ಅಕ್ಷತಾ ಮಗಳಿಗೆ 100 ದಿನದ ಸಂಭ್ರಮ; 'ನಮ್ಮ ಮಕ್ಕಳ ಕಾಲಕ್ಕೆ ಸ್ನೇಹದ definition ಏನಿರುತ್ತೋ?'

Suvarna News   | Asianet News
Published : Apr 26, 2021, 02:08 PM IST
ಅಕ್ಷತಾ ಮಗಳಿಗೆ 100 ದಿನದ ಸಂಭ್ರಮ; 'ನಮ್ಮ ಮಕ್ಕಳ ಕಾಲಕ್ಕೆ ಸ್ನೇಹದ definition ಏನಿರುತ್ತೋ?'

ಸಾರಾಂಶ

ಬಿಗ್ ಬಾಸ್‌ ಅಕ್ಷತಾ ಪಾಂಡಪುರ ಕಂದಮ್ಮನಿಗೆ 100 ದಿನಗಳನ್ನು ಪೂರೈಸಿದ ಸಂಭ್ರಮ. ಇದರ ಪ್ರಯುಕ್ತ ಜೋಗುಳ ಹಾಡುತ್ತಿರುವ ಫೋಟೋವನ್ನು ಅಕ್ಷತಾ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್‌ ಸ್ಪರ್ಧಿ ಅಕ್ಷತಾ ಪಾಂಡವಪುರ ತಾಯ್ತನದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಶಾಸ್ತ್ರ ಸಂಪ್ರದಾಯದ ಪ್ರಕಾರ ಮಗಳಿಗೆ ಏನೆಲ್ಲಾ ಮಾಡಬೇಕು, ಅದರ ಮಹತ್ವ ಏನು ಎಂದು ಪೋಸ್ಟ್ ಹಾಕುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಇದೀಗ ಅವರ ಮಗಳು 100ನೇ ದಿನಕ್ಕೆ ಕಾಲಿಟ್ಟ ಪ್ರಯುಕ್ತ ತೊಟ್ಟಿಲು ತೂಗುತ್ತಿರುವ ಫೋಟೋವೊಂಗನ್ನು ಹಂಚಿಕೊಂಡಿದ್ದಾರೆ. 

ನವೀನ್ ಮಾಮನಿಂದ ಅಕ್ಷತಾ ಮಗುವಿಗೆ ಉಡುಗೊರೆ.. ಹೊಸ ಟ್ಯೂನ್

'100 Day's.ಮಗಳಿಗೆ ಇವತ್ತಿಗೆ 100 ದಿನ.100ರ ಸಂಭ್ರಮ! ಆದರೆ ಪ್ರತಿದಿನದ ಸಾವು, ನೋವಿನ ಮಧ್ಯೆ ಖಂಡಿತ ಸಂಭ್ರಮದಲ್ಲಿ ಯಾವುದೇ ಆಚರಣೆ ಅಂತೂ ಇಲ್ಲ. ಆದರೂ ಮಗಳ ನಗುವಷ್ಟೇ ನಮಗೆ ಸಂಭ್ರಮ/ಖುಷಿ. ಇದನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನಿಸ್ತು ಅಷ್ಟೇ. ಇನ್ನು ಈ ದಿನದ ನೆನಪಿನಲ್ಲಿ ಒಂದಷ್ಟು ಜನಕ್ಕೆ ಇವತ್ತು ಪ್ರೀತಿಯಿಂದ ಸ್ನೇಹವನ್ನು ಕೋರಿ Greeting Card ಕಳುಹಿಸಿದ್ದಾಳೆ. ಸ್ನೇಹಕ್ಕಿಂತ ದೊಡ್ಡದು ಮತ್ತೊಂದಿಲ್ಲ ಅಲ್ವಾ? ಇನ್ನು ನಮ್ಮ ಮಕ್ಕಳ ಕಾಲಕ್ಕೆ ಸ್ನೇಹದ definition ಏನಿರುತ್ತೋ ಏನೋ? Hope ಅವರ ಕಾಲಕ್ಕೆ ಈ ಕೋವಿಡ್ ಅಂತಹ ಮಹಾಮಾರಿ ಬರ್ದೇ ಇರ್ಲಿ ಅನ್ನೋದೇ ನಮ್ಮೆಲ್ಲರ ಬೇಡಿಕೆ,' ಎಂದು ಅಕ್ಷತಾ ಬರೆದುಕೊಂಡಿದ್ದಾರೆ.

ಇನ್ನು ಮಗಳು ಹುಟ್ಟಿ ಮೂರು ತಿಂಗಳು ಕಳೆದಾಗ ಎಣ್ಣೆ ಶಾಸ್ತ್ರ ಮಾಡಿದ್ದಾರೆ. 'ಇವತ್ತು 15ನೇ ತಾರೀಕು.Soo? ಮಗಳು ಹುಟ್ಟಿ ಇವತ್ತಿಗೆ 3 ತಿಂಗಳು ಅದಕ್ಕೆ...? ನನಗೆಷ್ಟು ಸಮಾಧಾನ ಮತ್ತು ಖುಷಿ ಅಂದ್ರೆ ಮೊದಮೊದಲು 3 ತಿಂಗಳು ಕಳಿದ್ರೆ ಮಕ್ಕಳು ಅಷ್ಟು ಅಳುವುದಿಲ್ಲ, ಗಲಾಟೆ ಮಾಡುವುದ್ದಿಲ್ಲ, ಬಣ್ಣ ಬದಲಾಗುತ್ತದೆ, ಮೈ ಕಟ್ಟುತ್ತದೆ, ಚೆನ್ನಾಗಿ ಆಟ ಆಡುತ್ತವೆ ...ಅಂತೆಲ್ಲಾ ಹೇಳಿ ಸಮಾಧಾನ ಮಾಡ್ತಾ ಇದ್ರು ಅನುಭವಸ್ಥರು. ಅದು ಸತ್ಯ ಕೂಡ. ಅದೇ ಖುಷಿಗೆ ಈ ಫೋಟೋ,' ಎಂದಿದ್ದಾರೆ.

'ಮಕ್ಕಳು ಸಾಕೋಕೆ ಅವರಷ್ಟು ಗಾತ್ರದ ಹೇಲು ತಿನ್ನಬೇಕು..ಮಕ್ಳು ಏನ್ ಮಾಡಿದ್ರು ಚಂದನೇ ಅಲ್ವಾ 

ಏಪ್ರಿಲ್ 13ರಂದು ಮಗಳಿಗೆ ಕಿವಿ ಚುಚ್ಚಿಸಿದ್ದಾರೆ. ಒಂದೊಂದು ತಿಂಗಳೂ ಮಗಳ ಒಂದೊಂದು ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಮಗು ನೋವಿನಿಂದ ಅಳುತ್ತದೆ ಎಂದು ನಾನಂತೂ ಪಕ್ಕದಲ್ಲಿ ಇರುತ್ತಿರಲಿಲ್ಲ, ಆಮೇಲೆ ಸ್ವಲ್ಪ ಸಮಯದಲ್ಲಿ ಬಿಕ್ಕಳಿಸಿ ಅಳುತಿತ್ತು. ಅವಳ ಅಳು ನಿಂತಾಗ ಕಂಡದ್ದು, ಬೇರೆಯೇ ಮುಖ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!