
ಕಿರುತೆರೆಯ ಖ್ಯಾತ ಸೀರಿಯಲ್ ಕನ್ನಡತಿ ನಟಿ ವರುಧಿನಿ ಹೊಸ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಬೇಸಗೆ ಹೆಚ್ಚಾಗ್ತಿದ್ದಂತೆ ಪೂಲ್‌ನಲ್ಲಿ ಕೂಲ್ ಲುಕ್ ಕೊಟ್ಟಿದ್ದಾರೆ ಸಾರಾ ಅಣ್ಣಯ್ಯ. ಫೋಟೋವನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.
ಕಪ್ಪು ಬಣ್ಣದ ಬಿಕಿನಲ್ಲಿ ಕೈ ಮೇಲೆತ್ತಿ ಎಲ್ಲರಿಗೂ ಸನ್‌ಶೈನ್ ಅಂದ್ರೆ ಇಷ್ಟ ಎಂದು ಸುಂದರವಾಗಿ ನಕ್ಕಿದ್ದಾರೆ ನಟಿ. ನಟಿಯ ಫೋಟೋ ನೋಡಿ ಫ್ಯಾನ್ಸ್ ಹಾಟ್ ಎಮೋಜಿ ಕಮೆಂಟ್ ಮಾಡಿದ್ದಾರೆ.
ರಿಯಲ್ ಅಪ್ಪ ಅಮ್ಮನ ಜೊತೆ ವರುಧಿನಿ: ಜೊತೆಗೊಂದು ಕ್ಯೂಟ್ ಮೆಸೇಜ್
ಕನ್ನಡತಿಯಲ್ಲಿ ಭುವಿಯ ಗೆಳತಿಯಾಗಿ, ಹರ್ಷನಿಗಾಗಿ ಹಂಬಲಿಸೋ, ಸಾನ್ಯಾಗೆ ಟಾಂಗ್ ಕೊಡೋ ವರುಧಿನಿ ಇಲ್ಲಾಂದ್ರೆ ಸೀರಿಯಲ್ ಬೋರ್ ಎನಿಸೋದು ಸುಳ್ಲಲ್ಲ. ಅಷ್ಟರಮಟ್ಟಿಗೆ ಧಾರವಾಹಿಯಲ್ಲಿ ಆವರಿಸಿಬಿಟ್ಟಿದ್ದಾರೆ ಸಾರಾ ಅಣ್ಣಯ್ಯ.
ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿರೋ ನಟಿ ತೆರೆಯ ಮೇಲೆ ಕಾಣಿಸಿಕೊಳ್ಳುವಂತೆ ರಿಯಲ್ ಲೈಫ್‌ನಲ್ಲೂ ಬೋಲ್ಡ್ ಹುಡುಗಿ. ಸ್ಟೈಲಿಷ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ.
ಇದೀಗ ನಟಿ ಶೇರ್ ಮಾಡಿರೋ ಫೋಟೋ ನೋಡಿ, ಬೇಸಗೆ ಬಿಸಿ ಇನ್ನಷ್ಟು ಹೆಚ್ಚಾಯ್ತು ಎಂದಿದ್ದಾರೆ ಫ್ಯಾನ್ಸ್. ಬಹಳಷ್ಟು ಜನ ಹಾಟ್ ಎಂದು ಕಮೆಂಟ್ ಮಾಡಿದ್ದಾರೆ. ಎಥ್ನಿಕ್ ಮತ್ತು ಮಾಡರ್ನ್ ಡ್ರೆಸ್‌ನಲ್ಲೂ ಕ್ಯೂಟ್ ಕಾಣ್ತಾರೆ ಸಾರಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.