
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗೆ ತಲುಪಿದ ಸ್ಪರ್ಧಿಗಳು ಬಿಗ್ ಬಾಸ್ ಬಳಿ ಕೆಲವು ಡಿಮ್ಯಾಂಡ್ ಮಾಡಬಹುದು, ಅದನ್ನು ಈಡೇರಿಸಬಹುದು ಎಂದಿದ್ದರೆ ಈಡೇರಿಸುತ್ತಾರೆ. ಅಂತೆಯೇ ಅಶ್ವಿನಿ ಗೌಡ ಅವರು ಕರವೇ ನಾರಾಯಣಗೌಡ್ರನ್ನು ಕರೆಸಿ ಎಂದಿದ್ದರು.
ಅದರಂತೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಅವರು ಬಿಗ್ ಬಾಸ್ ಮನೆಗೆ ಬರಬಹುದಿತ್ತು. ಆದರೆ ಅವರೇ ಬರಲು ರೆಡಿ ಇಲ್ಲ. ಇನ್ನು ಏಳು ದಿನಗಳಲ್ಲಿ ಅವರ ಮಗನ ಮದುವೆ ಇದ್ದು, ಇನ್ನೂ 100 ಜನರಿಗೆ ಆಹ್ವಾನ ನೀಡಬೇಕಿದೆಯಂತೆ. ಹೀಗಾಗಿ ಅವರು ಸಮಯದ ಅಭಾವ ಇರೋದರಿಂದ ಆಗೋದಿಲ್ಲ ಎಂದಿದ್ದಾರೆ.
ಅಂದಹಾಗೆ ಕಿಚ್ಚ ಸುದೀಪ್ ಅವರನ್ನು ಕೂಡ ನಾರಾಯಣಗೌಡ್ರು ಭೇಟಿ ಮಾಡಿದ್ದರು. ಅಶ್ವಿನಿ ಗೌಡ ಅವರನ್ನು ಗೆಲ್ಲಿಸಬೇಕು ಎಂದು ಈ ರೀತಿ ಭೇಟಿ ಮಾಡಿದ್ರಾ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ಕೊಟ್ಟಿರುವ ನಾರಾಯಣಗೌಡ್ರು, “ನನ್ನ ಮಗನ ಮದುವೆಗೆ ಆಹ್ವಾನ ಕೊಡೋದಿಕ್ಕೆ ನಾನು ಸುದೀಪ್ ಅವರನ್ನು ಭೇಟಿ ಆಗಿದ್ದೆ, ಅದನ್ನು ಬಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡೋಕಲ್ಲ, ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವೆ” ಎಂದು ಹೇಳಿದ್ದರು.
ಅಶ್ವಿನಿ ಅವರು ಬಿಗ್ ಬಾಸ್ ಮನೆಯಲ್ಲಿ ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವಳು, ನನಗೆ ಅಷ್ಟಾಗಿ ಕನ್ನಡ ಓದೋಕೆ, ಬರೆಯೋಕೆ ಬರೋದಿಲ್ಲ ಎಂದಿದ್ದರು. ಇನ್ನು ಕನ್ನಡ ಪದಗಳನ್ನು ಬರೆಯುವಾಗ ಕೂಡ ತಪ್ಪಾಗಿ ಬರೆದಿದ್ದರು. ಕನ್ನಡ ರಕ್ಷಣಾ ವೇದಿಕೆಯಲ್ಲಿ ಇರುವವರಿಗೆ, ಕನ್ನಡ ಹೋರಾಟಗಾರ್ತಿಗೆ ಕನ್ನಡ ಬರೋದಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು.
ಈ ಬಗ್ಗೆ ಉತ್ತರ ಕೊಟ್ಟ ನಾರಾಯಣಗೌಡ್ರು, “ಅಶ್ವಿನಿ ಗೌಡ ತಂದೆ ಆಗರ್ಭ ಶ್ರೀಮಂತರು, ಹೀಗಾಗಿ ಮಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಅವರು ಕರವೇಗೆ ಬರುವಾಗ ನಾನು, ಅವರಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದೀರಾ? ಕನ್ನಡ ಮಾಧ್ಯಮದಲ್ಲಿ ಓದಿದ್ದೀರಾ ಎಂದು ಪ್ರಶ್ನೆ ಮಾಡಿರಲಿಲ್ಲ. ನೀವು ಇಲ್ಲಿಗೆ ಬರಲು ಉದ್ದೇಶ ಏನು ಎಂದು ಕೇಳಿದಾಗ ಅವರು, “ನಾನು ಕನ್ನಡತಿ, ಕನ್ನಡದ ಮೇಲೆ ಅಭಿಮಾನ ಇದೆ, ಕನ್ನಡದ ಪರವಾಗಿ ಸೇವೆ ಮಾಡಬೇಕು. ಅದನ್ನು ನಾನು ಗಮನಕ್ಕೆ ತಗೊಂಡೆ ಅಷ್ಟೇ” ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.