ನಾನು ನಂದಿನಿ ಖ್ಯಾತಿಯ ವಿಕ್ಕಿ 'ಬಿಗ್​ಬಾಸ್​'​ ಮನೆಯೊಳಕ್ಕೆ! ಆದ್ರೆ ಇಲ್ಲಿದೆ ಬಹು ದೊಡ್ಡ ಟ್ವಿಸ್ಟ್​...

By Suvarna News  |  First Published Oct 30, 2023, 5:17 PM IST

ನಾನು ನಂದಿನಿ ಖ್ಯಾತಿಯ ವಿಕ್ಕಿ 'ಬಿಗ್​ಬಾಸ್​'​ ಮನೆಯೊಳಕ್ಕೆ! ಆದ್ರೆ ಇಲ್ಲಿದೆ ಬಹು ದೊಡ್ಡ ಟ್ವಿಸ್ಟ್​. ಅದೇನದು? 
 


 ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಂತೂ ಸೃಷ್ಟಿಸ್ತಿರೋ ಹವಾ ಅಷ್ಟಿಷ್ಟಲ್ಲ. ವಿಕಿಪೀಡಿಯಾ ಖ್ಯಾತಿಯ ವಿಕ್ರಮ್​ ಅಲಿಯಾಸ್​ ವಿಕ್ಕಿ ಅವರು ಮಾಡಿರುವ ಈ ಹಾಡಿನ ಮೋಡಿಯಂತೂ ಇನ್ನೂ ನಿಲ್ಲುತ್ತಲೇ ಇಲ್ಲ.  ಈ ಹಾಡು  ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಭವಿಷ್ಯ ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದು ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು.  ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ. ಕರ್ನಾಟಕ ಅಷ್ಟೇ ಏಕೆ, ವಿದೇಶದಲ್ಲಿರುವ ಕನ್ನಡಿಗರೂ ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ.

ಇದೀಗ ವಿಕ್ಕಿ ಅವರು ಬೀಗ್​ ಭಾಸ್​ ಮನೆಯೊಳಕ್ಕೆ ಹೋಗಿದ್ದಾರೆ. ಹೌದು. ಇದು ಬಿಗ್​ಬಾಸ್​ ಅಲ್ಲ... ಬದಲಿಗೆ ಬೀಗ್​ ಭಾಸ್​. ಬಿಗ್​ಬಾಸ್​ ಮನೆಯಲ್ಲಿ ನಡೆಯುವ ಕಾರ್ಯಾಚರಣೆಗಳನ್ನು ಹಾಸ್ಯದ ರೂಪದಲ್ಲಿ ಬೀಗ್​ ಭಾಸ್​ ಹೆಸರಿನಲ್ಲಿ ವಿಕ್ಕಿ ಮತ್ತು ಅವರ ತಂಡ ರೂಪಿಸಿದೆ. ಕೂಲ್​ ಕಲರ್ಸ್​ ಕನ್ನಡ ಎನ್ನುವ ಚಾನೆಲ್​ ಇಟ್ಟುಕೊಂಡು ಬೀಗ್​ ಭಾಸ್​ ಸೃಷ್ಟಿ ಮಾಡಲಾಗಿದೆ. ಇದರಲ್ಲಿ ಮೊದಲಿಗೆ ನಂದಿನಿ ಅರ್ಥಾತ್​ ವಿಕ್ಕಿ ಅವರು, ಅವರ ಬಾಯ್​ಫ್ರೆಂಡ್​ ಬಳಿ ನೀನು ನನ್ನನ್ನು ಹಾರ್ಟ್​ ನೋಡಿ ಲವ್​ ಮಾಡ್ತಿರೋ ಅಥವಾ ಬಾಡಿ ನೋಡಿಯೋ ಎಂದು ಕೇಳುತ್ತಾರೆ. ಅಷ್ಟರಲ್ಲಿ ಇನ್ನೋರ್ವ ಸ್ಪರ್ಧಿ ಟಾಯ್ಲೆಟ್​ ಕ್ಲೀನ್​ ಮಾಡುವಂತೆ ಸ್ಪರ್ಧಿಯಾಗಿರುವ ಬೆಕ್ಕಿಗೆ ಹೇಳುತ್ತಾರೆ. ಅದಕ್ಕೆ ಹಾಗೆಲ್ಲಾ ಬರುವುದಿಲ್ಲ ಎಂದು ನಂದಿನಿ ಹೇಳುತ್ತಾಳೆ.

