ತಿದ್ದರು ಮನೋರಂಜನೆ ನೀಡುತ್ತಿರಲಿಲ್ಲ, ಎಂದು ನೆಟ್ಟಿಗರು ಚರ್ಚೆ ಮಾಡಿದ್ದಾರೆ.
ಲೈಟ್ ಆಫ್ ಆಗುತ್ತಿದ್ದಂತೆ ಕುಕ್ಕರ್ ಮುಚ್ಚಳ ಬಿತ್ತು; ಬಿಗ್‌ಬಾಸ್ ಮನೆಯಲ್ಲಿ ಅಗೋಚರ ಶಕ್ತಿ ಇದ್ಯಾ?
ವೈಷ್ಣವಿ ಕಿರುತೆರೆ ನಟಿ ಹಾಗಾಗಿ ರಘು ಗೌಡ ಮತ್ತು ಶಮಂತ್ ಪಡೆದಿರುವಷ್ಟೇ ಫಾಲೋವರ್ಸ್ ಹೊಂದಿದ್ದಾರೆ. ರಾಜೀವ್ ಇನ್ನೂ ಜನಪ್ರಿಯತೆ ಪಡೆದಿದ್ದರೆ ಮನೆಯಲ್ಲಿ ಉಳಿದುಕೊಳ್ಳಬಹುದಿತ್ತು. ನಿಧಿ ಸುಬ್ಬಯ್ಯ ಹಾಗೂ ಶುಭಾ ಪುಂಜಾ ವೀಕ್ ಸ್ಪರ್ಧಿಗಳು. ಆದರೂ ಉಳಿದುಕೊಳ್ಳಲು ಕಾರಣ ಅವರು ಪಡೆದಿರುವ ಜನಪ್ರಿಯತೆ ಹಾಗೂ ತಮಾಷೆ ಜಗಳ ಮಾಡುತ್ತಾ ಮನೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆದರೆ, ರಾಜೀವ್ ಅವರದ್ದು ಅನೇಕ ಸಂದರ್ಭಗಳಲ್ಲಿ ಮೌನವೇ ಮಾತಾಗಿತ್ತು, ಎನ್ನುತ್ತಿದ್ದಾರೆ ಬಿಬಿ ಫಾಲೋವರ್ಸ್.
'ಇಲ್ಲಿ ನಾವು ಆಡುವ ಆಟ ಆಟನೇ ಅಲ್ಲ. ಜನರು ಹೊರಗಿದ್ದು ನಮ್ಮನ್ನು ಆಟ ಆಡಿಸುತ್ತಿದ್ದಾರೆ. ನಮ್ಮಗೆ ಇಲ್ಲಿ ಒಬ್ಬರು ಫೆವರೆಟ್. ಇಲ್ಲಿ ಚೆನ್ನಾಗಿದ್ದರೆ ಸಾಲದು. ಜನರು ನಮ್ಮನ್ನು ಆಯ್ಕೆ ಮಾಡುವುದು,' ಎಂದು ರಘು ಗೌಡ ಹೇಳಿದ್ದಾರೆ. 'ರಾಜೀವ್ ಮನೆಯಲ್ಲಿ ಗೇಮ್ ಚೇಂಜರ್ ಆಗಿದ್ದ. ಪಾಸ್ ಬಳಸದೇ ಮುಂದಿನ ವಾರ ಕ್ಯಾಪ್ಟನ್ ಆಗಬಹುದು ಎಂದಿದ್ದು. ಪಾಸ್ ಬಳಸದೇ ಹಾಗೆ ಹೊರ ಹೋಗಿರುವುದು ಆತನ ಅಹಂಕಾರ ತೋರಿಸುತ್ತದೆ. ಓವರ್ ಕಾನ್ಫಿಡೆಂಟ್ ಹಾಗೂ ಸ್ವಾರ್ಥಿ,' ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.