Tap to resize

Latest Videos

GHOST: ಶಿವರಾಜ್​ಕುಮಾರ್​ ಚಿತ್ರಕ್ಕೆ 'ನಾನು ನಂದಿನಿ' ವಿಕ್ಕಿ ಈ ಪರಿ ಎಂಟ್ರಿನಾ? ವಿಡಿಯೋ ನೋಡಿ ಸೂಪರ್​ ಎಂದ ಫ್ಯಾನ್ಸ್​

ಹೀಗೆ ಶುರುವಾಗುವ ಇದರ ವಿಡಿಯೋ ಹಾಸ್ಯದ ರೂಪದಲ್ಲಿ ಎಳೆದುಕೊಂಡು ಹೋಗಲಾಗಿದೆ. ನಂತರ ನಂದಿನಿಗೆ ನೀನೇ ಟಾಯ್ಲೆಟ್​ ಕ್ಲೀನ್​ ಮಾಡುವಂತೆ ಇನ್ನೋರ್ವ ಸ್ಪರ್ಧಿ ಹೇಳಿದಾಗ, ನಂತರ ತನ್ನ ಬಾಯ್​ಫ್ರೆಂಡ್​ನಿಂದ ಟಾಯ್ಲೆಟ್​ ಕ್ಲೀನ್​ ಮಾಡಲು ನಂದಿನಿ ಒಪ್ಪಿಸುತ್ತಾರೆ. ಮತ್ತೋರ್ವ ಸ್ಪರ್ಧಿಗೆ ಅಷ್ಟರಲ್ಲಿಯೇ ಅರ್ಜೆಂಟ್​ ಆಗಿರುತ್ತದೆ. ಇಲ್ಲಿ ಟಾಯ್ಲೆಟ್​ ಕ್ಲೀನಿಂಗ್​ ಜಗಳ ನಡೆಯುತ್ತಿರುವಾಗ ಬೀಗ್​ ಭಾಸ್​ ಕಡೆಯಿಂದ ಬುಲಾವ್​ ಬರುತ್ತದೆ. ನಿಮ್ಮ ಕನ್​ಫೆಷನ್​ ರೂಂನಲ್ಲಿ ಆಗಬಾರದ್ದು ಆಗಿದೆ ಎನ್ನುತ್ತಾರೆ. ಆಮೇಲೆ ನೋಡಿದರೆ ಅರ್ಜೆಂಟ್​ ಆಗಿರುವ ಸ್ಪರ್ಧಿ ಅಲ್ಲಿಯೇ ಹೋಗಿ ಕೆಲಸ ಮುಗಿಸಿ ಬಂದಿರುತ್ತಾರೆ... 

ಹೀಗೆ ತಮಾಷೆಯ ವಿಡಿಯೋ ಮಾಡಿ ಹರಿಬಿಟ್ಟಿದೆ ವಿಕ್ಕಿ ತಂಡ. ಇದಕ್ಕೆ ಇದಾಗಲೇ ನೂರಾರು ಮಂದಿ ಥಹರೇವಾರಿ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ವಿಕ್ಕಿ ಮತ್ತು ಅವರ ತಂಡಕ್ಕೆ ದೊಡ್ಡ ಸಲಾಂ ಹೇಳುತ್ತಿದ್ದಾರೆ. ಒರಿಜಿನಲ್​ ಬಿಗ್​ಬಾಸ್​ನಿಂದ ನಿಮ್ಮದೇ ಬೀಗ್​ ಭಾಸ್​ ಸಕತ್​ ಆಗಿದೆ ಎಂದು ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಶಿವರಾಜ್​ ಕುಮಾರ್​ ಅವರು ತಮ್ಮ ಘೋಸ್ಟ್​ ಚಿತ್ರದ ಪ್ರಮೋಷನ್​ಗಾಗಿ ಕಳೆದ ವಾರ ವಿಕ್ಕಿ ಮತ್ತು ಅವರ ತಂಡದವರನ್ನೇ ವಿಭಿನ್ನ ರೂಪದಲ್ಲಿ ಬಳಸಿಕೊಂಡಿತ್ತು. ಒಟ್ಟಿನಲ್ಲಿ ನಾನು ನಂದಿನಿ ಹಾಡಿನ ಮೂಲಕ ಈ ತಂಡ ವಿಶ್ವ ಖ್ಯಾತಿ ಗಳಿಸುತ್ತಿದೆ. 

ಕುದುರೆ ಮೇಲೇರಲು ಪರದಾಡಿದ 'ಅಮೃತಧಾರೆ' ಭೂಮಿಕಾ: ರಿಯಲ್​ ಗಂಡನ ಜೊತೆ ಕ್ಯೂಟ್​ ಫೋಟೋಶೂಟ್​

 

click me!